ಉಳ್ಳಾಲ ನ್ಯೂಸ್ ನೆಟ್‍ವರ್ಕ್
ದೇಶದ ಅಭಿವೃದ್ಧಿ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಸಂರಕ್ಷಣೆ ಮಾಡುವಲ್ಲಿ ಸಂಘ ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳು ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಸಪ್ತಸ್ವರ ಕಲಾತಂಡವು ಕಳೆದ ಹಲವಾರು ವರ್ಷದಿಂದ ಶಾರದಾ ಮಾತೆಯ ಆರಾಧನೆಯೊಂದಿಗೆ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಪ್ತಸ್ವರ ಕಲಾ ತಂಡ(ರಿ) ಶಾರದಾ ನಗರ ಕೊಣಾಜೆ ಇದರ ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಭಾಭವನಕ್ಕೆ ಗುರುವಾರ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.
ರಾಮಾಯಣ ಮಹಾಭಾರತ ಕಾಲದಲ್ಲೂ ರಾವಣ, ದುಶ್ಯಾಸನರಂತಹ ದುರುಳರು ಇದ್ದರು. ಅದೇ ರೀತಿ ಆಗಿನ ಕಾಲದಂತೆ ಇಂದಿನ ಕಾಲದಲ್ಲೂ ಸಮಾಜದಲ್ಲಿ ಉತ್ತಮರೂ ದುರುಳರೂ ಇದ್ದಾರೆ. ಆದ್ದರಿಂದ ಇಂತಹ ಸಂಘ ಸಂಸ್ಥೆಗಳ ಮೂಲಕ ಎಲ್ಲರಲ್ಲೂ ಉತ್ತಮ ಮನಸ್ಸುಗಳನ್ನು ನಿರ್ಮಾಣ ಮಾಡಿ ಸಮಾಜದ ಏಳಿಗಾಗಿ ಪ್ರಯತ್ನಿಸಬೇಕು ಎಂದರು.
ಸಪ್ತಸ್ವರ ಕಲಾ ತಂಡದ ಗೌರವ ಸಲಹೆಗಾರ ರವೀಂದ್ರ ರೈ ಹರೇಕಳ, ಮಾಡೂರು ಸಾಯಿಧಾಮದ ಶ್ರೀ ಶಿರಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರ ಕೆ.ಪಿ. ಸುರೇಶ್, ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಉಮರಬ್ಬ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳಾ ಗ್ರಾಮೀಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರಹಿಮಾನ್ ಕೋಡಿಜಾಲ್, ಶಾರದೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಸೋಮಶೇಖರ ಚೌಟ, ಆನಂದ ಕೆ.ಅಸೈಗೋಳಿ, ಶಾರದೋತ್ಸವ ಸಮಿತಿ ಲೆಕ್ಕ ಪರಿಶೋದಕ ರಾಧಕೃಷ್ಣ ರಾವ್, ತಾಲೂಕು ಪಂಚಾಯತ್ ಸದಸ್ಯೆ ಪದ್ಮಾವತಿ, ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ನೌಷಾದ್, ಪಂಚಾಯತ್ ಸದಸ್ಯೆ ರಾಜೀವಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ರಾಮಚಂದ್ರ ಎಂ., ಹಿರಿಯರಾದ ನರ್ಸು ಗೌಡ, ನಾರಾಯಣ ರೈ ಕಕ್ಕೆಮಜಲು, ನಾಗೇಶ್ ಮಂಗಳನಗರ, ಭುವನೇಶ್ವರೀ ಮಾತೃ ಮಂಡಳಿ ಅಧ್ಯಕ್ಷೆ ಯಶೋದ ದೇವಿನಗರ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಇದರ ಮಾಜಿ ಅಧ್ಯಕ್ಷ ಶ್ರೀನಿವಾಸ ಇನೋಳಿ, ಸಪ್ತಸ್ವರ ಕಲಾತಂಡದ ಅಧ್ಯಕ್ಷ ಸುರೇಂದ್ರ ಪೂಜಾರಿ ಬೊಳ್ಳೆ ಕುಮೇರು, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಮೂರ್ತಿ, ಮಾಧವ ಗಟ್ಟಿ, ಗಂಗಾಧರ್ ದೇವಿನಗರ, ದೇವದಾಸ್, ಸುಖೇಶ್ ಶೆಟ್ಟಿ, ಹರಿಪ್ರಸಾದ್, ಚಂದ್ರಶೇಖರ್, ಕೆ. ವರದರಾಜ್ ಬೊಳ್ಳೆಕುಮೇರು ಮತ್ತು ಕಲಾ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಭಾಸ್ಕರ ಮಂಗಳಾನಗರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
-ಚಿತ್ರ: ಪ್ರಶಾಂತ್ ಗುರುಮೇರು ಕೊಣಾಜೆ




























