ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುಂಪಲ: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜುಗಳ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆಯ ಅನ್ವಯ, ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಬೋಂದೆಲ್. ಕೇಸರಿ ಮಿತ್ರ ವೃಂದ ಮತ್ತು ಕೇಸರಿ ಮಾತೃ ಮಂಡಳಿಯ ಸಹಭಾಗಿತ್ವದಲ್ಲಿ ಉಚಿತ ಟೈಲರಿಂಗ್ ಶಿಬಿರವನ್ನು ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಬಿ.ಎನ್.ಕುಂಬಾರ ಕೇಸರಿ ಸಭಾಭವನದಲ್ಲಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಸರಿ ಸೇವಾ ಟ್ರಸ್ಟ್ ನ ಟ್ರಸ್ಟಿ ನಾರಾಯಣ ಕುಂಪಲ ವಹಿಸಿದ್ದರು.
ಈ ಸಂದರ್ಭ ಮಾತೃ ಮಂಡಳಿಯ ಅಧ್ಯಕ್ಷೆ ಪ್ರಮೀಳಾ ವಿಜಯ್, ಗೌರವ ಸಲಹೆಗಾರರಾದ ಜಯಲಕ್ಷ್ಮಿ ಕುಂಪಲ, ರಾಕೇಶ್ ಶೆಟ್ಟಿ, ಚಂದ್ರಕಲ ಎಸ್. ಕುಮಾರ್ ಉಪಸ್ಥಿತರಿದ್ದರು.
ಲಲಿತಾ ಕೇಶವ್ ಸ್ವಾಗತಿಸಿದರು. ಮಮತ ಜೀತೇಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಿನಿ ದೇವದಾಸ್ ವಂದಿಸಿದರು.




