Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಮಗು ಎದೆಹಾಲನ್ನು ಕುಡಿಯುವ ಸಂದರ್ಭದಲ್ಲಿ ಕೆಲವೊಂದು ಮಾರ್ಗದರ್ಶಿ ಸೂತ್ರಗಳು ಅಗತ್ಯವಿದ್ದು, ಇಂತಹ ಮಾಹಿತಿಯನ್ನು ವೈದ್ಯರು ಮತ್ತು ದಾದಿಯರು ತಾಯಂದಿರಗೆ ನೀಡುವ ಕಾರ್ಯ ಮಾಡಬೇಕು ಎಂದು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ ಮುಖ್ಯಸ್ಥೆ ಡಾ| ವಿಜಯಾ ಶೆಣೈ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಆಶ್ರಯಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಸ್ತನ್ಯಪಾನ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು. ಅವಧಿಗಿಂತ ಮೊದಲೇ ಹುಟ್ಟಿದ ಮಗುವಿಗೆ, ಸೀಳ್ದುಟಿ ಇರುವ ಮಕ್ಕಳಿಗೆ ಹಾಲುಣಿಸುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಇನ್ನೊಂದೆಡೆ ವೃತ್ತಿನಿರತ ತಾಯಂದಿರು ಕೆಲಸದ ಒತ್ತಡದಿಂದಾಗಿ ಎದೆಹಾಲನ್ನು ನೀಡೆ ಕೃತಕ ಹಾಲನ್ನು ನೀಡುವುದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ನಿಟ್ಟಿನಲ್ಲಿ ಮಗುವಿಗೆ ನೈಸರ್ಗಿಕ ಹಾಲನ್ನು ಕೃತಕ ಉಪಕರಣ ಬಳಸಿ ನೀಡುವ ಮಾಹಿತಿ ಈ ಕಾರ್ಯಾಗಾರದಿಮದ ನಡೆಯಲಿದ್ದು, ಪ್ರಮುಖವಾಗಿವೈದ್ಯರಿಗೆ ಮತ್ತು ದಾದಿಯರಿಗೆ ಚೆನ್ನೈಯ ನುರಿತ ತಂತ್ರಜ್ಞರು ಕಾರ್ಯಾಗಾರದಲ್ಲಿ ಮಾಹಿತಿ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕಿನ್ಯ: ರೋಗ ಬಂದ ಮೇಲೆ ಮದ್ದು ತೆಗೆದು ಕೊಳ್ಳುವುದಕ್ಕಿಂತ ರೋಗ ಬರದ ಹಾಗೆ ಯಾವ ರೀತಿ ಮಾಡಬಹುದು ಎನ್ನುವ ಚಿಂತನೆ ಆಗತ್ಯವಿದೆ ಎಂದು ದೇವಿನಗರ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಪಂಚಕರ್ಮ ವಿಭಾಗದ ಪ್ರಾಧ್ಯಾಪಕ ಡಾ. ರವಿ ಗಣೇಶ್ ಮೊಗ್ರಾ ಆಭಿಪ್ರಾಯಪಟ್ಟರು. ಅವರು ಕೇಶವ ಶಿಶು ಮಂದಿರ ಕಿನ್ಯದಲ್ಲಿ ನಡೆದ ಆಯುರ್ವೇದದಲ್ಲಿ ಆಹಾರದ ಪದ್ಧತಿ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಆಯುರ್ವೇದದಲ್ಲಿ ಆಹಾರದ ಒಂದು ವಿಧಿ ವಿಧಾನವಿದ್ದು, ಹೇಗೆ ಮನುಷ್ಯ ಬ್ರಾಹ್ಮಿ ಮೂಹೂರ್ತದಲ್ಲಿ ಎದ್ದು ಮಾಡಬಹುದಾದಂತಹ ಕೆಲಸ ಕಾರ್ಯಗಳು, ಅದರಂತೆ ಋತುಗಳಿಗನುಸಾರವಾಗಿ ಬಳಸಬಹುದಾದಂತಹ ಆಹಾರಗಳು, ಸಂಪ್ರದಾಯವಾಗಿ ಇರುವಂತಹ ಕ್ರಮಗಳನ್ನು ಅನುಸರಿಸಿದರೆ ರೋಗ ಬರದಂತೆ ತಡೆಯಲು ಅನುಕೂಲವಾಗುತ್ತದೆ. ಉಷ್ಣ-ಶೀತ ಆಹಾರಗಳು, ಹಾನಿಕಾರಕ ಅದೇ ರೀತಿ ಮೀನು ಮತ್ತು ಹಾಲು ಒಟ್ಟಿಗೆ ಸೇವಿಸಿದರೆ ಅದರಿಂದಾಗುವ ಕೆಡುಕುಗಳಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಬೇಕರಿ ಉತ್ಪನ್ನಗಳಲ್ಲಿ ಮೈದಾವನ್ನು ಬಳಸುತ್ತಾರೆ. ಈ ಮೈದಾವನ್ನು ಬೆನ್ ಜೋಯಸ್ ಪೆರಾಕ್ಸಡ್ ಎಂಬ ರಾಸಾಯನಿಕದಲ್ಲಿ ತೊಳೆದು ಬಿಳಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಅಂಬಿಕಾರೋಡ್: ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾದ ಗಟ್ಟಿ ಸಮಾಜದ ಅಧ್ಯಕ್ಷರಾದ ವಿಶ್ವನಾಥ ಗಟ್ಟಿ ವಗ್ಗ ಅವರನ್ನು ಗಟ್ಟಿ ಸಮಾಜದ ವತಿಯಿಂದ ಅಂಬಿಕಾರೋಡ್‍ನ ಗಟ್ಟಿ ಸಮಾಜ ಭವನದಲ್ಲಿ ಅಭಿನಂದಿಸಲಾಯಿತು. ಗಟ್ಟಿ ಸಮಾಜದ ಹಿರಿಯರಾದ ಹರಿಶ್ಚಂದ್ರ ಗಟ್ಟಿ ನಾಯ್ಗರು, ನಾರಾಯಣ ಗಟ್ಟಿ ಮೇಲ್ಡರು, ನಾಯ್ಗರ ಪ್ರತಿನಿಧಿ ಪದ್ಮನಾಭ ಗಟ್ಟಿ ಕಟ್ಟಪುಣಿ, ಸೋಮನಾಥ ಸೇವಾ ಸಮಿತಿ ಅಧ್ಯಕ್ಷರಾದ ಕೆ.ಆರ್. ಗಟ್ಟಿ ಕೊರಂತೋಡಿ, ಯುವಜನ ವಿಭಾಗದ ಅಧ್ಯಕ್ಷರಾದ ಪದ್ಮನಾಭ ಗಟ್ಟಿ ಬಜಿಲಕೇರಿ, ಸೇಸಪ್ಪ ಗಟ್ಟಿ ಕೊಲ್ಯ, ಗುರಿಕಾರರಾದ ನೇಮು ಗಟ್ಟಿ ಕೊರಂತೋಡಿ, ಕೆ.ಕೆ. ಗಟ್ಟಿ, ನಾರಾಯಣ ಗಟ್ಟಿ ಪಾಂಡೇಶ್ವರ, ಸೀತಾರಾಮ ಗಟ್ಟಿ ಕಣಂತೂರು, ಕೊಂಡಾಣ ದೈವಸ್ಥಾನದ ಮೊಕ್ತೇಸರರಾದ ಕೃಷ್ಣಪ್ಪ ಗಟ್ಟಿ ಕೋಟೆಕಾರು, ಒಂಭತ್ತು ಮಾಗಣೆ ಸೀಮೆ ಗುರಿಕಾರರು ಉಪಸ್ಥಿತರಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ ಇಲ್ಲಿನ ವಿದ್ಯಾರ್ಥಿನಿಯರು ಸರಕಾರಿ ಪ್ರೌಢಶಾಲೆ ಅಳಿಯೂರು, ಮೂಡಬಿದಿರೆ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ  ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ  ಪ್ರಥಮಸ್ಥಾನ ಪಡೆದು  ಮಂಡ್ಯ ಜಿಲ್ಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. ತಂಡದ ಸದಸ್ಯರೊಂದಿಗೆ  ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು ಉಪಸ್ಥಿತರಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ದೇರಳಕಟ್ಟೆ: ಇಂದಿನ ಯುವಜನತೆ ಧೂಮಪಾನದಂತಹ ಪಿಡುಗುಗಳಿಗೆ ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಕಾರ್ಯದಲ್ಲಿ ಕ್ಷೇಮ ಮಾನಸಿಕ ಚಿಕಿತ್ಸಾ ವಿಭಾಗ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹೀರೆಮಠ್ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್,ಹೆಗ್ಡೆ ಮೆಡಿಕಲ್ ಅಕಾಡೆಮಿಯ ಮಾನಸಿಕ ಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಕ್ಷೇಮದ ಮಿಷನ್ ಹೋಪ್ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ `ಧೂಮಪಾನ ರಹಿತ ಸಪ್ತಾಹ’ದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಷೇಮ ವೈಸ್ ಡೀನ್ ಮತ್ತು ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ| ಪಿ.ಎಸ್. ಪ್ರಕಾಶ್ ಮಾತನಾಡಿ ಧೂಮಪಾನ ಮತ್ತು ಕುಡಿತದಂತಹ ಪಿಡುಗುಗಳಿಂದ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನರು ಜಾಗೃತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ವೈಸ್ ಡೀನ್ ಡಾ| ಅಮೃತ್ ಮಿರಾಜ್‍ಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಎರಡನೇ ಹಂತದಲ್ಲಿ ಕ್ಷೇಮ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದಲ್ಲಿ ಮಾ. 11 ಶನಿವಾರದಿಂದ 17 ಶುಕ್ರವಾರದ ವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ ಮಾ. 11 ಶನಿವಾರದಂದು ರಾತ್ರಿ 10.30ಕ್ಕೆ ಪಟ್ಟ ಸಿಂಹಾಸನದಿಂದ ಮೂಡಮಾಡಕ್ಕೆ `ಕಿರೋಳ್ ಉತ್ಸವ ನಡೆಯಲಿದ್ದು 12ರಂದು ರವಿವಾರ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಉತ್ಸವ, 13ರಂದು ಸೋಮವಾರ ಶ್ರೀ ಧರ್ಮಅರಸರ ವಲಸರಿ ಉತ್ಸವ, 15ರಂದು ಬುಧವಾರ ಶ್ರೀ ಧರ್ಮ ಅರಸರ ದೊಡ್ಡ ವಲಸರಿ ಉತ್ಸವ ನಡೆಯಲಿದ್ದು 16ರಂದು ಗುರುವಾರ  ರಾತ್ರಿ10.30ಕ್ಕೆ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಮತ್ತು ಕೆರೆ  ದೀಪೋತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಸಹೋದರರಿಬ್ಬರಿಗೆ ಚೂರಿತ ಇರಿತ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಸ್ತಿಕಟ್ಟೆ ಸಂಚರಿಸುತ್ತಿದ್ದ ಉಳ್ಳಾಲ ನಿವಾಸಿ ಪ್ರಸ್ತುತ ಕಲ್ಲಾಪು ಪಟ್ಲದಲ್ಲಿ ವಾಸವಾಗಿರುವ ಸಮೀರ್ ಮತ್ತು ಆತನ ಸಹೋದರ ಸಿರಾಜ್‍ಗೆ ಇಲ್ಯಾಸ್ ಯಾನೆ ಟಾರ್ಗೆಟ್ ಇಲಿಯಾಸ್‍ನ ತಂಡಕ್ಕೆ ಸೇರಿದ ಸುರ್ಮಾ ಇಮ್ರಾನ್ ಚೂರಿಯಿಂದ ಇರಿದಿದ್ದು, ಅಲ್ತಾಫ್ ಕಾಟಿಪಳ್ಳ, ಹಂಝ ಸಹಾಯ ಮಾಡಿದ್ದರೆಂದು ಗಾಯಗೊಂಡಿದ್ದ ಸಹೋದರರು ಉಳ್ಳಾಲ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿದ ಪ್ರಮುಖ ಆರೋಪಿ ಸುರ್ಮಾ ಇಮ್ರಾನ್ ಮತ್ತು ಹಂಝನನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿಸಿದ್ದಾರೆ. ಕೊಲೆ ಯತ್ನ ನಡೆಸಿದ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಗಾಯಾಳು ಪರ ತಂಡ ಪೋಲಿಸ್ ಠಾಣೆಯ ಎದುರು ಜಮಾಯಿಸಿದ್ದರು. ಆರೋಪಿಗಳಿಗೆ ರಾಜಕೀಯ ರಕ್ಷಣೆ ನೀಡಲಾಗುತ್ತಿದೆ ಎಂದು ಸಮೀರ್ ಸಂಬಂಧಿಕರು ಆರೋಪಿಸಿದ್ದಾರೆ. ಉಳ್ಳಾಲ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ. ಮುಂಬೈಯಲ್ಲಿ ಇತ್ತೀಚೆಗೆ ನಡೆದ 10ರಿಂದ11 ವರ್ಷದ ಬಾಲಕರ ವಿಭಾಗದ 22ನೇ ಡಬ್ಲ್ಯೂ ಎಫ್‍ಎಸ್‍ಕೆಒ ಏಷ್ಯನ್ ಓಪನ್ ಆಹ್ವಾನಿತ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊಹಮ್ಮದ್ ಅಶ್ಫಾಕ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ನದೀಮ್, ಶಫ್ರಾಝ್ ಮತ್ತು ಯಾಸ್ಮೀನ್ ಇವರಿಂದ ತರಭೇತಿಯನ್ನು ಪಡೆದಿರುತ್ತಾರೆ. ಅಬ್ದುಲ್ ಮಜೀದ್ ಮತ್ತು ಫಾತಿಮಾ ಝೊಹರ ದಂಪತಿಯ ಪುತ್ರ.

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: 30 ಲಕ್ಷ ಅನುದಾನದಲ್ಲಿ ಒಂಬತ್ತುಕೆರೆ ಐಟಿಐಯಿಂದ ತೊಕ್ಕೊಟ್ಟು ಓವರ್‍ಬ್ರಡ್ಜ್‍ವರೆಗಿನ ಒಳರಸ್ತೆ ಅಗಲೀಕರಣ ಕಾಮಗಾರಿಗೆ ಆಹಾರ ಹಾಗೂ ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಮಂಗಳವಾರ ಶಿಲಾನ್ಯಾಸಗೈದರು. ಬಳಿಕ ಮಾತನಾಡಿದ ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ಬಹುತೇಕ ರಸ್ತೆಗಳು ಅಭಿವೃದ್ಧಿಯಾಗಿದ್ದು, ಮಂಗಳೂರಿನ ನಂತರ ಅತ್ಯುತ್ತಮ ಅಭಿವೃದ್ಧಿಹೊಂದಿದ 2ನೇ ನಗರವನ್ನಾಗಿ ಉಳ್ಳಾಲವನ್ನು ರೂಪಿಸಿ ರಾಜ್ಯದಲ್ಲೇ ಮಾದರಿಯನ್ನಾಗಿಸುವ ಗುರಿ ಹೊಂದಲಾಗಿದ್ದು ಮುಕಚ್ಚೇರಿಯಿಂದ ಅಬ್ಬಕ್ಕ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ನಗರೋತ್ಥಾನ ಅನುದಾನದಲ್ಲಿ 1.85 ಕಿ.ಮೀ. ರಸ್ತೆ ಅಭಿವೃದ್ಧಿಗೆ, ಇಕ್ಕೆಲೆಗಳಲ್ಲಿ ಅಗಲೀಕರಣ, 250 ಮೀಟರ್‍ಗೆ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು, 1.34 ಕೋಟಿ ಅನುದಾನ ಮೀಸಲಿಡಲಾಗಿದೆ. ಉಳ್ಳಾಲ ಮಾದರಿ ನಗರ ನಿರ್ಮಾಣದ ಕನಸು ಹೊಂದಲಾಗಿದ್ದು ಸರ್ವರೂ ಸಹಕಾರ ನೀಡಬೇಕು ಎಂದು ತಿಳಿಸಿದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಕಾಮಗಾರಿಗೆ ಶಿಲಾನ್ಯಾಸಗೈದರು. ನಗರಸಭಾಧ್ಯಕ್ಷ ಹುಸೈನ್ ಕುಂಞÂಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯರಾದ ದಿನೇಶ್ ರೈ, ಮಹಮ್ಮದ್ ಮುಕಚ್ಚೇರಿ, ಪೌರಾಯುಕ್ತೆ…

Read More

ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: 100 ರೂ ಜೌಷಧಿಯನ್ನು 20 ರೂ. ಗೆ ನೀಡುವ ಯೋಜನೆಯಾಗಿರುವ ಜನೌಷಧಿ ಕೇಂದ್ರದ ಸ್ಥಾಪನೆಗೆ ಸರಕಾರ ಮುಂದಾಗುವ ಮೂಲಕ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಆರೋಗ್ಯ ಕಾಶಿ ಅನಿಸಿಕೊಂಡಿರುವ ದೇರಳಕಟ್ಟೆಯಲ್ಲಿ ಜನೌಷಧಿ ಕೇಂದ್ರವನ್ನು ಪ್ರಾರಂಭಿಸಿರುವ ಕಾರ್ಯ ಶ್ಲಾಘನೀಯವಾದುದು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು ಅವರು ದೇರಳಕಟ್ಟೆ ವೆಸ್ಟ್ ಅವೆನ್ಯೂ ಬಿಲ್ಡಿಂಗ್‍ನಲ್ಲಿ ಬುಧವಾರ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಜನೌಷಧಿ ಯೋಜನೆಯ ಪ್ರಧಾನಮಂತ್ರಿ ಭಾರತೀ ಜನೌಷಧಿ ಕೇಂದ್ರದ ಉದ್ಘಾಟನೆ ಹಾಗೂ ಶಿಕ್ಷಾಸಹಯೋಗ ಯೋಜನೆಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದೈನಂದಿನ ಆಹಾರ ಪದ್ದತಿ ಹಾಗೂ ಮಾಲಿನ್ಯದಿಂದಾಗಿ ಜನ ಅನಾರೋಗ್ಯದಿಂದ ಬಳಲುತ್ತಿದ್ದು ರೋಗದ ಸಂಖ್ಯೆಯೆ ಜೊತೆಗೆ ಆಸ್ಪತ್ರೆಗಳು ಹೆಚ್ಚಾಗುತ್ತಿದೆ. ಆಸ್ಪತ್ರೆ ಉಚಿತವಾಗಿ ಚಿಕಿತ್ಸೆ ನೀಡಿದರೂ ಜೌಷಧಿಕೆಂದ್ರಗಳಲ್ಲಿ ಉಚಿತವಾಗಿ ಜೌಷಧಿಗಳು ಸಿಗುತ್ತಿಲ್ಲ. ಇದರಿಂದ ಬಡವರಿಗೆ ಜೌಷಧಿಯನ್ನು ಬರಿಸಲು ಸಾಧ್ಯವಾಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ದೀನ್‍ದಯಾಳ್ ಉಪಾಧ್ಯಾಯರ…

Read More