ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅವರು ಉಳ್ಳಾಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ನೆಹರು ಮೈದಾನಕ್ಕೆ ಸ್ಥಳಾಂತರಗೊಂಡಿರುವುದಲ್ಲದೆ ಇಂದು ಸಂಜೆ 6 ಗಂಟೆಯಿಂದ ಫೆ.16ರ ವರೆಗೆ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪೊಲೀಸ್ ಕಮೀಷನರ್ ಚಂದ್ರಶೇಖರ್ ಆದೇಶದಂತೆ ಇಂದು ಸಂಜೆಯಿಂದ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಬೆಂಬಲಿತ ಸಂಘmನೆಗಳು ಉಳ್ಳಾಲದಾದ್ಯಂತ ಯಾವುದೇ ಸಭೆ, ಸಮಾರಂಭ, ರ್ಯಾಲಿಯನ್ನು ನಡೆಸುವಂತಿಲ್ಲ ಅನ್ನುವುದನ್ನು ಆದೇಶಿಸಲಾಗಿದೆ. ಮುಂಜಾಗ್ರತಾ ಕ್ರವiವಾಗಿ ಉಳ್ಳಾಲದಲ್ಲಿ ಉಳ್ಳಾಲ ಹಾಗೂ ಕೆಎಸ್ ಆರ್ ಪಿ ಪೊಲೀಸರು ಮಾಚ್ ್ ನಡೆಸಿದರು. ಮೊಗವೀರಪಟ್ನ, ಕೋಡಿ, ಕೋಟೆಪುರ, ದರ್ಗಾ ವಠಾರ, ಮಾಸ್ತಿಕಟ್ಟೆ ಯಾಗಿ ಪೊಲೀಸರು ಮಾಚ್ ್ ನಡೆಸಿದರು.
ಎಸಿಪಿ ಶೃತಿ , ಠಾಣಾಧಿಕಾರಿ ಗೋಪಿಕೃಷ್ಣ ಹಾಗೂ ಎಸ್.ಐ ರಾಜೇಂದ್ರ ಅವರ ನೇತೃತ್ವದಲ್ಲಿ ಮಾರ್ಚ್ ನಡೆಯಿತು.





