ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಉಳ್ಳಾಲ ನಗರಸಭೆಗೆ ನಡೆದ ಉಪಚುನಾವಣೆಯಲ್ಲಿ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಶೇ. 58 ಮತದಾನವಾದರೆ, ಕಲ್ಲಾಪು ವಾರ್ಡ್‍ನಲ್ಲಿ ಅತ್ಯಧಿಕ ಶೇ. 72.9 ಮತದಾನವಾಗಿದೆ. ಎರಡು ವಾರ್ಡುಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು ಶೇ. 65.2 ಮತದಾನವಾಗಿದ್ದು, ಎರಡೂ ವಾರ್ಡ್‍ಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸಿದರು.
ನಗರಸಭೆಯ 24ನೇ ಚೆಂಬುಗುಡ್ಡೆ ವಾರ್ಡ್‍ನಲ್ಲಿ ಬಬ್ಬುಕಟ್ಟೆ ಶಾಲೆಯಲ್ಲಿ ಶೇ. 58 ಮತದಾನ ನಡೆದಿದ್ದು, ಒಟ್ಟು 1520 ಮತದಾರರಿದ್ದು 728 ಪುರುಷ ಮತದಾರರು ಮತ್ತು 792 ಮಹಿಳಾ ಮತದಾರರಿದ್ದಾರೆ. ಚುನಾವಣೆಯಲ್ಲಿ 884 ಮತದಾರರು ಮತದಾನ ನಡೆಸಿದ್ದು, 339 ಪುರುಷರು,ಮತ್ತು 485 ಮಹಿಳೆಯರು ಮತದಾನ ಮಾಡಿದ್ದಾರೆ. ಈ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಹಾಲಿ ಸದಸ್ಯ ಭಾಝಿಲ್ ಡಿ.ಸೋಜ ಅವರು ಕಣದಲ್ಲಿದ್ದರೆ, ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಸತೀಶ್‍ಚೆಂಬುಗುಡ್ಡೆ, ಸಿಪಿಐಎಂನ ಹರೀಶ್ ಶೆಟ್ಟಿ ಮತ್ತು ಪಕ್ಷೇತರರಾಗಿ ಖಲಂದರ್ ಸ್ಪರ್ಧೆಯಲ್ಲಿದ್ದಾರೆ.
26ನೇ ಬಬ್ಬುಕಟ್ಟೆ ವಾರ್ಡ್‍ಗೆ ಕಲ್ಲಾಪು ಪಟ್ಲ ಶಾಲೆಯಲ್ಲಿ ಮತದಾನ ನಡೆದಿದ್ದು ಶೇ. 72.9 ಮತದಾನವಾಗಿದೆ. ಈ ವಾರ್ಡ್‍ನಲ್ಲಿ 1378 ಮತದಾರರಿದ್ದು 688 ಪುರುಷ ಮತದಾರರು, 690 ಮಹಿಳಾ ಮತದಾರರಿದ್ದು, ಒಟ್ಟು 1005 ಮತದಾರರು ಮತದಾನ ಮಾಡಿದ್ದಾರೆ. ಇವರಲ್ಲಿ ಮಹಿಳೆಯರೇ ಅಗ್ರಸ್ಥಾನದಲ್ಲಿದ್ದು 548 ಮಂದಿ ಮತದಾನ ಮಾಡಿದರೆ 457 ಪುರುಷರು ಮತದಾನ ಮಾಡಿದರು. ಕಲ್ಲಾಪು ಶಾಲೆಯ ಮತದಾನ ಕೇಂದ್ರಕ್ಕೆ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಉಸ್ಮಾನ್ ಕಲ್ಲಾಪು ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಚಂದ್ರಹಾಸ್ ಪಂಡಿತ್‍ಹೌಸ್, ಜೆಡಿಎಸ್‍ನ ಇಸ್ಮಾಯಿಲ್ ಶಾಫಿ, ಪಕ್ಷೇತರರಾಗಿ ದಿನಕರ್ ಉಳ್ಳಾಲ್ ಕಣದಲ್ಲಿದ್ದಾರೆ.
ಎರಡು ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿದ್ದರೂ ಮತದಾನದಲ್ಲಿಯೂ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಫೆ15 ರಂದು ಎಣಿಕೆ ಕಾರ್ಯ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ.









