Author: UllalaVani

Kannada News From Coastal Karnataka

UN NETWORKS ಕೊಣಾಜೆ: ಬಿಜೆಪಿ ಮುಸ್ಲಿಂ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಸ್ತಾದರೋರ್ವರಿಗೆ ಎರಡು ವಿದೇಶಿ ಕರೆಗಳ ಮೂಲಕ ಜೀವಬೆದರಿಕೆಯೊಡ್ಡಿರುವ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎರಡು ಅಪರಿಚಿತ ಧ್ವನಿ ಹಾಗೂ ನಾಲ್ಕು ಸಂಖ್ಯೆಯುಳ್ಳ ವಿದೇಶಿ ಕರೆ ಮೂಲಕ ಬೆಳ್ಮ ಕಲ್ಪಾದೆ ಮತ್ತು ತಲಪಾಡಿ ಮದರಸ ಶಿಕ್ಷಕನಾಗಿರುವ ಎ.ಬಿ ಹನೀಫ್ ನಿಝಾಮಿ ಎಂಬವರಿಗೆ ಜೀವಬೆದರಿಕೆ ಒಡ್ಡಿರುವ ಎರಡು ದೂರವಾಣಿ ಕರೆಗಳು ಬಂದಿವೆ. ನಾಲ್ಕು ಸಂಖ್ಯೆಯುಳ್ಳ ನಂಬರಿನಲ್ಲಿ ಕರೆ ಮಾಡಿರುವ ಅಪರಿಚಿತರು ಉಸ್ತಾದರನ್ನು ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆಯನ್ನು ಒಡ್ಡಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಬಿಜೆಪಿ ಏರ್ಪಡಿಸಿದ ಸಭೆಯಲ್ಲಿ ಹಲವು ಧಾರ್ಮಿಕ ಮುಖಂಡರು ಭಾಗವಹಿಸಿರುವ ಕಾರ್ಯಕ್ರಮ ಹಲವು ವಿವಾದಗಳಿಗೆ ಕಾರಣವಾಗಿದೆ.

Read More

UN Networks ಮಾಡೂರು: ಶಬರಿ ಫ್ರೆಂಡ್ಸ್ ಮಾಡೂರು ಇವರ ಆಶ್ರಯದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ-2017 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮವು ಆ.13 ರಂದು ಭಾನುವಾರ ಮಾಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಉದ್ಯಾವರ ಮಾಡ ಇದರ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪಾಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪಿ.ಕೃಷ್ಣ ಗಟ್ಟಿ ಸೋಮೇಶ್ವರ ಅಧ್ಯಕ್ಷತೆಯನ್ನು ವಹಿಸಲಿದ್ದು, ವ್ಯವಸ್ಥಾಪನಾ ಪ್ರಮುಖ್ ಪ್ರೊ. ವಿ.ಜಯರಾಮ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಡಾ. ಅಣ್ಣಯ್ಯ ಕುಲಾಲ್, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಸುರೇಶ್ ಕೆ.ಪಿ, ಮೋಹನ್ ಯು.ಶೆಟ್ಟಿ, ಅನಿಲ್ ದಾಸ್, ತುಳು ಚಲನಚಿತ್ರ ನಟ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ರಾಷ್ಟ್ರೀಯ ಪವರ್ ಲಿಫ್ಟರ್ ಹೇಮಚಂದ್ರ ಬಬ್ಬುಕಟ್ಟೆ , ಕೆ. ಸೀತಾರಾಮ್ ಬಂಗೇರ ಕೊಲ್ಯ, ಕುಶಾಲಾಕ್ಷಿ ವಿ…

Read More

UN Networks ಉಳ್ಳಾಲ: ಮೇಯಲು ಬಿಟ್ಟ ಕುತ್ತಾರು ಬಾಲಸಂರಕ್ಷಣಾ ಕೇಂದ್ರಕ್ಕೆ ಸೇರಿದ ಹಸುವೊಂದನ್ನು ಕಳ್ಳರು ಕಳವುಗೈದಿರುವ ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದೆ.                                                                   ಸಾಂದರ್ಭಿಕ ಚಿತ್ರ            ಮಂಗಳ ಸೇವಾ ಸಮಿತಿ ಟ್ರಸ್ಟಿಗೆ ಸೇರಿದ ಕುತ್ತಾರುಪದವಿನಲ್ಲಿರುವ ಬಾಲಸಂರಕ್ಷಣಾ ಕೇಂದ್ರಕ್ಕೆ ಸೇರಿದ ಹಸುವನ್ನು ಕಳವು ನಡೆಸಲಾಗಿದೆ. ಮಂಗಳವಾರ ಬೆಳಿಗ್ಗೆ ಮೇಯಲು ಬಿಟ್ಟಿದ್ದ ಹಲವು ಜಾನುವಾರುಗಳ ಪೈಕಿ ಹಸು ಸಂಜೆ ವೇಳೆ ಆಶ್ರಮಕ್ಕೆ ವಾಪಸ್ಸು ಬಂದಿರಲಿಲ್ಲ. ಆಶ್ರಮದ ಮಕ್ಕಳು ಹಾಗೂ ಹಿಂದು ಸಂಘಟನೆ ಕಾರ್ಯಕರ್ತರು ಹಸುವಿಗಾಗಿ ತಡರಾತ್ರಿವರೆಗೂ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಮಹಿಳೆಯೊಬ್ಬರು ಆಶ್ರಮಕ್ಕೆ ಫೋನಾಯಿಸಿ ಹಸುವನ್ನು ಸ್ವಿಫ್ಟ್ ಕಾರಿನಲ್ಲಿ…

Read More

UN Networks ಬೋಳಿಯಾರು: ಮುಸ್ಲಿಂ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕಾದ ಧಾರ್ಮಿಕ ಗುರುಗಳನ್ನು ಎಲ್ಲಾ ಪಕ್ಷಗಳು ವೋಟ್ ಹಾಕಲು ಮಾತ್ರ ಮೀಸಲಿಡುತ್ತಿದೆ. ಆದರೆ ಬಿಜೆಪಿ ಮುಕ್ತವಾಗಿ ಮುಸ್ಲಿಂ ಧಾರ್ಮಿಕ ಮುಖಂಡರುಗಳನ್ನು ಮುಖ್ಯವಾಹಿನಿಗೆ ತರಲು ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತದೆ ಎಂದು ಫಝಲ್ ಅಸೈಗೋಳಿ ಹೇಳಿದರು.                  ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ದ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಬೋಳಿಯಾರ್ ಹಾಲ್ ನಲ್ಲಿ ನೂರಕ್ಕೂ ಅಧಿಕ ಮುಸ್ಲಿಂ ಧಾರ್ಮಿಕ ಮುಖಂಡರು ಸಮ್ಮುಖದಲ್ಲಿ ನಡೆಯುತ್ತಿರುವ ಮುಸ್ಲಿಂ ಧಾರ್ಮಿಕ ಗುರುಗಳ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ   ಸಂತೋಷ್ ರೈ ಬೋಳಿಯಾರ, ಜಿಲ್ಲಾ ಅಲ್ಪಾ ಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೋಯಾಲ್ ಡಿ’ಸೋಜ, ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಆಚಾರ್ಯ, ಅಲ್ಪಸಂಖ್ಯಾತ ಮೋರ್ಚಾ ಪ್ರದಾನ ಕಾರ್ಯದರ್ಶಿ ಮುನೀರ್ ಹಾಜಿ ಉಪಸ್ಥಿತರಿದ್ದಾರೆ. ಸುದ್ದಿ ಮುಂದುವರಿಯುತ್ತದೆ.

Read More

UN Networks ಉಳ್ಳಾಲ: ದೇರಳಕಟ್ಟೆಯಲ್ಲಿ ಸುದ್ದಿ ಪತ್ರಿಕೆಯ ಏಜೆಂಟ್ ಆಗಿ ದುಡಿಯುತ್ತಿದ್ದ ಕಾನಕೆರೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಸಮದ್ ಕಾನಕೆರೆ (23)ಎಂಬವರು ಬುಧವಾರ ನಿಧನರಾದರು. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಮದ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನ ಹೊಂದಿದ್ದಾರೆ.

Read More

UN Networks ಕಲ್ಕಟ್ಟ : ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯಲ್ಲಿದ್ದ ತೋಟಕ್ಕೆ ನುಗ್ಗಿದ ಘಟನೆ ಮಂಜನಾಡಿ ಗ್ರಾಮದ ಕಲ್ಕಟ್ಟ ಎಂಬಲ್ಲಿ ಬುಧವಾರ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

Read More

UN Networks ಉಳ್ಳಾಲ: ಕೇರಳ ಕಡೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳು ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸರು ನೆತ್ತಿಲಪದವು ಬಳಿ ಬುಧವಾರ ಪತ್ತೆ ಹಚ್ಚಿ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.ಬಂದಿತ ಚಾಲಕನನ್ನು ಬಾಲಕೃಷ್ಣ ಎಂದು ಹೆಸರಿಸಲಾಗಿದೆ. ಬೆಳ್ತಂಗಡಿ ಮೂಲದವನಾದ ಬಾಲಕೃಷ್ಣ ಉದ್ಯೋಗದಲ್ಲಿ ಚಾಲಕನಾಗಿದ್ದು, ಬುಧವಾರ ಕಲ್ಲಾಪುವಿನಿಂದ ಮಂಜನಾಡಿ ರಸ್ತೆಯಾಗಿ ಕೇರಳ ಕಡೆ ಮರಳು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಮರಳು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN Networks ಉಳ್ಳಾಲ: ಕೃಷಿ ಪ್ರಧಾನ ತುಳುನಾಡಿನಲ್ಲಿ ಆಟಿ ತಿಂಗಳಿಗೆ ಮಹತ್ವವಿದ್ದು, ಕಷ್ಟಗಳನ್ನು ಕಳೆಯುವ ಸಲುವಾಗಿ ವಿವಿಧ ಸಂಪ್ರದಾಯಗಳನ್ನು ಅನುಸರಿಸುವ ಕಾಲವಾಗಿದ್ದು, ಅದನ್ನು ಮುಂದುವರಿಸುವ ಕಾರ್ಯ ಶ್ಲಾಘನೀಯ ಎಂದು ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಸಂಯೋಜಕಿ ವಿಜಯಲಕ್ಷ್ಮೀ ರೈ ಕಲ್ಲಿಮಾರು ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ದೇರಳಕಟ್ಟೆ ವತಿಯಿಂದ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ರವಿಂದ್ರ ಕಲಾ ವೇದಿಕೆಯಲ್ಲಿ ನಡೆದ ` ಆಟಿಡೊಂಜಿ ದಿನ ‘ ರೋಟರಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಆಟಿ ತಿಂಗಳಲ್ಲಿ ಕಷ್ಟ ಕೋಟೆಗಳನ್ನು ಕಳೆಯಲು ಆಟಿ ಕಳೆಂಜದ ಮೂಲಕ ದೇವರು ಬರುವ ಸಂಪ್ರದಾಯ, ಕಷ್ಟದ ಬದುಕನ್ನು ಸಾಗಿಸುವ ತಿಂಗಳಲ್ಲಿ ಪ್ರಕೃತಿಯಿಂದ ಸಿಗುವ ವಸ್ತುಗಳಿಂದ ಆಹಾರ ತಯಾರಿ. ಸೊಸೆಯನ್ನು ತವರು ಮನೆಗೆ ಕಳುಹಿಸುವ ಸಂಪ್ರದಾಯದಿಂದ ತಾಯಿ ಮಗಳ ಪ್ರೀತಿ ಮತ್ತೆ ನೆನಪಿಸುವುದರ ಜತೆಗೆ, ಸೊಸೆಗೂ ಅದೇ ರೀತಿಯ ಪ್ರೀತಿಯನ್ನು ಕೊಡಬೇಕಾದ ಜ್ಞಾನಾರ್ಜನೆಯೂ ಆಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ದೇರಳಕಟ್ಟೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ…

Read More

UN Networks ಉಳ್ಳಾಲ: ಅಣ್ಣ-ತಂಗಿ ಸಂಭದದ ಪಾವಿತ್ರತೆಯನ್ನು ತಿಳಿಸುವ ಭಾಂದವ್ಯವನ್ನು ಬೆಸೆಯುವ ರಕ್ಷಾ ಬಂಧನ ಹಬ್ಬವನ್ನು ತೊಕ್ಕೊಟ್ಟು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಆಹಾರ ಸಚಿವ ಯು.ಟಿ.ಖಾದರ್ ಅವರಿಗೆ ರಕ್ಷೆಯನ್ನು ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಬಳಿಕ ಮಾತನಾಡಿದ ಯು.ಟಿ.ಖಾದರ್ ಅಣ್ಣ-ತಂಗಿ ಸಂಭದದ ಪಾವಿತ್ರತೆಯನ್ನು ಸಾರುವ ರಕ್ಷಾಬಂಧನ ಹಬ್ಬಕ್ಕೆ ವಿಶೇಷ ಮಹತ್ವಿದೆ,ಭಾರತೀಯರು ಜಾತಿ-ಮತ ಬೇದವಿಲ್ಲದೆ ನಾವೆಲ್ಲರೂ ಒಂದೇ ಎಂದು ಒಗ್ಗೂಡಿದಾಗ ಮಾತ್ರ ದೇಶೋದ್ಧಾರವಾಗಲು ಸಾದ್ಯ ಎಂದರು. ತೊಕ್ಕೊಟ್ಟು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿಶ್ವೇಶ್ವರಿ,ಉಳ್ಳಾಲ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ನಗರಸಭಾ ಸದಸ್ಯ ಬಾಝಿಲ್ ಡಿಸೋಜ, ಸುಕುಮಾರ್,ರಝಿಯಾ ಇಬ್ರಾಹಿಂ,ಮುಸ್ತಫ ಅಬ್ದುಲ್ಲ, ನಗರಸಭಾ ನಾಮ ನಿರ್ದೇಶಕ ಸದಸ್ಯರಾದ ರವಿ ಭಟ್ನಗರ,ಕಿಶೋರ್,ರಿಚರ್ಡ್,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ,ಸೋಮೇಶ್ವರ ಪಂಚಾಯತ್ ಸದಸ್ಯ ದೀಪಕ್ ಪಿಲಾರ್,ಮೂಡ ಸದಸ್ಯ ಮುರಳಿ ಸಾಲಿಯಾನ್ ಉಪಸ್ಥಿತರಿದ್ದರು.

Read More

UN Networks ಉಳ್ಳಾಲ: ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಮಾನತೆಯ ಬೀಜವನ್ನು ಬಿತ್ತುವ ದೃಷ್ಟಿಯಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿದ್ದು, ಈ ಮೂಲಕ ಬಡವ ಸಿರಿವಂತ ಎಂಬ ಭೇಧ ಭಾವ ಇಲ್ಲದೆ ಪ್ರತಿಯೊಬ್ಬರು ಸಮಾನತೆಯ ನೆಲೆಯಲ್ಲಿ ಶಿಕ್ಷಣ ಪಡೆಯುವಂತಾಗಬೇಕು ಎಂದು ಉಳ್ಳಾಲ ನಗರಸಭೆ ಪೌರಯುಕ್ತೆ ವಾಣಿ ಆಳ್ವ ಅಭಿಪ್ರಾಯಪಟ್ಟರು. ಅವರು ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢ ಶಾಲೆ ಹಳೆಕೋಟೆ ಉಳ್ಳಾಲ ಇದರ ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ಶಾಲಾ ವಠಾರದಲ್ಲಿ ಮಂಗಳವಾರ ನಡೆದ 1ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಹೆತ್ತವರನ್ನು , ಶಿಕ್ಷಕರನ್ನು ಪ್ರೀತಿಸುವುದನ್ನು ಮೊದಲು ಕಲಿಯಬೇಕು. ಮೌಲ್ಯಾಧಾರಿತ ಶಿಕ್ಷಣದ ಜೊತೆಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತಿರುವ ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರನ್ನು ತಂದುಕೊಡುವ ಜವಾಬ್ದಾರಿ ಪ್ರತಿಯೊಂದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆಯ ಭಾವನೆ ಮೂಡಬೇಕು ಎಂಬ ದೃಷ್ಟಿಯನ್ನು ಇಟ್ಟುಕೊಂಡು ಉಚಿತ ಸಮವಸ್ತ್ರವನ್ನು…

Read More