Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಮತ್ತು ಉಚ್ಚಿಲ ಶಾಖೆಯ ನೂತನ ಶಾಖಾ ಕಚೇರಿಯನ್ನು ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅದಿತ್ಯವಾರ ಉದ್ಘಾಟಿಸಿದರು. ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಉಚ್ಚಿಲ ಶಾಖಾಧ್ಯಕ್ಷ ಹಿದಾಯತುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಮಸ್ತ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಕಾರ್ಯದರ್ಶಿ ಇಬ್ರಾಹೀಂ ಬಾಖವಿ ಕೆ.ಸಿರೂಡು, ಅಜ್ಜಿನಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ದ.ಕ ಜಿಲ್ಲಾ ಮದರಸ ಮೇನೆಜ್‍ಮೆಂಟ್ ಉಪಾಧ್ಯಕ್ಷ ಇಬ್ರಾಹೀಂ ಕೊಣಾಜೆ, ಉಚ್ಚಿಲ ಅಲ್-ಮುಬಾರಕ್ ವೆಲ್ಫೆರ್ ಎಸೋಸಿಯೇಶನ್ ಅಧ್ಯಕ್ಷ ಮುಹ್ಸಿನ್ ರಹ್ಮಾನ್, ಗಡಿನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಉಚ್ಚಿಲ ಶಾಖೆಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಎಸ್.ಬಿ, ಸದಸ್ಯರಾದ ಹಮೀದ್ ಹಾಜಿ, ಸಮಾಜ ಸೇವಕರಾದ ಸಲೀಂ ಅಬ್ಬಾಸ್ ಉಚ್ಚಿಲ,ಅಹ್ಮದ್ ಪೇರಿಬೈಲ್, ಇಸ್ಮಾಯಿಲ್ ಎನ್. ಎನ್ ಮೊೈದೀನ್ ಕುಂಞ, ಈ ಸಂದರ್ಭ ಉಪಸ್ಥಿತರಿದರು. ಅಬ್ದುಲ್ಲಾ ಅರ್ಶದಿ ಕೆ.ಸಿ…

Read More

UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2017-18ನೇ ಸಾಲಿನ `ಯಕ್ಷಮಂಗಳ ಪ್ರಶಸ್ತಿ’ಗೆ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಭಾಗವತರಾದ ಮತ್ಯಾಡಿ ನರಸಿಂಹ ಶೆಟ್ಟಿ, ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಪೆರುವೋಡಿ ನಾರಾಯಣ ಹಾಸ್ಯಗಾರ ಹಾಗೂ ಪ್ರಸಿದ್ಧ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್ ಅವರು ಆಯ್ಕೆಯಾಗಿದ್ದಾರೆ. ವಿದ್ವಾಂಸರಾದ ಡಾ.ಎನ್.ನಾರಾಯಣ ಶೆಟ್ಟಿ ಶಿಮಂತೂರು ಅವರ `ಯಕ್ಷಗಾನ ಛಂದೋಂಬುಧಿ’ ಗ್ರಂಥವು ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಎಪ್ರಿಲ್ 24ರಂದು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ನಡೆಯಲಿದ್ದು, ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ವಿತರಿಸಲಿಸದ್ದಾರೆ.ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ.ಎಂ.ಎ.ಹೆಗಡೆ, ಪ್ರಸಿದ್ದ ಅಂಕಣಕಾರರಾದ ನಾ.ಕಾರಂತ ಪೆರಾಜೆ, ಯಕ್ಷಗಾನ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯಕ್ಷಮಂಗಳ ಪ್ರಶಸ್ತಿಯು ತಲಾ ರೂ.25 ಸಾವಿರ ನಗದು,…

Read More

UN NETWORKS ಉಳ್ಳಾಲ: ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ,. ಇತರರಿಗೆ ಸಹಕಾರಿಯಾಗುವಂತಹ ಮನೋಭಾವವನ್ನು ಇಟ್ಟುಕೊಂಡು ಸಂಘಟಕರು ಹಮ್ಮಿಕೊಂಡಿರುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಹಾಗೂ ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಎಂದು ಬದ್ರಿಯ ಜುಮಾ ಮಸೀದಿ ಖತೀಬ್ ಮುಹಮ್ಮದ್ ಶರೀಫ್ ಅರ್ಶದಿ ಹೇಳಿದರು. ಅವರು ಬದ್ರಿಯಾ ಜುಮಾ ಮಸೀದ್ ದೇರಳಕಟ್ಟೆ, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಶನ್(ರಿ) ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ಜರಗಿದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದೇರಳಕಟ್ಟೆ ವಿದ್ಯಾರತ್ನ ಅಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ರಕ್ತದಾನದ ಮೂಲಕ ಜೀವದಾನದಂತಹ ಮಹತ್ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವುದು ಅವಶ್ಯಕ. ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾದ ಸಂದೇಶ ಒದಗಿಸುತ್ತದೆ .ರಕ್ತದ ಅವಶ್ಯಕತೆಯಿದ್ದಾಗ ಜಾತಿ, ಧರ್ಮ…

Read More

UN NETWORKS ಕಿನ್ಯಾ: ಕಾಶ್ಮೀರದ 8 ಹರೆಯದ ಆಸೀಫ ಎಂಬ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರವೆಸಗಿ ಅತಿ ದಾರುಣವಾಗಿ ಹತ್ಯೆಗೈದ ರಕ್ಷಾಸಿ ಗಳಿಗೆ ಅತಿ ಕಠಿಣ ಶಿಕ್ಷೆ ಯಾಗುವಂತೆ ಒತ್ತಾಯಿಸಿ 15-04-2018 ಸಂಜೆ 7.30 ಕ್ಕೆ ಸರಿಯಾಗಿ ಉಕ್ಕುಡ ಜಂಕ್ಷನ್ ನಲ್ಲಿ ನಡೆದಿದ್ದು, ಇಂದು ವಿಶ್ವದ ಎದುರಿಗೆ ಭಾರತ ತಲೆತಗ್ಗಿಸಿದೆ, ಇಂತಹ ಕ್ರೂರ ಕೃತ್ಯಗಳು ಮುಂದಕ್ಕೆ ಸಮಾಜದಲ್ಲಿ ನಡೆಯದಿರಲೀ ಹಾಗೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವಲ್ಲಿ ಕಾನೂನು ಯಶಸ್ವಿಯಾಗಲಿ ಎಂದು ಹಬೀಬ್ ಉಸ್ತಾದರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಶಾಂತಿ ಸೌಹಾರ್ಧ ನೆಲೆಸಿರುವ ಭಾರತ ಪುಣ್ಯ ಭೂಮಿಯಲ್ಲಿ ದೇಶದ ಗೌರವಕ್ಕೆ ಕಲಂಕ ತಂದಿರುವ ಕೃತ್ಯ ಬಹಳ ಖಂಡನೀಯ ಹಾಗೂ ಖೇದಕರ ಅಪರಾಧಿಗಳಿಗೆ ಗಲ್ಲು ವಿಧಿಸಿ ಆಪುಟ್ಟ ಬಾಲಕಿಗೆ ನ್ಯಾ ಯ ದೊರಕುವಲ್ಲಿ ಯಶಸ್ವಿಯಾಗಲಿ ಎಂದು ಫಾರೂಕ್ ಕಿನ್ಯ. ನುಡಿದರು. ಹಸೈನಾರ್ , ಇಬ್ರಾಹಿಂ , ಅಹಮ್ಮದ್ , ಅಶ್ರಫ್, ಅಬ್ದುಲ್ಲ, ಹೈದರ್ , ಮುಂತಾದ ಹಿರಿಯರು ಹಾಜರಿದ್ದರು. ಆಸಿಫಾ ಎಂಬ ಪುಟ್ಟ ಬಾಲಕಿಯ…

Read More

UN NETWORKS ಮೊಂಟೆಪದವು : ಎಸ್.ಎಸ್.ಎಫ್ ರಾಜ್ಯ ಸಮಿತಿಯ ನಿರ್ದೇಶನದಂತೆ *ಜಸ್ಟಿಸ್ ಪಾರ್ ಆಸಿಫಾ* ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನಾ ಕಾರ್ಯಕ್ರಮವು ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಅಧ್ಯಕ್ಷರು ಶೆರೀಫ್ ರವರ ಸಮ್ಮುಖದಲ್ಲಿ ಜರಗಿತು. ಕಾಶ್ಮೀರದ ಕಾಥುವಾ ಎಂಬಲ್ಲಿ 8 ವರ್ಷದ ಪುಟ್ಟ ಕಂದಮ್ಮ ಆಸಿಫಾಳ ವಿರುಧ್ಧ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಎಸ್.ಎಸ್.ಎಫ್ ಮೋಂಟುಗೋಳಿ ಸೆಕ್ಟರ್ ಅಧ್ಯಕ್ಷರಾದ *ಇರ್ಷಾದ್ ಮದನಿ ಉಸ್ತಾದರು ಭಾಷಣ ಮಾಡಿದರು. ದಾರುಣ ಅಂತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ದುಷ್ಕರ್ಮಿಗಳು ಯಾರು ಎಂದು ಹೀಗಾಗಲೇ ತಿಳಿದಿರುವ ವಿಷಯ.ಆದರೆ ಈವರೆಗೂ ಯಾವುದೇ ಕಠಿಣ ಶಿಕ್ಷೆ ಜಾರಿಯಾಗಿಲ್ಲ ಯಾಕೆ? ಎಂದು ಇವರು ಪ್ರಶ್ನಿಸಿದರು. ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಎಸ್.ಎಫ್ ಮೊಂಟೆಪದವು ಯುನಿಟ್ ಗೌರವ ಅಧ್ಯಕ್ಷರಾದ ಮೊಯ್ದಿನ್ ಹಾಜಿಯವರು ” ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಾ ಇವೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಜಾತಿ-ಧರ್ಮ ನೋಡದೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕೆಂದು ಅಭಿಪ್ರಾಯ ಪಟ್ಟರು. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ…

Read More

UN NETWORKS ಇನೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಳ ಬದಲಾಗಿ ಮಾನ್ಯತೆಯನ್ನು ತುಲನೆ ಮಾಡಲಾಗುತ್ತಿದೆ. ವಾಸ್ತವವಾಗಿ ವಿದ್ಯಾರ್ಥಿಗಳು ಬುದ್ಧಿವಂತಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದಲ್ಲಿ ಅವರ ಭವಿಷ್ಯದ ಜತೆಗೆ ಶಿಕ್ಷಣ ಸಂಸ್ಥೆಯ ಹೆಸರು ಖ್ಯಾತಿ ಪಡೆಯುವುದು ಎಂದು ಮುಂಬೈ ಐಐಟಿ ಇದರ ನಿರ್ದೇಶಕ ಡಾ.ಎ.ಕೆ ಸುರೇಶ್ ಅಭಿಪ್ರಾಯಪಟ್ಟರು. ಅವರು ಕೊಣಾಜೆ ಇನೋಳಿಯ ಬೇರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೇರಿಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ `ಬಿಐಟಿ ಆಂಡ್ ಬೀಡ್ಸ್ ಉತ್ಸವ-2018′ ನ್ನು ಉದ್ಘಾಟಿ ಮಾತನಾಡಿದರು. ಬಿಐಟಿ ಶಿಕ್ಷಣ ಸಂಸ್ಥೆಯ ವಾತಾವರಣ ಪ್ರಕೃತಿ ಮಡಿಲಿನ ಜತೆಗಿನ ಒಡನಾಟ ಇರುವುದರಿಂದ ಶಿಕ್ಷಣಕ್ಕೆ ಪೂರಕವಾಗಿದೆ. ಶಿಕ್ಷಣದ ಜತೆಗೆ ನಡತೆಯ ಪಾಠವೂ ಮುಖ್ಯವಾಗಿರುತ್ತದೆ. ಪ್ರಸ್ತುತ ಕ್ರಿಕೆಟ್ ಆಟದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಆದರೂ ಗೆಲುವಿಗಾಗಿ ಹಿಡಿದ ಹಾದಿ ಇಡೀ ದೇಶವನ್ನೇ ಮುಜುಗರಕ್ಕೀಡಾಗುವಂತೆ ಮಾಡಿತ್ತು. ಅದಕ್ಕಾಗಿ ಯಶಸ್ಸಿನ ಹಾದಿಯಲ್ಲಿ ನಡತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿದೆ. ಇಂಜಿನಿಯರಿಂಗ್ ವಿಭಾಗ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿಚಾರಗಳನ್ನು ಒಳಗೊಂಡ ಸಮಗ್ರ ವಿಷಯವಾಗಿದೆ.…

Read More

UN NETWORKS ಮುಡಿಪು : ಮನೆಗೆ ನುಗ್ಗಿದ ನಾಲ್ವರು ಕಳ್ಳರ ತಂಡದಲ್ಲಿ ಓರ್ವನನ್ನು ಬೋಳಿಯಾರು ನಾಗರಿಕರು ರೆಡ್ ಹ್ಯಾಂಡಾಗಿ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಡಿಪು ಕರ್ಣಾಟಕ ಬ್ಯಾಂಕಿನ ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಕಾರ್ಯ ನಿರ್ವಹಿಸುವ ತಮಿಳುನಾಡು ಮೂಲದ 70ರ ಹರೆಯದ ವೃದ್ಧನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ನಿನ್ನೆ ತಡರಾತ್ರಿ ಮೂವರು ಮಹಮ್ಮದ್ ಎಂಬವರ ಮನೆಯ ಮುಂಬಾಗಿಲಿನ ಚಿಲಕಕ್ಕೆ ಹಗ್ಗದಿಂದ ಕಟ್ಟಿ ಹಿಂಬಾಗಿಲನ್ನು ಒಡೆದು ಒಳನುಗ್ಗಿದ್ದರು. ಶಬ್ದ ಕೇಳಿ ಮನೆಮಂದಿ ಎಚ್ಚರಗೊಂಡಾಗ ಮೂವರು ಕಳ್ಳರು ಅಲ್ಲಿಂದ ಪರಾರಿಯಾಗಿದ್ದರು. ಮತ್ತೆ ಅಲ್ಪ ದೂರದಲ್ಲಿ ಇನ್ನೊಂದು ಮನೆಗೆ ನುಗ್ಗಲು ಯತ್ನಿಸುವ ಸಂದರ್ಭ, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ನಾಲ್ವರಲ್ಲಿ ಓರ್ವನನ್ನು ಹಿಡಿದಿದ್ದಾರೆ. ಹೆಚ್ಚಿನ ವಿಚಾರಣೆಗೆ ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಉಳಿದ ಮೂವರನ್ನು ತಮಿಳುನಾಡು ಮೂಲದವರೇ ಆಗಿರಬಹುದೆಂದು ಸಂಶಯಿಸಲಾಗಿದ್ದು, ಅವರಿಗಾಗಿ ಕೊಣಾಜೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Read More

UN NETWORKS ಉಳ್ಳಾಲ: ಕರಾವಳಿ ಭಾಗದಲ್ಲಿ ಕೋಮುಗಲಭೆಗೆ ಹೆಚ್ಚಿನ ಪ್ರಚೋದನೆ ನೀಡಲಾಗುತ್ತಿದೆ ಹೊರತು ದೇಶಕಾಯುವ ಮನೋಭಾವವನ್ನು ಬೆಳೆಸಲಾಗುತ್ತಿಲ್ಲ. ಗಡಿ ಕಾಯುವಾಗ, ಯುದ್ಧ ಮಾಡುವಾಗ ಜಾತಿ ಬೇಧವಿಲ್ಲದೆ ಮುಸ್ಲಿಮರು, ಕ್ರೈಸ್ತರು, ಹಿಂದುಗಳು ಒಟ್ಟಾಗಿ ಭಯೋತ್ಪಾಧಕರನ್ನು ಸೋಲಿಸುವ ಕಾರ್ಯದಲ್ಲಿ ತೊಡಗುತ್ತಿದ್ದೇವೆ. ಕರಾವಳಿ ಭಾಗದಲ್ಲಿ ಮಾತ್ರ ವ್ಯತಿರಿಕ್ತ ಉದಾಹರಣೆ ಎದ್ದು ಕಾಣುತ್ತಿದೆ ಎಂದು ಜಮ್ಮು ಕಾಶ್ಮೀರದ ಎನ್‍ಕೌಂಟರ್‍ನಲ್ಲಿ ಭಾಗಿಯಾದ ಭಾರತೀಯ ಸೇನೆಯ ಯೋಧ ಝುಬೇರ್ ಹಳೇನೆರಂಕಿ ಹೇಳಿದರು. ಚೆಂಬುಗುಡ್ಡೆ ಫ್ರೆಂಡ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಚೆಂಬುಗುಡ್ಡೆಯ ನೂರುಲ್ ಹುದಾ ಮದರಸದಲ್ಲಿ ಭಾನುವಾರ ಜರಗಿದ ಬಿ.ಎಂ. ಮುಹಮ್ಮದ್ ಮದನಿ ಸ್ಮರಣಾರ್ಥ ಎರಡನೇ ವರ್ಷದ ಬೃಹತ್ ರಕ್ತದಾನ ಶಿಬಿರ ಮತ್ತು ಯೋಧ ಝುಬೇರ್ ಹಳೇನೆರಂಕಿಯವರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬ್ಲಡ್ ಡೋನರ್ಸ್ ಮಂಗಳೂರು ಹಮ್ಮಿಕೊಂಡ ಕಾರ್ಯಕ್ರಮ ಜೀವದಾನ ಮಾಡುವಂತಹ ಶಿಬಿರದಲ್ಲಿ ದೇಶಭಕ್ತಿ ಎದ್ದು ಕಾಣುತ್ತಿದೆ. ಐದು ವರ್ಷಗಳ ಹಿಂದೆ ಮದರಸದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತಿದೆ…

Read More

UN NETWORKS ಉಳ್ಳಾಲ: ಫಾಸ್ಟ್ ಫುಡ್ ಮಾಲೀಕನಿಗೆ ರೌಡಿಶೀಟರ್ ಓರ್ವ ಬಿಸಿ ಎಣ್ಣೆ ಎರಚಿ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಉಳ್ಳಾಲ ದ ಪ್ಯಾರಿಸ್ ಹೊಟೇಲಿನ ಎದುರುಗಡೆ ನಿನ್ನೆ ತಡರಾತ್ರಿ ಸಂಭವಿಸಿದ್ದು, ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಉಳ್ಳಾಲ ನಿವಾಸಿ ಗಫೂರ್ (30) ದಾಳಿಗೆ ಒಳಗಾದ ಫಾಸ್ಟ್ ಫುಡ್ ಅಂಗಡಿ ಮಾಲೀಕರು. ಇವರ ಮೇಲೆ ಹಲವು ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಆಗಿರುವ ನಮಿತ್ ದಾಳಿ ನಡೆಸಿದ್ದಾನೆ. ವಾರದ ಹಿಂದೆ ಅಂಗಡಿಯಲ್ಲಿ ತಿಂದು ಹಣ ಬಾಕಿಯಿರಿಸಿದ್ದ ನಮಿತ್‍ನನ್ನು ಗಫೂರ್ ಎರಡು ದಿನಗಳ ಹಿಂದೆ ಹಣ ಕೇಳಿದ್ದರು. ಈ ವೇಳೆ ನಮಿತ್ ಹಣ ಕೊಡುವುದಿಲ್ಲ ಎಂದು ಬೆದರಿಸಿ ಜೀವಬೆದರಿಕೆಯನ್ನು ಒಡ್ಡಿ ತೆರಳಿದ್ದ. ಇದರಿಂದ ಗಾಬರಿಗೊಂಡ ಗಫೂರ್ ಅವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಹಿಡಿಯುವ ಪ್ರಯತ್ನ ಮಾಡಿರಲಿಲ್ಲ. ಶನಿವಾರ ಮತ್ತೊಮ್ಮೆ ಅಂಗಡಿಯತ್ತ ಬಂದ ನಮಿತ್ ಗಫೂರ್ ಅವರಿಗೆ ಏಕಾಏಕಿ ಹಲ್ಲೆ ನಡೆಸಿದ್ದು, ಬಳಿಕ ಕಬಾಬ್ ಕಾಯಿಸಿಟ್ಟಿದ್ದ ಬಿಸಿ ಎಣ್ಣೆಯನ್ನೇ…

Read More

UN NETWORKS ಉಳ್ಳಾಲ: ವಾಯುಯಾನ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ದೇಶ -ವಿದೇಶದಾದ್ಯಂತ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಮೂಲಕ ವಾಯುಯಾನ ಸಂಸ್ಥೆಗಳ ಆದಾಯ ಹೆಚ್ಚಾಗುವುದರೊಂದಿಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು   ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ (ಟಿಟಿಎಂ) ವಿಭಾಗದ ಅಸಿಸ್ಟೆಂಟ್ ಪ್ರೊ. ಜೋಸೆಫ್ ಪಿ.ಡಿ. ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಸೋಮೇಶ್ವರ ರಸ್ತೆಯಲ್ಲಿರುವ ಮೆರೇಡಿಯನ್ ಕಾಲೇಜು  ಇದರ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ವಿತರಿಸಿ  ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾಯುಯಾನ  ಉತ್ಕøಷವಾಗಿ ಬೆಳೆಯುತ್ತಿದ್ದು,  ಭಾರತದಿಂದ ಹೊರದೇಶಕ್ಕೆ ಮತ್ತು ಹೊರದೇಶಗಳಿಂದ ದೇಶಕ್ಕೆ  ತಲುಪಲು ದರ ಬಹಳಷ್ಟು ಕಡಿಮೆಯಾಗಿದೆ.   ಪ್ರವಾಸೋದ್ಯಮದ ಅಭಿವೃದ್ಧಿ ಜತೆಗೆ ಆದಾಯ ಮತ್ತು ಉದ್ಯೋಗ ಸೃಷ್ಟಿಯೂ ಹೆಚ್ಚಾಗುತ್ತಿದೆ. ಸಾಮಾಜಿಕವಾಗಿಯೂ ವಾಯುಯಾನ  ವಲಯ ಉನ್ನತ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು, ಕಂಪೆನಿಗಳಿಗೆ ಬೇಕಾದ ರೀತಿಯ  ಕೌಶಲ್ಯವೃದ್ಧಿಯನ್ನು ಬೆಳೆಸಬೇಕಿದೆ. ಅದಕ್ಕಾಗಿ ಪರಿಶ್ರಮ ಅಗತ್ಯ ಎಂದರು. https://www.youtube.com/watch?v=S19ovf66FTM https://www.youtube.com/watch?v=19zi5lytraQ&t=206s https://www.youtube.com/watch?v=uS25BccEtuc&t=1305s ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮೆರೆಡಿಯನ್ ಕಾಲೇಜು ನಿರ್ದೇಶಕ ಡಾ| ಜೋಬಿ ಇ.ಸಿ…

Read More