UN NETWORKS ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಂದ ಮಧ್ಯಾಹ್ನ ತನಕ ನೀರಸ ಪ್ರಕ್ರಿಯೆ ಆದರೂ ಸಂಜೆಯಾಗುತ್ತಲೇ ಐವತ್ತು ಶೇ. ಮತ ಚಲಾವಣೆ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಯು.ಟಿ ಖಾದರ್ ಅವರು ತಾಲೂಕು ಪಂಚಾಯಿತಿ ಸದಸ್ಯ ಜಬ್ಬಾರ್ ಬೋಳಿಯಾರ್ ಸೇರಿದಂತೆ ಕಾರ್ಯಕರ್ತರೊಂದಿಗೆ ಆಗಮಿಸಿ ಬೋಳಿಯಾರಿನ ರಂತಡ್ಕ ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7.30ಕ್ಕೆ ಮತ ಚಲಾಯಿಸಿದರು. ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳು ಹಾಗೂ ಮಂಗಳೂರು ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳು ಜನತೆ ಮತ್ತೆ ಮತ್ತೆ ಶಾಸಕನನ್ನಾಗಿ ಆರಿಸುವ ಪೂರ್ಣ ವಿಶ್ವಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಸರಿಯಾಗಿ 7.00ಗಂಟೆಗೆ ಪಜೀರು ಪಾನೆಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಧುಗಳ ಜೊತೆಗೂಡಿ ಆಗಮಿಸಿ ಮತ ಚಾಲಯಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಡಳಿತ ವೈಫಲ್ಯ, ಕೇಂದ್ರದಲ್ಲಿ ಮೋದಿ ಸರಕಾರದ ಜನಪರ ಯೋಜನೆಗಳು ಮಂಗಳೂರು ಕ್ಷೇತ್ರ ಬಿಜೆಪಿ ಶಾಸಕನನ್ನು ವಿಧಾನ ಸಭೆ…
Author: UllalaVani
UN NETWORKS ಮಂಗಳೂರು: ಬಂಟ್ವಾಳದ ವಾಮದಪದವಿನ ಎಚ್.ಅಬ್ದುಲ್ ರಹಿಮಾನ್ ಹಾಗೂ ಜಮೀಳಾ ರವರ ಪುತ್ರರಾದ, ಪ್ರಸ್ತುತ ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮುಸ್ತಫಾ ಬಸ್ತಿಕೋಡಿ ರವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮುಸ್ತಫಾ ಬಸ್ತಿಕೋಡಿ ರವರು “High Performance Computing” ಫೀಲ್ಡ್ ನ ” Programing Paradigm for Parallel Architectures ” ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ. ‘ King Abdul Azeez University, Jiddah’ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ವಸೀಂ ಅಹ್ಮದ್ ರವರ ಮಾರ್ಗದರ್ಶನದಲ್ಲಿ ಹಾಗೂ NITK ಸುರತ್ಕಲ್ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಚಂದ್ರಶೇಖರ್ ರವರ ಸಹಮಾರ್ಗದರ್ಶನದಲ್ಲಿ ಕಳೆದ ವರುಷ ಇದೇ ವಿಷಯದಲ್ಲಿ ‘University of central Florida, Orlando, USAಯಲ್ಲಿ ನಡೆದ ಅಂತರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಪ್ರಬಂಧ ಮಂಡನೆ ಮಾಡಿದ್ದರು.
UN NETWORKS ಮುಡಿಪು: ಮೋದಿ ಅಲೆ ಆಸ್ತಿಯಲ್ಲ. ಮೋದಿ ಅಲೆಯಿಂದ ರಾಜಕೀಯ ಬದಲಾವಣೆ ಸಾಧ್ಯವಿಲ್ಲ. ಮಂಗಳೂರು ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಮಾಡಿರುವ ಸಾಧನೆಗೆ ಪೂರಕವಾಗಿ ಮತದಾರರು ಸ್ಪಂದಿಸಲಿದ್ದಾರೆ. ಖಾದರ್ ಸೋಲಿಲ್ಲದ ಸರದಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಂದ್ರ ಸಚಿವ ಗುಲಾಂ ನಬಿ ಅಝಾದ್ ಹೇಳಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪಿನಲ್ಲಿ ಬುಧವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನನಗೆ ಅಧಿಕಾರ ಕೊಡಿ. ನಾನು ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ ಅವರಿಗೆ ಅಧಿಕಾರಕ್ಕೆ ಬಂದ ಮೇಲೆ ಈವರೆಗೆ ಕಪ್ಪು ಹಣ ಪತ್ತೆ ಮಾಡಲು ಆಗಲಿಲ್ಲ. ಅವರಿಗೆ ಭರವಸೆ ಈಡೇರಿಸಲು ಆಗಿಲ್ಲ. ಸಿದ್ದರಾಮಯ್ಯ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ. ಕ್ಷೇತ್ರಕ್ಕಾಗಿ ದುಡಿದ ಖಾದರ್‍ನಂತಹ ಶಾಸಕರು, ಸಚಿವರು ನಮಗೆ ಬೇಕು. ಅವರನ್ನು ಆರಿಸಿ ಕಳುಹಿಸುವ ಕೆಲಸ ನಿಮ್ಮ ಮುಂದಿದೆ ಎಂದರು. ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಮಾತನಾಡಿ, ಚುನಾವಣೆ…
UN NETWORKS ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್‍ಗೆ ಮುಸ್ಲಿಂ ಲೀಗ್ ಬೆಂಬಲ ನೀಡಲಿದ್ದು ಈ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿಗಳೇ ಹೆಚ್ಚಾಗಿರುವುದರಿಂದ ಅವರಿಗಾದ ಅನ್ಯಾಯದ ಕುರಿತು ಜೆಡಿಎಸ್ ಧ್ವನಿ ಎತ್ತುವ ವಿಶ್ವಾಸ ಇದೆ. ಅದಕ್ಕಾಗಿ ಮುಸ್ಲಿಂ ಲೀಗ್ ಬೆಂಬಲಿಸಲಿದೆ ಎಂದು ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿದ್ದಿಕ್ ತಲಪಾಡಿ ಹೇಳಿದರು.
UN NETWORKS ಉಳ್ಳಾಲ: ಮಿಝೋರಾಂನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದು ಇತರ ಭಾಗದಲ್ಲಿ ಬದ್ಧ ವೈರಿಯಂತೆ ನಾಟಕ ಮಾಡುತ್ತಿದೆ. ಜನತೆ ಅದನ್ನು ಅರ್ಥ ಮಾಡಿಕೊಂಡು ಪ್ರಾದೇಶಿಕ ಪಕ್ಷದತ್ತ ಒಲವು ಹರಿಸಲಿದ್ದಾರೆ ಎಂದು ಮಂಗಳೂರು ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಕೆ. ಅಶ್ರಫ್ ಹೇಳಿದರು. ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಜೆಡಿಎಸ್ ಚುನಾವಣಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲದಲ್ಲಿ ನಿರಂತರವಾವಗಿ ಗಲಭೆಯ ಮೂಲಕ ಸಾಮರಸ್ಯ ಕದಡುತ್ತಿರುವುದರಿಂದ ನೊಂದವರ ಹಾಗೂ ಜೈಲುಪಾಲಾದವರ ನೋವು ಸಾಕಷ್ಟಿದೆ. ಅವೆಲ್ಲದ್ದಕ್ಕೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ನ್ಯಾಯ ಕೊಡಲಿದ್ದೇವೆ ಎಂದರು.
UN NETWORKS ಉಳ್ಳಾಲ: ಉಳ್ಳಾಲ ಭಾಗದಲ್ಲಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ನಿರಂತರವಾಗಿ ಸ್ಪರ್ಧಿಸುತ್ತಿದ್ದರೂ ಈ ಬಾರಿ ಸಮರ್ಥ ನಾಯಕ, ಶಾಂತಿ ಸಾಮರಸ್ಯವನ್ನು ಬಯಸುವ ಅಭ್ಯರ್ಥಿಗೆ ಮತಯಾಚನೆ ವೇಳೆ ಸಿಕ್ಕಂತಹ ಅಭೂತಪೂರ್ವ ಬೆಂಬಲದಿಂದ ಗೆಲುವು ನಿಶ್ಚಿತ ಎಂದು ಜಾತ್ಯಾತೀತ ಜನತಾದಳದ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಹೇಳಿದರು. ಉಳ್ಳಾಲ ಮಾಸ್ತಿಕಟ್ಟೆಯ ಚುನಾವಣಾ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನತೆ ನಾಯಕತ್ವ ಗುರುತಿಸಿ ಬಹುಮತದಿಂದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಕ್ಷೇತ್ರದ ಶಾಂತಿ, ಸಾಮರಸ್ಯ ಬಯಸುವವರು ಅಶ್ರಫ್ ಅವರನ್ನು ಬೆಂಬಲಿಸಬೇಕಿದೆ. ಅನ್ಯಾಯದ ವಿರುದ್ಧ ನಿರಂತರ ಹೋರಾಟಗಳ ಮೂಲಕ ಸಮರ್ಥ ನಾಯಕ ಅನಿಸಿಕೊಂಡವರಿಗೆ ಈ ಬಾರಿ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದರು. ಮುಖಂಡ ಝಾಕಿರ್ ಹುಸೈನ್ ಉಳ್ಳಾಲ್ ಮಾತನಾಡಿ ಜಾತಿ-ಧರ್ಮಗಳ ನಡುವೆ ಕಲಹ ನಡೆಸಿರುವುದು ಮಂಗಳೂರು ಕ್ಷೇತ್ರದ ಶಾಸಕರ ಸಾಧನೆ. ಮಹಿಳಾ ಮತದಾರರು ಹೆಚ್ಚಾಗಿ ತೊಂದರೆಗೀಡಾಗಿದ್ದು, ಸರಕಾರಿ ಕಾಲೇಜುಗಳಿಲ್ಲದೆ ಇರುವುದರಿಂದ ಹೆಣ್ಮಕ್ಕಳಿಗೆ ತೊಂದರೆ ಅಗಿದೆ. ಜೆಡಿಎಸ್‍ಗೆ ಮತಹಾಕಿದರೆ ಬಿಜೆಪಿ…
UN NETWORKS ತೊಕ್ಕೊಟ್ಟು : ಮತಯಾಚನೆ ಸಂದರ್ಭ ಕ್ಷೇತ್ರದುದ್ದಕ್ಕೂ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಕೇವಲ ಪ್ರಚಾರಕ್ಕೆ ಮಾತ್ರ ಶಾಸಕರು ಸೀಮಿತವಾಗಿದ್ದಾರೆ. ರೋಸಿಹೋಗಿರುವ ಮತದಾರರು ಬದಲಾವಣೆ ಬಯಸಿ ಬಿಜೆಪಿ ಅಭ್ಯರ್ಥಿಯನ್ನು ಜಯಗಳಿಸಲಿದ್ದಾರೆ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು. ತೊಕ್ಕೊಟ್ಟು ಕಾಪಿಕಾಡಿನ ಚುನಾವಣಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತು ನಿಂತಿವೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿ ಕೊಡದೇ ಇರುವುದರಿಂದ ರಸ್ತೆ ಬದಿ ಉದ್ದಕ್ಕೂ ತ್ಯಾಜ್ಯದ ರಾಶಿಯಿದೆ. ಚರಂಡಿ ವ್ಯವಸ್ಥೆಯಿಲ್ಲದೆ ಅಲ್ಲಲ್ಲಿ ಕೊಳಚೆ ನೀರು ಇಕ್ಕಟ್ಟಾಗಿದೆ. ಇಂತಹ ಅವ್ಯವಸ್ಥೆಯಿಂದ ಜನರ ಆರೋಗ್ಯವೂ ಹದಗೆಟ್ಟಿರುವುದನ್ನು ಮತಯಾಚನೆ ಸಂದರ್ಭ ಕಣ್ಣಾರೆ ಕಂಡಿದ್ದೇವೆ. ತಾವು ಜಿಲ್ಲಾ ಪಂಚಾಯಿತಿ ಇದ್ದಂತಹ ಅವಧಿಯಲ್ಲಿ ಸದಸ್ಯರೆಲ್ಲರೂ ನಿರ್ಣಯ ಕೈಗೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ನಿರ್ಣಯ ಕೈಗೊಂಡಿದ್ದರೂ, ಶಾಸಕರು ಅದನ್ನು ತಡೆಹಿಡಿದು ಇಡೀ ಕ್ಷೇತ್ರದ…
UN NETWORKS ಮಂಗಳೂರು: ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ ಮಂಗಳವಾರ ಗಿಡ ನೆಡುವ ಕಾರ್ಯಕ್ರಮ ಜರುಗಿತು. “ಮಾನವೀಯತೆಯಿಂದ ಶಾಂತಿಯ ಕಡೆಗೆ” ಎಂಬ ಧ್ಯೇಯ ವಾಕ್ಯ ಹೊಂದಿರುವ ರೆಡ್‍ಕ್ರಾಸ್ ಸಂಸ್ಥೆ ಜಗತ್ತಿನ ಅತಿ ದೊಡ್ಡ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಜಾಗತಿಕವಾಗಿ ಲಕ್ಷಾಂತರ ಮಂದಿ ಕಾರ್ಯಕರ್ತರು “ರೆಡ್‍ಕ್ರಾಸ್ ಸಂಸ್ಥೆ”ಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲೀ ಮೋಹನ ಚೂಂತಾರು ಹೇಳಿದರು. ಉಪಸಮಾದೇಷ್ಟ ಶ್ರೀ ರಮೇಶ್, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರಾ, ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ, ರಾಜಶ್ರೀ, ಲೀಲಾ ಕುಕ್ಯಾನ್, ಕೇಶವ ಸೇರಿದಂತೆ 80 ಮಂದಿ ಗೃಹರಕ್ಷಕರು ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಪರ ಕೊಲ್ಯದಿಂದ ತೊಕ್ಕೊಟ್ಟುವರೆಗೆ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಅನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂತು. ಕೊಲ್ಯ ಸೌಭಾಗ್ಯಸಭಾ ಭವನದ ಎದುರುಗಡೆಯಿಂದ ತೊಕ್ಕೊಟ್ಟುವಿನ ಉಳ್ಳಾಲ ವೃತ್ತದವರೆಗೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಷೋ ನಡೆಸಿದರು. ಕೀಲು ಕುದುರೆ, ಗೊಂಬೆ ನೃತ್ಯ, ನಾಸಿಕ್ ಬ್ಯಾಂಡ್ ಸಹಿತ ಕಾರ್ಯಕರ್ತರು ಷಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಿಗದಿತ ಕಾಪಿಕಾಡಿನಿಂದ ತೊಕ್ಕೊಟ್ಟು ಕಲ್ಲಾಪುವರೆಗೆ ನಡೆಯಬೇಕಾಗಿದ್ದ ರೋಡ್ ಷೋ ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗುವ ಉದ್ದೇಶದಿಂದ ಕೊಲ್ಯದಿಂದ ಆರಂಭಿಸಿ ತೊಕ್ಕೊಟ್ಟು ಉಳ್ಳಾಲ ವೃತ್ತದಲ್ಲಿ ಕೊನೆಗೊಳಿಸಲಾಯಿತು. ತೊಕ್ಕೊಟ್ಟು ಪಟ್ಟಣದಲ್ಲಿ ಸಾಗಬೇಕಾಗಿದ್ದ ರ್ಯಾಲಿ ತೊಕ್ಕೊಟ್ಟು ಪ್ರವೇಶಿಸಬೇಕಾದ ಉಳ್ಳಾಲ ವೃತ್ತದಲ್ಲೇ ಪೊಲೀಸರು ತಡೆಹಿಡಿದರಿಂದಾಗಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತು. ಛಾಯಚಿತ್ರ ತೆಗೆದ ಷಾ ರಸ್ತೆಯಿಂದ ಛಾಯಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ಮಾಧ್ಯಮ ಮಂದಿಯನ್ನು ತಮ್ಮ ರ್ಯಾಲಿಯ ವಾಹನದೊಳಕ್ಕೆ…
UN NETWORKS ಉಳ್ಳಾಲ: ಅಹಿಂದ ಜನರು ಒಗ್ಗಟ್ಟಾಗುವುದನ್ನು ಆರಂಭದಿಂದಲೂ ವಿರೋಧಿಸುತ್ತಿರುವ ಜೆಡಿಎಸ್‍ನ ದೇವೇಗೌಡ ಮತ್ತು ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಹಕರಿಸುವ ಉದ್ದೇಶದಿಂದ ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ದಕ್ಷಿಣ ಕನ್ನಡ ಅಹಿಂದ ಜನಚಳುವಳಿಯ ಉಪಾಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಆರೋಪಿಸಿದ್ದಾರೆ. ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸಮಾಡಿ, ಬಿಜೆಪಿ ಅಭ್ಯರ್ಥಿ ಪರ ಸಹಕರಿಸುವ ಉದ್ದೇಶದಿಂದ ಜಾತ್ಯಾತೀತ ಜನತಾದಳದ ಮುಖಂಡರು ಬಿ.ಎಂ .ಅಶ್ರಫ್ ಅವರಿಗೆ ನಿರ್ದೇಶನ ನೀಡಿ, ಮಾಜಿ ಮೇಯರ್ ಅಶ್ರಫ್ ಅವರನ್ನು ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಇದು ಬಿಜೆಪಿ ಬೆಂಬಲವಾಗಿ ಸ್ಪರ್ಧಿಸುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಕೂಡಾ ಕೋಮುಶಕ್ತಿಗಳ ಮತ್ತು ಅಸಮಾನತೆ ಹೇರುವ ಶಕ್ತಿಗಳ ಕೈಗೊಂಬೆಯಾಗಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿಸಲ್ಪಟ್ಟ ಜನ ಹಾಗೂ ದಲಿತರು ಎಚ್ಚೆತ್ತು ಕೋಮುಶಕ್ತಿಗಳನ್ನು ಹಾಗೂ ರಾಜಕೀಯ ವ್ಯಾಪಾರಿಗಳಾದ ಬಿಜೆಪಿ ಮತ್ತು ಜೆಡಿಎಸ್ ಅನ್ನು…

