UN NETWORKS ಮುಡಿಪು: ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಕೊಲೆ ಅತ್ಯಂತ ಖಂಡನೀಯವಾದ ವಿಚಾರ. ಪ್ರಕರಣದಿಂದ ವಿಶ್ವದಲ್ಲೇ ಭಾರತೀಯರು ತಲೆತಗ್ಗಿಸುವಂತಹ ಕೃತ್ಯವಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಹೇಳಿದರು. ಅವರು ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲಿ ಎಂಟರ ಹರೆಯದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮುಡಿಪು ವಲಯ ನಾಗರಿಕ ಹೋರಾಟ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಪಾಲ್ಗೊಳ್ಳುವಿಕೆಯಲ್ಲಿ ಮಂಗಳವಾರ ಮುಡಿಪು ಜಂಕ್ಷನ್ನಿನಲ್ಲಿ ಹಮ್ಮಿಕೊಂಡಿದ್ದ ಮೊಂಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೃತ್ಯ ದೇಶದ ಬಹುಸಂಸ್ಕೃತಿಕಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಜಾರಿಗೊಳಿಸುವ ಮೂಲಕ ಅದಕ್ಕೆ ಬೆಂಬಲಿಸುವವರಿಗೆ ಹಾಗೂ ಬೆಂಬಲಿಸಿ ಮಾತನಾಡುವವರಿಗೂ ಬಹುದೊಡ್ಡ ಶಿಕ್ಷೆಯಾಗಬೇಕಿದೆ. ದೇಶಾದ್ಯಂತ ಇಂತಹ ನೀಚ ಕೃತ್ಯಗಳು ಪುನರಾವರ್ತನೆಗೊಳ್ಳುತ್ತಿದೆ. ಅದಕ್ಕಾಗಿ ನಿರ್ಭಯ ಕಾನೂನು ಇನ್ನಷ್ಟು ಕಠಿಣಗೊಳ್ಳಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಪಿಶಾಚಿಗಳಿಗೆ ಭಯ ಹುಟ್ಟಿಸುವಂತಹ ಕಾನೂನು ಶೀಘ್ರವೇ ಜಾರಿಗೆ ಬರಬೇಕಿದೆ.…
Author: UllalaVani
UN NETWORKS ಮಂಗಳಗಂಗೋತ್ರಿ : ಇಂದಿನ ಕಾಲಘಟ್ಟಕ್ಕೆ ಇಂಟರ್ನೆಟ್ ಆಫ್ ಥಿಂಗ್ಸ್ ಅತ್ಯವಶ್ಯಕವಾಗಿದ್ದು , ಈ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆ ನಡೆಸುವುದರಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದಂತಾಗುತ್ತದೆ ಎಂದು ಇನ್‍ಫೋಸಿಸ್‍ನ ಆಸೋಸಿಯೇಟಿವ್ ಉಪಾಧ್ಯಕ್ಷ ಮತ್ತು ಮಂಗಳೂರು ಕೇಂದ್ರದ ಮುಖ್ಯಸ್ಥ ವಾಸುದೇವ ಕಾಮತ್ ಆಭಿಪ್ರಾಯಪಟ್ಟರು. ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂಟರ್ ನೆಟ್ ಮೂಲಕ ಕೃಷಿ, ಆಟೋಮೊಬೈಲ್, ಆಹಾರ, ಗಾರ್ಮೆಂಟ್ ಸೇರಿದಂತೆ ಪ್ರತಿಯೊಂದು ವಸ್ತುವಿಗೂ ಸಂಪರ್ಕಿಸಲು ಸಾಧ್ಯವಿದ್ದು ಆ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದ ಅವರು ಪ್ರಸ್ತುತ ಚಾಲ್ತಿಯಲ್ಲಿರುವ ಇತರ ಎಲ್ಲ ತಂತ್ರಗಾರಿಕೆಗಳನ್ನು ಮೀರಿಸುವ ಇಂಟರ್‍ನೆಟ್ ಆಫ್ ಥಿಂಗ್ಸ್ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗುವ ಕಾರಣ ಅದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು. ಮಂಗಳೂರು ವಿವಿಯ ಕುಲಪತಿ ಪ್ರೊ| ಕೆ.ಬೈರಪ್ಪ…
UN NETWORKS ನರಿಂಗಾನ: ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ನಡೆದ 3 ದಿವಸಗಳ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವು ಮರಿಕ್ಕಳ ಜುಮಾ ಮಸ್ಜಿದ್ ಖಾಝಿ ಶೈಖುನಾ ಬೇಕಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಿತು. ಸಯ್ಯಿದ್ ಝೈನುಲ್ ಆಬಿದ್ ಜಮಾಲುಲೈಲ್ ತಂಙಳ್ ಕಾಜೂರು ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ನೇತೃತ್ವ ಹಾಗೂ ದುಆ ಮಜ್ಲಿಸ್‍ಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಮರಿಕ್ಕಳ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ, ಮುಅಲ್ಲಿಂ ರಮಳಾನ್ ಮದನಿ ಕಂಬ್ಲಬೆಟ್ಟು, ಮರಿಕ್ಕಳ ಜುಮಾ ಮಸ್ಜಿದ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಿಲ್, ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು, ಕೋಶಾಧಿಕಾರಿ ಹನೀಫ್ ಚಂದಹಿತ್ತಿಲು ಹಾಗೂ ಇನ್ನಿತರ ಜಮಾಅತ್ ನಾಯಕರು ಉಪಸ್ಥಿತರಿದ್ದರು. ಮರಿಕ್ಕಳ ಖತೀಬ್ ಅಬ್ಬಾಸ್ ಸಖಾಫಿ ಸ್ವಾಗತಿಸಿದರು. ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ವಂದಿಸಿದರು.
UN NETWORKS ಕೊಣಾಜೆ: ಸಂವಿದಾನ ಶಿಲ್ಪಿ ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ನಾಯಕರಾಗದೆ ಅವರು ಇಡೀ ಜಗತ್ತಿನ ಮಹಾನ್ ನಾಯಕರಾಗಿದ್ದಾರೆ. ಆಧುನಿಕ ಭಾರತದ ಪಿತಾಮಹನಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರು ಆರ್ಥಿಕ ತಜ್ಞ, ರಾಜಕೀಯ ವಿಶ್ಲೇಷಕ, ಕಾನೂನು ತಜ್ಞ ಹಾಗೂ ಸಮಾಜ ಸುಧಾರಕರಾಗಿದ್ದು ಅವರ ವ್ಯಕ್ತಿತ್ವ ಹಾಗೂ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಬೆಂಗಳೂರು ಗಾಂಧಿಭವನದ ಉಪಾಧ್ಯಕ್ಷರಾದ ಪ್ರೊ.ಜಿ.ಬಿ.ಶಿವರಾಜು ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‍ರವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇತರ ದೇಶಗಳ ಸಂವಿಧಾನವನ್ನು ಹೋಲಿಸಿದರೆ ಭಾರತದ ಸಂವಿಧಾನವು ಅತ್ಯಂತ ಪ್ರಮುಖವಾಗಿ ನಮಗೆ ಕಾಣುತ್ತದೆ. ಇಂದಿಗೂ ಮೂಲ ಸ್ವರೂಪ ಹಾಗೂ ಸತ್ಯತೆಯನ್ನು ಉಳಿಸಿಕೊಂಡು ಬಂದಿದೆ. ಅಸಮಾನತೆ, ಜಾತೀಯತೆಯನ್ನು ಹೋಗಲಾಡಿಸಿ ಆಧುನಿಕ ಭಾರತದ ನಿರ್ಮಾಣ ಮಾಡಿದ ಡಾ.ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವ…
UN NETWORKS ತಲಪಾಡಿ: ಶಿಬಿರಗಳಲ್ಲಿ ಸಿಗುವ ಸಂಸ್ಕಾರ, ಸಾಮಾನ್ಯ ಜ್ಞಾನವು ಮುಂದೆ ಮಕ್ಕಳಲ್ಲಿ ಬೆಳವಣಿಗೆಯಲ್ಲಿ ಅದು ದೊಡ್ಡ ರೂಪದಲ್ಲಿ ವೃದ್ಧಿಯಾಗಲಿ ಎಂದು ಆನಂದಾಶ್ರಮ ಪ್ರೌಢಶಾಲಾ ನಿವೃತ್ತ ಅಧ್ಯಾಪಕರಾದ ಕೆ. ಆರ್.ಚಂದ್ರ ಅವರು ಅಭಿಪ್ರಾಯಪಟ್ಟರು. ಅವರು ಕಿನ್ಯ ಕೇಶವ ಶಿಶುಮಂದಿರ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಹಕಾರದೊಂದಿಗೆ ಶ್ರೀ ಕ್ಷೇತ್ರ ತಲಪಾಡಿಯ ಸಭಾ ಭವನದಲ್ಲಿ 5 ದಿನಗಳ ಪರ್ಯಂತ ನಡೆಯುವ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಶಾಲೆಯಲ್ಲಿ ಪಾಠಗಳಲ್ಲಿ ಸಿಗದ ಅನೇಕ ವಿಷಯಗಳು, ಮೌಲ್ಯಗಳು ಈ ಶಿಬಿರಗಳಿಂದ ಪಡೆಯಬಹುದು ಎಂದು ಹೇಳಿದರು. ವೇದಮೂರ್ತಿ ಬಾಲಕೃಷ್ಣ ಭಟ್ ಪಂಜಾಳ ಶಿಬಿರ ಉದ್ಘಾಟಿಸಿ ಮಾತನಾಡಿ ಕೇವಲ ಹಣದಿಂದ ದೊರಕುವ ವಿಚಾರ, ವಿಷಯಗಳು ಮಾತ್ರ ಮುಖ್ಯವಲ್ಲ ಉಚಿತವಾಗಿ ಸಿಗುವ ಈ ಸಂಸ್ಕಾರಯುತ ಶಿಕ್ಷಣವನ್ನು ಮಕ್ಕಳು ಪಡೆದು ಅದನ್ನು ಪೋಷಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು ಎಂದರು. ನಿವೃತ್ತ ಕೃಷಿ ಅಧಿಕಾರಿ ಕೇಶವ ತಚ್ಚಣಿ ಮಾತಾನಾಡಿ ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದು, ಇಂತಹ…
UN NETWORKS ಪಿಲಾರ್: ಮಹಿಳೆಯರು ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸಿದರೆ ಸಮಾಜದಲ್ಲಿ ಯಾರು ಮಹಿಳೆಯರನ್ನು ವಕ್ರದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ, ಪ್ರತಿಯೊಬ್ಬರಿಗೂ ಜೀವನದ ಸ್ವಾತಂತ್ರ್ಯ ನೀಡಿದ ದೇಶ ಇದ್ದರೆ ಅದು ಭಾರತ ಮಾತ್ರ ನಮಗೆ ನೀಡಿದ ಸ್ವಾತಂತ್ರ್ಯದ ದುರುಪಯೋಗ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತೆಯರಿಗಿದೆ ಎಂದು ಪ್ರಖರ ವಾಗ್ಮಿ, ಯುವ ನ್ಯಾಯವಾದಿ ಸಹನಾ ಕುಮಾರಿ ಸೂಡ ಅಭಿಪ್ರಾಯಪಟ್ಟರು. ಪಿಲಾರ್ ಪ್ರಕಾಶನಗರದ ಕೆಟಿಎಸ್‍ಎಸ್.ಬಾಯ್ಸ್ ಹಮ್ಮಿಕೊಂಡ 8ನೇ ವರ್ಷದ ಬಿಸು ಪರ್ಬ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಕಾಪಿಕಾಡು ಉಮಾಮಹೇಶ್ವರಿ ಕಬ್ಬಡ್ಡಿ ಅಕಾಡೆಮಿ ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೂಕಾಂಬಿಕಾ ಗಾರ್ಮೆಂಟ್ಸ್ ನ ಮಾಲಕ ಚಂದ್ರಹಾಸ್ ಪಂಡಿತ್ ಹೌಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಗಿರೀಶ್ ಆಳ್ವ ಮೊರ್ಲ, ಕೊರಗತನಿಯ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಸುಜಯ, ರಾ.ಸ್ವಂ.ಸೇ.ಸಂಘದ ತಾಲೂಕ್ ವ್ಯ.ಪ್ರಮುಖ್ ಅರ್ಜುನ್ ಮಾಡೂರು, ಕೆಟಿಎಸ್‍ಎಸ್‍ನ ಅಧ್ಯಕ್ಷ ಕೀರ್ತಿರಾಜ್, ಕೋಶಾಧಿಕಾರಿ ನಿಶಾಂತ್ , ಉಪಾಧ್ಯಕ್ಷ ಸಂತೋಷ್, ಚಿರಂಜನ್,…
UN NETWORKS ಉಳ್ಳಾಲ: ಜಾರ್ಖಂಡ್ ರಾಂಚಿಯಲ್ಲಿ ನಡೆದ 2018ರ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ 74 ಕೆ.ಜಿ ವಿಭಾಗದಲ್ಲಿ ಹೇಮಚಂದ್ರ್ರ ಬಬ್ಬುಕಟ್ಟೆ ಇವರು ಚಿನ್ನ ಮತ್ತು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರು ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದು, ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯ. ಬಿ. ಶೇಖರ್ ಭಟ್ನಗರ ಇವರಿಂದ ತರಬೇತಿಯನ್ನು ಪಡೆದಿದ್ದರು.
UN NETWORKS ಉಳ್ಳಾಲ: ಜಾರ್ಖಂಡ್ ರಾಂಚಿಯಲ್ಲಿ ನಡೆದ 2018ರ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯ 58 ಕೆ.ಜಿ ವಿಭಾಗದಲ್ಲಿ ಗಣೇಶ್ ಕುಲಾಲ್ ಇವರು ಚಿನ್ನ ಪದಕ ಪಡೆದುಕೊಂಡಿದ್ದಾರೆ. ತೊಕ್ಕೊಟ್ಟು ಭಟ್ನಗರದ ಶ್ರೀ ಶಕ್ತಿ ಭಾರತ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ಬಿ. ಶೇಖರ್ ಭಟ್ನಗರ ಅವರಿಂದ ತರಬೇತಿ ಪಡೆದಿದ್ದರು.
UN NETWORKS ಕಲ್ಮಿಂಜ: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಎಸ್.ಎಸ್.ಎಫ್ ಕಲ್ಮಿಂಜ ಯುನಿಟ್ ಇದರ ವತಿಯಿಂದ ಕಲ್ಮಿಂಜ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಖತೀಬ್ ಉಸ್ತಾದ್ ಅಬ್ದುಲ್ ಲತೀಫ್ ಸಅದಿ ಅಲ್-ಅಫ್ಳಲಿ ದೇಶದಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಿರಂತರ ನಡೆಯುತ್ತಿದ್ದರೂ ಅದರ ಬಗ್ಗೆ ಅಧಿಕೃತರು ತೋರುವ ಅಸಡ್ಡೆ ಮತ್ತು ನಿಷ್ಕ್ರಿಯತೆ ಸಮಾನ ಕೃತ್ಯಗಳು ಸಾರ್ವತ್ರಿಕವಾಗಿ ನಡೆಯಲು ಕಾರಣವಾಗುತ್ತದೆ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಇಸ್ಮಾಯಿಲ್ ಸಅದಿ ಉದ್ಘಾಟಿಸಿದರು. ಬದ್ರಿಯ ಜುಮಾ ಮಸ್ಜಿದ್ ಕಲ್ಮಿಂಜ ಅಧ್ಯಕ್ಷರಾದ ಮಹಮ್ಮದ್ ಪೂಡಲ್, ಹಿರಿಯ ನಾಯಕರಾದ ಅಬೂಬಕರ್ ಹಾಜಿ, ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್, ಎಸ್.ಎಸ್.ಎಫ್ ಸೆಕ್ಟರ್…
UN NETWORKS ಮುಡಿಪು: ರಕ್ಷಣಾ ಬೇಲಿಯಾಗಬೇಕಿದ್ದ ಪೊಲೀಸರೇ ಕೇವಲ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿರುವು ಮೃಗೀಯ ವರ್ತನೆಯಾಗಿದೆ. ಈ ಘಟನೆ ಮಾನವ ಸಮುದಾಯವನ್ನೇ ತಲ್ಲಣಗೊಳಿಸಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಅಭಿಪ್ರಾಯಪಟ್ಟರು. ಜಮ್ಮು ಕಾಶ್ಮೀರದಲ್ಲಿ ನಡೆದ ಆಸಿಫಾ ಹತ್ಯೆ ಖಂಡಿಸಿ ಡಿವೈಎಫ್ ಐ ವತಿಯಿಂದ ಶನಿವಾರ ಮುಡಿಪು ಜಂಕ್ಷನ್ ನಲ್ಲಿ ನಡೆದ ಮೊಂಬತ್ತಿ ಪ್ರತಿಭಟನೆಯಲ್ಲಿ ಮಾತನಾಡಿದರು. ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದು ಆರೋಪಿಗಳು ಪವಿತ್ರ ದೇವಾಲಯದಲ್ಲಿ ಬಾಲಕಿಯನ್ನು ಭೀಕರವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಲು ಹೋದಾಗ ಆರೋಪಿ ಪೊಲೀಸ್ ಬಾಲಕಿ ಯಾರದ್ದೋ ಜೊತೆ ಓಡಿ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದನು. ಬಾಲಕಿ ಪರವಾಗಿ ಸತತ ಪ್ರತಿಭಟನೆ, ಹೋರಾಟ ನಡೆಸಿದ ಫಲವಾಗಿ ಅಲ್ಲಿನ ಸರ್ಕಾರ ದ ಆದೇಶದ ಮೇರೆಗೆ ಉನ್ನತ ತನಿಖೆ ನಡೆದು ಆರೋಪಿ ತಂಡದ ಲ್ಲಿದ್ದರೂ ಪ್ರಕರ ಬೆಳಕಿಗೆ ಬಂದಿದ್ದು, ಕಠಿಣ ಶಿಕ್ಷೆಯಾಗುವುದು ಶತಃಸಿದ್ಧ ಎಂದು ಹೇಳಿದರು. https://www.youtube.com/watch?v=sz6nsrRrSJY ಮೇಲ್ಜಾತಿಯವರೇ ವಾಸಿಸುವ…

