UN NETWORKS
ತೊಕ್ಕೊಟ್ಟು : ತೊಕ್ಕೊಟ್ಟು ವಿನಲ್ಲಿ ಕಳೆದ 15 ವರ್ಷಗಳಿಂದ ಆಯುರ್ವೇದ ಔಷಧಿ ಅಂಗಡಿ ನಡೆಸುತ್ತಿದ್ದ ವಿಟ್ಲ ಕಾಡುಮಠ ನಿವಾಸಿ ರಾಜಶೇಖರ್ (35) ಮನೆ ಸಮೀಪ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.
ವಿಟ್ಲ ಕಾಡುಮಠದ ರಾಜಶೇಖರ್ ಮನೆ ಸಮೀಪ ಕೋಳಿಫಾರಂ ನಡೆಸುತ್ತಿದ್ದು, ನಿನ್ನೆ ಸಂಜೆ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಫಾರಂ ಗೆ ಹಾಕಲಾದ ವಿದ್ಯುತ್ ದೀಪದ ವೈರಿನಲ್ಲಿ ಶಾಕ್ ತಗಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ ಪತ್ನಿ ಹಾಗೂ ಎಳೆಯ ಪುತ್ರಿಯನ್ನು ಅಗಲಿದ್ದಾರೆ.
ಇತ್ತೀಚೆಗೆ ತೊಕ್ಕೊಟ್ಟು ಜೆ.ಜೆ ಕಾಂಪ್ಲೆಕ್ಸ್ ನಲ್ಲಿ ದ್ದ ಔಷಧ ಅಂಗಡಿ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಕೆಡವಲಾಗಿತ್ತು. ಇದೀಗ ನವೀಕೃತ ಗೊಂಡ ಕಟ್ಟಡದಲ್ಲಿ ಮತ್ತೆ ಔಷಧಿ ಅಂಗಡಿಯನ್ನು ತೆರೆಯುವ ವರಿದ್ದರು.




