Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಕೋಟೆಕಾರು ಸಹಕಾರಿ ಬ್ಯಾಂಕ್ ನವೀಕೃತ ಕಟ್ಟಡ ಉದ್ಘಾಟನೆ

UllalaVaniBy UllalaVaniOctober 16, 2017No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ:  ಜಿಲ್ಲೆಯಾದ್ಯಂತ ಸಹಕಾರಿ ಕ್ಷೇತ್ರಕ್ಕೆ  ಹೆಚ್ಚಿನ ಮಾನ್ಯತೆ  ಮತ್ತು ಗೌರವವಿದ್ದು,   ಸಹಕಾರಿ ಚಳವಳಿ ಮೂಲಕ ಆರಂಭವಾದ  ಕ್ಷೇತ್ರ ಹಿರಿಯರ ಮಾರ್ಗದರ್ಶನದ ಮೂಲಕ ಬೆಳೆದು  ನಿಂತು ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿಯನ್ನು ನೀಡುತ್ತಿದೆ   ಎಂದು ಜಿಲ್ಲೆ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ರಮಾನಾಥ ರೈ ಅವರು ಹೇಳಿದರು.

DSC_0263 DSC_0264 DSC_0265 DSC_0266 DSC_0267 DSC_0268 DSC_0269 DSC_0270 DSC_0271 DSC_0272 DSC_0273 DSC_0274 DSC_0276 DSC_0277 DSC_0278 DSC_0279 DSC_0280 DSC_0281 DSC_0283 DSC_0284 DSC_0285 DSC_0286 DSC_0288 DSC_0290 DSC_0291 DSC_0292 DSC_0294 DSC_0295 DSC_0297 DSC_0298 DSC_0299 DSC_0300 DSC_0303 DSC_0304 DSC_0306 DSC_0308 DSC_0309 DSC_0311 DSC_0312 DSC_0314 DSC_0316 DSC_0320 DSC_0321 DSC_0322 DSC_0323 DSC_0324 DSC_0325 DSC_0326 DSC_0327 DSC_0328 DSC_0329 DSC_0330 DSC_0331 DSC_0332 DSC_0333 DSC_0334 DSC_0335 DSC_0339 DSC_0340 DSC_0343 DSC_0344 DSC_0345 DSC_0347 DSC_0350 DSC_0351 DSC_0353 DSC_0354 DSC_0357

ಅವರು ಕೋಟೆಕಾರ್ ಬೀರಿಯಲ್ಲಿ ಭಾನುವಾರ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘದ ಪ್ರದಾನ ಕಚೇರಿಯ ನವೀಕೃತ ಕಟ್ಟಡ ಹಾಗೂ ರೈತಸದನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯವನ್ನು ಹೋಲಿಸಿದಾಗ ಜಿಲ್ಲೆಯ ಜನರು ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಮಾಡುವವರಾಗಿದ್ದಾರೆ.  ಪ್ರಸಕ್ತ ವರ್ಷದಲ್ಲಿ 298 ಕೋಟಿ ರೂ.ಗಳ ರೈತರ  ಸಾಲ ಮನ್ನಾ ಮಾಡಲಾಗಿದೆ. ಸರಕಾರ ರೈತರ  ಹಿತವನ್ನು ಗಮನದಲ್ಲಿಟ್ಟುಕೊಂಡು  ರೂ.3 ಲಕ್ಷ ವರೆಗೆ  ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿದೆ.  ರೂ.10 ಲಕ್ಷ ಸಾಲಕ್ಕೆ ಶೇ. 3  ಬಡ್ಡಿಯಲ್ಲಿ ಸಾಲದ ವ್ಯವಸ್ಥೆಯಿದೆ.  ಹೈನುಗಾರಿಕೆ ನಡೆಸುವವರಿಗೆ  ಶೇ.2-3 ರವರೆಗೆ ಇದ್ದಂತಹ ಗೌರವಧನವನ್ನು ಶೇ.5 ಕ್ಕೆ ಏರಿಕೆ ಮಾಡಲಾಗಿದೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು   ಸಹಕಾರಿ ಸಿದ್ಧಾಂತ  ಕಾರ್ಯನಿರ್ವಹಿಸಬೇಕಿದೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸುತ್ತಮುತ್ತಲಿನ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಿಸುತ್ತಾ ಬಂದಿರುವುದರಿಂದ ಅಭಿವೃದ್ಧಿಯ ಪಥವನ್ನು ಸಾಧಿಸಿದೆ.  ಬ್ಯಾಂಕ್ ಗಳು  ಕೇವಲ ಬಂಡವಾಳಶಾಹಿಗಳಿಗಾಗಿ ಮಾತ್ರ ಕಾರ್ಯಚರಿಸುತ್ತಿದ್ದು, ಇದರಲ್ಲಿ  ವೃತ್ತಿ ನಿರ್ವಹಿಸುತ್ತಿರುವವರಲ್ಲಿ ಅಧಿಕಾರಿಶಾಹಿ ಮನೋಭಾವವಿದೆ. ಇದರಿಂದ ಗ್ರಾಮೀಣ ಭಾಗದ ಜನ ಸಹಕಾರಿ ಸಂಘಗಳನ್ನೇ ಆಶ್ರಯಿಸುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಬ್ಯಾಕಿಂಗ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್ ಅವರು ಮಾತನಾಡಿ, ಜನಸಾಮಾನ್ಯರ ಕೊಂಡಿಯಾಗಿದ್ದುಕೊಂಡು ಅವರಿಗೆ ಸಿಗಬೇಕಾದ ವಿವಿಧ ಯೋಜನೆಗಳನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ತಲುಪಿಸುವಲ್ಲಿ ಯಶಸ್ವಿಯಾಗಿದೆ.  ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 65000ಜನರಿಗೆ ಸಾಲ ಮನ್ನಾ ಕಾರ್ಯಕ್ರಮ ಅನುಷ್ಠಾನ ಮಾಡಿ ಯಶಸ್ವಿಯಾಗಿದೆ. ಸಹಕಾರಿ ಸಂಘಗಳು ಹತ್ತು ಜನರು ಸೇರಿಕೊಂಡು ನಿರ್ಮಾಣ ಮಾಡುವ ಸಂಸ್ಥೆಯಾಗಿರುವುದರಿಂದ ಊರಿನ ಜನರು ಹೆಚ್ಚು ವಿಶ್ವಾಸಯುತವಾಗಿ ವ್ಯವಹರಿಸಲು ಸಹಕಾರಿಯಾಗುತ್ತದೆ. ಕೋಟೆಕಾರ್ ವ್ಯವಸಾಯ ಸೇವಾ ಸಂಘದ ಕಳೆದ 60 ವರ್ಷದಿಂದ ಜನರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಮುನ್ನಡೆಯುತ್ತಿದೆ ಎಂದರು.

ಭದ್ರತಾ ಕೊಠಡಿ ಉದ್ಘಾಟಿಸಿದ ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ಸಹಕಾರಿ ಸಂಘಗಳು ಎಲ್ಲರೂ ಒಳಗೊಳ್ಳುವಿಕೆಯ ಮೂಲಕ ಜನರೊಂದಿಗೆ ವಿಶ್ವಾಸಯುತವಾಗಿ ವ್ಯವಹರಿಸಿ ಮುನ್ನಡೆಯುತ್ತಿದೆ. ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘವು ಈ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಉತ್ತಮ ಬ್ಯಾಂಕ್ ಆಗಿ ಮೂಡಿಬರಲಿ ಎಂದು ಹಾರೈಸಿದರು. ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ.ಎ. ಮಹಮ್ಮದ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ  ಸಿಪಿಐಎಂ ಹಿರಿಯ ನಾಯಕ ಕೆ.ಆರ್. ಶ್ರೀಯಾನ್, ಎಐಎಂಐಟಿ ನಿರ್ದೇಶಕ ಫಾ| ಡೆಂಝಿಲ್ ಲೋಬೋ ಎಸ್.ಜೆ., ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ.ಉಚ್ಚಿಲ್. ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿ. ಇದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ  ಡಾ| ಎಂ.ಎಂ.ಎನ್.ರಾಜೇಂದ್ರ ಕುಮಾರ್, ಕೋಟೆಕಾರು ವ್ಯವಸಾಯ ಸೇವಾ ಸಂಘದ ತಲಪಾಡಿ ಶಾಖೆ ದರೋಡೆ ನಡೆಸಿದ ಸಂದರ್ಭದಲ್ಲಿ ಶೌರ್ಯ ಮೆರೆದ  ರಾಮಚಂದ್ರ ಆಚಾರ್ಯ ಮತ್ತು ಅವರಿಗೆ ಸಹಕರಿಸಿದ ಸ್ಥಳೀಯ ನಿವಾಸಿ ಹರೀಶ್ ಶೆಟ್ಟಿ ಪಂಜಿಮುಂಡೇಲು, ರೈತಸದನ ಕಟ್ಟಡದ ಇಂಜಿನಿಯರ್ ದೇವದಾಸ್, ಕಟ್ಟಡ ನಿರ್ಮಾಣ ಮೇಲ್ವಿಚಾರಕ ಕೆ.ಬಿ. ಅಬ್ಬುಸಾಲಿ  ಅವರನ್ನು  ಸನ್ಮಾನಿಸಲಾಯಿತು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಯು., ನಿರ್ದೇಶಕರಾದ ಗಂಗಾಧರ ಉಳ್ಳಾಲ್, ಉದಯ ಕುಮಾರ್ ಶೆಟ್ಟಿ, ಯು. ಅರುಣ್ ಕುಮಾರ್, ಗಣೇಶ್ ಶೆಟ್ಟಿ ರಕ್ಷಾ ತಲಪಾಡಿ, ನಾರಾಯಣ ತಲಪಾಡಿ, ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಎಂ.ಎ. ಮಹಮ್ಮದ್ ಬಶೀರ್ ಸ್ವಾಗತಿಸಿದರು. ನಿರ್ದೇಶಕ ಕೆ. ಕೃಷ್ಣಪ್ಪ ಸಾಲ್ಯಾನ್ ಪ್ರಸ್ತಾವನೆಗೈದರು. ಪೆÇಸಕುರಲ್‍ನ ನಿರ್ದೇಶಕ ವಿದ್ಯಾಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾಂಕ್‍ಸಿಬ್ಬಂದಿ ಲೋಕಯ್ಯ ಪನೀರ್ ವಂದಿಸಿದರು.

ಕೋಟ್ಯಂತರ ಚಿನ್ನ ಉಳಿಸಿದ ಸಿಬ್ಬಂದಿಗೆ ಸನ್ಮಾನ:
ಜೂ. 23 ರ  ಮಧ್ಯಾಹ್ನ ವೇಳೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ.ರೋಡ್ ಶಾಖೆಯಿಂದ  ಸಿಬ್ಬಂದಿಯನ್ನು  ಶೌಚಾಲಯದೊಳಕ್ಕೆ ಕೂಡಿ ಹಾಕಿದ್ದ ಇಬ್ಬರು ದರೋಡೆಕೋರರ ತಂಡ ರೂ. 5.5  ಕೋಟಿ ಬೆಲೆಬಾಳುವ  20 ಕೆ.ಜಿ ಯಷ್ಟು   ಚಿನ್ನ ಕಳವು ನಡೆಸಿದ್ದರು. ಈ ನಡುವೆ  ಸಿಬ್ಬಂದಿ  ರಾಮಚಂದ್ರ ಆಚಾರ್ಯ ಎಂಬವರು ಬಾಗಿಲು ಮುರಿದು  ಬ್ಯಾಂಕಿನ ಒಂದನೇ ಮಹಡಿಯಿಂದ ಹೊರ ಓಡಿ ಬಂದು ಬೈಕಿನಲ್ಲಿ ಚಿನ್ನದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದ  ದರೋಡೆಕೋರರಿಗೆ ಕಲ್ಲೆಸೆದ ಪರಿಣಾಮ, ಇಬ್ಬರು ಆಗಂತುಕರು ಚಿನ್ನದ ಚೀಲವನ್ನು ಎಸೆದು ಬೈಕಿನಲ್ಲಿ ಪರಾರಿಯಾಗಿದ್ದರು. ಇವರ ಧೈರ್ಯದಿಂದ ಕೋಟ್ಯಂತರ ಬೆಲೆಬಾಳುವ  ಬ್ಯಾಂಕಿನ ಚಿನ್ನ ಉಳಿದಂತಾಗಿದೆ. ಇವರ ಸಾಹಸವನ್ನು ಪರಿಗಣಿಸಿ  ಬ್ಯಾಂಕ್ ಆಡಳಿತ ಮಂಡಳಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ  ಸನ್ಮಾನಿಸುವ ಮೂಲಕ ಗೌರವಿಸಿತು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಸಮರ್ಪಕ ಕಾನೂನು ಜಾರಿ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ;ಶೀನ ಶೆಟ್ಟಿ

March 12, 2026

ಮಹಿಳಾ ದಿನದ ಪ್ರಯುಕ್ತ ಕೊಲ್ಯದಲ್ಲಿ ಮಹಿಳಾ ಸಾಧಕರನ್ನು ಸನ್ಮಾನ

March 11, 2026

ಉಳ್ಳಾಲ ನಗರಸಭೆಯ ಅಧ್ಯಕ್ಷರ ಕಾರು ಚಾಲಕ, ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯರಾದ ಅಶೋಕ್ ಉಳ್ಳಾಲಬೈಲ್ ನಿಧನ

March 11, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಮಧ್ಯಪ್ರಾಚ್ಯ ಸಂಘರ್ಷ:ಮಂಗಳೂರಿನ ಡ್ರೈಫ್ರೂಟ್ಸ್ ವ್ಯಾಪಾರಕ್ಕೆ ಭಾರೀ ಹೊಡೆತ…!!

By UllalaVaniMarch 13, 20260

ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ ಇದೀಗ ಭಾರತದ ಡ್ರೈಫ್ರೂಟ್ಸ್ ಉದ್ಯಮಕ್ಕೂ ತಟ್ಟಿದ್ದು, ಮಂಗಳೂರಿನ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದೆ.…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಗ್ಯಾರೇಜ್‌ನಿಂದ ವಾಹನ ಬಿಡಿಭಾಗಗಳನ್ನು ಕಳವು ಮಾಡಿದ್ದ ವ್ಯಕ್ತಿಗೆ ನ್ಯಾಯಾಂಗ ಬಂಧನ…!!

March 13, 2026

ಸಮರ್ಪಕ ಕಾನೂನು ಜಾರಿ ಕೊರತೆಯಿಂದ ಸಂಪೂರ್ಣ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ;ಶೀನ ಶೆಟ್ಟಿ

March 12, 2026

ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿಯ ರಕ್ಷಣೆ..!

March 12, 2026
1 2 3 … 1,829 Next
Automatic YouTube Gallery

ಹರೇಕಳ ನಾಗಮೂಲೆ ನಿವಾಸಿ ಪುನೀತ್ (27) ಆ#ತ್ಮಹ#ತ್ಯೆ

ಹರೇಕಳ ನಾಗಮೂಲೆ
ನಿವಾಸಿ ಪುನೀತ್ (27) ಆ#ತ್ಮಹ#ತ್ಯೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಹರೇಕಳ ನಾಗಮೂಲೆ ನಿವಾಸಿ ಪುನೀತ್ (27) ಆ#ತ್ಮಹ#ತ್ಯೆ
Now Playing
ಹರೇಕಳ ನಾಗಮೂಲೆ ನಿವಾಸಿ ಪುನೀತ್ (27) ಆ#ತ್ಮಹ#ತ್ಯೆ
ಹರೇಕಳ ನಾಗಮೂಲೆ ನಿವಾಸಿ ಪುನೀತ್ (27) ಆ#ತ್ಮಹ#ತ್ಯೆ 📍 Ullal | Dakshina ...
ಹರೇಕಳ ನಾಗಮೂಲೆ
ನಿವಾಸಿ ಪುನೀತ್ (27) ಆ#ತ್ಮಹ#ತ್ಯೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani ...
for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೋಟೆಕಾರ್‌ನಲ್ಲಿ ಎನ್.ಎಂ ರೆಸಿಡೆನ್ಸಿ-ವಸತಿ ವಾಣಿಜ್ಯ ಸಂಕೀರ್ಣದ ಭೂಮಿ ಪೂಜೆ
Now Playing
ಕೋಟೆಕಾರ್‌ನಲ್ಲಿ ಎನ್.ಎಂ ರೆಸಿಡೆನ್ಸಿ-ವಸತಿ ವಾಣಿಜ್ಯ ಸಂಕೀರ್ಣದ ಭೂಮಿ ಪೂಜೆ
ಎನ್.ಎಂ ರೆಸಿಡೆನ್ಸಿ ವಸತಿ ಹಾಗೂ ವಾಣಿಜ್ಯ ಸಂಕೀರ್ಣದ ಭೂಮಿ ಪೂಜೆ;ಶ್ರೀ ಸಾಯಿ ...
ಎನ್.ಎಂ ರೆಸಿಡೆನ್ಸಿ ವಸತಿ ಹಾಗೂ ವಾಣಿಜ್ಯ ಸಂಕೀರ್ಣದ ಭೂಮಿ ಪೂಜೆ;ಶ್ರೀ ಸಾಯಿ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ವತಿಯಿಂದ ನಿರ್ಮಾಣ

ಎನ್.ಎಂ ರೆಸಿಡೆನ್ಸಿಯಲ್ಲಿ 28ಫ್ಲಾಟ್‌ಗಳು,7 ವಾಣಿಜ್ಯ ಅಂಗಡಿಗಳು



📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #kotekar #Someshwara #NmResidency #ShriSaiBuildersanddevelopers
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d