ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: 2016-17ನೇ ಸಾಲಿನ ಸಿ.ವಿ.ರಾಮನ್ ಜನ್ಮ ಶತಮಾನೋತ್ಸವ ಪ್ರಶಸ್ತಿ ಪುರಸ್ಕತರಾದಂತಹ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮವು ಶುಕ್ರವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ.ಶಾಂತರಾಮ್ ಶೆಟ್ಟಿ ಅವರು, ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಬಹಳ ಆಳವಾಗಿ ತೊಡಗಿಸಿಕೊಂಡು ಅಪಾರ ಸಾಧನೆ ಮಾಡುತ್ತಿರುವ ಪ್ರೊ.ಕೆ.ಭೈರಪ್ಪ ಅವರಿಗೆ ಅರ್ಹವಾಗಿಯೇ ಸಿ.ವಿ.ರಾಮನ್ ಜನ್ಮಶತಮಾನೋತ್ಸವ ಪ್ರಶಸ್ತಿಯು ಲಭಿಸಿದ್ದು ಇದು ಮಂಗಳೂರು ವಿವಿಗೂ ದೊರೆತ ಗೌರವಾಗಿದೆ ಎಂದರು. ವಿಶ್ವವಿದ್ಯಾಲಯದ ಕುಲಪತಿಯಾಗಿ, ಉತ್ತಮ ಸಂಶೋಧಕರಾಗಿ, ಉತ್ತಮ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ಕೆ.ಭೈರಪ್ಪ ಅವರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಒತ್ತು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಅವರು ಮಾದರಿಯಾಗಿದ್ದಾರೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಮಾತನಾಡಿ, ಸಮಾಜಸೇವೆಯೊಂದಿಗೆ ಜ್ಞಾನವನ್ನು ವಿಸ್ತರಿಸಿಕೊಂಡು ಬದ್ದತೆಯಲ್ಲಿ ಕೆಲಸ ಮಾಡಿದರೆ ಗೌರವ ತನ್ನಿಂದ…
Author: UllalaVani
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಪಜೀರು: ಪಜೀರು ತಂಜರೆಯ ಗುಳಿಗ ಬನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುಳಿಗ ದೈವದ ಪ್ರತಿಷ್ಠಾ ಕಲಶೋತ್ಸವವು ನಡಿಬೈಲು ಶ್ರೀ ಶಂಕರನಾರಾಯಣ ಭಟ್ಟರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಉಳ್ಳಾಲದ ಶೈಕ್ಷಣಿಕ ರಂಗದ ಬೆಳವಣಿಗೆಗೆ ಪೂರಕವಾದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಅಧೀನದಲ್ಲಿ ಬನಾತ್ ಕಾಲೇಜು ಕಟ್ಟಡ ಸ್ಥಾಪನೆ, `ಹಝ್ರತ್ ಮದನಿ ಇಲ್ಮ್’ ಸ್ಮರಣ ಸಂಚಿಕೆ ಬಿಡುಗಡೆ ಮತ್ತು ಮದನಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಎ.22ರಂದು ಸಂಜೆ 4:30ಕ್ಕೆ ಹಝ್ರತ್ ಶಾಲಾ ವಠಾರ ಮದನಿ ಗ್ರೌಂಡ್‍ನಲ್ಲಿ ನಡೆಯಲಿದೆ ಎಂದು ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ. ನಗರದ ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಝ್ರತ್ ಸೈಯದ್ ಬನಾತ್ ಕಾಲೇಜು ಕಟ್ಟಡಕ್ಕೆ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆ ಆಶೀರ್ವಚನ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಸಮಾರಂಭಕ್ಕೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಆಹಾರ ಮತ್ತು ನಾಗರಿಕ ಪೂರೈಕೆ…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ, ರಾಜ್ಯ ಸಚಿವ ಯು.ಟಿ.ಖಾದರ್ ರವರ ಸಹೋದರ ಯು.ಟಿ.ಇಫ್ತಿಕಾರ್ ಆಲಿಯವರು ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಳ್ಳುವ ಕುರಿತಂತೆ ಚಿಂತನೆ ನಡೆಸುತ್ತಿದ್ದಾರೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಜಾತ್ಯಾತೀತ ನಿಲುವು ಮತ್ತು ದೇಶದೆಲ್ಲೆಡೆ ಬಿಜೆಪಿಗೆ ವ್ಯಕ್ತವಾಗುತ್ತಿರುವ ಒಲವುಗಳನ್ನು ಮನಗಂಡು ಸ್ವತ: ರಾಜಕೀಯ ಮಹತ್ವಾಕಾಂಕ್ಷಿಯೂ ಆಗಿರುವ ಇಫ್ತಿಕಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರ ಆಪ್ತವಲಯಗಳು ತಿಳಿಸಿವೆ. ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ಇಫ್ತಿಕಾರ್ ರಂತಹ ಮುಸ್ಲಿಂ ಯುವ ನಾಯಕರ ಅಗತ್ಯವೂ ಬಹಳಷ್ಟಿದೆ ಎಂಬುದನ್ನು ಅಲ್ಲಿನ ಹಿರಿಯರು ಒಪ್ಪಿಕೊಳ್ಳುತ್ತಿದ್ದಾರೆ. ಇಫ್ತಿಕಾರ್ ಆಲಿ ಬಿಜೆಪಿಗೆ ಸೇರ್ಪಡೆಗೊಂಡದ್ದೇ ಆದಲ್ಲಿ ಅವರನ್ನು ಬೆಂಗಳೂರಿನ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕೂಡಾ ಬಿಜೆಪಿ ಮುಖಂಡರು ನಿರ್ಧರಿಸಿದಂತಿದೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ಪ್ರತಿನಿಧಿಸುತ್ತಿರುವ ಶಾಂತಿನಗರದಿಂದಲೇ ಇಫ್ತಿಕಾರ್ ರವರಿಗೆ ಸ್ಪರ್ಧಿಸಲು ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ. ಇಫ್ತಿಕಾರ್ ಬಿಜೆಪಿ ಸೇರ್ಪಡೆ ಕುರಿತಂತೆ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಆಕರ್ಷಕವಾಗಿ ನಿರ್ಮಾಣಗೊಂಡಿರುವ ಸರ್. ಸಿ.ವಿ.ರಾಮನ್ ವೃತ್ತದ ಉದ್ಘಾಟನೆ ಸಮಾರಂಭ ಗುರುವಾರ ಸಂಜೆ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಿಂಗಾಪುರ್ ನಾನ್ಯಾಂಗ್ ಟೆಕ್ನಲಾಜಿಕಲ್ ವಿಶ್ವವಿದ್ಯಾಲಯದ ಹಿರಿಯ ಕಾರ್ಯಗಾರಿ ನಿರ್ದೇಶಕ ಹಾಗೂ ವಿಜ್ಞಾನಿ ಪ್ರೊ.ಬಿ.ವಿ.ಆರ್. ಚೌಧರಿ ಅವರು, ಮಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದು ದೇಶದ ಪ್ರತಿಷ್ಟಿತ ವಿವಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅಲ್ಲದೆ ಇದೀಗ ಕ್ಯಾಂಪಸ್‍ನಲ್ಲಿ ಸುಂದರವಾದ ವೃತ್ತ ನಿರ್ಮಾಣವಾಗಿದ್ದು ಇದಕ್ಕೆ ಸರ್ ಸಿ.ವಿ.ರಾಮನ್ ಹೆಸರಿಟ್ಟಿದ್ದು ಇದರ ಮೌಲ್ಯವನ್ನು ಹೆಚ್ಚಿಸಿದೆ. ಈ ಸಿ.ವಿ.ರಾವiನ್ ವೃತ್ತವು ಮುಂದಿನ ದಿನಗಳಲ್ಲಿ ವಿವಿಯ ಪ್ರಮುಖ ಆಕರ್ಷಕ ಕೇಂದ್ರವಾಗಲಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ಸಿ.ವಿ.ರಾಮನ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರವಾದುದು. ಅವರು ಸಮಾಜಕ್ಕೆ ನೀಡಿದ ಕೊಡುಗೆಯಿಂದ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಮಂಗಳೂರು ವಿವಿ ಕ್ಯಾಂಪಸ್‍ನಲ್ಲಿ ವೈಫೈ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳ ವಿಸ್ತರಣೆ ಮಾಡಲಾಗಿದ್ದು ಅದೇ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಮರೋಳಿ ದಿ. ಮಹಾಬಲ ಐತಾಳ್ ಅವರ ಪತ್ನಿ ಪಡುಬಿದ್ರಿ ನಿವಾಸಿ ಪಿ.ಸುಶೀಲಾ ಐತಾಳ್(64) ಎ. 19ರಂದು ಬುಧವಾರ ನಿಧನ ಹೊಂದಿದರು. ನಾಗುರಿಯ ಹಿಂದೂ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸುದೀ್ರ್ಘ ಸೇವೆ ಸಲ್ಲಿಸಿದ್ದ ಅವರು ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಹೊಂದಿದ್ದರು. ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದ ಅವರು ಮರೋಳಿ ಐತಾಳ್ ಮನೆಯ ಸದಸ್ಯೆಯಾಗಿ ಜನಾನುರಾಗಿಯಾಗಿದ್ದರು. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೊಣಾಜೆ: ಬದುಕಿನಲ್ಲಿ ಸುಖ, ಕಷ್ಟ, ನಷ್ಟಗಳು ಸಾಮಾನ್ಯ. ಆದರೆ ಅದನ್ನು ಬಂಡೆಗಲ್ಲಿನಂತೆ ಗಟ್ಟಿಯಾಗಿ ಎದುರಿಸಿ ಮುನ್ನಡೆಯುವುದೇ ಜೀವನ. ಬದುಕಿನಲ್ಲಿ ಯಾವತ್ತೂ ನಾವು ಸುಖವನ್ನು ಮಾತ್ರ ಬಯಸದೆ ವಿದ್ಯಾವಂತರಾಗುವುದರೊಂದಿಗೆ ಉತ್ತಮ ಜೀವನವನ್ನು ಕಂಡುಕೊಳ್ಳಲು ಪರರ ದುಃಖಗಳಿಗೂ ಸ್ಪಂದಿಸುವುದರೊಂದಿಗೆ ಮುನ್ನಡೆಯಬೇಕು ಎಂದು ಯಕ್ಷಗಾನದ ಹಾಸ್ಯ ಕಲಾವಿದ ಹಾಗೂ ಯಕ್ಷರಂಗದ ಚಾರ್ಲಿ ಚಾಪ್ಲಿನ್ ಖ್ಯಾತಿಯ ಸೀತರಾಮ ಕುಮಾರ್ ಕಟೀಲ್ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ನಡೆದ ಮೂರು ದಿನಗಳ ಅಂತರ್ ವಿಭಾಗೀಯ ಮಟ್ಟದ ಸಾಂಸ್ಕತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದು ವಿದ್ಯಾರ್ಥಿಗಳಿಗೆ ಕಲಿಯಲು ಸಾಕಷ್ಟು ಅವಕಾಶಗಳಿವೆ, ಹೆತ್ತವರ ಪ್ರೋತ್ಸಾಹ ಸರ್ಕಾರದ ಅನುದಾನವೂ ಸಿಗುತ್ತದೆ. ಆದರೆ ತಾನು ಬಡ ಕುಟುಂಬದಲ್ಲಿ ಹುಟ್ಟಿದ್ದು ನಾಲ್ಕನೇ ತರಗತಿ ಮಾತ್ರ ಕಲಿಯಲು ಸಾಧ್ಯವಾಯಿತು. ಆ ಸಂದರ್ಭ ಟೀಚರ್ ಕೊಟ್ಟ ಚಡ್ಡಿ ತೊಟ್ಟು ಶಾಲೆಗೆ ಹೋಗುತ್ತಿದ್ದೆ, ಹಿಂದಿನ ಭಾಗ ಹರಿದರೂ ಕೈಇಟ್ಟುಕೊಂಡು ಹೋಗುತ್ತಿದ್ದೆ. ಜೀವನ ಸಾಗಿಸಲು ಕಷ್ಟ…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಜಿಲ್ಲೆ ಬರಗಾಲ ಪ್ರದೇಶ ಎಂದು ಘೋಷಣೆಯಾದರೂ , ಬೆಳ್ಮ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ಶಾಸಕರ ಅನುದಾನದಡಿ ಕೆರೆ ಅಭಿವೃದ್ದಿಗೆ ಮುಂದಾದ ವೇಳೆ ಅಚ್ಚರಿ ಎಂಬಂತೆ ಏಕಾಏಕಿ ಅಂತರ್ಜಲ ಒಸರಿದ ಘಟನೆ ಪಂಚಾಯಿತಿ ವ್ಯಾಪ್ತಿಯ ಬೆಳ್ಮದೋಟ ಕುಡ್ಪಡ್ಪು ಎಂಬಲ್ಲಿ ಬುಧವಾರ ನಡೆದಿದೆ. ಬೆಳ್ಮದೋಟದ ಕುಡ್ಪಡ್ಪುವಿನ ಸುಮಾರು 150 ಮನೆಗಳಿಗೆ ನೀರು ಪೂರೈಸುವ ಉದ್ದೇಶದಿಂದ ಚಂದ್ರಹಾಸ್ ಶೆಟ್ಟಿ ಎಂಬವರ ಕೃಷಿ ಗದ್ದೆಯಲ್ಲಿ ಕೆರೆ ಅಭಿವೃದ್ದಿ ಕಾರ್ಯಕ್ಕೆ ಬೆಳ್ಮ ಗ್ರಾ.ಪಂ ಮುಂದಾಗಿತ್ತು. ಅಲ್ಲದೇ ಈ ಕಾರ್ಯಕ್ಕೆ ಸ್ಥಳೀಯ ಶಾಸಕ ಯು.ಟಿ.ಖಾದರ್ ಅನುದಾನದಿಂದ ಮೂರು ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು. ಹೀಗಾಗಿ ಬುಧವಾರ ಬೆಳಿಗ್ಗೆ ಜೆಸಿಬಿ ಸಹಿತ ಕರೆ ಅಭಿವೃದ್ದಿ ಕಾರ್ಯಕ್ಕೆ ಪಂಚಾಯಿತಿ ಆಡಳಿತ ಮುಂದಾಗಿತ್ತು. ಗುದ್ದಲಿ ಪೂಜೆ ನಡೆಸುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಗದ್ದೆಗಿಳಿದ ಜೆಸಿಬಿ ವಾಹನ ಗದ್ದೆಯನ್ನು ಕೊರೆದು ಕೆರೆಯ ಮಾದರಿಗೆ ಪರಿವರ್ತಿಸಲು ಮುಂದಾದ ಕೇವಲ ಇಪ್ಪತ್ತು ನಿಮಿಷದಲ್ಲಿ ಅಲ್ಲೊಂದು ಅಚ್ಚರಿ ನಡೆದಿದೆ.…
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ವಿಟ್ಲ: ಕರೋಪಾಡಿ ಗ್ರಾ. ಪಂ ಉಪಾಧ್ಯಕ್ಷನನ್ನು ಮುಸುಕುಧಾರಿಗಳ ತಂಡ ಬರ್ಬರವಾಗಿ ತಲವಾರಿನಿಂದ ಕಡಿದ ಪರಿಣಾಮ ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಪೂರ್ವದ್ವೇಷದಿಂದ ಹತ್ಯೆ ನಡೆಸಿರುವ ಶಂಕೆ ಇದೆ. ಬಂಟ್ವಾಳ ತಾಪಂ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿಯವರ ಪುತ್ರ, ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿಯವರ ಮೇಲೆ ಪಂಚಾಯತ್ ಆವರಣದಲ್ಲೇ ನಾಲ್ವರು ಮುಸುಕುಧಾರಿಗಳ ತಂಡ ತಲವಾರುಗಳಿಂದ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಜಲೀಲ್ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಕೊಣಾಜೆ ಕುಂಟಾಳಗುಳಿಯ ಶೇಖರ್ ಅವರ ಕುಟುಂಬಕ್ಕೆ ಕುಂಟಾಳಗುಳಿಯ ಶ್ರೀ ಮಹಾಕಾಳಿ ಸೇವಾ ಮಂಡಳಿ(ರಿ) ಇದರ ವತಿಯಿಂದ ಸಹಾಯಧನವನ್ನು ವಿತರಿಸಲಾಯಿತು. ಕುಂಟಾಳಗುಳಿ ಶೇಖರ್ (23) ಅವರು ಕಳೆದ ಕೆಲವು ದಿನಗಳ ಹಿಂದೆ ಕೊಣಾಜೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಅವರ ತಂದೆಯೂ ಮೃತಪಟ್ಟಿದ್ದರು. ಕುಟುಂಬದ ಆಧಾರಸ್ಥಂಭವಾಗಿದ್ದ ಶೇಖರ್ ಅವರು ಮೃತಪಟ್ಟ ಕಾರಣ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಕುಂಟಾಳಗುಳಿಯ ಶ್ರೀ ಮಹಾಸೇವಾ ಮಂಡಳಿಯ ಪದಾಧಿಕಾರಿಗಳು ನಿರ್ಧರಿಸಿ ಧನ ಸಂಗ್ರಹಿಸಿ ಸುಮಾರು 22 ಸಾವಿರ ರೂಪಾಯಿಯ ಚೆಕ್ ಅನ್ನು ಶ್ರ ಮಹಾಕಾಳಿ ವನಸಾನಿಧ್ಯದ ಬಳಿ ಶೇಖರ್ ಅವರ ತಾಯಿಗೆ ಹಸ್ತಾಂತರಿಸಿದರು. ಈ ಸಂಭರ್ದದಲ್ಲಿ ಶ್ರೀ ಮಹಾಕಾಳಿ ಸೇವಾ ಮಂಡಳಿಯ ಅಧ್ಯಕ್ಷರಾದ ಶಂಕರ್ ಭಟ್, ಪದಾಧಿಕಾರಿಗಳಾದ ಶ್ರಿವಪ್ರಕಾಶ್ ಭಟ್, ಉದಯ ಶೆಟ್ಟಿ, ಉದಯ ಕೃಷ್ಣ, ಡಾ.ಎಸ್.ಎನ್.ಭಟ್, ಕೃಷ್ಣ ಭಟ್, ಶ್ರೀಧರ ಭಟ್, ಕೃಷ್ಣಪ್ಪ ಕಾನ, ಸುಧಾಕರ ಕಾನ,…

