ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ 35ನೇ ವಾರ್ಷಿಕ ಘಟಿಕೋತ್ಸವವು ಮಂಗಳ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಉನ್ನತ ಶಿಕ್ಷಣ ಸಚಿವ ಬಸವರಾಯ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರೊ.ಅಜಯ್ .ಕೆ.ಸೂದ್ ಘಟಿಕೋತ್ಸವ ಭಾಷಣ ನೆರವೇರಿಸಿದರು. ಡಾ.ಬಿ.ಎ.ವಿವೇಕ ರೈ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಸಚಿವರು ಪ್ರಧಾನಿಸಿದರು.
ಈ ಸಂದರ್ಭ ಕುಲಪತಿ ಪ್ರೊ.ಕೆ.ಬೈರಪ್ಪ, ಕುಲಸಚಿವ ಪ್ರೊ.ಕೆ.ಎಂ ಲೋಕೇಶ್, ಪರೀಕ್ಷಾಂಗ ಕುಲಸಚಿವ ಎ.ಎಂ ಖಾನ್ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಾಯಕ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ಈ ವೇಳೆ 54 ಪಿಹೆಚ್ ಡಿ, 3,925 ಸ್ನಾತಕೋತ್ತರ ವಿಭಾಗದ , ಸ್ನಾತಕೋತ್ತರ ಅಟನೋಮಸ್ 1037, ಪದವಿ ವಿಭಾಗದ 19,985 ಪದವಿ ಅಟನೋಮಸ್ 2,2,00, ಸ್ನಾತಕೋತ್ತರ ಡಿಪ್ಲೊಮಾ 5, ಪದವಿ ಪಡೆದುಕೊಂಡರು.
ಚಿನ್ನದ ಪದಕವನ್ನು 43 ಮಂದಿ ಮತ್ತು ನಗದು ಪುರಸ್ಕಾರ 63 ಮಂದಿ ಪಡೆದುಕೊಂಡರು.


