UN NETWORKS ಇರಾ: ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕಾ ಸಚಿವರು ಸ್ಥಳೀಯ ಶಾಸಕರಾದ ಯು.ಟಿ.ಖಾದರ್ ಮತ್ತು ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಇರಾ ಗ್ರಾಮದ ಬಾಳೆಪುಣಿ ಶಾಲಾ ಬಳಿಯ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯನ್ನು ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ,ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಬಿ ಉಮ್ಮರ್ ,ಸೆಫಿಯಾ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿ.ಸಿ.ಎಚ್.ಮಹಮ್ಮದ್ ಶಾಲಾ ಎಸ.ಡಿ.ಎಂ.ಸಿ ಅಧ್ಯಕ್ಷರಾದ ಹಸೈನಾರ್, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್,,ಶಾಲಾ ಮುಖ್ಯ ಶಿಕ್ಷಕಿ ಸವಿತಾ,ಗುತ್ತಿಗೆದಾರರಾದ ಶಾಹುಲ್ ಹಮೀದ್,,ಸ್ಥಳೀಯ ಗಣ್ಯರಾದ ಹಾಜಿ ಇಬ್ರಾಹಿಂ,ಬಿ.ಪಿ ಮೊಯಿದುಕುಂಞ ,ಅಬ್ಬಾಸ್ ಬಾಳೆಪುಣಿ,,ಸೈಯದ್ ಬಡದಲ ಇನ್ನಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
Author: UllalaVani
UN NETWORKS ಇರಾ: ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕಾ ಸಚಿವರು ಸ್ಥಳೀಯ ಶಾಸಕರಾದ ಯು.ಟಿ.ಖಾದರ್ ರವರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಇರಾ ಗ್ರಾಮದ ಬಾಳೆಪುಣಿ ಸರ್ಕಾರಿ ಶಾಲೆಯ ಕ್ರೀಂಡಾಗಣ ಕಾಮಗಾರಿಗೆ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ರವರು ಚಾಲನೆ ನೀಡಿದರು. ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸರ್ಕಾರಿ ಶಾಲೆಗಳ ಮೂಲಭೂತ ಅಭಿವೃದ್ಧಿಗಳಿಗೆ ಸೂಕ್ತವಾಗಿ ಸ್ಪಂದಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದ್ದು ಊರರವರು ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸಿದಾಗ ಇನ್ನಷ್ಟು ಪ್ರಗತಿ ಸಾಧ್ಯ ಎಂದರು. ಕುರ್ನಾಡು ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ ರವರು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನವನ್ನು ದೊರಕಿಸಿ ಕೊಡುವುದರಲ್ಲಿ ಪ್ರಮಾಣಿಕವಾಗಿ ಪ್ರಯತ್ನಿಸುವುದಾಗಿ ಸಂಧರ್ಭೊಚಿತವಾಗಿ ತಿಳಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಬಿ.ಉಮ್ಮರ್,ಸೆಫಿಯಾ,ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಹಸೈನಾರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿ.ಸಿ.ಎಚ್.ಮಹಮ್ಮದ್,ಶಾಲಾ ಮುಖ್ಯ ಶಿಕ್ಷಕಿ ಸವಿತಾ,ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್,ಸ್ಥಳೀಯ ಗಣ್ಯರಾದ ಹಾಜಿ ಇಬ್ರಾಹಿಂ,ಸೈಯದ್ ಬಡದಲ,ಮುಯಿದಿನ್…
UN NETWORKS ಉಳ್ಳಾಲ : ಜಾತಿ, ಮತ, ಭೇದ ಬಿಟ್ಟು ಎಲ್ಲರೂ ಸೌಹಾರ್ದತೆಯಿಂದ ಒಂದಾಗಿ ಆಡುವ ಕ್ರೀಡೆ ಕ್ರಿಕೆಟ್ ಆಗಿದೆ, ಸೌಹಾರ್ದತೆಯಿಂದ ಒಂದಾಗಿ ಬಾಳಿದರೆ ದೇಶ ಕಟ್ಟಬಹುದು ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಐವನ್ ಡಿ’ಸೋಜ ಅಭಿಪ್ರಾಯಪಟ್ಟರು. ಬ್ರೈಟ್ ಬಾಯ್ಸ್ ಅಳೇಕಲ, ಉಳ್ಳಾಲ ವತಿಯಿಂದ ಬಡ ಹಾಗೂ ನಿರ್ಗತಿಕರ ಸಹಾಯಾರ್ಥಕವಾಗಿ ಅಲೇಕಲ ಮದನಿ ಶಾಲಾ ಮೈದಾನದಲ್ಲಿ ನಡೆದ ದ್ವಿತೀಯ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳ್ಳಾಲ ಮದನಿ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ ಖಾಸಿಂ, ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಮತ್ತು ಸಮಾಜ ಸೇವಕಿ ರೇಶ್ಮಾ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಉಪಾಧ್ಯಕ್ಷ ನೌಶಾದ್ ಕಿನ್ಯ ಅವರನ್ನು ಸನ್ಮಾನಿಸಲಾಯಿತು. ಕರಾವಳಿ ವಲಯ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯು.ಬಿ. ಸಲೀಂ, ಮಂಗಳೂರು ತಾಲೂಕು ಪಂಚಾಯತ್ ಆಧ್ಯಕ್ಷ ಮೊಹಮ್ಮದ್ ಮೋನು, ಉದ್ಯಮಿ ಲಾರೆನ್ಸ್ ರೂಡಿ. ಡಿ’ಸೋಜ, ಉಳ್ಳಾಲ ನಗರ ಸಭೆ…
UN NETWORKS ಕುತ್ತಾರು: ಶ್ರೀ ಕ್ಷೇತ್ರ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ವರ್ಷಾವಧಿ ಮಹೋತ್ಸವ ಫೆ.15 ರಿಂದ ಫೆ.18 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಶ್ರೀ ಕ್ಷೇತ್ರದಲ್ಲಿ ಫೆ.16ರಂದು ಗಣಯಾಗ, ನವ ಕ¯ಶಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ಫೆ.17ರಂದು ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ದುರ್ಗಾವಾಹಿನಿ ಮಹಿಳಾ ಮಂಡಳಿ ಇವರಿಂದ ನೃತ್ಯ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9 ಕ್ಕೆ ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ಕುಸಲ್ದರಸೆ ನವೀನ್ ಡಿ.ಪಡೀಲ್ ನಿರ್ದೇಶನದ ಅಂಚಗೆ ಇಂಚಗೆ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಫೆ.18 ರಂದು ಸಾಮೂಹಿಕ ಮಹಾ ಚಂಡಿಕಾಯಾಗ, ಶ್ರುತಿಲಯ ಕಲಾಕೇಂದ್ರ ಕುತ್ತಾರು ಇವರಿಂದ ನೃತ್ಯ ವೈವಿಧ್ಯ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.
UN NETWORKS ತಲಪಾಡಿ : ತಲಪಾಡಿ ಗ್ರಾಮದ ಅಲಂಕಾರಗುಡ್ಡೆ ಶ್ರೀ ಮಲರಾಯ, ಧೂಮಾವತಿ, ಬಂಟ ದೈವಸ್ಥಾನದ ಶ್ರೀ ನಾಗದೇವರು ಮತ್ತು ಶ್ರೀ ಮಲರಾಯ, ಧೂಮಾವತಿ, ಬಂಟ ದೈವಗಳ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸತ್ಕರ್ಮ ಫೆ. 21ರಿಂದ 25ರವರೆಗೆ ಬಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ತಲಪಾಡಿ ಪಂಜಾಳ ಶ್ರೀ ಬಾಲಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಳ್ಳನ ಮನೆ ಯಾನೆ ತಲಪಾಡಿ ದೊಡ್ಡಮನೆ ರವೀಂದ್ರನಾಥ ಶೆಟ್ಟಿ ತಿಳಿಸಿದರು. ಕ್ಷೇತ್ರದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜೀರ್ಣೋದ್ಧಾರ ನಡೆಯದೆ ಹಲವು ವರ್ಷಗಳಾಗಿತ್ತು. ಜೀರ್ಣೋದ್ಧಾರ ಕುರಿತಂತೆ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಅಂದಾಜು ಸುಮಾರು 75ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಸುವುದೆಂಬ ಯೋಜನೆ ಹಾಕಲಾಗಿತ್ತಾದರೂ ವಾಸ್ತು ಶಿಲ್ಪಿ ಮುನಿಯಂಗಳ ಕೃಷ್ಣ ಭಟ್ ಅವರ ನಿರ್ದೇಶನದಂತೆ ಗರ್ಭಗುಡಿ, ಚಾವಡಿ, ಸುತ್ತುಪೌಳಿ, ಗೋಪುರ, ಪಾಗರ ಕ್ಷೇತ್ರದ ಅಭ್ಯುದಯ ದೃಷ್ಟಿಯಲ್ಲಿ ಒಂದಕ್ಕೊಂದು…
UN NETWORKS ಇರಾ: ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಸ್ಥಳೀಯ ಶಾಸಕರಾದ ಯು.ಟಿ. ಖಾದರ್ ಅವರ ಅನುದಾನದಲ್ಲಿ ಇರಾ ಗ್ರಾಮದ ಕೆಳಗಿನಮನೆ ಎಂಬಲ್ಲಿ ನಿರ್ಮಾಣಗೊಳ್ಳಲಿರುವ ಕಿರುಸೇತುವೆ ಕಾಮಗಾರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಶಿಲಾನ್ಯಾಸಗೈದರು. ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಬಿ. ಉಮರ್, ಮೊಯಿದಿನ್ ಕುಂಞ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಸೂತ್ರಬೈಲ್, ಸ್ಥಳೀಯ ಗಣ್ಯರಾದ ಮೊಹಮ್ಮದ್ ಕೆ.ಎಂ, ಅಝೀಝ್ ಸಖಾಫಿ, ಹಸೈನಾರ್ ಯು, ಕೆ ಮೊಯಿದಿನ್ ಕುಂಞ ಕೆಳಗಿನಮನೆ, ಅಬೂಬಕರ್, ಕೆ ಮಹಮ್ಮದ್ ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ನೂರುಲ್ ಹುದಾ ಮಸ್ಜಿದ್ ತಖ್ವಾ ಮತ್ತು ಎಸ್ ವೈಎಸ್ ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ವತಿಯಿಂದ ಅಗಲಿದ ಸುನ್ನಿ ನೇತಾರರಾದ ತಾಜುಲ್ ಉಲಮಾ ಉಳ್ಳಾಲ್ ತಂಙಳ್ ನೂರುಲ್ ಉಲಮಾ ಅನುಸ್ಮರಣೆ ಮತ್ತು 14ನೇ ಸ್ವಲಾತ್ ವಾರ್ಷಿಕ ನರಿಂಗಾನ ಗ್ರಾಮದ ಕೊಲ್ಲರಕೋಡಿ ಮಂಜನಾಡಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು. ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಹೈದ್ರೊಸಿ ಕಿಲ್ಲೂರು ತಂಙಳ್ ಸ್ವಲಾತ್ ಮಜ್ಲಿಸ್ ಗೆ ನೇತ್ರತ್ವವಹಿ ಮಾತನಾಡಿ, ಯುವ ಸಮೂಹ ದಾರಿತಪ್ಪುತ್ತಿದ್ದು, ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಯುವ ಜನಾಂಗ ದಾರಿ ತಪ್ಪಿದರೆ ಮತ್ತೆ ಸರಿಪಡಿಸಲು ಕಷ್ಟವಾಗುದರಿಂದ ಇಂದೇ ಪೋಷಕರು ಮಕ್ಕಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆದು ಬರುವಂತೆ ನೋಡಿಕೊಳ್ಳಿರಿ ಎಂದು ಕರೆ ನೀಡಿದರು. ಮಂಜನಾಡಿ ಅಲ್-ಮದೀನಾ ವಿದ್ಯಾಸಂಸ್ಥೆ ಯ ಅಧ್ಯಕ್ಷ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ಮುಖ್ಯ ಪ್ರಭಾಷಣಗೈದರು.ಕೊಲ್ಲರಕೋಡಿ ತಖ್ವಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್…
UN NETWORKS ಉಳ್ಳಾಲ : ಉಳ್ಳಾಲ ಕ್ರಿಕೆಟ್ ಬೋರ್ಡ್ ವತಿಯಿಂದ ಉಳ್ಳಾಲ ಪ್ರೀಮಿಯರ್ ಲೀಗ್-2018,ಸೀಸನ್ 5 ಮತ್ತು ಯು.ಟಿ.ಫರೀದ್ ಮೆಮೋರಿಯಲ್ ಟ್ರೋಫಿ2018,ಶಾಂತಿಗಾಗಿ ಕ್ರೀಡೆ ಎಂಬ ಘೋಷಣೆಯೊಂದಿಗೆ ಕ್ರಿಕೆಟ್ ಪಂದ್ಯಾಟ ಉಳ್ಳಾಲ ಸೀ ಗ್ರೌಂಡಲ್ಲಿ ನಡೆಯಿತು. ಬುಧವಾರ ರಾತ್ರಿ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಉಳ್ಳಾಲ ಪೊಲೀಸ್ ಎಲೆವೆನ್ ತಂಡ ಮತ್ತು ಉಳ್ಳಾಲ ಎಮ್.ಎಲ್.ಎ.ಎಲೆವೆನ್ ತಂಡಗಳ ಮದ್ಯೆ ಪ್ರದರ್ಶನ ಪಂದ್ಯ ಜರಗಿತು,ಪ್ರಥಮ ಸ್ಥಾನವನ್ನು ಉಳ್ಳಾಲ ಎಮ್.ಎಲ್.ಎ.ಎಲೆವೆನ್ ತಂಡ ಮತ್ತು ದ್ವಿತೀಯ ಸ್ಥಾನವನ್ನು ಉಳ್ಳಾಲ ಪೊಲೀಸ್ ಎಲೆವೆನ್ ತಂಡ ಪಡೆಯಿತು.
UN NETWORKS ಉಳ್ಳಾಲ: ಬೆಂಗಳೂರಿನಲ್ಲಿ ಜರಗಿದ 66ನೇ ರಾಷ್ಟ್ರೀಯ ಮಟ್ಟದ ದೇಹದಾಡ್ಯ ಚಾಂಪಿಯನ್ ಶಿಪ್‍ನಲ್ಲಿ ಭಾರತ್ ಶ್ರೀ ವಿಭಾಗದಲ್ಲಿ ಮೆಸ್ಕಾಂನ ಉದ್ಯೋಗಿ ರೋಶನ್ ಫೆರಾವೊ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇವರು ತೊಕ್ಕೊಟ್ಟಿನ ಬರ್ನ್ ಔಟ್ ಜಿಮ್‍ನ ತರಬೇತುದಾರಾಗಿದ್ದು, ಎಮ್. ಎಸ್. ಕುಮಾರ್ ಮತ್ತು ಏಕಲವ್ಯ ಪ್ರಶಸ್ತಿ ಪುರಸ್ಕೃತ ಭಾಸ್ಕರ್ ತೊಕ್ಕೊಟ್ಟು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
UN NETWORKS ಉಳ್ಳಾಲ: ಉಳ್ಳಾಲ ಕ್ರಿಕೆಟ್ ಬೋರ್ಡ್ ವತಿಯಿಂದ ಉಳ್ಳಾಲ ಪ್ರೀಮಿಯರ್ ಲೀಗ್-2018,ಸೀಸನ್ 5 ಮತ್ತು ಯು.ಟಿ.ಫರೀದ್ ಮೆಮೋರಿಯಲ್ ಟ್ರೋಫಿ2018,ಶಾಂತಿಗಾಗಿ ಕ್ರೀಡೆ ಎಂಬ ಘೋಷಣೆಯೊಂದಿಗೆ ಕ್ರಿಕೆಟ್ ಪಂದ್ಯಾಟ ಉಳ್ಳಾಲ ಸೀ ಗ್ರೌಂಡಲ್ಲಿ ನಡೆಯಿತು. ಕಾರ್ಯಕ್ರಮವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು,ಬಳಿಕ ಮಾತನಾಡಿದ ಅವರು ಕ್ರೀಡೆಯು ಶಾಂತಿ ಸಹೋದರತೆ ಏಕತೆಯ ಸಂಕೇತವಾಗಿದೆ,ಯುವಕರು ಕ್ರೀಡೆಯಲ್ಲಿ ಮುಂದೆ ಬಂದ ಹಾಗೆ ಉದ್ಯೋಗದಲ್ಲಿಯೂ ಮುಂದೆ ಬರಬೇಕೆಂದು ಹೇಳಿದರು. ಉಳ್ಳಾಲ ನಗರ ಸಭೆ ಅಧ್ಯಕ್ಷ ಹುಸೈನ್ ಕುಂಞಮೋನು ಅಧ್ಯಕ್ಷತೆವಹಿಸಿದರು, ಉದ್ಯಮಿ ಎಚ್.ಕೆ.ಖಾದರ್,ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಕಲ್ಲಾಪು,ಸದಸ್ಯರಾದ ಮುಸ್ತಫ ಅಬ್ದುಲ್ಲ, ಮುಹಮ್ಮದ್ ಮುಕ್ಕಚ್ಚೇರಿ, ರಝಿಯಾ ಇಬ್ರಾಹಿಮ್, ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಬಸ್ತಿಪಡ್ಪುs,ಮಾಜಿ ಮೇಯರ್ ಕೆ.ಅಶ್ರಫ್ ಮಂಗಳೂರು ಮಂಗಳಾ ಸ್ಟೇಡಿಯಂ ಅಭಿವೃದ್ಧಿಯ ನಿರ್ದೇಶಕ ಐವನ್ ಪಿಂಟೋ, ಜನತಾದಳ ವಿದ್ಯಾರ್ಥಿ ಘಟಕ ಅಧ್ಯಕ್ಷ ಸಿನಾನ್, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್,ಉಪಾಧ್ಯಕ್ಷ ಇಕ್ಬಾಲ್ ಕೆನರಾ,ಹನೀಫ್ ಬಿ.ಎಫ್.ಸಿ, ಪ್ರಧಾನ ಕಾರ್ಯದರ್ಶಿ…

