Author: UllalaVani

Kannada News From Coastal Karnataka

UN NETWORKS ಕೋಟೆಕಾರ್: ಶ್ರೀ ಸತ್ಯನಾರಾಯಣ ಮಂದಿರ ಬಗಂಬಿಲ ಕೋಟೆಕಾರ್ ಇದರ ವತಿಯಿಂದ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ “ಶ್ರೀ ಸತ್ಯನಾರಾಯಣ ಸಾಂಸ್ಕೃತಿಕ ಭವನದ” ಶಿಲನ್ಯಾಸ ಸಮಾರಂಭ ಬಗಂಬಿಲದಲ್ಲಿ ನಡೆಯಿತು. ಭವನಕ್ಕೆ ಶಂಕುಸ್ಥಾಪನೆಯನ್ನು ಮಾಡೂರು ಶಿರಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಪಿ ನೆರವೇರಿಸಿದರು. ಪಿ.ಡಬ್ಲ್ಯು ಡಿ. ಗುತ್ತಿಗೆದಾರರಾದ ಮಾಧವ ರಾವ್ ಕೊಂಡಾಣ ದೀಪಬೆಳಗಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ವಹಿಸಿದ್ದು, ಚಿತ್ರದುರ್ಗದ ಉದ್ಯಮಿ ಪ್ರವೀಣ್ ಸುವರ್ಣ ಬಗಂಬಿಲ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.ಮುಖ್ಯ ಅತಿಥಿಗಳಾಗಿ ಪಿಲಿಚಾಮುಂಡಿ ದೈವಸ್ಥಾನದ ಅಧ್ಯಕ್ಷರಾದ ಮಾಧವ ಬಗಂಬಿಲ, ಲೋಕಯಪಾಲು ನಾಗಬ್ರಹ್ಮ ಮಹಾಕಾಳಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎಂ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ಯೋಜನಾಧಿಕಾರಿ ಉಮರಬ್ಬ, ಪುರೋಹಿತರಾದ ಪಿ. ತಿರುಮಲೇಶ್ವರ ಭಟ್, ಮಂದಿರದ ಮಹಾಪೋಷಕ ದಿವಾಕರ ಬಗಂಬಿಲ, ಉದ್ಯಮಿ ಅಶೋಕ್ ರೈ ಮಡ್ಯಾರ್, ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್, ಮಂದಿರದ ಉಪಾಧ್ಯಕ್ಷ ಗಣೇಶ್…

Read More

UN NETWORKS ಉಳ್ಳಾಲ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಕ ಜಿಲ್ಲಾ ವತಿಯಿಂದ ತಲಪಾಡಿಯಲ್ಲಿ ಅಮಾಯಕ ವಿದಾರ್ಥಿಗಳ ಮೇಲೆ ನಡೆದ ಹಲ್ಲೆಯ ವಿರುದ್ದ ಪ್ರತಿಭಟನೆಯನ್ನು ತಲಪಾಡಿ ಬಸ್ ನಿಲ್ದಾಣದ ಬಳಿ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷರಾದ ಇಮ್ರಾನ್ ಪಿಜೆ ಪ್ರಾಸ್ತವಿಕವಾಗಿ ಮಾತನಾಡಿ ಘಟನೆಗೆ ಸಂಬಂದಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದಂತ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಫಯಾಝ್ ದೊಡ್ಡಮನೆ ಮಾತನಾಡಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗಳು ಮಿತಿಮೀರುತ್ತಿದ್ದು ಭಯದ ವಾತಾವಾರಣ ನಿರ್ಮಾಣವಾಗಿದೆ. ಅದರಲ್ಲೂ ಕೇರಳ ಮೂಲದ ವಿದ್ಯಾರ್ಥಿಗಳನ್ನು ಗುರಿಪಡಿಸಲಾಗುತ್ತಿದೆ ಪರಿಣಾಮ ಇದು ಎರಡು ರಾಜ್ಯಗಳ ಮಧ್ಯೆ ಬಿಕ್ಕಟ್ಟನ್ನು ಸೃಷ್ಟಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು ಅಲ್ಲದೆ ಸಂಬಂದಪಟ್ಟ ಜನಪ್ರತಿನಿಧಿಗಳು ಕೇವಲ ಮಸೀದಿ ಮಂದಿರಗಳನ್ನು ಸುತ್ತುವುದು ಬಿಟ್ಟು ತಮ್ಮ ಜವಾಬ್ದಾರಿಯನ್ನು ಅರಿತು ವಿದ್ಯಾರ್ಥಿಗಳ ನೋವನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವತ್ತಾ ಕಾರ್ಯೋನ್ಮುಖರಾಗಿ ಎಂದು ಸಲಹೆ ನೀಡಿದರು ರಾಜ್ಯ ಸಮಿತಿ ಸದಸ್ಯರಾದ ರಿಯಾಝ್…

Read More

UN NETWORKS ಉಳ್ಳಾಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಏಅಈ ಡೇ ಪ್ರಯುಕ್ತ ರಕ್ತದಾನ ಶಿಬಿರ ಮತ್ತು ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮವು ಸೆಕ್ಟರ್ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸಾ ಹಾಜಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆ ಝಾಹಿರ್ ನಲ್ಲಿ ಜರುಗಿತು. ಸೆಕ್ಟರ್ ಅಧ್ಯಕ್ಷರಾದ ಹನೀಫ್ ಸಖಾಫಿ ಬೊಳ್ಮಾರ್ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಹಜ್ಜ್ ಸಮಿತಿ ಸದಸ್ಯರಾದ ಬಹು ಕೆ.ಎಂ. ಅಬೂಬಕ್ಕರ್ ಸಿದ್ದೀಖ್ ಮೋಂಟುಗೋಳಿ ಮಾತನಾಡಿ,ಧನ್ಯ ಭೂಮಿ ಮಕ್ಕಾದಲ್ಲಿ ಒಂದಕ್ಕೆ ಒಂದು ಲಕ್ಷ ಪುಣ್ಯ ಲಭಿಸುವ ಮಸ್ಜಿದುಲ್ ಹರಾಮ್ ನ ನಾಡಿನಲ್ಲಿ ಉದ್ಯೋಗದಲ್ಲಿರುವ ತಾವು ಬಹಳ ಭಾಗ್ಯವಂತರು, ಅದರೊಂದಿಗೆ ರಕ್ತದಾನ ದಂತಹ ಅತ್ಯಂತ ಶ್ರೇಷ್ಠವಾದ ದಾನವನ್ನು ನೀಡಿ ಮತ್ತಷ್ಟು ಪುಣ್ಯ ಸಂಪಾದಿಸುತ್ತಿದ್ದೀರಿ, ನಿಜಕ್ಕೂ ಕೆಸಿಎಫ್ ನಡೆಸುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ರಮವು ಶ್ಲಾಘನೀಯ ಎಂದರು.ತಮ್ಮ ಕುಟುಂಬವನ್ನು ಸಲಹುವ ನಿಟ್ಟಿನಲ್ಲಿ ದುಃಖ ದುಮ್ಮಾನಗಳನ್ನು…

Read More

UN NETWORKS ಮಂಗಳೂರು: ಇತಿಹಾಸ ಪ್ರಸಿದ್ಧ ಅಡ್ಯಾರ್ ಕಣ್ಣೂರು ಹಝ್ರತ್ ಶೈಖ್ ಯೂಸುಫ್ ಸಿದ್ದೀಖ್ ವಲಿಯುಲ್ಲಾಹಿ(ಖ.ಸ)ರವರ ದರ್ಗಾ ಶರೀಫ್ ಉರೂಸ್ ಮುಬಾರಕ್ ಫೆಬ್ರವರಿ18ರಿಂದ25ತನಕ ನಡೆಯಲಿದ್ದು ಭಾನುವಾರ ದ.ಕ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಧ್ವಜಾರೋಹಣಗೈದು ಅಡ್ಯಾರ್ ಕಣ್ಣೂರು ಉರೂಸ್ ಮುಬಾರಕ್-2018ಗೆ ಚಾಲನೆ ನೀಡಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್ ದುಅ ನೇತ್ರತ್ವ ವಹಿಸಿದರು. ಕಣ್ಣೂರು ಬದ್ರಿಯ ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಫೈಝಿ ಬು್ಹಾನಿ, ಎಸ್ ವೈಎಸ್ ಶರೀಯತ್ ಕಾಲೇಜ್ ಪ್ರಿನ್ಸಿಪಾಲ್ ಇಸ್ಮಾಯಿಲ್ ಮದನಿ, ಕಣ್ಣೂರು ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ ರಹ್ಮಾನ್, ಉಪಾಧ್ಯಕ್ಷ ಹಾಜಿ ಕೆ.ಎಸ್ ಹಮೀದ್, ಕೋಶಾಧಿಕಾರಿ ಹಾಜಿ ಕೆ.ಬಿ ಅಬ್ದುಲ್ ರಹ್ಮಾನ್, ಲೆಕ್ಕ ಪರಿಶೋಧಕ ಹಾಜಿ ಡಿ.ಎಂ ಮುಹಮ್ಮದ್‌, ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಎ.ಕೆ, ಮಾಜಿ ಅಧ್ಯಕ್ಷ ಹಾಜಿ ಎಸ್. ಅಬ್ದುಲ್‌ ಖಾದರ್, ಮಂಗಳೂರು ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹಮೀದ್ ಹಾಜಿ, ಉದ್ಯಮಿಗಳಾದ ಅದ್ದು…

Read More

UN NETWORKS ಉಳ್ಳಾಲ: 2017 ಫೆಬ್ರವರಿ ತಿಂಗಳ ನಂತರ ಆನ್‍ಲೈನ್‍ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಸಿಗದೇ ಇರುವವರು ಕುಟುಂಬದ ಇತ್ತೀಚಿನ ಆದಾಯ ಪ್ರಮಾಣ ಪತ್ರ, ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‍ನ ಪ್ರತಿ, ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಪ್ರತಿಗಳೊಂದಿಗೆ ಫೆ.21 ರಂದು ಬೆಳಿಗ್ಗೆ 10.00ರಿಂದ ಉಳ್ಳಾಲ ನಗರಸಭೆಯ ಸಮುದಾಯ ಭವನದಲ್ಲಿ ಸ್ಥಳದಲ್ಲಿಯೇ ಪಡಿತರ ಚೀಟಿಯ ಪ್ರತಿ ಪಡೆಯಬಹುದು. ಮಂಗಳೂರು ಬಿ ಹೋಬಳಿಯ ಎಲ್ಲಾ ಗ್ರಾಮಪಂಚಾಯತ್‍ಗಳು ಕೋಟೆಕಾರು, ಸೋಮೇಶ್ವರ, ತಲಪಾಡಿ, ಬೆಳ್ಮ, ಕಿನ್ಯಾ, ಹರೇಕಳ, ಮಂಜನಾಡಿ, ಬೋಳಿಯಾರು, ಕೋಣಾಜೆ, ಅಂಬ್ಲಮೊಗರು, ಹಾಗೂ ಉಳ್ಳಾಲ, ಪೆರ್ಮನ್ನೂರು ನಿವಾಸಿಗಳು ಪಡಿತರ ಚೀಟಿಯ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ನಗರಸಭೆ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ತಲಪಾಡಿ: ತಲಪಾಡಿಯಲ್ಲಿ ಬಸ್ಸಿನಿಂದ ಎಳೆದು ಹಾಕಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ತಲಪಾಡಿ ನಾರ್ಲ ಪಡಿಲ್ ನಿವಾಸಿ ಜೀವನ್ ಡಿ’ಸೋಜ (23), ಮೈಕಲ್ ಯಾನೆ ಕಿಶೋರ್ (20) , ಮಂಜೇಶ್ವರ ಕುಂಜತ್ತೂರು ನಿವಾಸಿ ಶೋಬಿತ್(20) , ಕುಂಜತ್ತೂರು ಕೊಚ್ಚಿಕಾಡ್ ನಿವಾಸಿ ನಿಕೇಶ್(19) ಎಂಬವರು ಬಂಧಿತರು.ನಾಲ್ವರನ್ನು ಉಳ್ಳಾಲ ಠಾಣಾಧಿಕಾರಿಯ ನೇತೃತ್ವದ ತಂಡ ಕೋಟೆಕಾರ್ ಬೀರಿ ಎಂಬಲ್ಲಿಂದ ಬಂಧಿಸಿದ್ದಾರೆ. ನಾಲ್ವರು ಫೆ.17 ರಂದು ತಲಪಾಡಿಯಲ್ಲಿ ಬಸ್ಸಿನೊಳಗಡೆ ಕುಳಿತಿದ್ದ ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ , ಕುಂಜತ್ತೂರು ನಿವಾಸಿ ಅಹಮ್ಮದ್ ಇಮ್ರಾನ್ ಮತ್ತು ಫೈಝಲ್ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೀಟಿನ ವಿಚಾರಕ್ಕೆ ಸಂಬಂಧಿಸಿ ತಂಡ ವಿದ್ಯಾರ್ಥಿ ಗಳ ಮೇಲೆ ದಾಳಿ ನಡೆಸಿತ್ತು. ಅದರಂತೆ ಅಪರಾಧ ಪ್ರಕರಣ ಕಾಯ್ದೆ 143, 147,…

Read More

UN NETWORKS ಉಳ್ಳಾಲ: ತುಳುನಾಡಿನ ಕೃಷಿ, ಕ್ರೀಡೆ, ಸಂಪ್ರದಾಯ ಸೇರಿದಂತೆ ತುಳುನಾಡಿನ ನೆಲದ ಸಂಸ್ಕೃತಿ, ಗ್ರಾಮೀಣ ಸೊಗಡನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದೇರಳಕಟ್ಟೆ ಮಾಗಣ್ತಡಿ ಗುತ್ತು ಮನೆಯಲ್ಲಿ ಕಂಬಳ ಪ್ರಾತಕ್ಷಿಕೆ, ಜನಪದ ಆಟೋಟ ಸ್ಪರ್ಧೆ, ಕೆಸರು ಗದ್ದೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಪುರಾತನ ವಸ್ತುಗಳ ಪ್ರದರ್ಶನ ಸಂಗಮ ಮೊದಲಾದ ವೈಶಿಷ್ಟಪೂರ್ಣ ಕಾರ್ಯಕ್ರಮವು ಭಾನುವಾರ ನಡೆಯಿತು. ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳು ಲಯನ್ಸ್ ಜಿಲ್ಲೆ-317 ಡಿ ಇದರ ವತಿಯಿಂದ ಪುರಾತನವಾದ ಮಾಗಣ್ತಡಿ ಗುತ್ತುವಿನ ಮನೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಾಗಣ್ತಡಿ ಮನೆಯ ಆವರಣ, ಗದ್ದೆಯಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಡೆದ ಈ ತುಳುನಾಡಿನ ಗ್ರಾಮೀಣ ಸಂಸ್ಕೃತಿಯ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡರು. ಬೆಳಿಗ್ಗೆ ಕಾರ್ಯಕ್ರಮಕ್ಕೆ ಆಗಮಿಸಿದ ಲಯನ್ಸ್‍ನ ಎಚ್.ಆರ್.ಹರೀಶ್, ಲಯನ್ಸ್‍ನ ಪ್ರಥಮ ಉಪರಾಜ್ಯಪಾಲರಾದ ದೇವದಾಸ್ ಭಂಡಾರಿ, ದ್ವಿತೀಯ ಉಪರಾಜ್ಯಪಾಲರಾದ ರೊನಾಲ್ಡ್ ಗೋಮ್ಸ್, ಜಿಲ್ಲಾ ಸಂಪುಟ ಕಾರ್ಯದರ್ಶಿ ವಸಂತ್ ಕುಮಾರ್ ಶೆಟ್ಟಿ…

Read More

UN NETWORKS ಉಳ್ಳಾಲ: ಹಿಂದೆ ಶಿವರಾತ್ರಿಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿತ್ತು. ಆದರೆ ಇಂದು ಧಾರ್ಮಿಕ ವಿಚಾರದಲ್ಲಿ ಸಂಘ ಸಂಸ್ಥೆಗಳು ಶಿವರಾತ್ರಿಯ್ನು ಧಾರ್ಮಿಕವಾಗಿ ಆಚರಿಸುತ್ತಿರುವುದರಿಂದ ಜನರ ಮನಸ್ಥಿತಿಯೂ ಬದಲಾಗಿದ್ದು, ಎಲ್ಲರಲ್ಲಿಯೂ ಧಾರ್ಮಿಕ ಭಾವನೆ ಜಾಗೃತಿಯಾಗುತ್ತಿದೆ ಎಂದು ಬಿರುವೆರ್ ಕುಡ್ಲ ಉಳ್ಳಾಲ ಘಟಕದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು. ಅವರು ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದ ಶಿವರಾತ್ರಿ ಮಹೋತ್ಸವ ಮತ್ತು ಕುಂಪಲ ರಥೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿ ವೆಂಕಟೇಶ್ ಕುಂಪಲ, ಮಂಗಳೂರು ಕ್ಷೇತ್ರ ಬಿ.ಜೆ.ಪಿ. ಉಪಾಧ್ಯಕ್ಷ ಪ್ರಕಾಶ್ ಸಿಂಪೋನಿ, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ನಿವೃತ್ತ ಸೇನಾನಿ ಅಶೋಕ್ ಕುಂಪಲ, ಚೆಂಬುಗುಡ್ಡೆ ಕೆರೆಬೈಲ್ ಕೊರಗಜ್ಜ ಸೇವಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಬಿ, ಸೋಮೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ ಕುಂಪಲ, ಶ್ರೀ ಕ್ಷೇತ್ರದ ಅರ್ಚಕ ಭವಾನಿ ಶಂಕರ ಶಾಂತಿ,…

Read More

UN NETWORKS ಉಳ್ಳಾಲ: ಜೀವನದಲ್ಲಿ ಏನೇ ಸಾಧನೆ ಮಾಡಿದರೂ ಆ ಸಾಧನೆಯ ಹಿಂದೆ ಒಂದು ದೈವಿಕವಾದ ಪ್ರೇರಣಾ ಶಕ್ತಿ ಇದೆ. ಈ ನಿಟ್ಟಿನಲ್ಲಿ ಧಾರ್ಮಿಕ ಚಿಂತನೆಗಳನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿದರೆ ಯಶಸ್ಸು ಸಾದ್ಯ ಎಂದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಅಭಿಪ್ರಾಯಪಟ್ಟರು. ಉಳ್ಳಾಲ ಉಮಾಪುರಿ, ಕಾಪಿಕಾಡಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಂಗಳೂರು ರಾಗ ತರಂಗದ ಮಾಜಿ ಪ್ರಧಾನ ಕಾರ್ಯದರ್ಶಿ ಸುಮಾ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಮಂಗಳೂರು ಎಮ್.ಸಿ.ಎಫ್ ಜನರಲ್ ಮೆನೇಜರ್ ಎಮ್.ಆರ್.ವೆಂಕಟೇಶ್ ಶರ್ಮಾ, ಮಂಗಳೂರು ಎಮ್.ಸಿ.ಎಫ್ ಇದರ ಮಾರ್ಕೆಟಿಂಗ್ ಡೆವಲಪ್ ಮೆಂಟ್-ಕೆಮಿಕಲ್ಸ್‍ನ ಉಪ ಮಹಾಪ್ರಬಂಧಕ ಕೆ.ಬಿ.ಕೀರ್ತನ್ ಕುಮಾರ್, ದುಬೈ ಉದ್ಯಮಿ ಶಶಿಧರ್ ಶೆಟ್ಟಿ ಮಜಲು ಕೈರಂಗಳ, ಮರಾಠಾಸ್ ಸ್ಪೋರ್ಟ್ಸ್ ಅಸೋಸಿಯೇಶನ್ ಇದರ ಸಂಚಾಲಕ ಹರೀಶ್ ರಾವ್ ಮಡ್ಯಾರ್, ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ರೈ ಕಳ್ಳಿಗೆ,…

Read More

UN NETWORKS ಉಳ್ಳಾಲ: ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾರ್ಚ್ 5,6,7,ರಂದು ಜರಗಲಿರುವ 22 ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಲಾಂಛನ’ವನ್ನು ಹಿರಿಯ ಸಾಹಿತಿ ಪ್ರೊ|| ಅಮೃತ ಸೋಮೇಶ್ವರ ಅವರು ಬಿಡುಗಡೆಗೊಳಿಸಿದರು. ಕೋಟೇಕಾರ್‍ನಲ್ಲಿರುವ ಅಮೃತರ ಮನೆ “ಒಲುಮೆ”ಯಲ್ಲಿ ಸಮಾರಂಭ ಜರಗಿತು. ಇದೇ ಸಂದರ್ಭ “ ಲಾಂಛನ”ವನ್ನು ಸಿದ್ದಪಡಿಸಿದ ಕಲಾವಿದ ಜಾನ್ ಚಂದ್ರನ್ ಅವರನ್ನೂ ಅಮೃತ ಸೋಮೇಶ್ವರರು ಶಾಲು ಹೊದಿಸಿ ಅಭಿನಂದಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ಡಾ.ಕೆ. ಚಿನ್ನಪ್ಪಗೌಡ ಅಮೃತರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು ಅಮೃತರು ಬರೆದ ಭಾವಗಾನವೊಂದನ್ನು ರತ್ನಾವತಿ ಜೆ. ಬೈಕಾಡಿಯವರು ಹಾಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ| ಸುರೇಂದ್ರ ರಾವ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಬೈಕಾಡಿ ಜನಾರ್ದನ ಆಚಾರ್ ವಂದನಾರ್ಪಣೆಗೈದರು,

Read More