UN NETWORKS
ಉಳ್ಳಾಲ: ಸುನ್ನೀ ಬಾಲ ಸಂಘ (ಎಸ್ ಬಿ ಎಸ್) ಅಳೇಕಲ ಶಾಖೆ ಯ ನೂತನ ಸಮಿತಿ ರಚನಾ ಸಭೆಯು ಆದಿತ್ಯವಾರ ಅಳೇಕಲದ ಸುನ್ನೀ ಸೆಂಟರ್ ನ ಲ್ಲಿ ನಡೆಯಿತು.
ಸಯ್ಯಿದ್ ಫಹಾಝ್ ತಂಗಳ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಎಸ್ ಬಿ ಎಸ್ ಸಂಚಾಲಕ ಶಫೀಖ್ ಯು.ಎಸ್ ಸಭೆಯನ್ನು ಉದ್ಘಾಟಿಸಿದರು.2017-18ನೇ ಸಾಲಿಗೆ ಅಧ್ಯಕ್ಷರಾಗಿ ಅರ್ಮಾನ್ ಮುಹಮ್ಮದ್,ಉಪಾಧ್ಯಕ್ಷರಾಗಿ ಸಯ್ಯಿದ್ ಫಹಾಝ್ ತಂಗಳ್,ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಯಾಸಿರ್,ಜೊತೆ ಕಾರ್ಯದರ್ಶಿಗಳಾಗಿ,ಮುಹಮ್ಮದ್ ನಯೀಮ್, ಮುಖ್ತಾರ್ ಯು.ಎಸ್, ಕೋಶಾಧಿಕಾರಿಯಾಗಿ ಮುಹಮ್ಮದ್ ಸುಹಾನ್ ಸೇರಿದಂತೆ 15 ಮಂದಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಬಳಿಕ ಮುಂದಿನ ಕಾರ್ಯ ಯೋಜನೆಗಳ ಕುರಿತು ಚರ್ಚಿಸಲಾಯಿತು.
ಅರ್ಮಾನ್ ಮುಹಮ್ಮದ್ ಸ್ವಾಗತಿಸಿ, ಮುಹಮ್ಮದ್ ಯಾಸಿರ್ ವಂದಿಸಿದರು.



