UN NETWORKS ಉಳ್ಳಾಲ: ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುದಾಭಿ, ಇದರ ಅಧ್ಯಕ್ಷರಾದ ಜನಾಬ್ ಮುಹಮ್ಮದ್ ಅಲಿ ಉಚ್ಚಿಲ್ ಅವರಿಗೆ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್‍ರವರು ಸನ್ಮಾನಿಸಿದರು. ಇತ್ತೀಚೆಗೆ ನಡೆದ ಟ್ರಸ್ಟ್‍ನ 35ನೇ ವಾರ್ಷಿಕ ಸಮಾರಂಭಕ್ಕೆ ಕರ್ನಾಟಕ ರಾಜ್ಯಪಾಲರಾದ ವಜುಬಾಯಿ ರೂಡಬಾಲ ಅವರಿಂದ ಗೌರವಿಸುವ ಕಾರ್ಯಕ್ರಮಕ್ಕೆ ಕಾರಣಾಂತರದಿಂದ ಬರಲು ಅನಾನುಕೂಲವಾದ್ದರಿಂದ ಇಂದು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್‍ನ ಅಭಿವೃದ್ದಿ ಕುರಿತು ಚರ್ಚಿಸಿದರು, ಟ್ರಸ್ಟ್ ಕಾರ್ಯದರ್ಶಿ, ಎ.ಕೆ ಮೊಹಿಯದ್ದೀನ್ ಹಾಜಿ, ಕೋಶಾಧಿಕಾರಿ ಜೆ ಅಬ್ದುಲ್ ಹಮೀದ್, ಕಾಲೇಜು ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಹಝ್ರತ್ ಶಾಲಾ ಮುಖ್ಯೋಪಾಧ್ಯಯರುಗಳಾದ ಇಮ್ತಿಯಾಝ್, ಫಿಲೋಮಿನ, ಶಿಕ್ಷಕರಾದ ರಸೂಲ್ ಖಾನ್, ಖಾಲಿದ್, ಮತ್ತಿತ್ತರರು ಉಪಸ್ಥಿತರಿದ್ದರು.
Author: UllalaVani
UN NETWORKS ಇನೋಳಿ: ಇಂದಿನ ಮಕ್ಕಳಿಗೆ ಧಾರ್ಮಿಕ ಚಿಂತನೆ ಮೂಡಿಸುವವರ ಕೊರತೆಯಿದೆ, ಈ ಕಾರಣದಿಂದ ಕಿರಿಯರಿಂದ ಹಿರಿಯರಿಗೆ ನೀಡುವ ಗೌರವ ಕಡಿಮೆಯಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಲ್ಲೂ ಯುವಜನತೆ ಭಾಗವಹಿಸುವುದು ಕಡಿಮೆಯಾಗಿದೆ ಎಂದು ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅಭಿಪ್ರಾಯಪಟ್ಟರು. ಇನೋಳಿ ದೇವಂದಬೆಟ್ಟು ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದು ನಮ್ಮಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು, ಭಜನೆ, ತತ್ಸಂಗಳ ಮೂಲಕ ದೇಶ ಮುಂದುವರಿಯುತ್ತಿದ್ದು, ಹಿರಿಯರು ನೀಡಿರುವ ಬಳುವಳಿಯಾಗಿದೆ. ಭಜನೆ, ತತ್ಸಂಗದಿಂದ ಶಿವನ ಅನುಗ್ರಹ ಪ್ರಾಪ್ತಿಸಲಿದೆ. ಧಾರ್ಮಿಕ ಚಿಂತನೆ ಉಳಿಯಬೇಕಾದರೆ ಮಕ್ಕಳಿಗೆ ವಿದ್ಯೆ ಜೊತೆ ಸಂಸ್ಕಾರವೂ ನೀಡಬೇಕಿದೆ ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮಾತನಾಡಿ, ಶಿವನಿಗೆ ತಂಪು ಪರಿಸರ ಅಗತ್ಯವಿದೆ. ಇನೋಳಿ ಸೋಮನಾಥೇಶ್ವರ ದೇವಸ್ಥಾನದಲ್ಲಿ ಹತ್ತು ಎಕರೆ ಜಮೀನು ಇದೆ.…
UN NETWORKS ಉಳ್ಳಾಲ: ಯೇನೆಪೊಯ ನರ್ಸಿಂಗ್ ಕಾಲೇಜಿನ ಮಕ್ಕಳ ಶುಶ್ರುಷಾ ವಿಭಾಗ ಹಾಗು ಮಕ್ಕಳ ದಂತ ವೈದ್ಯಕೀಯ ವಿಭಾಗ ಯೇನೆಪೊಯ ದಂತ ವೈದ್ಯಕೀಯ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಹಲ್ಲುಗಳ ಆರೈಕೆಯ ಬಗ್ಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಯೇನೆಪೊಯ ದಂತ ವೈದ್ಯಕೀಯ ಕಾಲೇಜನಲ್ಲಿ ನಡೆಯಿತು. ಯೇನೆಪೊಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಪತಿ ರಾವ್ ಹಾಗೂ ಉಪಪ್ರಾಂಶುಪಾಲ ಡಾ| ಶ್ಯಾಮ್ ಭಟ್, ಹಾಗೂ ಮಕ್ಕಳ ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಪ್ರೊ| ಉಮರಾಣಿ ಜೆ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಸ್ಲಿಂ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಅರೋಗ್ಯ ಶಿಕ್ಷಣದ ನಂತರ ಮಕ್ಕಳಿಗೆ ಉಚಿತ ದಂತ ಚಿಕಿತ್ಸೆಯನ್ನು ನೀಡಲಾಯಿತು. ಸಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
UN NETWORKS ತೊಕ್ಕೊಟ್ಟು: ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಇದರ ಆಶ್ರಯದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ 2ನೇ ವರ್ಷದ ನಮ್ಮ ನಡಿಗೆ ಶಿವ ಕ್ಷೇತ್ರದೆಡೆಗೆ ತೊಕ್ಕೊಟ್ಟು ಒಳಪೇಟೆಯಿಂದ ಶ್ರೀ ಕ್ಷೇತ್ರ ಸೋಮೇಶ್ವರದವರೆಗೆ ನಡೆಯಿತು. ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಸಭಾಂಗಣ ಬಳಿ ನಡೆದ ಕಾರ್ಯಕ್ರಮಕ್ಕೆ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಚಾಲನೆ ನೀಡಿದರು. ಮಂಗಳೂರು ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಶರತ್ ಕುಮಾರ್, ಶ್ರೀರಕ್ತೇಶ್ವರೀ ದೇವಸ್ಥಾನದ ಅಧ್ಯಕ್ಷ ಚಂದ್ರಕಾಂತ್, ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಘವ ಉಚ್ಚಿಲ, ಉಳ್ಳಾಲ ಶ್ರೀ ಚೀರುಂಭ ಭಗವತೀ ದೇವಸ್ಥಾನದ ಉಪಾಧ್ಯಕ್ಷ ಸುರೇಶ್ ಭಟ್ನಗರ್, ಮೊಕ್ತೇಸರರಾದ ಮಾಧವ ಸುವರ್ಣ ಒಂಭತ್ತುಕೆರೆ, ದಾಮೋದರ ಉಳ್ಳಾಲ, ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್ ಉಪಸ್ಥಿತರಿದ್ದರು. ಪ್ರವೀಣ್ ಬಸ್ತಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ಸಹಕರಿಸಿದರು.
UN NETWORKS ಕೋಟೆಕಾರ್: ಕೋಟೆಕಾರ್ ಮಾಡೂರು ಹಿಂದೂ ರುದ್ರ ಭೂಮಿ ಸಮಿತಿಯ ನೇತೃತ್ವದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಸಹಕಾರದಿಂದ ಮಾಡೂರು ಹಿಂದೂ ರುದ್ರ ಭೂಮಿಯ ನೂತನ ವಿಶ್ರಾಂತಿ ಕೊಠಡಿಯನ್ನು ಬಿ.ಜೆ.ಪಿ ರಾಜ್ಯಕಾರ್ಯಕಾರಿ ಸದಸ್ಯ ರವೀಂದ್ರ ಶೆಟ್ಟಿ ಉದ್ಘಾಟಿಸಿದರು. ನೂತನ ಕಚೇರಿಯನ್ನು ಕೊಣಾಜೆ ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಕಿಟ್ಟಣ್ಣ ರೈ ಮಾಡೂರು ಉದ್ಘಾಟಿಸಿದರು, ಹಾಗೂ ಇಂಟರ್ ಲಾಕ್ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ನೆರವೇರಿಸಿದರು. ಮಾಡೂರು ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಪಿ, ಪರಮ ಶಿವನ ಕಲಾಕೃತಿಯನ್ನು ಲೋಕಾರ್ಪಣೆಗೈದರು. ಮಾಜಿ ಶಾಸಕ ಜಯರಾಮ ಶೆಟ್ಟಿ ,ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಲ್ಲೆಂಜೀರ್, ಕೊಂಡಾಣ ಕ್ಷೇತ್ರದ ಆಡಳಿತ ಮೊಕ್ತೇಸರ ಕೃಷ್ಣ ಶೆಟ್ಟಿ ಕೆಳಗಿನ ಮನೆ ಕೋಟೆಕಾರ್ ಗುತ್ತು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಪರಿಸರ ಪ್ರೇಮಿ ಮಾದವ ಉಳ್ಳಾಲ್, ವಿಶ್ವ ಹಿಂದೂ ಪರಿಷತ್ ಉಳ್ಳಾಲ…
UN NETWORKS ಕಿನ್ಯ: ದುರ್ಗಾಪುರ, ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ 48ನೇ ವಾರ್ಷಿಕೋತ್ಸವವನ್ನು ಕೋಟೆಕಾರ್ ನೆಲ್ಲಿಸ್ಥಳ ಶ್ರೀ ಕಾಳಿಕಾಂಭ ದೇವಸ್ಥಾನದ ಅಧ್ಯಕ್ಷ ಸುಂದರ್ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ, ನಿರಂತರ ಯಕ್ಷಗಾನ ಚಟುವಟಿಕೆಯೊಂದಿಗೆ, ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸಂಘ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕೋಟೆಕಾರ್ ಕೆಳಗಿನಗುತ್ತು, ನಿವೃತ್ತ ಸರಕಾರಿ ಅಧಿಕಾರಿ, ತಲಪಾಡಿ ಬಿಲ್ಲವ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಾಜೀವ ದೇವಾಡಿಗ, ಕಿನ್ಯ ಬೆಳರಿಂಗೆ ಭಂಡಾರಮನೆ ಶ್ರೀ ಮಲರಾಯ ದೈವದ ಪಾತ್ರಿ ಮೈಂದ ಪೂಜಾರಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಸ್ಪರ್ದಾ ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಟಿ. ರಾಮಯ್ಯ ಕಿಲ್ಲೆ, ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಯಕ್ಷಗಾನ ಸಂಘದ…
UN NETWORKS ಉಳ್ಳಾಲ: ಕರ್ನಾಟಕ ರಾಜ್ಯ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮಂಗಳೂರು ದಕ್ಷಿಣ ವಲಯ ವತಿಯಿಂದ ಇಂದು ಮಂಗಳೂರಿನ ಚಿನ್ಮಯ ಪ್ರೌಢಶಾಲೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರಿಗಾಗಿ ಕಾರ್ಯಗಾರ ಹಾಗೂ ಈಗಾಗಲೇ ವರ್ಗಾವಣೆಗೊಂಡಿರುವ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಜ್ಞಾನೇಶ್ ಎಂ.ಪಿ. ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಅಭಿನಂದನೆ ಸಲ್ಲಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ. ಖಾದರ್ ಅವರು ಒಬ್ಬ ವ್ಯಕ್ತಿ ತನ್ನ ಕರ್ತವ್ಯವನ್ನು ನಿಷ್ಠೆ ಹಾಗೂ ದಕ್ಷತೆಯಿಂದ ಸೇವೆ ಸಲ್ಲಿಸಿದಾಗ ಸಮಾಜವೇ ಅವರನ್ನು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ. ಹಾಗೆಯೇ ನಮ್ಮ ದಕ್ಷಿಣ ವಲಯದಲ್ಲಿ ಜ್ಞಾನೇಶ್‍ರವರು ಎಲ್ಲರನ್ನೂ ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುಖೇನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹಾಗಾಗಿ ವರ್ಗಾವಣೆಗೊಂಡರೂ ಅವರನ್ನು ವಿವಿಧ ಸಂಘಗಳು ಅವರ ಸೇವೆಯನ್ನು ಪರಿಗಣಿಸಿ ಗೌರವಿಸುತ್ತಿದೆ. ಇದು ಅಭಿನಂದನೀಯವೆಂದರು. ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಮೋನುರವರು ಕಾರ್ಯಗಾರವನ್ನು ಉದ್ಘಾಟಿಸಿ ಶಿಸ್ತುವನ್ನು ರೂಪಿಸುವಲ್ಲಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ…
UN NETWORKS ಕೊಣಾಜೆ: ವಿಶ್ವವಿದ್ಯಾನಿಲಯಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಅಧ್ಯಯನಗಳಿಗೆ ಮಹತ್ವ ನೀಡಬೇಕಿದೆ ಎಂದು ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್‍ನ ನ್ಯೂಕಾಸ್ಟಲ್ ವಿಶ್ವವಿದ್ಯಾನಿಲಯದ ಹಿರಿಯ ಉಪಾಧ್ಯಕ್ಷರಾದ ಪ್ರೊ.ಕೆವಿನ್ ಹಾಲ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಂಗಳೂರು ವಿವಿ ಹಾಗೂ ಆಸ್ಟ್ರೇಲಿಯಾದ ನ್ಯೂ ಕಾಸ್ಟಲ್ ವಿವಿ ನಡುವೆ ಐದು ವರ್ಷಗಳ ಶೈಕ್ಷಣಿಕ ಒಡಂಬಡಿಕೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಒಡಂಬಡಿಕೆಯಲ್ಲಿ ಮಂಗಳೂರು ವಿವಿ ಹಾಗೂ ಆಸ್ಟ್ರೇಲಿಯಾ ವಿವಿಯು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಿದೆ ಮತ್ತು ಸಂಶೋಧನೆಗೆ ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಇದರಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಪ್ರಾಧ್ಯಾಪಕ ಸಿಬ್ಬಂದಿಗಳಿಗೂ ಸಂಶೋಧನೆಗೆ ಅವಕಾಶಗಳ ಬಗ್ಗೆ ಒತ್ತು ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ನ್ಯೂ ಕಾಸ್ಟಲ್ ವಿವಿಯ ಗ್ಲೋಬಲ್ ಇನ್ನಾವೇಶನ್ ಸೆಂಟರ್‍ನ ನಿರ್ದೇಶಕರಾದ ಪ್ರೊ.ಅಜಯನ್ ವಿನು ಅವರು ಮಾತನಾಡಿ, ಈ ಎರಡು ವಿವಿಗಳ ನಡುವಿನ ನಡುವಿನ ಶೈಕ್ಷಣಿಕ ಒಡಂಬಡಿಕೆಯು ಉತ್ತಮವಾದ ಸಹಕಾರದೊಂದಿಗೆ…
UN NETWORKS ಉಳ್ಳಾಲ: ದಕ್ಷಿಣ ಕನ್ನಡ ಫುಟ್ಬಾಲ್ ಅಸೊಶಿಯೇಶನ್ ವತಿಯಿಂದ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಅಹಮ್ಮದ್ ಮಾಸ್ಟರ್ ಮೆಮೊರಿಯಲ್ ದಕ್ಷಿಣ ಕನ್ನಡ ಎ ದಿವಿಶನ್ ಫುಟ್ಬಾಲ್ ಲೀಗ್ ನಲ್ಲಿ ಯೆನೆಪೋಯ ಡೀಮ್ದ್ ಟು ಬಿ ವಿಶ್ವವಿದ್ಯಾಲಯವು ಭಾಗವಹಿಸಿ ಪ್ರಥಮ ಸ್ಥಾನ ಪಡೆಯಿತು. ತಂಡವು ಅಂತಿಮ ಪಂದ್ಯಾವಳಿಯಲ್ಲಿ ಬೆಂಗರೆ ಫುಟ್ಬಾಲ್ ತಂಡವನ್ನು 3-0 ಅಂತರದಲ್ಲಿ ಪರಾಜಯ ಗೊಳಿಸಿತು. ತಂಡವು ಬೀಬಿ ತೋಮಸ್ ರಿಂದ ತರಬೇತಿ ಪಡೆದ್ದಿತ್ತು.
UN NETWORKS ಉಳ್ಳಾಲ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಜೋಕಟ್ಟೆಯ ಓರ್ವ ಉಸ್ತಾದರ ಅನಾರೋಗ್ಯದ ಸಮಸ್ಯೆಯನ್ನು ಮನಗಂಡು ಅವರ ಜೋಕಟ್ಟೆಯಲ್ಲಿರುವ ನಿವಾಸಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗದ ನಾಯಕರು ಭೇಟಿ ನೀಡಿ ಅವರ ಆರೋಗ್ಯ ಸಮಸ್ಯೆ ಕುರಿತು ವಿಚಾರಿಸಿ ಹತ್ತು ಸಾವಿರ ರೂಪಾಯಿ ಧನ ಸಹಾಯ ನೀಡಿ ನೆರವಾದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ವಕ್ಪ್ ಸದಸ್ಯ ಹಾಗು ಎಸ್ ವೈ ಎಸ್ ಸಾಂತ್ವನ ವಿಭಾಗದ ಚೇರಮಾನ್ ಅಲ್ತಾಫ್ ಕುಂಪಲ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಬಳ್ಳಾರಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನಾಯಕ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಉಪಸ್ಥಿತರಿದ್ದರು.

