UN NETWORKS
ಉಳ್ಳಾಲ : ಕೇರಳದಿಂದ ತಲಪಾಡಿ ಕೊಂಡಾಣ ಮಾರ್ಗವಾಗಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಕಾರನ್ನು ವಶಪಡಿಸಿಕೊಂಡಿರುವ ಉಳ್ಳಾಲ ಪೊಲೀಸರು ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಜೇಶ್ವರ ಪಾತೂರು ಬದಿಮಲೆ ನಿವಾಸಿ ಮಹಮ್ಮದ್ ಮನ್ಸೂರ್(20), ಬಾಳೆಪುಣಿ ಮಸೀದಿ ಬಳಿ ನಿವಾಸಿಗಳಾದ ಉಮ್ಮರ್ ಫಾರೂಕ್ (22), ಸಿಯಾದ್ ( 24), ತಲಪಾಡಿ ಮೇಗಿನ ಪಂಜಾಳ ನಿವಾಸಿ ಮೊಹಮ್ಮದ್ ಅಶ್ರಫ್(28) ಬಂಧಿತರು ಆರೋಪಿಗಳಿಂದ 1.5 ಲಕ್ಷ ರೂ ಮೌಲ್ಯದ 600 ಗ್ರಾಂ ಗಾಂಜಾ ಸಹಿತ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳು ಗಾಂಜಾವನ್ನು ಉಳ್ಳಾಲ ವ್ಯಾಪ್ತಿಯಲ್ಲಿ ಮಾರಾಟಕ್ಕೆ ತರುತ್ತಿದ್ದರೆನ್ನಲಾಗಿದ್ದು, ಖಚಿತ ಮಾಹಿತಿಯಂತೆ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ರಾಮರಾವ್ ಉಳ್ಳಾಲ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣಾ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್., ನೇತೃತ್ವದ ತಂಡದಲ್ಲಿ ಉಪ ನಿರೀಕ್ಷಕರಾದ ವಿನಾಯಕ ತೋರಗಲ್, ಗುರಪ್ಪ ಶಾಂತಿ, ಸಿಬಂದಿಗಳಾದ ಭಾಸ್ಕರ ಕಾಮತ್, ರವೀಂದ್ರ ಎನ್.ಜಿ., ಬಸವರಾಜ್, ರಂಜಿತ್, ಚಂದ್ರ ನಾಯ್ಕ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


