UN NETWORKS
ಉಳ್ಳಾಲ: ಸಮಾಜವನ್ನು ಒಗ್ಗೂಡಿಸಿ ಸಾಮರಸ್ಯ ವನ್ನು ಸಾರುತ್ತಾ ನಿರಂತರ 100 ವರ್ಷಗಳ ಸೇವೆ ಸಲ್ಲಿಸಿದ ಇಗರ್ಜಿಯಲ್ಲಿ ಸೇವೆ ಸಲ್ಲಿಸಿದ ಸರ್ವರ ಕಾರ್ಯ ಶ್ಲಾಘನೀಯ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಶತಮಾನೋತ್ಸವ ಸಮಾರಂಭದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ಕೆಲ ಸಮಾಜಘಾತುಕ ಶಕ್ತಿಗಳು ಸಮಾಜವನ್ನು ಒಡೆಯುವ ಕಾರ್ಯ ಮಾಡುತ್ತಿದೆ. ಇಂತಹ ಶಕ್ತಿಗಳ ಎದುರಾಗಿ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರ ಎಲ್ಲರನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಸುವ ಕಾರ್ಯ ಶ್ಲಾಘನೀಯ . ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ದೊರೆತಿದೆ ಎಂದರು.
ಸಮಾರಂಭದ ಬಳಿಕ ಚಚ್ 9ನಲ್ಲಿ ಆಯೋಜಿಸಿದ್ದ ಸೌಹಾರ್ದ ಔತಣಕೂಟದಲ್ಲಿಯೂ ಮಾಜಿ ಪ್ರಧಾನಿಗಳು ಭಾಗವಹಿಸಿ ಊಟ ಸವಿದರು.
ಈ ಸಂದರ್ಭ ಪೆರ್ಮನ್ನೂರು ಧರ್ಮ ಕೇಂದ್ರದ ಧರ್ಮಗುರು ಫಾ. ಜೆ.ಬಿ ಸಲ್ದಾನ್ಹ, ಜೆಡಿಎಸ್ ಮುಖಂಡರುಗಳಾದ ಬಿ.ಎಂ ಫಾರುಕ್, ಹೈದರ್ ಪರ್ತಿಪ್ಪಾಡಿ, ಗಂಗಾಧರ್ ಉಳ್ಳಾಲ್, ಮುಂತಾದವರು ಉಪಸ್ಥಿತರಿದ್ದರು.


