UN Networks ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪ್ರಥಮ ವಾರ್ಷಿಕೋತ್ಸವ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಮಂಗಳೂರು, ಬ್ಲಡ್ ಹೆಲ್ಪ್ ಲೈನ್ ಸಮಾಜಕ್ಕೆ ಮತ್ತು ದೇಶಕ್ಕೆ ಪೂರಕವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ಆಹಾರ ಸಚಿವ ಯುಟಿ ಖಾದರ್ ಹೇಳಿದರು. ಅವರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ರವಿವಾರ ನಗರದ ಫೋರಂ ಫಿಝಾ ಮಾಲ್‍ನಲ್ಲಿ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನ್ನದಾನ, ಶಿಕ್ಷಣ ದಾನದಂತೆ ರಕ್ತದಾನ ಕೂಡ ಶ್ರೇಷ್ಠದಾನವಾಗಿದೆ. ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ದೂರ ಮಾಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಹುಟ್ಟಿಸಬೇಕು ಎಂದು ಸಚಿವ ಖಾದರ್ ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರೋ. ಪಟ್ಟಾಭಿರಾಮ ಸೋಮಯಾಜಿ ರಕ್ತದಾನ ಮಾಡುವ ಸಂದರ್ಭ ಹಲವು ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇದೆ. ಹಾಗಾಗಿ ರಕ್ತದಾನ ಮಾಡಲು ಆಸ್ಪತ್ರೆಗೆ ತೆರಳುವ ಸಂದರ್ಭ ಯಾವುದೇ ತೊಡಕುಗಳು ಆಗದಂತೆ ಸರಕಾರ ಮುನ್ನೆಚ್ಚರಿಕೆ ವಹಿಸಬೇಕಿದೆ.…
Author: UllalaVani
UN Networks ಕೊಣಾಜೆ: ಕೊಣಾಜೆಯ ಕುಂಟಾಳಗುಳಿಯ ಶ್ರೀ ಮಹಾಕಾಳಿ ವನಸಾನಿಧ್ಯದ ಬಳಿ ಶ್ರೀ ಮಹಾಕಾಳಿ ಸೇವಾ ಮಂಡಳಿ ವತಿಯಿಂದ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮವು ಶುಕ್ರವಾರ ನಡೆಯಿತು. ಇದೇ ಸಂದರ್ಭ ಶ್ರೀ ಮಹಾಕಾಳಿ ಸೇವಾ ಮಂಡಳಿ ವತಿಯಿಂದ ಇತ್ತೀಚೆಗೆ ನಡೆದ ವರಮಹಾಲಕ್ಷ್ಮೀ ಪೂಜಾ ಸಂದರ್ಭದಲ್ಲಿ ಹಿರಿಯರಾದ ಸೇಸಮ್ಮ ಅವರನ್ನು ಮಹಿಳಾ ಮಂಡಳಿ ವತಿಯಿಂದ ಗೌರವಿಸಲಾಯಿತು.
UN Network ಮೊಗವೀರಪಟ್ನ: ಉತ್ತರಭಾರತದಲ್ಲಿ ಆಚರಿಸಲಾಗುತ್ತಿದ್ದ ವರಮಹಾಲಕ್ಷ್ಮಿ ಆಚರಣೆ ವಿಳಂಬವಾಗಿಯಾದರೂ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತಿದೆ. ಪೂಜೆಯ ಆಚರಣೆಯಿಂದ ವೃದ್ಧಿ ಸಾಧ್ಯ ಎಂದು ಉದ್ಯಮಿ ಪಾಲ್ಕೆ ಧನಂಜಯ ಆಚಾರ್ ಅಭಿಪ್ರಾಯ ಪಟ್ಟರು. ಅವರು ಉಳ್ಳಾಲ ಮೊಗವೀರಪಟ್ನದ ಧರ್ಮ ರಕ್ಷಣಾ ಮೊಗವೀರ ವೇದಿಕೆ ಇದರ ನಾಲ್ಕನೇ ವಾರ್ಷಿಕ ಸಮಾರಂಭ ಪ್ರ ಯುಕ್ತ ಫಲಾನುಭವಿಗಳಿಗೆ ದಿನಬಳಕೆ ವಸ್ತುಗಳ ವಿತರಣೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಅಭಿನಂದನಾ ಸಮಾರಂಭ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಗೆ ಮೊಗವೀರಪಟ್ನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಿದರು. ದ್ವಾಪರಯುಗದಲ್ಲಿ ಚಾರುಮತಿ ಎಂಬ ಮಹಿಳೆ 14,000 ಶ್ಲೋಕವನ್ನು ವೈದಿಕರಿಂದ ಪಠಿಸಿ ಆರಂಭಿಸಿದ ಪೂಜೆ, ಉತ್ತರಭಾರತದಲ್ಲಿ ಮಾತ್ರವಲ್ಲದೆ ಇದೀಗ ದಕ್ಷಿಣಭಾರತದಲ್ಲೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪೂಜೆಯ ಜತೆಗೆ ಹಲವು ಮೀನುಗಾರರ ಕುಟುಂಬಕ್ಕೆ ದಿನಬಳಕೆ ವಸ್ತುಗಳ ವಿತರಣೆ ಜತೆಗೆ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುವ ಕಾರ್ಯ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುವ ಕಾರ್ಯವಾಗಿದೆ ಎಂದರು. ಈ ಸಂದರ್ಭ ಮೊಗವೀರ ಸಮಾಜದ ಹಿರಿಯ…
UN Networks ಉಳ್ಳಾಲ : ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿ ಸಿ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ, ಚೋಟಾ ರಾಜನ್ ಸಹಚರನನ್ನು ಕೊಣಾಜೆ ಪೊಲೀಸರು ಮುಂಬೈ ನಿಂದ ವಶಕ್ಕೆ ಪಡೆದುಕೊಂಡು ಬಂಧಿಸಿದ್ದಾರೆ. ಉಡುಪಿಯ ಶಿರ್ವ ನಿವಾಸಿ ವಿನೇಶ್ ಶೆಟ್ಟಿ (44) ಬಂಧಿತ ಆರೋಪಿ. 2003 ರಲ್ಲಿ ಕಪ್ಪು ಕಲ್ಲು ಕೋರೆ ಮಾಲೀಕ ವೇಣುಗೋಪಾಲ ನಾಯಕ್ ಮತ್ತು ಅವರ ಚಾಲಕ ಸಂತೋಷ್ ಎಂಬವರನ್ನು ಮುಡಿಪು ಇರಾ ಕ್ರಾಸ್ ಸಮೀಪ ಕೊಲೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಜಾಮೀನು ಪಡೆದಿದ್ದ ಆರೋಪಿ 2015 ರವರೆಗೂ ವಿಚಾರಣೆಗೆ ಹಾಜರಾಗುತ್ತಿದ್ದ. ಬಳಿಕ ತಲೆಮರೆಸಿಕೊಂಡಿದ್ದ ವಿನೇಶ್ ವಿರುದ್ದ ವಾರಂಟ್ ಜಾರಿಯಾಗಿತ್ತು. ವಿನೇಶ್ ವಿರುದ್ಧ ಮುಂಬೈ, ದಾವಣೆಗೆರೆ, ಪುಣೆ, ಹೈದರಬಾದ್, ಮಂಗಳೂರಿನಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ , ಕೊಲೆ, ಕೊಲೆಯತ್ನ ಸಹಿತ ಹಲವು ಪ್ರಕರಣಗಳಿವೆ. ನಟೋರಿಯಸ್ ಕ್ರಿಮಿನಲ್ ಆಗಿದ್ದ ವಿನೇಶ್ ಮುಂಬೈನಲ್ಲಿ ಛೋಟಾ ಶಕೀಲ್…
UN Networks ಉಳ್ಳಾಲ: ಸೋಮೇಶ್ವರ ಶಕ್ತಿಕೇಂದ್ರದ ಕರಾವಳಿ ಕಲ್ಯಾಣ ಪರಿಷತ್ ವತಿಯಿಂದ ಸಮುದ್ರ ಪೂಜೆ ಮತ್ತು ರಕ್ಷಾಬಂಧನ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಪಿಲಾರು ಮುಖ್ಯ ಅತಿಥಿಗಳಾಗಿದ್ದರು. ಧಾರ್ಮಿಕ ಮುಖಂಡ ಜ್ಯೋತಿ ಲೋಕೇಶ್ ಉತ್ಸವದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ವಿಷ್ಣು ಸಹಸ್ರನಾಮ, ಸಮುದ್ರ ಪೂಜೆ , ರಕ್ಷಾಬಂಧನ ಕಾರ್ಯಕ್ರಮಗಳು ನಡೆಯಿತು.
UN Networks ಉಳ್ಳಾಲ: ಎಳೆವೆಯಲ್ಲೇ ಸ್ವಚ್ಛತೆ, ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸ್ಕೌಟ್ಸ್-ಗೈಡ್ಸ್ ಹಮ್ಮಿಕೊಂಡಿರುವ ಕಾರ್ಯಕ್ರಮ ಅತ್ಯುತ್ತಮ ಬೆಳವಣಿಗೆಯಾಗಿದೆ ಎಂದು ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು ಅಭಿಪ್ರಾಯಪಟ್ಟರು. ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ನಿರಂತರ ಸ್ವಚ್ಛತಾ ಕಾರ್ಯಕ್ರಮಕ್ಕೆ ಶನಿವಾರ ತೊಕ್ಕೊಟ್ಟಿನಲ್ಲಿ ಚಾಲನೆ ನೀಡಿ ಮಾತನಾಡಿದರು. ನಾವು ಕಸ ಹೆಕ್ಕಿ ಪರಿಸರ ಶುಚಿಗೊಳಿಸಿದ ಮಾತ್ರಕ್ಕೆ ಊರು, ದೇಶ ಸ್ವಚ್ಛವಾಗುತ್ತದೆ ಎನ್ನುವ ಭಾವನೆ ಸಲ್ಲದು, ಆದರೂ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಸಹಕಾರಿ, ಅಲ್ಲದೆ ಮಕ್ಕಳಿಗೂ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಂ.ಜಿ.ಕಜೆ ತಿಳಿಸಿದರು. ಕಾರ್ಯಕ್ರಮದಲ್ಲಿ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಫಾ.ಎಡ್ವಿನ್ ಮಸ್ಕರೇನಸ್, ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಅಹ್ಮದ್ ಅಬ್ಬಾಸ್, ಜಿಲ್ಲಾ ತರಬೇತಿ ಕೌನ್ಸಿಲರ್ ತ್ಯಾಗಂ ಹರೇಕಳ, ಪ್ರತೀಪ್ ಮಂಜನಾಡಿ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಭಗವಹಿಸಿದ್ದರು. ಕಾರ್ಯದರ್ಶಿ…
UN Networks ಉಳ್ಳಾಲ: ಪ್ರತಿಯೊಬ್ಬರೂ ಗಿಡಗಳನ್ನು ಮಗುವಿನಂತೆ ನೋಡಿಕೊಂಡಾಗ ನಾವು ನೆಟ್ಟ ಗಿಡ ಮರವಾಗಿ ಪರಿಸರ ರಕ್ಷಣೆಗೆ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದು ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು. ಅಲೇಕಳ ಮದನಿ ಪ್ರೌಢಶಾಲೆಯ ಮದನಿ ಇಕೋ ಕ್ಲಬ್ ವತಿಯಿಂದ ದೇರಳಕಟ್ಟೆ ರೋಟರಿ ಕ್ಲಬ್ ಸಹಕಾರದಲ್ಲಿ ಶನಿವಾರ ಶಾಲೆಯ ಆವರಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಬದುಕಿಗಾಗಿ ಸಸ್ಯ ಸಂಪತ್ತು ನಾಶ ಮಾಡುವುದರಿಂದ ಮಾನವನ ಆರೋಗ್ಯದಲ್ಲೂ ಏರುಪೇರು ಸಂಭವಿಸುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ನಿಟ್ಟಿನಲ್ಲಿ ಈಗಲೇ ಕಾರ್ಯಪ್ರವೃತ್ತರಾಗಬೇಕಿದ್ದು, ಆ ನಿಟ್ಟಿನಲ್ಲಿ ರೋಟರಿ ಕ್ಲಬ್ ಗೋಗ್ರೀನ್ ಯೋಜನೆಯಡಿ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸಾವಿರ ಗಿಡಗಳನ್ನು ವಿತರಿಸಲಿದೆ ಎಂದರು. ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಟಿ.ಇಸ್ಮಾಯಿಲ್ ಮಾತನಾಡಿ, ಪ್ರತಿಯೋರ್ವ ವಿದ್ಯಾರ್ಥಿಯೂ ಮನೆಯ ಆವರಣದಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸ ಇಂದಿನಿಂದಲೇ ಮಾಡಲು ಮುಂದಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಯು.ಎನ್.ಇಬ್ರಾಹಿಂ, ಉಪಾಧ್ಯಕ್ಷ ಯು.ಎ.ಖಾಸಿಂ,…
UN Networks ಉಳ್ಳಾಲ: ಸರ್ಕಾರದಿಂದ ಬರುವ ಸವಲತ್ತು ಕಟ್ಟಕಡೆಯ ಜನರಿಗೂ ತಲುಪಿಸುವ ಜೊತೆ ಕೆಡುಕುಮುಕ್ತ ಸಮಾಜ ನಿರ್ಮಾಣದಲ್ಲಿ ಸಂಘಟನೆ ತೊಡಗಿಸಿಕೊಂಡು ಜನಮನ್ನಣೆ ಗಳಿಸಲು ಮುಂದಾಗಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಸಯ್ಯದ್ ಮದನಿ ಸೋಶಿಯಲ್ ಫ್ರೆಂಡ್ಸ್(ಎಸ್‍ಎಂಎಸ್‍ಎಫ್) ಸಂಘಟನೆಗೆ ಶುಕ್ರವಾರ ದರ್ಗಾ ವಠಾರದಲ್ಲಿ ಅಧಿಕೃತ ಚಾಲನೆ ನೀಡಿ ಅವರು ಮಾತನಾಡಿದರು. ಸಮುದಾಯದ ಯುವಕರನ್ನು ಧಾರ್ಮಿಕತೆಯತ್ತ ಸೆಳೆಯುವ ಮೂಲಕ ಮಾದಕ ವಸ್ತುಗಳ ದಾಸರಾಗಿ ದುಷ್ಕೃಂತ್ಯ ಮಾಡುವುದನ್ನು ತಡೆಯುವುದು ಇಂದಿನ ಅವಶ್ಯಕತೆಯಾಗಿದೆ. ಉಳ್ಳಾಲ ಭಾಗದಲ್ಲಿ ಹಿಂದೆ ಇದ್ದಂತಹ ಪರಿಸ್ಥಿತಿ ಇಂದು ಬದಲಾಗಿದೆ ಎನ್ನುವುದು ಪೊಲೀಸರ ವರದಿ ಹೇಳುತ್ತಿದೆ. ಈ ಭಾಗದಲ್ಲಿ ನಿರ್ಮಾಣವಾಗಿರುವ ಉತ್ತಮ ವಾತಾವರಣ ಎಲ್ಲೆಡೆ ನಿರ್ಮಿಸಲು ಸಂಘಟನೆಯ ಸದಸ್ಯರು ಕಾರ್ಯಾಚರಿಸಬೇಕು ಎಂದರು. ದರ್ಗಾ ಅಧೀನದಲ್ಲಿ ಸಯ್ಯದ್ ಮದನಿ ತಂಙಳ್ ಹೆಸರಲ್ಲಿ ಮದರಸಾ ಪುಸ್ತಕಗಳನ್ನು ಹೊರತರಲಾಗಿದ್ದು ಐದಾರು ಮದರಸಾಗಳಲ್ಲಿ ಮಾತ್ರ ಪಡೆದಿಲ್ಲ. ಇದರಿಂದಾಗಿ ಆ ಪ್ರದೇಶದ ಮಕ್ಕಳು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ರಾಜ್ಯದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿ ದರ್ಗಾ…
UN Networks ಉಳ್ಳಾಲ: ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಾಗಿದ್ದು, ಆಟಿ ತಿಂಗಳ ಆಹಾರ ಪದ್ಧತಿ ಮತ್ತು ಆಚರಣೆಗಳನ್ನು ನೆನಪಿಸುವ ಕಾರ್ಯ ಶ್ಲಾಘನೀಯ ಎಂದು ಪ್ರಗತಿಪರ ಕೃಷಿಕ ಸೀತಾರಾಮ ಗಟ್ಟಿ ಕಣಂತೂರು ಅಭಿಪ್ರಾಯಪಟ್ಟರು. ಅವರು ಅಂಬಿಕಾರೋಡು ಗಟ್ಟಿ ಸಮಾಜ ಭವನದಲ್ಲಿ ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಮಹಿಳಾ ವಿಭಾಗದ ಆಶ್ರಯದಲ್ಲಿ ನಡೆದ `ಆಟಿದ ನೆಂಪು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಳೆಗಾಲದ ನಂತರದ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ಇತ್ತು. ಕೃಷಿಕರು ಈ ಅವಧಿಯಲ್ಲಿ ಮೂರು ಬೆಳೆಗಳನ್ನು ಮಾಡುತ್ತಿದ್ದರು. ಆದರೆ ಇಂದು ಕೃಷಿ ಸಂಸ್ಕೃತಿ, ಅಳಿವಿನಂಚಿನಲ್ಲಿದ್ದು ಒಂದು ಬೆಳೆ ಮಾಡುವುದೇ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಯುವ ಜನತೆ ಕೃಷಿ ಸಂಸ್ಕೃತಿಯತ್ತ ಹೆಚ್ಚಿನ ಗಮನ ನೀಡಬೇಕು ಎಂದರು. ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಇದರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಪವಿತ್ರ ಕುಮಾರ್ ಗಟ್ಟಿ…
UN Networks ಉಳ್ಳಾಲ: ಆಲೋಪತಿ ಔಷಧ ಪದ್ಧತಿಗೆ ಯುವಸಮುದಾಯ ಹೊಂದಿಕೊಂಡಿದೆ, ಮಕ್ಕಳು ಕೂಡಾ ಸಣ್ಣ ನ್ಯೂನತೆಗೂ ಆಲೋಪತಿ ಮಾತ್ರೆಗಳಿಗೆ ಅವಲಂಬಿತರಾಗುವಂತೆ ಹೆತ್ತವರು ಕಲಿಸಿಕೊಡುತ್ತಿದ್ದಾರೆ. ಆದರೆ ಆಲೋಪತಿ ಔಷಧಿ ಕೇಂದ್ರವನ್ನು ಹೊರತುಪಡಿಸಿ ಪ್ರಕೃತಿಯಲ್ಲೇ ಔಷಧವಿದೆ. ಇದರಿಂದ ರೋಗಗಳನ್ನು ದೂರವಾಗಿಸಬಹುದು ಅನ್ನುವ ಸಂದೇಶದೊಂದಿಗೆ ಮಂಗಳೂರಿನ ಬೆಂದೂರಿನ ಸಂತ ಆಗ್ನೇಸ್ ಸ್ವಾಯುತ್ತ ಕಾಲೇಜಿನ ಪದವಿ ವಿದ್ಯಾರ್ಥಿಗಳು ಉಳ್ಳಾಲ ವ್ಯಾಪ್ತಿಯ ಬಬ್ಬುಕಟ್ಟೆ, ಕುತ್ತಾರು, ಪಿಲಾರು, ಬಗಂಬಿಲ ಸರಕಾರಿ ಶಾಲೆಗಳಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಿಶಿಷ್ಟ ಅನುಭವವನ್ನು ನೀಡಿತು. ` ಸಮುದಾಯದತ್ತ ಆಗ್ನೇಸ್’ ಕಾರ್ಯಕ್ರಮದಡಿ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ ಮೂರು ವಾರಗಳಿಂದ ಪ್ರತಿ ಶನಿವಾರ ಸೋಮೇಶ್ವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಗಿಡ ನೆಡುವ ಮತ್ತು ಇಂಗು ಗುಂಡಿಗಳ ನಿರ್ಮಾಣ, ಗದ್ದೆಗಳಲ್ಲಿ ಕೃಷಿ ಕೆಲಸದಲ್ಲಿ ಭಾಗವಹಿಸುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದ ವಿದ್ಯಾರ್ಥಿಗಳು, ಈ ಬಾರಿ ಶಾಲೆಗಳಲ್ಲಿ ಹಮ್ಮಿಕೊಂಡ ಔಷಧೀಯ ಗಿಡ ನೆಡುವ ಮತ್ತು ಗಿಡದ ಮಾಹಿತಿ…

