UN NETWORKS ಸುಳ್ಯ: ಭವ್ಯ ಭಾರತ ದೇಶವು ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯದ ಮಾದರಿ ದೇಶವಾಗಿದ್ದು ಎಲ್ಲಾ ವರ್ಗದ ಜನರ ನಡುವಿನ ಸೌಹಾರ್ದತೆ ಮತ್ತು ಸಹಬಾಳ್ವೆ ಬಾರತದ ವೈಶಿಷ್ಟ್ಯತೆಯಾಗಿದೆ. ಸಾಹಿತ್ಯದ ಮೂಲಕ ಸಾಮರಸ್ಯ ಸಾರುವ ಮಹತ್ಕಾರ್ಯ ನಿರಂತರವಾಗಿ ನಡೆದರೆ ಭಾರತ ನಿತ್ಯ ಶಾಂತಿಯ ನೆಲೆವೀಡಾಗಲಿದೆ ಎಂದು ಹವ್ಯಾಸಿ ಪತ್ರಕರ್ತ, ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಹೇಳಿದ್ದಾರೆ. ಸುಳ್ಯ ಚಂದನ ಸಾಹಿತ್ಯ ವೇದಿಕೆ ವತಿಯಿಂದ ನಡೆದ “ಸಾಮರಸ್ಯ ಸಾಹಿತ್ಯ ಸಂಭ್ರಮ”ದಲ್ಲಿ “ಸಾಹಿತ್ಯ ರತ್ನ ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಅಜ್ಜಾವರ ಚೈತನ್ಯ ಸೇವಾಶ್ರಮ ಸಂಚಾಲಕ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಯವರು ಮಾತನಾಡಿ”ಸಾಹಿತ್ಯ ಮಾನವರ ನಡುವೆ ಸೇತುವೆ ಕಟ್ಟುವ ಕೆಲಸವನ್ನು ಮಾಡಬೇಕು.ಭಾವನೆಗಳಿಗೆ ಅಕ್ಷರ ರೂಪ ನೀಡಿದಾಗ ಅದು ಸಮಾಜದಲ್ಲಿ ಅಮೂಲಾಗ್ರ ಪರಿವರ್ತನೆಗೆ ಕಾರಣವಾಗುತ್ತದೆ ಎಂದರು. ಸುಳ್ಯ ಚರ್ಚ್ ಧರ್ಮಗುರು ಫಾ.ವಿನ್ಸೆಂಟ್ ಡಿಸೋಜ ಮಾತನಾಡಿ ” ಸ್ನೇಹ, ಸಹಬಾಳ್ವೆ ಪ್ರತಿಯೊಬ್ಬ ಮಾನವರ ಕರ್ತವ್ಯ ವಾಗಿದ್ದು ಸಹಜೀವಿಗಳೊಂದಿಗೆ…
Author: UllalaVani
UN NETWORKS ಉಳ್ಳಾಲ: ಅಬ್ಬಕ್ಕ ಉತ್ಸವವನ್ನು ಬೀಚ್ ಉತ್ಸವವಾಗಿ ಸಮುದ್ರ ತೀರದಲ್ಲಿ ಆಚರಿಸುವ ಯೋಜನೆಯನ್ನು ಮುಂದಿನ ವರ್ಷ ನಡೆಸಲು ರೂಪುರೇಷೆಯನ್ನು ತಯಾರಿಸಲಾಗುವುದು. ಸರ್ವಧರ್ಮದ ಸಮನ್ವಯತೆಕ್ಕೆ ಪೂರಕವಾದಂತಹ ಮೂರು ದಿನಗಳ ಅಬ್ಬಕ್ಕ ಉತ್ಸವ ಮತ್ತು ಬೀಚ್ ಉತ್ಸವವನ್ನು ಆಚರಿಸುವ ಮೂಲಕ ಉಳ್ಳಾಲ ಉತ್ಸವವಾಗಿ ಪರಿವರ್ತನೆ ನಡೆಸಲು ಪ್ರಯತ್ನಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಬ್ರದರ್ಸ್ ಯುವಕ ಮಂಡಲ ಇದರ ವಜ್ರಮಹೋತ್ಸವದ ಆಂಗವಾಗಿ ಉಳ್ಳಾಲ ಮೊಗವೀರ ಗ್ರಾಮ ಸಭೆಗೆ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮೊಗವೀರ ಕುಲಗುರು ಪೂಜನೀಯ `ಮಾಧವ ಮಂಗಲ ಗುರೂಜಿ ಸಮುದಾಯ ಭವನ ಲೋಕಾರ್ಪಣೆ, ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಿಗೆ ನೂತನ ವಸತಿಗೃಹ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿವರ್ಷವೂ ಅಬ್ಬಕ್ಕ ಉತ್ಸವಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದೆ. ಆದರೆ ಉತ್ಸವ ನಡೆಯುವ…
UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಭಟ್ನಗರದ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್‍ನ ನೂತನ ಅಧ್ಯಕ್ಷರಾಗಿ ದೇವದಾಸ್ ಶ್ರೀಯಾನ್ ಆಯ್ಕೆಯಾಗಿದ್ದಾರೆ. ವ್ಯಾಯಾಮ ಶಾಲೆಯಲ್ಲಿ ನಡೆದ 68ನೇ ವಾರ್ಷಿಕ ಮಹಾಸಭೆಯಲ್ಲಿ ಶಾಲೆಯ ಅಧ್ಯಕ್ಷ ವಿಶ್ವನಾಥ ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಶಾಲೆಯ ಉಪಾಧ್ಯಕ್ಷರಾಗಿ ಪುರುಷೋತ್ತಮ ಗಟ್ಟಿ , ನಾಗೇಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಸತೀಶ್ ಭಟ್ನಗರ, ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಕಲ್ಲಾಪು, ದಿನೇಶ್ ನಾಯಕ್ ತೊಕ್ಕೊಟ್ಟು, ಕೋಶಾಧಿಕಾರಿಯಾಗಿ ಭಾಸ್ಕರ ತೊಕ್ಕೊಟ್ಟು, ಲೆಕ್ಕಪರಿಶೋಧಕರಾಗಿ ರಾಮಚಂದ್ರ ತೊಕ್ಕೊಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಗಾಂಧಿನಗರ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಸೋಮೇಶ್ವರ, ಧರ್ಮರಾಜ್ ತೊಕ್ಕೊಟ್ಟು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿಶ್ವನಾಥ್ ಮೆಂಡನ್, ರಮೇಶ್ ಮೆಂಡನ್, ಸುರೇಂದ್ರ ಶೆಟ್ಟಿ ಮಂಚಿಲಗುತ್ತು, ಶರತ್ ತೊಕ್ಕೊಟ್ಟು ಪ್ರವೀಣ್ ಕೊಲ್ಯ, ನಾಗೇಶ್ ಕುಂಪಲ, ಸುನಿಲ್ ಕುಮಾರ್ ತೊಕ್ಕೊಟ್ಟು, ಶ್ರೀಕಾಂತ್‍ಗಟ್ಟಿ ಉಳ್ಳಾಲಬೈಲು, ಪ್ರಸಾದ್ ಧರ್ಮನಗರ, ದೀಪಕ್ ಮಾಡೂರು, ಕೃಷ್ಣ್ಪಪ್ಪ ಮೆಂಡನ್, ಚಂದ್ರ ಮೆಂಡನ್ ಶಿವರಾಮ್ ಟಿ.,…
UN NETWORKS ಮಂಗಳೂರು: ನಗರದ ಪೊಲೀಸರು ಕುಖ್ಯಾತ ರೌಡಿ, ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳ್ಳಾಲ ನಿವಾಸಿ ಸಮೀರ್ (26) ಬಂಧಿತ. ಮಂಗಳೂರು ಸಿಸಿಬಿ ಪೊಲೀಸರು ಕೇರಳದ ಅಡಗುತಾಣದಿಂದ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಜನವರಿ 13 ರಂದು ಬೆಳಿಗ್ಗೆ ಇಲ್ಯಾಸ್ ಮೇಲೆ ನಡೆದ ದಾಳಿಯಲ್ಲಿ ಆರೋಪಿ ಸಮೀರ್ ನೇರವಾಗಿ ಭಾಗಿಯಾಗಿದ್ದ ಎನ್ನಲಾಗಿದೆ. ಇದೀಗ ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಮಂಗಳೂರಿಗೆ ಕರೆ ತರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಘಟನೆಯ ವಿವರ: ಮಂಗಳೂರಿನ ಜಪ್ಪು ಕುಡ್ಪಾಡಿ ಎಂಬಲ್ಲಿರುವ ಮಸೀದಿಯ ಎದುರುಗಡೆಯ ಫ್ಲಾಟ್ ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ಇಲ್ಯಾಸ್ ನನ್ನು ಜನವರಿ 13 ರಂದು ಮುಂಜಾನೆ ದುಷ್ಕರ್ಮಿಗಳಿಬ್ಬರು ಸೇರಿಕೊಂಡು ಹತ್ಯೆ ಮಾಡಿದ್ದರು. ಮನೆ ಬಾಗಿಲನ್ನು ಒಡೆದು ಒಳ ನುಗ್ಗಿ ಮಲಗಿದ್ದ ಇಲ್ಯಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಲ್ಯಾಸ್ ನನ್ನು ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದ.…
UN NETWORKS ಉಪ್ಪಳ: ಉಪ್ಪಳ ಕುಂಟುಪುಣಿ ಬಾರಿಗೆ ತರವಾಡು ಶ್ರೀ ಧೂಮಾವತಿ ಪರಿವಾರ ದೈವಗಳಿಗೆ ಧರ್ಮ ನೇಮ ನಡೆಯಿತು.
UN NETWORKS ಕುಂಪಲ: ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನ,ಮಾರುತಿಮಠ ಗುರುನಗರ ಕುಂಪಲ.ಇದರ ವಾರ್ಷಿಕ ಜಾತ್ರಾ ಮಹೋತ್ಸವ.ಮಾರ್ಚ್ 31 ರಿಂದ ಏಪ್ರಿಲ್ 3ರ ತನಕ ನಡೆಯಲಿದೆ.ಉತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಶ್ರೀ ಬಾಲಯೋಗಿ ಅಮೃತಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು. ಕೇಶವ ಶೆಟ್ಟಿ,ಸುಧಾಕರ್ ಆಳ್ವ,ರಾಜೇಶ್ ಪೂಜಾರಿ,ಸುರೇಶ್ ಗಟ್ಟಿ,ಸಂಜಯ್ ಪೂಜಾರಿ,ಚಂದ್ರಶೇಖರ್ ನಾಗ ಜ್ಯೋತಿಷಿ,ನಿತಿನ್ ಕುಂಪಲ ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಪರಿಸರದಲ್ಲಿ ಸಾರ್ವಜನಿಕ ಸಂಘಸಂಸ್ಥೆಗಳಿಗೆ ಕಬಡ್ಡಿ ಮತ್ತು, ಕಲಾ ಕಾರ್ಯಕ್ರಮಗಳಿಗೆ, ಸರ್ವಧರ್ಮದ ಉತ್ಸವಗಳಿಗೆ ಇರುವ ಏಕಮೇವ ಮೈದಾನ ತೊಕ್ಕೊಟ್ಟು ಅಂಬೇಡ್ಕರ್ ಮೈದಾನ ಮಾತ್ರ. ಈ ಅಂಬೇಡ್ಕರ್ ರಂಗಮಂದಿರವವನ್ನು ನವೀಕರಿಸಿ ಮೈದಾನಕ್ಕೆ ಮೇಲ್ಚಾವಣಿ ಅಳವಡಿಸಿದರೆ ಇನ್ನಷ್ಟು ಕಲಾ, ಕ್ರೀಡಾ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ. ಈಗಾಗಲೇ ಕಾರ್ಯಕ್ರಮ ನಡೆಸಲು ಯಾವದೇ ಸೌಲಭ್ಯಗಳಿರದ ಅಂಬೇಡ್ಕರ್ ಮೈದಾನ ಮತ್ತು ರಂಗಮಂಟಪವನ್ನು ನವೀಕರಣಗೊಳಿಸಿ ಸಾರ್ವಜನಿಕ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಅನುಕೂಲತೆ ಒದಗಿಸಿಕೊಡಲು ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ನೇತೃತ್ವದಲ್ಲಿ ಉಳ್ಳಾಲ ನಗರಸಭೆಗೆ ಮನವಿ ಅರ್ಪಿಸಲಾಯಿತು. ತೊಕ್ಕೊಟ್ಟಿನ 25 ಸಂಘ ಸಂಸ್ಥೆಗಳ ಸಹಿಯುಳ್ಳ ಮನವಿಯನ್ನು ಭಗವತಿ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್ ರವರು ಪುರಸಭಾ ಅಧ್ಯಕ್ಷರಿಗೆ ಮತ್ತು ಕಾರ್ಯನಿರ್ವಹಾಣಾಧಿಕಾರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆ ಗಳ ಪರವಾಗಿ ವಿಠಲ್ ಶ್ರೀಯಾನ್, ರಾಮಚಂದ್ರ ತೊಕ್ಕೊಟ್ಟು ,ರೋಹಿತ್ ಉಳ್ಳಾಲ್, ಪ್ರವೀಣ್.ಎಸ್.ಕುಂಪಲ, ಪ್ರಕಾಶ್ ಸಿಂಪೋನಿ,ವಿಜಯ ಪಂಡಿತಹೌಸ್,ಸೂರಜ್ ತೊಕ್ಕೊಟ್ಟು , ಪುರುಷೋತ್ತಮ ಕಲ್ಲಾಪು, ಪ್ರವೀಣ್ ಕೊಲ್ಯ ,ರೋಹಿ,…
UN NETWORKS ನವದೆಹಲಿ: ಹನಿ ಟ್ರ್ಯಾಪ್ ಮೂಲಕ ಭಾರತೀಯ ಸೇನೆಯ ಅಧಿಕಾರಿಗಳನ್ನು ಸೆಳೆಯುವ ಪ್ರಯತ್ನ ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ(ಐಎಸ್ ಐ) ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆಯ ಅಧಿಕಾರಿಯೊಬ್ಬನನ್ನು ಬಂಧಿಸಲಾಗಿದೆ ಎಂದು ವರದಿಗಳು ಹೇಳಿವೆ. ರಾಜಧಾನಿ ದೆಹಲಿಯಲ್ಲಿ ವಾಯುಸೇನೆಯ 51 ವರ್ಷದ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾಹ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇವರು ಅಪರಿಚಿತ ಮಹಿಳೆಯ ಜತೆ ವಾಟ್ಸಪ್ ಸಂದೇಶ ಕಳುಹಿಸುತ್ತಿದ್ದರು.ಈ ಅಪರಿಚಿತ ಮಹಿಳೆ ಐಎಸ್ ಐ ಏಜೆಂಟ್ ಎಂದು ಹೇಳಲಾಗುತ್ತಿದೆ. ಹನಿ ಟ್ರ್ಯಾಪ್ ಮೂಲಕ ಅರುಣ್ ಮರ್ವಾಹ್ ಅವರನ್ನು ಬಲೆಗೆ ಬೀಳಿಸಲು ಐಎಸ್ ಐ ಪ್ರಯತ್ನಿಸಿತ್ತು ಎಂದು ವರದಿಗಳು ಮಾಹಿತಿ ಹೊರ ಹಾಕಿವೆ. ಇವರಿಬ್ಬರ ಮಧ್ಯೆ ಕೆಲವೊಂದು ಗುಪ್ತ ಮಾಹಿತಿಗಳ ಸಹಿತ ಕೆಲವು ವೈಯಕ್ತಿಕ ಲೈಂಗಿಕ ಸಂದೇಶಗಳು ರವಾನೆಯಾಗಿವೆ ಎಂದು ಹೇಳಲಾಗುತ್ತಿದೆ.
UN NETWORKS ತೊಕ್ಕೊಟ್ಟು: ದೇಶದಲ್ಲಿ ಪ್ರಚಾರಕ್ಕಿಂತ ಹೆಚ್ಚು ಅಪಪ್ರಚಾರಗಳಿಗೆ ಹೆಚ್ಚು ಬೆಲೆ ಸಿಗುತ್ತಿವೆ. ಅಪಪ್ರಚಾರ ಮಾಡಿಯೇ ಆಡಳಿತಕ್ಕೆ ಬರುತ್ತಿರುವ ಬಿಜೆಪಿ ಕಾರ್ಯತಂತ್ರವನ್ನು ಜನತೆ ವಿಫಲಗೊಳಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಹಿಳಾ ಕಾಂಗ್ರೆಸ್, ಹಿಂದುಳಿದವರ್ಗಗಳ ವಿಭಾಗ,ಅಲ್ಪಸಂಖ್ಯಾತ ವಿಭಾಗ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಗುರುವಾರ ಕೇಂದ್ರ ಬಿಜೆಪಿ ಸರಕಾರದ ಜನವಿರೋಧಿ ನೀತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಸ್ತೆ ತಡೆ ಮತ್ತು ಬೃಹತ್ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದಿನ ರಾಜ್ಯ ಸರಕಾರದ ಆಡಳಿತವಿದ್ದಾಗ ಶ್ರಮವಹಿಸಿ ದುಡಿದ ಜನ ಕಾಂಗ್ರೆಸ್ ಆಡಳಿತದಲ್ಲಿ ಕುಳಿತು ಊಟ ಮಾಡಲಿ ಅನ್ನುವ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಯಿತು. ಮೊದಲಿಗೆ ಟೀಕಿಸಿದ ಬಿಜೆಪಿಗರು ಇದೀಗ ಕೇಂದ್ರ ಸರಕಾರದ ಯೋಜೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹಿಂದು, ಮುಸ್ಲಿಂ ದರೋಡೆ, ಕೊಲೆ ವಿಚಾರದಲ್ಲಿಯೇ ರಾಜಕೀಯ ನಡೆಸುತ್ತಿರುವ ಬಿಜೆಪಿಯ ಕೇಂದ್ರ ಸರಕಾರ ಜನರನ್ನು ಸಂಕಷ್ಟಕ್ಕೆ ದೂಡುವ…
UN NETWORKS ಕೋಟೆಕಾರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಕಳವಿಗೆ ವಿಫಲಯತ್ನ ನಡೆಸಿರುವ ಘಟನೆ ಕೋಟೆಕಾರು ಸಮೀಪ ನಡೆದಿದೆ. ಕೋಟೆಕಾರು ಅಜ್ಜಿನಡ್ಕ ಸಲಫಿ ನಗರದ ಕೆ.ಎಚ್. ಮೊಯ್ದಿನ್ ಅವರ ಮನೆಯಲ್ಲಿ ಮಂಗಳವಾರ ಕಳ್ಳತನ ನಡೆದಿದ್ದು ಐದು ಪಾಸ್‍ಪೋರ್ಟ್, ಎರಡು ಎಟಿಎಂ ಕಾರ್ಡ್ ಹಾಗೂ 2500ರೂ. ಕಳ್ಳತನಗೈದಿದ್ದಾರೆ. ಅಲ್ಲಿಂದ ಪಕ್ಕದ ಸಿ.ಎಂ. ಅಹ್ಮದ್ ಹಾಗೂ ಮೊಹಮ್ಮದ್ ಸಿರಾಜ್ ಅವರ ಮನೆಗಳಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

