ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಎಂದೇ ಗುರುತಿಸಿಕೊಂಡಿದ್ದ ಉಳ್ಳಾಲ ಇಂದು ಕ್ಷೇತ್ರ ಬದಲಾವಣೆಯಿಂದಾಗಿ ಮಂಗಳೂರು ಕ್ಷೇತ್ರವಾಗಿ ಮಾರ್ಪಟ್ಟಿದೆ. ಆದರೆ ಯಾವ ಬದಲಾವಣೆಯ ಮಧ್ಯೆಯೋ ಕೇಸರಿ ಪಡೆಗೆ ಉಳ್ಳಾಲದಲ್ಲಿ ಬಿಜೆಪಿ ಧ್ವಜ ಹಾರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಯು.ಟಿ.ಖಾದರ್ ಖದರ್ಗೆ ಸದ್ದು ಹೊಡೆಯಲು ಕೇಸರಿ ಪಡೆ ಸಮರ್ಥ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದು, ಸಂಘ ಪರಿವಾರದ ಗರಡಿಯಲ್ಲಿ ಪಳಗಿದ ಸತ್ಯಜಿತ್ ಸುರತ್ಕಲ್ಗೆ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಕ್ಷೇತ್ರ ಈಗಾಗಲೇ ಖಾದರ್ ವೈಯುಕ್ತಿಕ ವರ್ಚಸ್ಸಿನ ಮಧ್ಯೆ ಕಾಂಗ್ಸೆಸ್ ಪಕ್ಷದ ಗಟ್ಟಿತನದಿಂದ ಕೈ ಜಾರುತ್ತಿಲ್ಲ. ಹೀಗಾಗಿ ಜಯರಾಮ್ ಶೆಟ್ಟಿ ಬಿಟ್ಟರೆ ಬಿಜೆಪಿಯ ಯಾವೊಬ್ಬನಿಗೂ ಕಾಂಗ್ರೆಸ್ ಸಾಮಾಜ್ಯವನ್ನು ಧೂಳೀಪಟ ಮಾಡಲು ಸಾಧ್ಯವಾಗಿಲ್ಲ. ಜಾತಿ ಸಮೀಕರಣದ ಲೆಕ್ಕಚಾರಕ್ಕೆ ಬಂದರೂ ಇಲ್ಲಿನ ನಿರ್ಧರಿತ ಮತಗಳು ಅಲ್ಪ ಸಂಖ್ಯಾತ ಸಮುದಾಯದ ತೆಕ್ಕೆಯಲ್ಲಿದೆ. ಈ ಮಧ್ಯೆ ಖಾದರ್ ಎದುರು ಸ್ಪರ್ಧಿಸಿದ್ದ ಸ್ವಕ್ಷೇತ್ರದ ಒಂದಷ್ಟು ಬಿಜೆಪಿ ಕಲಿಗಳು ಹಿಂದಿನ ಚುನಾವಣೆಗಳಲ್ಲಿ ನೆಲಕಚ್ಚಿದ್ದರು. ಅಲ್ಲದೇ ಬಿಜೆಪಿ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಪ್ರತಿ ಭಾರಿ ಬಂಟ ಬಿಲ್ಲವ ಅಭ್ಯರ್ಥಿಯ ಹುಡುಕಾಟದಲ್ಲೇ ಕಾಲ ಕಳೆದಿತ್ತು. ಆದರೆ ಖಾದರ್ ವರ್ಚಸ್ಸಿನ ಮುಂದೆ ಮತ್ತು ಅಲ್ಪಸಂಖ್ಯಾತ ಮತಗಳ ಮುಂದೆ ಗೆಲುವು ಸಾಧ್ಯವಾಗಿರಲಿಲ್ಲ. ಹೀಗಾಗಿ ಸದ್ಯ ಕೇಳಿಬರುತ್ತಿರುವ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳನ್ನು ಬಿಟ್ಟು ಹೊರಗಿನ ಪ್ರಭಾವಿಯೊಬ್ಬರನ್ನು ಉಳ್ಳಾಲದ ಮಣ್ಣಿನಲ್ಲಿ ಅಗ್ನಿ ಪರೀಕ್ಷೆಗೆ ಇಳಿಸಲು ಕೇಸರಿ ಪಡೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಹಿಂದುತ್ವದ ಶಕ್ತಿ ಕೇಂದ್ರದಲ್ಲಿ ಪಳಗಿದ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್ ರನ್ನು ಅಭ್ಯರ್ಥಿಯನ್ನಾಗಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಇನ್ನು ಸತ್ಯಜಿತ್ ಆಯ್ಕೆಗೆ ಉಳ್ಳಾಲ ಭಾಗದ ಸಂಘ ಪರಿವಾರದ ಸಂಘಟನೆಗಳು ಕೂಡ ಒಪ್ಪಿಗೆ ಸೂಚಿಸಿದು,್ದ ಆರ್ಎಸ್ಎಸ್ ಮುಖಂಡರು ಸತ್ಯಜಿತ್ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಬಗ್ಗೆ ಉಳ್ಳಾಲ ನ್ಯೂಸ್ಗೆ ಮಾಹಿತಿ ನೀಡಿದ ಹೆಸರು ಹೇಳಲು ಇಚ್ಛಿಸದ ಪರಿವಾರದ ನಾಯಕರೊಬ್ಬರು ಸತ್ಯಜಿತ್ ಆಯ್ಕೆಯನ್ನು ಬಹುತೇಕ ಖಾತ್ರಿ ಪಡಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ್ದ ಗಟ್ಟಿಗ ಸತ್ಯಜಿತ್!
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಯುವಕರ ತಂಡವೊಂದು ರಾಷ್ಟ್ರ ಧ್ವಜರೋಹಣ ಮಾಡಿ ಸುದ್ದಿಯಾಗಿತ್ತು. ವಿವಾಧಿತ ಜಾಗದಲ್ಲಿ ಧ್ವಜ ಹಾರಿಸಿ ಯುವಕರು ಬಂಧಿತರಾಗಿದ್ದರು. ಆದರೆ ಸಂಘದ ಪರಿವಾರದಲ್ಲಿ ಈ ಕಾರ್ಯದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಸ್ವತಃ ಬಿಜೆಪಿ ಹಿರಿಯ ಮುಖಂಡ ಎಲ್.ಕೆ,ಅಡ್ವಾಣಿ ಸಹಿತ ಅನೇಕ ನಾಯಕರು ಆ ಯುವಕರ ಕಾರ್ಯವನ್ನು ಶ್ಲಾಘಿಸಿದ್ದರು. ಅಲ್ಲದೇ ಹತ್ತಿರ ಕರೆದು ಸನ್ಮಾನಿಸಿದ್ದರು. ಹೀಗೆ ವಿವಾದಿತ ಕಾರ್ಯದ ಮೂಲಕವೇ ಸಂಘದ ಗರಡಿಯಲ್ಲಿ ಛಾಪು ಮೂಡಿಸಿದ್ದ ಯುವಕ ಇದೇ ಸತ್ಯಜಿತ್ ಸುರತ್ಕಲ್. ಹಲವು ಕಾಲದಿಂದ ಕಟ್ಟರ್ ಹಿಂದುತ್ವ ವಾದಿಯಾಗಿ ಸಂಘದ ಜೊತೆಗಿನ ನಂಟಿನ ಮಧ್ಯೆ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ನಾಯಕರಾಗಿ ಗುರುತಿಸಿಕೊಂಡಿದ್ದರು. ಸದ್ಯ ಪ್ರಬಲ ಹಿಂದು ವಾದಿಯಾಗಿಯೇ ಬಿಜೆಪಿಯ ತೆಕ್ಕೆಗೆ ಜಾರಿದ್ದಾರೆ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಹಿಂದುತ್ವದ ನೆಲೆಯಲ್ಲಿ ಸತ್ಯಜಿತ್ಗೆ ದೊಡ್ಡ ಹೆಸರಿದೆ. ಅಲ್ಲದೇ ಯುವಕರ ಕಣ್ಮಣಿಯಾಗಿ ಪ್ರಕಾರ ವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದ ಮುಳ್ಳನ್ನು ಮುಳ್ಳಿನಿಂದಲೇ ಕೀಳಬೇಕು ಎಂಬ ಸಿದ್ಧಾಂತದ ಅಡಿಯಲ್ಲಿ ಹೊರಟಿರುವ ಬಿಜೆಪಿ ಕೋಮು ಸೂಕ್ಷ್ಮ ಭದ್ರ ಕೋಟೆಯಲ್ಲಿ ಕಟ್ಟರ್ ಹಿಂದೂವಾದಿಯನ್ನು ಅಭ್ಯರ್ಥಿಂiÀiನ್ನಾಗಿ ಘೋಷಿಸುವ ಲೆಕ್ಕಾಚಾರದಲ್ಲಿದೆ. ಅಲ್ಲದೇ ಉಳ್ಳಾಲದ ಬಿಜೆಪಿ ನಾಯಕರ ಅಂತರಿಕ ಸಂಘರ್ಷದ ಹಾದಿಯಲ್ಲಿ ಕೇಸರಿ ಪಡೆ ಮತ್ತೇ ಗೆಲ್ಲೋದು ಅಸಾಧ್ಯ ಎನ್ನುವುದು ಬಿಜೆಪಿ ಮುಖಂಡರಿಗೆ ಗೊತ್ತಾಗಿದೆ.
ಸತ್ಯಜಿತ್ ಆಯ್ಕೆಗೆ ಮುಗಿದ ಒಂದು ಸುತ್ತಿನ ಮಾತುಕತೆ:
ಇನ್ನು ಸತ್ಯಜಿತ್ ಎನ್ನುವ ಪ್ರಬಲ ಅಭ್ಯರ್ಥಿಯನ್ನು ಉಳ್ಳಾಲದ ಮಣ್ಣಿನಲ್ಲಿ ಕಣಕ್ಕಿಳಿಸಲು ಸಂಘದ ಗರಡಿಯಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಕ್ತಾಯವಾಗಿದೆ ಎನ್ನಲಾಗಿದೆ. ಅಲ್ಲದೇ ತೊಕ್ಕೊಟ್ಟು ಕುತ್ತಾರು ಮತ್ತು ಮುಡಿಪು ಭಾಗದ ಕೆಲ ಹಿಂದೂ ಮುಖಂಡರು ಸತ್ಯಜಿತ್ ಪರ ಬ್ಯಾಟ್ ಬೀಸಿದ್ದು, ಅಭ್ಯರ್ಥಿಯಾಗಿಸಲು ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಲ್ಲಿನ ಬಿಜೆಪಿಯೊಳಗಿನ ಭಿನ್ನಮತ ಶಮನಕ್ಕೂ ವೇದಿಕೆ ಒದಗಿಸುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಆದರೆ ಈ ಭಾಗದ ಭಿನ್ನಮತದ ನಾಯಕರು ಈ ವಿಚಾರದಲ್ಲಿ ಸಂಘರ್ಷ ಬಿಡಲು ಒಪ್ಪದ ಕಾರಣ ಕ್ಷೇತ್ರದ ಹೊರಗಿನ ಅಭ್ಯರ್ಥಿಯನ್ನು ಈ ಭಾಗದದಲ್ಲಿ ಕಣಕ್ಕಿಳಿಸಲು ಸಂಘ ಪರಿವಾರ ಕೂಡ ಉತ್ಸುಕಕವಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಸಂಘದ ಆಯ್ಕೆಯ ಮೊದಲ ಮೆಟ್ಟಿಲಲ್ಲಿ ಸತ್ಯಜಿತ್ ಹೆಸರಿದ್ದು, ಎರಡನೇಯದಾಗಿ ಮಾಜಿ ಸಚಿವರೊಬ್ಬರ ಹೆಸರು ಕೇಳಿ ಬರುತ್ತಿದೆ. ಇನ್ನು 50%ರಷ್ಟು ಅಲ್ಪಸಂಖ್ಯಾತ ಮತಗಳಿರುವ ಈ ಕ್ಷೇತ್ರದಲ್ಲಿ ಮುಸ್ಲಿಮರೇ ನಿರ್ಧರಿತ ಮತದಾರರು. ಆದರೆ ಇಲ್ಲಿನ ಹಿಂದೂ ಮತಗಳನ್ನು ಒಂದೇ ಸೂರಿನಡಿ ತಂದು ಕೇಸರಿ ಪಡೆಯ ತೆಕ್ಕಗೆ ಜಾರಿಸುವ ಬಿಜೆಪಿ ಯತ್ನಕ್ಕೆ ಪ್ರಬಲ ಹಿಂದು ನಾಯಕನ ಅಗತ್ಯವಿದೆ. ಈಗಾಗಿ ಹಿಂದುತ್ವದ ಮತಗಳನ್ನು ಒಂದೂ ಬಿಡದಂತೆ ಸೆಳೆಯಲು ಕೇಸರಿ ಪಡೆ ಪಕ್ಕ ರಣತಂತ್ರ ರೂಪಿಸಿದ್ದು, ಜಾತಿ ಸಮೀಕರಣದ ಹಾದಿಯಲ್ಲಿ ಅಲ್ಪಸಂಖ್ಯಾತ ಮತಗಳ ವಿಭಜನೆಗೆ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಖಾದರ್ ಕೋಟೆಯಲ್ಲಿ ಮುಸ್ಲಿಂ ಮತಗಳನ್ನು ಛಿಧ್ರಗೊಳಿಸಲು ಎಸ್ಡಿಪಿಐ ಕೂಡ ಕಾರ್ಯತಂತ್ರ ರೂಪಿಸಿದ್ದು ಪಿಎಫ್ಐ ಕೂಡ ಖಾದರ್ ವಿರುದ್ಧ ತನ್ನ ಕಾರ್ಯಕ್ಕೆ ಜಾಲನೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿನ ಹಿಂದೂ ಮತಗಳನ್ನು ಭದ್ರಪಡಿಸುವ ಕಾರ್ಯಕ್ಕೆ ಸಮರ್ಥ ಹಿಂದೂ ಶಕ್ತಿಯ ಮೂಲಕ ಉತ್ತರ ನೀಡಲು ಬಿಜೆಪಿ ಸಜ್ಜಾಗಿದೆ.



