Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಫುಡೀ 14 ಸಹಯೋಗದೊಂದಿಗೆ foodie14.com ಎಂಬ ವೆಬ್ ಸೈಟ್ ನ್ನು ಪಿ.ಎ. ಎಜುಕೇಶನಲ್ ಟ್ರಸ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎ. ಎಜುಕೇಶನಲ್ ಟ್ರಸ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎ. ಅಬ್ದುಲ್ಲಾ ಇಬ್ರಾಹಿಂ ಉದ್ಘಾಟಿಸಿದರು. ಈ ವೆಬ್ ಸೈಟನ್ನು ಪಿ.ಎ. ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಂದ ಅಭಿವೃದ್ಧಿಪಡಿಸಲಾಯಿತು. foodie14.com ಒಂದು ಆನ್‍ಲೈನ್ ಸೌಲಭ್ಯವಾಗಿದ್ದು , 100ಕ್ಕೂ ಹೆಚ್ಚು ಆಯ್ಕೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸುವುದು. ಈ ವೆಬ್ ಸೈಟ್ ನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು ಮೊಹಮ್ಮದ್ ಇರ್ಫಾನ್ ಎಮ್. ಎ. ಸೈಫುಲ್ ಅಸೀಮ್, ಅಬ್ದುಲ್ ಖಾದರ್, ಹಾಸಿರ್ ಅಬ್ದುಲ್ಲಾ, ರುಮೈಸ್ ಅಬ್ದುಲ್ಲಾ ಹಾಗೂ ಜಫಿನ್ ಹಸನ್ ಬಿ. ಹೆಚ್. ವಯನಾಡ್ ಮತ್ತು ಮೊಹಮ್ಮದ್ ಹಿಶಾದ್ ಮಂಗಳೂರು. ಈ ಸಂದರ್ಭ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್, ನಿರ್ದೇಶಕ ಪ್ರೊ| ಸಫ್ರ್ರಾಜ್ ಹಾಶಿಮ್ ಜೆ., ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ| ಶರ್ಮಿಳಾ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಬಬ್ಬುಕಟ್ಟೆಯ ಹಿರಾ ಕ್ಯಾಂಪಸ್‍ನಲ್ಲಿ ಇತ್ತೀಚೆಗೆ 5ರಿಂದ 12 ವರ್ಷದ ಒಳಗಿನ ಮಕ್ಕಳಿಗಾಗಿ ಏಕದಿನ ಚಿಲ್ಡ್ರನ್ ಫೆಸ್ಟನ್ನು ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕವು ಹಮ್ಮಿಕೊಂಡಿತು. ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಕರೀಮ್ ಮತ್ತು ಮಸ್ಜಿದುಲ್ ಹುದಾ ತೊಕ್ಕೊಟ್ಟಿನ ನಿಕಟಪೂರ್ವ ಅಧ್ಯಕ್ಷರಾದ ಜನಾಬ್ ಹಸನಬ್ಬರವರು ಪಾರಿವಾಳವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಬಳಿಕ ಅಬ್ದುಲ್ ಕರೀಮ್‍ರವರು ಉದ್ಘಾಟನಾ ಭಾಷಣವನ್ನು ಮಾಡುತ್ತಾ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವುದು ಅವರ ಬಾಲ್ಯವಾಗಿದೆ. ಸನ್ನಡತೆ, ಸದಾಚಾರ, ಶಿಸ್ತು, ಪರಸ್ಪರ ಸಂಬಂಧ, ಸಹಧರ್ಮೀಯರೊಂದಿಗಿನ ಉತ್ತಮ ಬಾಂಧವ್ಯ ಮುಂತಾದ ಧಾರ್ಮಿಕ ಮೌಲ್ಯಗಳ ಬಗ್ಗೆ ಚಿಕ್ಕಂದಿನಿಂದಲೇ ಮಕ್ಕಳಿಗೆ ತರಬೇತಿಯನ್ನು ಕೊಟ್ಟು ಬೆಳೆಸಿದರೆ ಮಾತಾಪಿತರಿಗೆ, ಕುಟುಂಬಸ್ಥರಿಗೆ, ಸಮಾಜಕ್ಕೆ, ದೇಶಕ್ಕೆ ದೊಡ್ಡ ಆಸ್ಥಿಯಾಗಿ ಅವರು ಮಾರ್ಪಡುತ್ತಾರೆ. ಈ ನಿಟ್ಟಿನಲ್ಲಿ ಗುಲ್ಶನ್ ಎಂಬ ಮಕ್ಕಳ ಸಂಘವನ್ನು ಜಮಾಅತೆ ಇಸ್ಲಾಮೀ ಹಿಂದ್ ಸ್ಥಾಪಿಸಿದೆ ಎಂದು ಹೇಳಿದರು. ಜಮಾಅತೆ ಇಸ್ಲಾಮೀ ಹಿಂದ್, ಉಳ್ಳಾಲ ಮಾಜಿ ಅಧ್ಯಕ್ಷರಾದ ಜನಾಬ್ ಪಿ.…

Read More

UN NETWORKS ಉಳ್ಳಾಲ: ಶಾರದಾ ಸಮೂಹ ಸಂಸ್ಥೆಗಳು ಪ್ರೊ| ಎಂ.ಬಿ. ಪುರಾಣಿಕ್ ನೇತೃತ್ವದಲ್ಲಿ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಗಮನ ಸೆಳೆಯುತ್ತಿದ್ದು, ಇದೀಗ ದ್ರವತ್ಯಾಜ್ಯ ಘಟಕ ಸ್ಥಾಪನೆ ಮಾಡುವ ಮೂಲಕ ಇನ್ನೊಮ್ಮೆ ಮಾದರಿ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಯನ್ನು ಪಡೆದಂತಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ಆವರಣದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎರಡನೆಯ ಅತಿ ದೊಡ್ಡ 10ಲಕ್ಷ ಲೀ. ಸಾಮರ್ಥ್ಯದ ದ್ರವ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ಹಲವು ವಸತಿ ವಾಣಿಜ್ಯ ಸಂಕೀರ್ಣಗಳು ತಂದೊಡ್ಡುವ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಇರುವಾಗ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯೊಂದು ಇಂತಹ ಒಂದು ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ನೂತನ ಘಟಕ ನಿರ್ಮಾಣದಿಂದ ಈ ಭಾಗದಲ್ಲಿ ಸುಂದರ ಪರಿಸರ…

Read More

UN NETWORKS ತಲಪಾಡಿ: ಸರಕಾರ ಹಕ್ಕುಪತ್ರ ನೀಡುವ ಮೂಲಕ ಸಮಾಜದ ಜನರು ನೆಮ್ಮದಿಯ ಜೀವನ ನಡೆಸುವುದರೊಂದಿಗೆ ಮುಂದಿನ ಪೀಳಿಗೆಗೆ ಬೆಳೆಬಾಳುವ ಒಂದು ಸಂಪತ್ತಾಗಿ ಅವರು ಉನ್ನತ ಶಿಕ್ಷಣ ಪಡೆದು ಒಂದು ಕ್ರಾಂತಿಕಾರಿ ಬದಲಾವಣೆ ತರುವ ಕಾರ್ಯ ಆಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ಗ್ರಾಮದ ಪಿಲಿಕೂರು ಬಳಿ ತಲಪಾಡಿ ಮತ್ತು ಕಿನ್ಯ ಗ್ರಾಮದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಸರಕಾರ ನೀಡುವ ಹಕ್ಕುಪತ್ರ ಮುಂದಿನ ದಿನಗಳಲ್ಲಿ ಇದರ ಮೌಲ್ಯ ದುಪ್ಪಾಟ್ಟಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಈ ಹಕ್ಕು ಪತ್ರಗಳನ್ನು ಬ್ಯಾಂಕ್‍ನಲ್ಲಿ ಅಡವಿಟ್ಟು ಹಣ ತೆಗೆದುಕೊಳ್ಳುವ ಕಾರ್ಯ ಮಾಡಬಾರದು ಮುಂದಿನ ದಿನಗಳಲ್ಲಿ ಈ ಹಕ್ಕು ಪತ್ರ ಮಕ್ಕಳಿಗೆ ಒಂದು ಸಂಪತ್ತಾಗಿದ್ದು ಆದನ್ನು ಜತನದಲ್ಲಿ ಕಾಯುವ ಕೆಲವನ್ನು ಮಾಡಬೇಕು ಎಂದರು. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರಕಾರ ಇರುವಾಗ ಹಕ್ಕುಪತ್ರ ನೀಡಿತ್ತು ಇದೀಗ ಸಿದ್ಧರಾಮಯ್ಯರ ನೇತೃತ್ವದಲ್ಲಿ ಹಕ್ಕು ಪತ್ರವನ್ನು ನೀಡಲಾಗುತ್ತಿದೆ. ಮಂಗಳೂರು ಕ್ಷೇತ್ರದಲ್ಲಿ ಇದರೊಂದಿಗೆ ಅನ್ನಭಾಗ್ಯ,…

Read More

UN NETWORKS ಉಳ್ಳಾಲ: ಕಾಪಿಕಾಡು ಉಮಾಪುರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಯೋಜಿಸಲಾದ ಅಹೋರಾತ್ರಿ ಏಕಾಹ ಭಜನಾ ಸಂಕೀರ್ತನೆಯನ್ನು ಛಾಯಾಗ್ರಾಹಕ, ಉದ್ಯಮಿ, ಗೋಪಿನಾಥ್ ಬಗಂಬಿಲ ಮತ್ತು ಬಿಂದ್ಯಾ ಗೋಪಿನಾಥ್ ದಂಪತಿ ಉದ್ಘಾಟಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರು ರಾಮಚಂದ್ರ ಭಟ್, ಮೊಕ್ತೇಸರರಾದ ಈಶ್ವರ್ ಉಳ್ಳಾಲ್, ದಿನೇಶ್ ಅತ್ತಾವರ, ರಘುರಾಮ್ ಶೆಟ್ಟಿ ಕಾಪಿಕಾಡ್, ಮಹಾಲಿಂಗ, ನಿರ್ಮಲ ಕುಂಞಂಬು, ಸೇವಾ ಸಮಿತಿ ಗೌರವಾಧ್ಯಕ್ಷ ಸುರೇಂದ್ರ ನಾಯಕ್, ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿ ವೇಣುಗೋಪಾಲ್, ಪ್ರಮುಖರಾದ ಡಾ. ಆರ್.ಕೆ.ಶೆಟ್ಟಿ, ಕೂಸಪ್ಪ ಗಟ್ಟಿ, ಸಂಜೀವ ಶೆಟ್ಟಿ, ನಾರಾಯಣ ರಾವ್, ಆನಂದ ಶೆಟ್ಟಿ, ಪ್ರವೀಣ್ ಉಳ್ಳಾಲಬೈಲ್, ಶಿವರಾಮ್ ಕಾಪಿಕಾಡ್ ಭಜನಾ ಸಂಚಾಲಕರಾದ ವಸಂತ್ ಅಂಬಿಕಾರೋಡ್ ಮುಂತಾದವರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಸೋಮೇಶ್ವರದ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪೂಜೆ ಸಲ್ಲಿಸಿದರು. ಈ ವೇಳೆ ವಿವಿಧ ಸಂಘ ಮಂಡಳಿಗಳಿಂದ ಏಕಾಹ ಭಜನಾ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ನಡೆಯಿತು. ಶಿವರಾತ್ರಿ ದಿನದಂದೇ ಪ್ರದೋಷ ಬಂದಿರುವುದು ವಿಶೇಷ. ದೇವರಿಗೆ ಅಭಿಷೇಕ, ಹೋಮ, ಅಲಂಕಾರ ಹಾಗೂ ರಂಗಪೂಜೆ ನಡೆಯಲಿದೆ. ರಾತ್ರಿ ಹೊತ್ತಿನಲ್ಲಿಯೂ ಭಕ್ತರ ದೇವರ ದರ್ಶನ ಪಡೆಯಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ದೇವಸ್ಥಾನದ ಬಾಗಿಲು ಹಾಕಲಾಗುವುದಿಲ್ಲ ಎಂದು ಸೋಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಹೇಳಿದರು.

Read More

UN NETWORKS ಉಳ್ಳಾಲ: ವ್ಯಕ್ತಿಯೋರ್ವನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮೊಗವೀರಪಟ್ನ ಬಳಿಯ ನಿವಾಸಿ ರಜನೀಶ್ (32) ಎಂಬಾತನನ್ನು ಬಂಧಿಸಲಾಗಿದೆ. 2017ರ, ಮಾ.26 ರಂದು ರಾತ್ರಿ 10 ಕ್ಕೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿರುವ ಮುನೀರ್ ಎಂಬವರಿಗೆ ಸೇರಿದ ಸಮೋಸಾ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಬರುತ್ತಿದ್ದ ಉಳ್ಳಾಲ ನಿವಾಸಿ ನೌಷಾದ್ ಹುಸೈನ್ ಎಂಬವರು ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ತಡೆದು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಘಟನೆ ನಂತರ ತಲಮರೆಸಿಕೊಂಡಿದ್ದ ಆರೋಪಿಗೆ ಪೊಲೀಸರು ಬಲೆ ಬೀಸಿದ್ದರಾದರೂ ಪತ್ತೆಯಾಗಿರಲಿಲ್ಲ. ಸೋಮವಾರ ಖಚಿತ ಮಾಹಿತಿ ಮೇರೆಗೆ ಉಳ್ಳಾಲದಿಂದ ವಶಕ್ಕೆ ಪಡೆದುಕೊಂಡು ಬಳಿಕ ಬಂಧಿಸಿದ್ದಾರೆ. ಎ.ಸಿ.ಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳದ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

Read More

UN NETWORKS ಬಜಪೆ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಇದರ 2018-19 ಸಾಲಿನ ವಾರ್ಷಿಕ ಮಹಾ ಸಭೆಯು ಸೋಮವಾರ ಬಜ್ಪೆ ದ‌ಅ್‌ವಾ ಸೆಂಟರ್ ಕಚೇರಿಯಲ್ಲಿ ನಡೆಯಿತು. ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ದುಆಶಿರ್ವಚನ ಮಾಡಿದರು. ಸೆಕ್ಟರ್ ಅಧ್ಯಕ್ಷ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಅಧ್ಯಕ್ಷತೆ ವಹಿಸಿದ್ದರು. ಸೆಕ್ಟರ್ ಉಸ್ತುವಾರಿ ಶರೀಫ್ ವರಕೋಡಿ ಉದ್ಘಾಟಿಸಿದರು. ಬಜ್ಪೆ ಜುಮಾ ಮಸೀದಿ ಖತೀಬರಾದ ರಝಾಖ್ ಮದನಿ ಮತ್ತು ಅಸಾಸ್ ಮಲ್ಲೂರು ಅಧ್ಯಕ್ಷ ಎಂಪಿಎಂ ಅಶ್ರಫ್ ಸ‌ಅದಿ ತರಗತಿ ನಡೆಸಿಕೊಟ್ಟರು. ಇಶಾರ ಪಾಕ್ಷಿಕ ಸಂಪಾದಕರಾದ ಅಬ್ದುಲ್ ಹಮೀದ್ ಬಜ್ಪೆ ದಿಕ್ಸೂಚಿ ಭಾಷಣ ಮಾಡಿದರು. ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಬಜ್ಪೆ ವರದಿ ವಾಚಿಸಿದರು. ಕೋಶಾಧಿಕಾರಿ ರಮೀಝ್ ತಾರಿಕಂಬಳ ಲೆಕ್ಕಪತ್ರ ಮಂಡಿಸಿದರು. ನಂತರ ಡಿವಿಶನ್ ವೀಕ್ಷಕ ಉವೈಸ್ ಮಾಸ್ಟರ್ ಉದ್ದಬೆಟ್ಟು ರವರ ನೇತೃತ್ವದಲ್ಲಿ ನೂತನ ಬಜ್ಪೆ ಸೆಕ್ಟರ್ ಎಸ್ಸೆಸ್ಸೆಫ್ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಿ.ಎ ಶಾಕಿರ್ ಅಹ್ಮದ್ ಎಮ್ಮೆಸ್ಸಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎ…

Read More

UN NETWORKS ಉಳ್ಳಾಲ: ಸಮುದಾಯ ಸಮೃದ್ಧಿಯಾಗಬೇಕು. ಶೈಕ್ಷಣಿಕವಾಗಿ ಬೆಳೆಯಬೇಕು, ಭಾರತ `ಭಾರತವಾಗಿ ಮುಂದುವರಿಯಬೇಕು ಎಂಬ ಸ್ವಾತಂತ್ರ್ಯ ನಂತರದ ಸವಾಲನ್ನು ಸ್ವೀಕರಿಸಿದ ಉಳ್ಳಾಲ ಮೊಗವೀರ ಸಮುದಾಯ ಸಾಧನೆ ನಿಜಕ್ಕೂ ಅದ್ಭುತವಾದುದನ್ನೇ ಸಾಧಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ನಿಕ್ ಹೇಳಿದರು. ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ವಜ್ರಮಹೋತ್ಸವ ಪ್ರಯುಕ್ತ ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಬ್ರದರ್ಸ್ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಉಳ್ಳಾಲ ಬೀಚ್ ಉತ್ಸವ -2018 ಪ್ರಯುಕ್ತ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾಧವ ಮಂಗಲಶ್ರೀ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ ಎಂಬ ಮಾತಿನಂತೆ ನಡೆದ ಮೊಗವೀರ ಸಮಾಜ 47ರ ಸಮಯದಲ್ಲಿ ಇದ್ದಂತಹ ಸವಾಲುಗಳು ಸಮರ್ಥವಾಗಿ ಎದುರಿಸಿ ಜೀವನ ಸಾಗಿಸಿದ್ದರು. ಈಗಿನ ಸವಾಲುಗಳು ಬಹಳಷ್ಟಿದ್ದು ಅದನ್ನು ಅರಿತುಕೊಂಡು ತಮ್ಮ ಶ್ರಮದಾಯಕ ಕುಲಕಸುಬನ್ನು ಮಕ್ಕಳು ಕೂಡಾ ನೆಚ್ಚಿಕೊಳ್ಳುವುದು ಬೇಡ, ಅವರಿಗೆ ಒಂದು ಸುಂದರ ಬದುಕು…

Read More

UN NETWORKS ಕೊಣಾಜೆ: ಭಜನೆಯು ನಿರಂತರವಾಗಿ ನಡೆಯುತ್ತಿದ್ದರೆ ಅಲ್ಲಿ ವಿಭಜನೆ ಖಂಡಿತಾ ಸಾಧ್ಯವಿಲ್ಲ. ಭಜನೆ ಹಾಗೂ ಧಾರ್ಮಿಕತೆಯು ಸಮಾಜದಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವುದರೊಂದಿಗೆ ಸಾಮರಸ್ಯತೆಯನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಅವರು ಹೇಳಿದರು. ಅವರು ಪಟ್ಟೋರಿಯಲ್ಲಿ ನಾಗಬ್ರಹ್ಮ ಭಜನಾ ಮಂಡಳಿ ಹಾಗೂ ಅಖಂಡ ಭಜನಾ ಸಪ್ತಾಹ ಸಮಿತಿ ಆಶ್ರಯದಲ್ಲಿ ನಡೆದ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇಂದಿನ ಆಧುನಿಕ ಸಮಾಜದಲ್ಲಿ ಯುವ ಸಮುದಾಯ ಭಜನೆಯಂತಹ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದರೆ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಪಟ್ಟೋರಿಯ ನೆಲದಲ್ಲಿ ಕಳೆದ ಒಂದು ವಾರದಿಂದ ನಡೆಯುವ ಅಖಂಡ ಭಜನಾ ಸಪ್ತಾಹವು ಈ ನೆಲಕ್ಕೆ ಧಾರ್ಮಿಕ ಶಕ್ತಿಯನ್ನು ಒದಗಿಸಿಕೊಟ್ಟಿದ್ದು ಇಂತಹ ಮಾದರಿ ಕಾರ್ಯಗಳು ನಿರಂತರವಾಗಿ ಎಲ್ಲೆಡೆಯೂ ನಡೆಯುವಂತಾಗಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ಕಾಂಗ್ರೆಸ್‍ನ ಅಧ್ಯಕ್ಷರಾದ ಸಂತೋಷ್ ಕುಮಾರ್…

Read More