UN NETWORKS
ಉಳ್ಳಾಲ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳ ಧರ್ಮ ರಾಜಕೀಯ ಜಾಗೃತವಾಗುತ್ತದೆ. ಅದರಲ್ಲೂ ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಅವರಂತೂ ತನ್ನ ಕ್ಷೇತ್ರವ್ಯಾಪ್ತಿಯಲ್ಲಿ ಭೂತಕೋಲ, ನೇಮ ಸೇರಿದಂತೆ ನಿತ್ಯ ಒಂದಲ್ಲ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಭೇಟಿ ಕೊಡುತ್ತಿದ್ದಾರೆ. ಆದರೆ ಇದೀಗ ಸಚಿವರ ಈ ದೈವಾರಾಧನೆಯ ಕಾರ್ಯ ಸಾಮಾಜಿಕ ತಾಣಗಳಲ್ಲಿ ವಿವಾದ ಎಬ್ಬಿಸಿದ್ದು, ಮುಸ್ಲಿಂ ಮೂಲಭೂತವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವರು ತನ್ನ ಸ್ವಕ್ಷೇತ್ರವಾದ ಉಳ್ಳಾಲದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ ದೈವದ ಕೈಯಿಂದ ಪ್ರಸಾದವನ್ನು ಸ್ವೀಕಸಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಖಾದರ್ ಅವರು ರಾಜಕೀಯಕ್ಕಾಗಿ ಇಸ್ಲಾಂ ಧರ್ಮದ ಕಟ್ಟುಪಾಡುಗಳನ್ನು ಗಾಳಿಗೆ ತೂರಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೈವದ ಕೈಯಿಂದ ಪ್ರಸಾದ!
ಖಾದರ್ ವಿಡಿಯೋ ವೈರಲ್
ಕಳೆದ ಶನಿವಾರ ತಮ್ಮ ಸ್ವಕ್ಷೇತ್ರವಾದ ಉಳ್ಳಾಲದಲ್ಲಿ ನಡೆದ ಕೊರಗಜ್ಜನ ಕೋಲದಲ್ಲಿ ಯು.ಟಿ ಖಾದರ್ ಭಾಗವಹಿಸಿದ್ದರು. ಅದೇ ಸಂದಭ9ದಲ್ಲಿ ಕೊರಗಜ್ಜ ದೈವದ ಕೈಯಿಂದ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಈ ವಿಡಿಯೋ ಹಾಗೂ ಪೋಟೋವನ್ನು ತೆಗೆಯಲಾಗಿದ್ದು, ಸದ್ಯ ಈ ವಿಡಿಯೋ ಹಾಗೂ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಈ ಬಗ್ಗೆ ನಾನಾ ಬಗೆಯ ಪತಿಕ್ರಿಯೆಗಳು ಹರಿದಾಡುತ್ತಿದೆ.
ಒಂದೇ ದಿನ ಮೂರು ಕೋಲದಲ್ಲಿ ಭಾಗಿ: ಯು.ಟಿ ಖಾದರ್ ಸಾಮಾನ್ಯವಾಗಿ ಎಲ್ಲಾ ಧರ್ಮದ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದೈವದ ಪ್ರಸಾದ ಸ್ವೀಕರಿಸಿದ ದಿನವೇ ಸಚಿವರು ಇಂತಹದ್ದೇ ಮೂರು ಕೋಲಗಳಲ್ಲಿ ಭಾಗವಹಿಸಿದ್ದಾರೆ ಎಂದು ಅವರ ಆಪ್ತ ವರ್ಗ ತಿಳಿಸಿದೆ. ಖಾದರ್ ಅನುಯಾಯಿಗಳು ಹೇಳುವ ಪ್ರಕಾರ ಇದೇನು ಹೊಸತಲ್ಲ ಇದಕ್ಕಿಂತ ಮೊದಲು ಇಂತಹ ಅನೇಕ ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ಸಚಿವರು ಭಾಗವಹಿಸಿದ್ದಾರೆ. ಆದರೆ ಮುಸ್ಮಿಂ ಮೂಲಭೂತವಾದಿಗಳ ಪ್ರಕಾರ ಕಾಯ9ಕ್ರಮಗಳಲ್ಲಿ ಭಾಗವಹಿಸುವುದು ತಪ್ಪಲ್ಲ. ಆದರೆ ಪ್ರಸಾದವನ್ನು ಸ್ವೀಕರಿಸುವುದು ತಪ್ಪು ಎಂಬ ಬಗ್ಗೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಖಾದರ್ ವಾರಂತ್ಯದಲ್ಕಿ ಪ್ರತೀ ಬಾರಿ ತನ್ನ ಕ್ಷೇತ್ರದಲ್ಲಿ ಇಂಂಥವ ದೈವಾರಾಧನೆ ಕಾರ್ಯದಲ್ಲಿ ಪಾಲ್ಗೊಳ್ತಾ ಇದ್ದು, ಇದೀಗ ದೈವದಿಂದ ಪ್ರಸಾದ ಪಡೆದಿರೋದು ಕೆಲವರ ಆಕ್ಷೇಪಕ್ಕೆ ಕಾರಣವಾಗಿದೆ.
ಎಲ್ಲವೂ ಮತಕ್ಕಾಗಿ: ಸಾಮಾಜಿಕ ತಾಣಗಳಲ್ಲಿ ಕೆಲವರು ಖಾದರ್ ವಿರುದ್ಧ ಗರಂ ಆಗಿದ್ದು, ಓಟಿಗಾಗಿ ಬೇರೆ ಧರ್ಮದ ಆಚರಣೆ ಮಾಡಿದ್ದಾರೆ ಅಂತ ತೀರಾ ಕೆಟ್ಟದಾಗಿ ಸಾಮಾಜಿಕ ತಾಣಗಳಲ್ಲಿ ನಿಂದಿಸಿದ್ದಾರೆ. ವೈಯಕ್ತಿಕವಾಗಿ ಧರ್ಮನಿಷ್ಠ ಕಡ್ಡಾಯ, ಆದರೆ ಖಾದರ್ ಅದನ್ನು ಉಲ್ಲಂಘಿಸಿದ್ದಾರೆ ಅಂತ ಹರಿಹಾಯ್ದಿದ್ದಾರೆ.
ಖಾದರ್ ದೈವ ಪ್ರೀತಿ ಇದೇ ಮೊದಲಲ್ಲ!
ಆಹಾರ ಸಚಿವ ಯು.ಟಿ.ಖಾದರ್ ಅವರ ದೈವ-ದೇವರ ಮೇಲಿನ ಪ್ರೀತಿ ಇದೇ ಮೊದಲೇನೂ ಅಲ್ಲ. ಖಾದರ್ ಶಾಸಕರಾದಾಗಿನಿಂದಲೂ ತನ್ನ ಕ್ಷೇತ್ರದ ಎಲ್ಲಾ ದೈವಸ್ಥಾನಗಳಿಗೆ ಭೇಟಿ ಕೊಟ್ಟಿದ್ದಾರೆ. ಮುಕ್ತವಾಗಿ ಹಿಂದೂಗಳ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಆದರೆ ಇದೀಗ ದೈವದ ಕೈಯಿಂದ ಪ್ರಸಾದ ಸ್ವೀಕರಿಸಿ ಅಭಯ ಪಡೆದಿರುವುದು ಮುಸ್ಲಿಂ ಮೂಲಭೂತವಾದಿಗಳ ಕಣ್ಣು ಕೆಂಪಗಾಗಿಸಿದೆ. ಹಾಗಂತ ಖಾದರ್ ಅವರ ಈ ಹಿಂದಿನ ಇತಿಹಾಸ ಕೆದಕಿದರೆ ಇವರ ದೈವ-ದೇವರ ಮೇಲಿನ ಪ್ರೀತಿ ಅರಿವಿಗೆ ಬರುತ್ತದೆ. ಆದರೆ ಚುನಾವಣೆಯ ಹೊಸ್ತಿಲಲ್ಲಿ ಈ ವೀಡಿಯೋ ವೈರಲ್ ಆಗಿರುವ ಕಾರಣದಿಂದ ವಿವಾದ ಸೃಷ್ಟಿಯಾಗಿದೆ ಎನ್ನುವುದು ಖಾದರ್ ಅಭಿಮಾನಿಗಳ ಮಾತು.


