UN NETWORKS ಉಳ್ಳಾಲ: ಸಯ್ಯದ್ ಮದನಿ ಉಳ್ಳಾಲ ದರ್ಗಾ ಆಡಳಿತ ಸಮಿತಿ ಪ್ರಮುಖರು ಅದ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರ ನೇತೃತ್ವದಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಭೇಟಿ ನೀಡಿ ಸಯ್ಯದ್ ಮದನಿ ದರ್ಗಾ ಅಧೀನದಲ್ಲಿ ಸರ್ವ ಧರ್ಮದವರಿಗೆ ಸಹಕಾರಿಯಾಗುವಂತೆ ಹಲವಾರು ವಿದ್ಯಾಸಂಸ್ಥೆಗಳು ಕಾರ್ಯಚರಿಸುತ್ತಿರುವುದರ ಕುರಿತು ವಿವರಿಸಿ ಸರ್ಕಾರದ ವತಿಯಿಂದ ಪೂರ್ಣ ಸಹಕಾರವನ್ನು ಕೋರಿದರು. ನಿಯೋಗದಲ್ಲಿ ದರ್ಗಾ ಸಮಿತಿ ಪ್ರ.ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ ಕೆ ಮೊಯಿದೀನ್ ಇನ್ನಿತರರು ಉಪಸ್ಥಿತರಿದ್ದರು. ( ಇತ್ತೀಚೆಗೆ ಉಳ್ಳಾಲದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಜುಬೈರ್ ರವರ ಹಂತಕರನ್ನ ಆದಷ್ಟು ಭೇಗ ಬಂಧಿಸಿ ಕಾನೂನು ಸುವ್ಯವಸ್ಥೆ ಭದ್ರಪಡಿಸಬೇಕಾಗಿ ನಿಯೋಗವು ಮುಖ್ಯಮಂತ್ರಿಯವರಲ್ಲಿ ಮನವಿ ಸಲ್ಲಿಸಿತು.)
Author: UllalaVani
UN NETWORKS ಕೋಟೆಕಾರ್: ಕೋಟೆಕಾರ್ ಪಟ್ಟಣ ಪಂಚಾಯತ್‍ಗೆ ಕರ್ನಾಟಕ ಸರ್ಕಾರದ ನಾಮ ನಿರ್ದೇಶಿತ ಸದಸ್ಯರಾಗಿ ಕಾಂಗ್ರೇಸ್ಸ್‍ನ ಪುರುಷೋತ್ತಮ್ ಅಂಚನ್ ವೈಧ್ಯನಾಥ ನಗರ ಇವರನ್ನು ಕರ್ನಾಟಕ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೇಸ್ಸ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಇವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ.
UN NETWORKS ಮಂಗಳೂರು: ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ವತಿಯಿಂದ ಅಕ್ಟೋಬರ್ ತಿಂಗಳ 8,9 ಮತ್ತು 10 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ ಉಲಮಾ ಕಾನ್ಫರೆನ್ಸನ್ನು ವಿಜಯಗೊಳಿಸುವಂತೆ ಎಸ್.ಇ.ಡಿ.ಸಿ. ಮುಅಲ್ಲಿಮರಿಗೆ ಕರೆ ನೀಡಿದೆ. ಅಕ್ಟೋಬರ್ 9 ರ ರಾತ್ರಿ ಹಾಗೂ 10 ರ ಬೆಳಿಗ್ಗಿನ ತರಗತಿಗಳಿಗೆ ಸಮ್ಮೇಳನ ಪ್ರಯುಕ್ತ ವಿದ್ಯಾಭ್ಯಾಸ ಬೋರ್ಡ್ ರಜೆ ಘೋಷಣೆ ಮಾಡಿರುವುದರಿಂದ ಎಲ್ಲಾ ಮುಅಲ್ಲಿಮರು ಕ್ಯಾಂಪಿನಲ್ಲಿ ಭಾಗವಹಿಸುವಂತೆ ಅದು ಮುಅಲ್ಲಿಮರಲ್ಲಿ ವಿನಂತಿಸಿಕೊಂಡಿದೆ. ಉಲಮಾ ಕಾನ್ಫರೆನ್ಸ್ ಯಶಸ್ವಿಗೆ ಮದನೀಸ್ ಅಸೋಸಿಯೇಷನ್ ಕರೆ: ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ವತಿಯಿಂದ ಅಕ್ಟೋಬರ್ ತಿಂಗಳ 8,9 ಮತ್ತು 10 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ ಉಲಮಾ ಕಾನ್ಫರೆನ್ಸ್ ನಲ್ಲಿ ಎಲ್ಲಾ ಮದನಿಗಳು ಭಾಗವಹಿಸುವ ಮೂಲಕ ಯಶಸ್ವಿ ಗೊಳಿಸುವಂತೆ ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿಯು ಸರ್ವ ಮದನಿಗಳಿಗೆ ಕರೆ ನೀಡಿದೆ.
UN NETWORKS ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಮಡ್ಯಾರು, ಪನೀರು ಹಾಗೂ ಸಂಕೊಳಿಗೆ ಪ್ರದೇಶಗಳ ಕೆಲವು ರಸ್ತೆಗೆ ಕಾಂಕ್ರೇಟಿಕರಣಕ್ಕೆ ಗುರುವಾರ ಚಾಲನೆ ನೀಡಲಾಯಿತು. ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರು ವಿವಿಧ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮಾಂತರ ಪ್ರದೇಶ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಿದ್ದರ ಫಲ ಇದಾಗಿದ್ದು ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಕೀಯ ಮಾಡದೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸಬೇಕಾಗಿದೆ ಅದಲ್ಲದೆ ಕೌನ್ಸಿಲರ್‍ರವರಿಗೆ ಇನ್ನೂ ಕಾಲ ಮಿಂಚಿಲ್ಲ ಬಾಕಿ ಉಳಿದ ಕಾಮಗಾರಿಗಳಿಗೆ ಶಾಸಕರ ಸಂಸದರಲ್ಲಿ ಮನವಿ ಮಂಡಿಸಿ ಕೆಲಸ ಪೂರ್ತಿಗೊಳಿಸಬೇಕು ಎಂದು ಹೇಳಿದರು. ಮಾತ್ರವಲ್ಲದೆ ತಕ್ಷಣವೇ ಕೆಲಸ ಪ್ರಾರಂಭಿಸಲು ಗುತ್ತಿಗೆದಾರರನ್ನು ಒತ್ತಾಯಿಸಿ ಕಾಮಗಾರಿಯ ಗುಣಮಟ್ಟವನ್ನು ಗ್ರಾಮಸ್ಥರು ಆಗಾಗ್ಗೆ ಪರೀಕ್ಷಿಸುತ್ತಿರಬೇಕೆಂದು ಈ ಸಂದರ್ಭ ಹೇಳಿದರು. ಮಡ್ಯಾರ್‍ನಲ್ಲಿ 2ಲಕ್ಷ, ಪನೀರ್‍ನಲ್ಲಿ 4 ಲಕ್ಷ, ಸಂಕೊಳಿಗೆಯಲ್ಲಿ ತಲಾ 2ಲಕ್ಷ ಹಾಗೂ 3ಲಕ್ಷ ರೂ. ಹೀಗೆ ಸುಮಾರು 11 ಲಕ್ಷ ಅನುದಾನದ ಕಾಮಗಾರಿಗಳು…
UN NETWORKS ಮಂಗಳೂರು: ದಸರಾ ಕ್ರೀಡೋತ್ಸವದ ಅಂಗವಾಗಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಪ್ರತಿನಿಧಿಸಿದ ಮಂಗಳೂರಿನ ಮಂಗಳಾ ಸ್ಟೇಡಿಯಂನ ವಾಲಿಬಾಲ್ ತಂಡ 33 ವರ್ಷಗಳ ನಂತರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡದ ಕೋಚ್ ನಾರಾಯಣ ಆಳ್ವ ಮತ್ತು ಟೀಂ ಮ್ಯಾನೇಜರ್ ಆಲ್ಫ್ರೆಡ್ ಫೆರ್ನಾಂಡೀಸ್ ತಂಡದ ಜೊತೆಗಿದ್ದಾರೆ.
UN NETWORKS ಉಳ್ಳಾಲ: ಆರೋಪಿಗಳನ್ನು ಮಾತ್ರವಲ್ಲ ಸುಪಾರಿ ನೀಡಿದವರನ್ನು ಬಂಧಿಸಿ, ಲಾಭಿಗೆ ಮಣಿಯುವುದಾದರೆ ಠಾಣೆ ಬಿಟ್ಟು ತೊಲಗಿ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ. ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಅಮಾಯಕ ಜುಬೈರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಉಳ್ಳಾಲದ ನಾಗರಿಕರು ಜತೆಯಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಗುರುವಾರ ಸಂಜೆ ವೇಳೆ ಹಾಕಿದ ಮುತ್ತಿಗೆ ವೇಳೆ ಆಗ್ರಹಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಜುಬೈರ್ ಅಮಾಯಕನಾಗಿದ್ದು, ಯಾವುದೇ ಕೃತ್ಯಗಳಲ್ಲಿ ಭಾಗಿಯಾದವನಲ್ಲ. ಇಂತಹ ವ್ಯಕ್ತಿಯನ್ನು ಹತ್ಯೆಗೈದ ಗೂಂಡಾ ಪಡೆಯನ್ನು ಪೊಲೀಸರು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಉಳ್ಳಾಲದಲ್ಲಿ ಅನೇಕ ಘಟನೆಗಳು ನಡೆಯುತ್ತಿದ್ದರೂ ಆರೋಪಿಗಳಿಗೆ ಶಿಕ್ಷೆಯಾಗದೆ ಅವರು ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮನೆ ಧ್ವಂಸ ಮಾಡಿದರೂ, ಹಲ್ಲೆ ನಡೆಸಿದರೂ ಆರೋಪಿಗಳಿಗೆ ಶಿಕ್ಷಯಾಗುತ್ತಿಲ್ಲ. ಅದಕ್ಕಾಗಿ ಪೊಲೀಸರು ಆರೋಪಿಗಳನ್ನು ಮಾತ್ರವಲ್ಲ, ಅವರನ್ನು ಬಳಸುವ ಸುಪಾರಿ ಕೊಡುವವರನ್ನು ಬಂಧಿಸಬೇಕಿದೆ. ಇದರ ಜತೆಗೆ ಗಾಂಜಾ ವ್ಯಸನಿಗಳು ಹಾಗೂ ಅದರ ಮೂಲವನ್ನು …
UN NETWORKS ಹರೇಕಳ: ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ಉರಿದುಬೀಳುತ್ತಿದ್ದ ಶೋಭಾ ಕೆರಂದ್ಲಾಜೆಯವರು, ಇದೀಗ ಮೋದಿ ಬಗ್ಗೆ ಮಾತನಾಡಿದಾಗ ಉರಿದುಬೀಳಲು ಏನು ಕಾರಣ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಹೇಳಿದ್ದಾರೆ. ಹರೇಕಳ ಪಂಚಾಯತ್ ವ್ಯಾಪ್ತಿಯ 59ನೇ ವಾರ್ಡಿನ ಕಿಸಾನ್ ನಗರದಲ್ಲಿ ಗುರುವಾರ ಹಮ್ಮಿಕೊಂಡ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಂಟ್ವಾಳ ಮತ್ತು ಉಳ್ಳಾಲ ಕ್ಷೇತ್ರದ ಸಚಿವರು ಎಷ್ಟು ಒಳ್ಳೆಯವರು ಅನ್ನುವುದು ಬೂತ್ ಮಟ್ಟದ ಕಾರ್ಯಕರ್ತರ ಬೆಂಬಲದಿಂದ ಗೊತ್ತಾಗುತ್ತಿದೆ. ಬಿಜೆಪಿಯವರ ದುರಾಡಳಿತ ಮತ್ತು ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಿದ ವಿವರ ಹಾಗೂ ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಯಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಮನೆ ಮನೆಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದ ಅವರು ಪ್ರಚಾರದ ವೇಳೆ ಹಿಂದಿನಿಂದ ದೇಶವನ್ನಾಳಿದ ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಗಳ ನಡವಳಿಕೆ ಮತ್ತು ಮುಖ್ಯಮಂತ್ರಿಗಳ ಸರಳ ವ್ಯಕ್ತಿತ್ವದ ಉಲ್ಲೇಖವನ್ನು ಒಳಗೊಂಡಂತಹ ಪುಸ್ತಕವನ್ನು ಮನೆಗಳಿಗೆ ನೀಡುತ್ತಿದ್ದೇವೆ. ಕರ್ನಾಟಕ ಇತಿಹಾಸದಲ್ಲೇ ಪ್ರಥಮ ಬಾರಿ ಬಿಜೆಪಿ ಮುಖ್ಯಮಂತ್ರಿ ಹಾಗೂ ಸಚಿವರುಗಳು ಜೈಲು ಪಾಲಾಗಿದ್ದಾರೆ.…
UN NETWORKS ಉಳ್ಳಾಲ: ಸೇತುವೆಯಿಂದ ನದಿಗೆ ಹಾರಿ ರಿಕ್ಷಾ ಚಾಲಕರೋರ್ವರು ಆತ್ಮಹತ್ಯೆ ನಡೆಸಿರುವ ಘಟನೆ ನೇತ್ರಾವತಿ ಸೇತುವೆಯಲ್ಲಿ ಗುರುವಾರ ನಡೆದಿದೆ. ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ರಿಕ್ಷಾ ಸೇತುವೆಯ ಆರಂಭದಲ್ಲಿ ನಿಂತಿತ್ತು. ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ನೋಡನೋಡುತ್ತಿದ್ದಂತೆ ರಿಕ್ಷಾದಲ್ಲಿದ್ದ ಚಾಲಕ, ದಿಢೀರನೇ ರಿಕ್ಷಾದಿಂದ ಇಳಿದು ಸೇತುವೆಯಿಂದ ನೇರವಾಗಿ ನದಿಗೆ ಹಾರಿದ್ದ. ಹಾರಿದ ಕೆಲವೇ ಕ್ಷಣಗಳಲ್ಲಿ ಚಾಲಕ ನದಿ ನೀರಿನಲ್ಲಿ ಮುಳುಗಿದ್ದರು. ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಚಾಲಕ ನದಿ ಪಾಲಾಗಿದ್ದ. ಘಟನೆ ಬಳಿಕ ಸೇತುವೆಯಲ್ಲಿ ಜನ ಜಮಾಯಿಸಿದ್ದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ರಿಕ್ಷಾದಲ್ಲಿ ಸಿಕ್ಕ ದಾಖಲೆಯಂತೆ, ವಾಹನ ಕೋಡಿಕಲ್ ಅಶೋಕನಗರದ ಬಶೀರ್ ಅಹಮ್ಮದ್ ಎಂಬವರಿಗೆ ಸೇರಿದ್ದಾಗಿದೆ. ಅವರೇ ಚಾಲಕರಾಗಿದ್ದರೇ ಅಥವಾ ಬೇರೆ ಚಾಲಕರಿಗೆ ಬಾಡಿಗೆ ನೀಡಿದ್ದರೇ ಅನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
UN NETWORKS ಉಳ್ಳಾಲ: ಉಳ್ಳಾಲ ಶ್ರೀ ಶಾರದಾ ನಿಕೇತನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೆಳ್ಳಿಗದೆಯ 17ನೇ ವರ್ಷದ ಕುಸ್ತಿ ಪಂದ್ಯಾಟದಲ್ಲಿ ಆಂಜನೇಯ ಸಸಿಹಿತ್ಲುವಿನ ರಾಕೇಶ್ `ಶ್ರಿ ಶಾರದಾ ಕೇಸರಿ’ ಪ್ರಶಸ್ತಿ ಪಡೆದರೆ, ಚಿತ್ರಾಪುರದ ದುರ್ಗಾಪರಮೇಶ್ವರೀಯ ರವಿ `ಶ್ರೀ ಶಾರದಾಶ್ರೀ’ ಮತ್ತು ಬಿ.ಎಚ್.ಎಲ್ ಸುರತ್ಕಲ್‍ನ ಜಸ್ಮಾನ್ ಇರ್ಶಾದ್ `ಶ್ರೀ ಶಾರದಾ ಕಿಶೋರ್’ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, `ದುರ್ಗಾಪರಮೇಶ್ವರೀ ಚಿತ್ರಾಪುರ` ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿ. ಪ್ರಾ. ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಮೊಗವೀರಪಟ್ಣ, ಉಳ್ಳಾಲ, ಇದರ 70ನೇ ಉಳ್ಳಾಲ ದಸರಾ ಪ್ರಯುಕ್ತ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥವಾಗಿ ನಡೆದ ಪಂದ್ಯಾಟದ 74ಕೆ.ಜಿ. ವಿಭಾಗದಲ್ಲಿ ಆಂಜನೇಯ ಸಸಿಹಿತ್ಲುವಿನ ರಾಕೇಶ್ ಅವರು ದುರ್ಗಾಪರಮೇಶ್ವರೀ ಚಿತ್ರಾಪುರದ ಜಗದೀಶ್ ಮಲ್ಲ ಅವರನ್ನು ಸೋಲಿಸಿ ಶ್ರೀ ಶಾರದಾ ಕೇಸರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, 60 ಕೆ.ಜಿ ವಿಭಾಗದಲ್ಲಿ ದುರ್ಗಾ ಪರಮೇಶ್ವರೀ ಚಿತ್ರಾಪುರದ ರವಿ…
UN NETWORKS ಸೋಮೇಶ್ವರ: ಸೋಮೇಶ್ವರ ಗ್ರಾಮದಲ್ಲಿ ಧಾರ್ಮಿಕ ಸ್ಥಳಗಳ ಸಮೀಪ ಕಾನೂನು ಬಾಹಿರವಾಗಿ ಮಧ್ಯದ ಅಂಗಡಿ ಕಟ್ಟಡ ನಿರ್ಮಾಣಾಗುತ್ತಿದ್ದು, ಇದಕ್ಕೆ ತಡೆ ಹೇರಬೇಕು ಎಂದು ಒತ್ತಾಯಿಸಿ ಕಾಟುಂಗರೆ ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ ಹಾಗೂ ಸೋಮೇಶ್ವರ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದೆ. ಸೋಮೇಶ್ವರ ಗ್ರಾಮದ 18ನೇ ವಾರ್ಡ್ ಕದಿ ಎಂಬಲ್ಲಿ ವಿಷ್ಣುಮೂರ್ತಿ ದೇವಸ್ಥಾನ, ಮುಹಿಯುದ್ದೀನ್ ಜುಮಾ ಮಸೀದಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆ ಸಹಿತ 200ಕ್ಕೂ ಅಧಿಕ ಮನೆಗಳಿಂದ ಜನನಿಬಿಡ ಪ್ರದೇಶವಾಗಿದೆ. ಆದರೆ 100 ಮೀಟರ್ ಅಂತರದಲ್ಲಿ ವೈನ್‍ಶಾಪ್ ಕಟ್ಟಡ ನಿರ್ಮಾಣವಾಗುತ್ತಿದ್ದು ಅಬಕಾರಿ ನಿಯಮದ ಉಲ್ಲಂಘನೆಯಾಗಿರುವುದರಿಂದ ಇದಕ್ಕೆ ಅನುಮತಿ ನೀಡಬಾರದು ಎಂದು ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಹಾಗೂ ಅಬಕಾರಿ ಇಲಾಖೆಯ ಉಪನಿರೀಕ್ಷಕಿ ಶೈಲಜಾ ಮನವಿ ಸ್ವೀಕರಿಸಿದ್ದಾರೆ.

