Author: UllalaVani

Kannada News From Coastal Karnataka

UN NETWORKS ಉಳ್ಳಾಲ : ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನಿಗದಿಯಾಗಿದ್ದರಿಂದ ನೇರವಾಗಿ ಸೋಮೇಶ್ವರ ಉಚ್ಚಿಲಕ್ಕೆ ಆಗಮಿಸಿದರು. ಕಡಲ್ಕೊರೆತ ತಡೆಗೆ ತಾತ್ಕಾಲಿಕ ಪರಿಹಾರವಾಗಿ ತಟದಲ್ಲಿ ಅಳವಡಿಸಲಾಗಿದ್ದ ಕಲ್ಲಿನ ತಡೆಗೋಡೆ ಬಳಿ ನಿಂತು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದರು. ಕಲ್ಲಿನ ಮೇಲೇರಲು ಅವರಿಗೆ ಆಗದ ಕಾರಣ ಸ್ಥಳೀಯರು ಏಣಿಯನ್ನು ತಂದು ಕಲ್ಲಿಗೆ ತಾಗಿಸಿ ಇಟ್ಟು ಮೇಲೇರಿ ಸಮುದ್ರ ವೀಕ್ಷಿಸುವಂತೆ ತಿಳಿಸಿದರೂ ಸಚಿವರು ನಿರಾಕರಿಸಿದರು. ಕೆಲವೇ ನಿಮಿಷ ಅಲ್ಲಿದ್ದ ಸಚಿವರು ನಂತ ನೇರವಾಗಿ ಮಂಗಳೂರಿಗೆ ತೆರಳಿದರು. ಈ ಸಂದರ್ಭ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಅಧಿಕಾರಿಗಳು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಶ್ರೀನಾರಾಯಣ ಗುರು ಮಹಿಳಾ ಸಂಘ ಇದರ ನೂತನ ಅಧ್ಯಕ್ಷರಾಗಿ ಮೀನಾಕ್ಷಿ ಐತಪ್ಪ ಆಯ್ಕೆಯಾಗಿದ್ದಾರೆ. ಕೊಲ್ಯ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ವಿಶಲಾಕ್ಷಿ ಜೆ., ಉಪಾಧ್ಯಕ್ಷರಾಗಿ ಚಂದ್ರಾವತಿ, ಕಾರ್ಯದರ್ಶಿಯಾಗಿ ರೇವತಿ ವಿಶ್ವನಾಥ, ಉಪ ಕಾರ್ಯದರ್ಶಿಯಾಗಿ ಶಶಿಕಲ ಅಡ್ಕ, ಕೋಶಾಧಿಕಾರಿಯಾಗಿ ಕುಸುಮ ಭರತ್, ಸಂಗಟನಾ ಕಾರ್ಯದರ್ಶಿಯಾಗಿ ಶಶಿಕಲ ಕೊಲ್ಯ, ಗೀತಾ ಪುರುಷೋತ್ತಮ, ಕ್ರೀಡಾ ಕಾರ್ಯದರ್ಶಿಯಾಗಿ ಲವಿತ ಯತೀಶ್, ಚಂಚಲಾಕ್ಷಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪುಷ್ಪ, ಹೇಮಾವತಿ ಮಾಧವ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೇಮಲತ ಎಸ್. ಕರ್ಕೇರಾ, ಉಷಾಲತ, ದೇವಕಿ ರಾಘವ, ಪುಷ್ಪ ಶೇಖರ್, ನವೀನ ಕೆ., ಆಶಾ ಆರ್. ಕೋಟೆಕಾರ್, ವಿಜಯ ರಾಮ್‍ದಾಸ್, ಗುಲಾಬಿ, ಸೌಮ್ಯ ಕುಸುಮಾಕರ್, ವೇದಾವತಿ ಬೀರಿ, ಮಂಗಳ ರಾಜೇಶ್, ಸುಜಯ ಹೇಮಚಂದ್ರ, ಕಸ್ತೂರಿ, ನಾಗವೇಣಿ ಶ್ರೀಧರ್, ಉಷಾ ಭಾಸ್ಕರ್, ಪ್ರಿಯಾಂಕ ವಿನೋದ್, ಮೋಹಿನಿ ಎಸ್. ಸುವರ್ಣ, ಮಾಲತಿ ಎಚ್., ಜಯಂತಿ, ಕುಮಾರಿ ಪ್ರಕಾಶ್, ಬೇಬಿ,…

Read More

UN NETWORKS ಉಳ್ಳಾಲ: ನಕಲಿ ಹೆಸರಿನಲ್ಲಿ ವಂಚಿಸಿ ಯುವತಿಯೋರ್ವಳನ್ನು ವರಿಸಿದ್ದ ಯುವಕನಿಗೆ ಯುವತಿ ಮನೆಮಂದಿ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ. ಸುಳ್ಯ ಮೂಲದ ಸೈಯ್ಯದ್ ಹಾರೂನ್ ಯುವತಿಗೆ ವಂಚಿಸಿದ ಭೂಪ. ಕುಂಪಲ ಚಿತ್ರಾಂಜಲಿನಗರದ ನಿವಾಸಿ ಹೇಮಲತಾ (35) ವಂಚನೆಗೆ ಒಳಗಾದವಳು. ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಕೆಲಸದಲ್ಲಿದ್ದ ಹೇಮಲತಾಳಿಗೆ ಅಲ್ಲೇ ಕೆಲಸ ಮಾಡಿಕೊಂಡಿದ್ದ ಸೈಯ್ಯದ್ ಹಾರೂನ್ ಪರಿಚಯವಾಗಿತ್ತು. ಪರಿಚಯದ ಸಮಯ ತನ್ನನ್ನು ಅರುಣ್ ಎಂದು ಹೆಸರು ಬದಲಾಯಿಸಿ ಹೇಳಿಕೊಂಡಿದ್ದವ, ಹೇಮಲತಾ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದನು. ಮೂರು ವರ್ಷಗಳಿಂದ ಪರಿಚಯದಲ್ಲಿದ್ದ ಇವರಿಗೆ ವರ್ಷದ ಹಿಂದೆ ಮಂಗಳೂರಿನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದರು. ಕೆಲ ತಿಂಗಳ ಬಳಿಕ ಹಾರೂನ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪತ್ನಿಗೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು. ತನ್ನದೇ ಧರ್ಮದ ಯುವತಿಯನ್ನು ವಿವಾಹವಾಗಿದ್ದವ ಲಕ್ಷಾಂತರ ಬೆಲೆಬಾಳುವ ಚಿನ್ನವನ್ನು ಪಡೆದು ವಂಚಿಸಿದ್ದ ಕುರಿತು ದೂರು ದಾಖಲಾಗಿತ್ತು. ಈ ವೇಳೆ ಹೇಮಲತಾ ಅವರಿಗೆ ತನ್ನ ಪತಿ ಅರುಣ್…

Read More

UN NETWORKS ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಕಟ್ಟಡದ ಶೌಚಾಲಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಸುರತ್ಕಲ್ ಹೊನ್ನಕಟ್ಟೆ ನಿವಾಸಿ ಕೃಷ್ಣಸ್ವಾಮಿ ಬಿ.ಯಸ್ (42) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ಬೆಳಿಗ್ಗೆ 9.30ರ ವೇಳೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಹಾಜರಾತಿ ದಾಖಲಿಸಿ, ತಮ್ಮ ಕಚೇರಿಯೊಳಗೆ ಡೆತ್ ನೋಟ್ ಬರೆದಿಟ್ಟು, ಶೌಚಾಲಯದೊಳಕ್ಕೆ ತೆರಳಿ ನೈಲಾನ್ ಹಗ್ಗವನ್ನು ಕಿಟಕಿಗೆ ಕಟ್ಟಿ ಆತ್ಮಹತ್ಯೆ ನಡೆಸಿದ್ದಾರೆ. ಇದೇ ವೇಳೆ ಪಂಚಾಯಿತಿನೊಳಗೆ ಇಬ್ಬರು ಸಿಬ್ಬಂದಿಗಳಿದ್ದು, ಅರ್ಧ ಗಂಟೆಯಾದರೂ ಶೌಚಾಲಯದಿಂದ ವಾಪಸ್ಸಾಗದ ಹಿನ್ನೆಲೆಯಲ್ಲಿ ಕಿಟಕಿಯ ಮೂಲಕ ನೋಡಿದಾಗ ಕಿಟಕಿಯಲ್ಲಿ ಹಗ್ಗ ಕಾಣಿಸಿಕೊಂಡಿತ್ತು. ಇಬ್ಬರು ಸಿಬ್ಬಂದಿ ಕೂಗಿ ಕರೆದರೂ ಬಾಗಿಲು ತೆರೆಯದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ಬಳಿಕ ಸ್ಥಳೀಯರನ್ನು ಕರೆದು ಬಾಗಿಲು ಒಡೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 2017ರ ಆಗಸ್ಟ್ ತಿಂಗಳಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿಗೆ ಪಿಡಿಓ ಆಗಿ ನೇಮಕಗೊಂಡಿದ್ದರು. ಆದರೆ ವಿಪರೀತ ಕುಡಿತವನ್ನು ಅಭ್ಯಾಸ ಮಾಡಿಕೊಂಡಿದ್ದ ಇವರು ಕರ್ತವ್ಯಕ್ಕೆ ಹಾಜರಾಗಲು…

Read More

UN NETWORKS ಉಳ್ಳಾಲ: ಸಂಚರಿಸುತ್ತಿದ್ದ ಬಸ್ಸೊಂದು ಹಠಾತ್ ಹಾಕಿದ್ದರಿಂದ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಬಸ್‌ಗೆ ಢಿಕ್ಕಿ ಹೊಡೆದ ಘಟನೆ ಉಳ್ಳಾಲ ಸೇತುವೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಇದರಿಂದ ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿವೆ. ವೇಗವಾಗಿ ಸಂಚರಿಸುತ್ತಿದ್ದ ಬಸ್ ಸೇತುವೆಯಲ್ಲಿ ಹಠಾತ್ ಬ್ರೇಕ್ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವೇಳೆ ಬಸ್ಸಿನ ಹಿಂದೆಯೇ ಇದ್ದ ದ್ವಿಚಕ್ರ ವಾಹನದ ಚಾಲಕನಿಗೆ ನಿಯಂತ್ರಣ ತಪ್ಪಿದ್ದರಿಂದ ದ್ವಿಚಕ್ರ ವಾಹನವು ಬಸ್ಸಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಬಸ್ಸಿನಡಿಗೆ ನುಗ್ಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿದ್ದು, ಆವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳು ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

Read More

UN NETWORKS ಮಂಗಳೂರು: ನಂತೂರು ಸರ್ಕಲ್ ಬಳಿ ಮಂಗಳವಾರ ಸಂಜೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬೆಳ್ತಂಗಡಿ ನಿವಾಸಿಯಾಗಿರುವ ಸಮರೀನ್(26) ಎಂಬವರೇ ಮೃತಪಟ್ಟ ದುರ್ದೈವಿ. ಈಚರ್ ಟೆಂಪೋವೊಂದು ಸ್ಕೂಟರ್ ಗೆ ಹಿಂದಿನಿಂದ ಬಂದು ಗುದ್ದಿದ ಪರಿಣಾಮ ಸಮರೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಸಮರೀನ್ ಅವರ ಪತಿ ಮೊಹಮ್ಮದ್ ಸಮೀರ್(30) ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

Read More

UN NETWORKS ಮಂಗಳೂರು: ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಮುಂದಿನ ಎರಡು ಕಾಲ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೂನ್ 14ರ ತನಕ ಮಂಗಳೂರು ಮತ್ತು ಮೂಡಿಗೆರೆ ಎರಡೂ ಕಡೆಗಳಿಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ತಿಳಿಸಿದರು. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದ ಪರಿಣಾಮ ವಾಹನ ಸವಾರರು ರಸ್ತೆ ಮಧ್ಯೆ ಸಿಲುಕಿ ಪರದಾಡುವಂತಾಯಿತು. ಮಂಗಳವಾರ ಸಂಜೆ ವೇಳೆಗೆ ರಸ್ತೆ ಸಂಚಾರಕ್ಕೆ ತೆರವುಗೊಳಿಸಲಾಯಿತು. ಪೊಲೀಸರು, ಅಧಿಕಾರಿಗಳು, ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಹಾಗೂ ಇತರರು ಸಿಲುಕಿದ್ದ ಪ್ರಯಾಣಿಕರಿಗೆ ಆಹಾರದ ವ್ಯವಸ್ಥೆ ಮಾಡಿದರು.

Read More

UN NETWORKS ಉಳ್ಳಾಲ: ಉಳ್ಳಾಲವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ನಿಟ್ಟಿನಲ್ಲಿ ಉಳ್ಳಾಲ ನಗರಸಭೆ ಯೋಜನೆ ರೂಪಿದ್ದು, ಈ ಯೋಜನೆಯನ್ನು ಸಾಕಾರಗೊಳಿಸಲು ನಗರಸಭಾ ವ್ಯಾಪ್ತಿಯ ಜನರ ಸಹಕಾರ ಅತೀ ಅಗತ್ಯ ಎಂದು ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಅಭಿಪ್ರಾಯಪಟ್ಟರು. ಉಳ್ಳಾಲ ನಗರಸಭಾ ವತಿಯಿಂದ ಪರಿಸರ ಸಪ್ತಾಹದ ಅಂಗವಾಗಿ ಮಂಗಳವಾರ ಪರಿಸರ ಸಂರಕ್ಷಣೆಯ ಬಗ್ಗೆ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ನಡೆದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲವನ್ನು ಮಾದರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿದೆ. ಕಸ ವಿಲೇವಾರಿ ಸೇರಿದಂತೆ ನಗರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಸಿಲು ಬೀದಿ ನಾಟಕದಂತಹ ಮಾದ್ಯಮವನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು ಮಾತನಾಡಿ ನಗರಸಭೆಯನ್ನು ಸ್ವಚ್ಛ ನಗರಸಭೆ ಮಾಡುವಲ್ಲಿ ಕೌನ್ಸಿಲರ್‍ಗಳೊಂದಿಗೆ ಜನರ ಸಹಭಾಗಿತ್ವ ಅಗತ್ಯವಿದೆ ಎಂದರು. ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಪ್ರೌಢಶಾಲಾ ವಿದ್ಯಾರ್ಥಿಗಳು ತೊಕ್ಕೊಟ್ಟು…

Read More

UN NETWORKS ಉಳ್ಳಾಲ: ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಪ್ರದಾನಿ ಆಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಶೀಘ್ರ ಸುದಾರಣೆಯಾಗಲಿ ಎಂದು ಕುಂಪಲ ಬಾಲಕೃಷ್ಣ ಮಂದಿರದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಶೇಷ ಪೂಜೆಯ ನೇತೃತ್ವ ವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಅಜಾತಶತ್ರು,ಉತ್ತಮ ಆಡಳಿತ ನೀಡಿದ ,ಪ್ರಾಮಾಣಿಕತೆಯ ಇನ್ನೊಂದು ಹೆಸರು ಅಟಲ್ ಬಿಹಾರಿ ವಾಜಪೇಯಿ. ಅವರು ಪ್ರಧಾನಿಯಾಗಿದ್ದಾಗ ಮಾಡಿದ ಅಭಿವೃದ್ದಿ ಕಾರ್ಯಕ್ರಮಗಳು ಜನಮಾನಸದಲ್ಲಿ ಇಂದಿಗೂ ಸ್ಮರಣೀಯವಾಗಿದೆ, ಅರೋಗ್ಯ ಏರುಪೇರಾಗಿದೆ ಎಂಬ ವಿಷಯ ತಿಳಿದು ಅವರ ಅಭಿಮಾನಿಯಾದ ನಮಗೆ ಬಹಳಷ್ಟು ಆತಂಕವಾಯಿತು. ಆದ್ದರಿಂದ ಅವರ ಆರೋಗ್ಯ ಸುಧಾರಣೆಗಾಗಿ ಕುಂಪಲ ಬಾಲಕೃಷ್ಣ ಮಂದಿರದಲ್ಲಿ ವಿಶೇಷ ಪೂಜೆ ನಡೆಸಿದ್ದೇವೆ ಎಂದು ಹೇಳಿದರು. ಸೋಮೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ, ಮಾಜಿ ಸದಸ್ಯರಾದ ಶಿವಾನಂದ, ಅಶೋಕ್ ಕುಂಪಲ, ಗ್ರಾಮ ಪಂಚಾತ್ ಸದಸ್ಯೆ ಕುಮುದ ಅಡಪ, ಬಾಲಕೃಷ್ಣ ಮಂದಿರದ ಉತ್ಸವ ಸಮಿತಿಯ ಗೌರವ ಅಧ್ಯಕ್ಷ ಸೋಮಶೇಕರ್. ಕೆ, ಉಳ್ಳಾಲ ಪುರಸಭೆ…

Read More

UN NETWORKS ಕೋಟೆಕಾರು: ಶಿಕ್ಷಣಕ್ಕೆ ಸರಕಾರ ಸೇರಿದಂತೆ ಸಂಘ ಸಂಸ್ಥೆಗಳು ಉತ್ತೇಜನ ನೀಡುತ್ತಿದ್ದು, ಶಿಕ್ಷಣಕ್ಕೆ ಸಿಗುವ ಸವಲತ್ತನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಹೋಗುವುದರೊಂದಿಗೆ ವಿದ್ಯೆ ಕಲಿಸಿದ ಶಾಲೆ ಮತ್ತು ಸಹಕಾರ ನೀಡಿದ ಸಂಸ್ಥೆಗಳನ್ನು ಮರೆಯಬಾರದು ಎಂದು ಕೋಟೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ ಕನೀರುತೋಟ ಅಭಿಪ್ರಾಯಪಟ್ಟರು. ಸ್ಪೂರ್ತಿ ಸೇವಾ ಬಳಗ ಮಾಡೂರು ಹಾಗೂ ಕೊರಗಜ್ಜ ಸೇವಾ ಸಮಿತಿ ಮಾಡೂರು ಇದರ ಜಂಟಿ ಆಶ್ರಯದಲ್ಲಿ ದ.ಕ.ಜಿ.ಪ. ಹಿ.ಪ್ರಾ ಶಾಲೆ ಮಾಡೂರು ಇಲ್ಲಿನ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಡೂರು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ನಾಯ್ಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಕೌನ್ಸಿಲರ್‍ಗಳಾದ ಜಯಶ್ರೀ, ಪ್ರಫುಲ್ಲ ದಾಸ್ ಕನೀರುತೋಟ, ಸ್ಪೂರ್ತಿ ಸೇವಾ ಬಳಗದ ಅಧ್ಯಕ್ಷ ರಮೇಶ್ ಕೊಂಡಾಣ, ಕೊರಗಜ್ಜ ಸೇವಾ ಟ್ರಸ್ಟ್ ಅಧ್ಯಕ್ಷ ಮಾಧವ ಶೆಟ್ಟಿ ಕುಸಾಲ್‍ನಗರ, ರೋಹಿತ್ ಬಿ. ಕುಲಾಲ್ ಮಾಡೂರು, ಚಿದಾನಂದ ಮಡ್ಯಾರು, ಸಂಪತ್ ಭಂಡಾರ…

Read More