Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಉಳ್ಳಾಲದಲ್ಲಿ ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅನಪೇಕ್ಷಿತ ಗುಂಪು ಘರ್ಷನೆಯ ಹೆಸರಿನಲ್ಲಿ ಹಿಂದೂ,ಮುಸ್ಲಿಂ ಎರಡೂ ಸಮುದಾಯದ 60ಕ್ಕೂ ಮಿಕ್ಕಿದ ಅಮಾಯಕರು ಆರೋಪಿಗಳಾಗಿ ಕೋರ್ಟ್ ಗಳಲ್ಲಿ ಅಳೆಯುತ್ತಿದ್ದು, ಉಧ್ಯೋಗ ನಷ್ಟ ಹಾಗೂ ಸಂಪಾದನೆಯು ಇಲ್ಲದೇ ಅತೀವ ಕಷ್ಟಪಡುತ್ತಿದ್ದಾರೆ. ಸರಕಾರ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಮಾಯಕರ ಮೇಲಿನ ಈ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕಂದು ಜಾತ್ಯತೀತ ಜನತಾದಳದ ಮುಖಂಡ ನಝೀರ್ ಉಳ್ಳಾಲ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಮತ್ತು ಉಪ ಮುಖ್ಯಮಂತ್ರಿ,ಹಾಗೂ ಗೃಹ ಸಚಿವರಾದ ಪರಮೇಶ್ವರ್ ರವರನ್ನು ಆಗ್ರಹಿಸಿದ್ದಾರೆ. ಉಳ್ಳಾಲದಲ್ಲಿ ಸದ್ಬಾವಣೆ,ಮತ್ತು ಶಾಶ್ವತ ಸೌಹಾರ್ಧತೆಯನ್ನು ಬೆಳೆಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಈ ಕುರಿತು ಪತ್ರ ಬರೆದು ಒತ್ತಾಯಿಸಿರುವ ನಝೀರ್ ಉಳ್ಳಾಲ್, ಮಂಗಳೂರು ಕ್ಷೇತ್ರದ ಶಾಸಕರೂ, ಸಚಿವರೂ,ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ರವರು ಅಮಾಯಕರ ಮೇಲಿನ ಈ ಪ್ರಕರಣವನ್ನ ಹಿಂತೆಗೆಯಲು ಮುತುವರ್ಜಿವಹಿಸಬೇಕಂದು,ವಿನಂತಿಮಾಡಿಕೊಂಡಿದ್ದಾರೆ. ಉಳ್ಳಾಲ ಜಾತ್ಯಾತೀತ ಜನತಾದಳದ ನಿಯೋಗವು ಸಧ್ಯದಲ್ಲೇ ಮುಖ್ಯಮಂತ್ರಿಮತ್ತು ಉಪಮುಖ್ಯಮಂತ್ರಿಯವರನ್ನು ಬೇಟಿಯಾಗಿ ಮೊಕದ್ದಮೆಗಳನ್ನು ಹಿಂತೆಗೆಯಲು,ಒತ್ತಾಯಿಸಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ಹರೇಕಳ: ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸೌಜನ್ಯ ಸ್ಕೌಟ್‍ದಳ ಮತ್ತು ಗೈಡ್ ಕಂಪನಿಯ ಉದ್ಘಾಟನಾ ಸಮಾರಂಭ ಮತ್ತು ವಿವಿಧ ಶಾಲಾ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪುನಃಶ್ಚೇತನ ಶಿಬಿರವು ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಹಾಯಕ ಆಯುಕ್ತರಾದ ವಿನೋದ್ ಚೇವಾರು ಇವರು ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ದೇಶಪ್ರೇಮ, ಶಿಸ್ತು, ಸಂಸ್ಕಾರ, ಧೈರ್ಯ, ಮಾನವೀಯತೆ ಮುಂತಾದ ಜೀವನ ಮೌಲ್ಯಗಳನ್ನು ಸ್ಕೌಟಿಂಗ್ ಕಲಿಸುತ್ತದೆ. ಆಧುನೀಕತೆಯ ಬದುಕಿನಲ್ಲಿ ವಿದ್ಯಾರ್ಥಿಗಳು ತಮ್ಮ ಊಟ ಮಾಡುವ ತಟ್ಟೆಯನ್ನು ಪೋಷಕರು ತೊಳೆದು ಕೊಡುವ ಕಾಲಘಟ್ಟದಲ್ಲಿ ಸ್ಕೌಟಿಂಗ್ ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸರಿಯಾದ ಜ್ಞಾನವನ್ನು ಕಲಿಸುತ್ತದೆ ಎಂದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಕೆ. ರವೀಂದ್ರ ರೈ ವಹಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿದ್ಯಾ ಸಂಸ್ಥೆಯ ಒಬ್ಬ ಸ್ಕೌಟ್ ರಾಷ್ಟ್ರಪತಿ ಪುರಸ್ಕಾರವನ್ನೂ ಆರು ಮಂದಿ ಗೈಡ್ಸ್ ರಾಜ್ಯ ಪುರಸ್ಕಾರ ಪದವಿಯನ್ನುಗಳಿಸುವುದರೊಂದಿಗೆ, ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು, ಮಾತ್ರವಲ್ಲದೆ ವ್ಯಕ್ತಿತ್ವಕ್ಕೆ ಪೂರಕವಾದ ಹಲವಾರು…

Read More

UN NETWORKS ಮಂಗಳೂರು: ಬಿಜೆಪಿ ಗೆದ್ದರೆ ದೇಶ ಗೆದ್ದಂತೆ ಅನ್ನುವ ಸತ್ಯಾಂಶವನ್ನು ಮನದಲ್ಲಿಟ್ಟುಕೊಂಡು ದೇವರಂತಹ ಕಾರ್ಯಕರ್ತರು ಉತ್ತರ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ದುಡಿದ ಕಾರಣ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧ್ಯವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ವೈ ಭರತ್ ಶೆಟ್ಟಿ ಹೇಳಿದರು. ಅವರು ಕಾವೂರಿನ ಸುವರ್ಣ ಸಹಕಾರಿ ಸದನದಲ್ಲಿ ಹಿಂದು ಯುವಸೇನೆ ಕಾವೂರು , ಆಕಾಶಭವನ, ಶಾಂತಿನಗರ, ಪಂಜಿಮೊಗರು ಘಟಕಗಳ ಆಶ್ರಯದಲ್ಲಿ ಭಾನುವಾರ ಜರಗಿದ ನೂತನ ಮೂವರು ಶಾಸಕರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಚುನಾವಣೆಯನ್ನು ಎದುರಿಸಿದ ನಂತರವೇ ತಿಳಿದುಬಂತು ಚುನಾವಣೆ ರಾಜಕೀಯವೇ ಬೇರೆ, ಸಂಘಟನೆ ರಾಜಕೀಯವೇ ಬೇರೆ ಎಂದು.ನಾಮಪತ್ರ ಸಲ್ಲಿಸುವ ಕೊನೆಯ ಎರಡು ದಿನಗಳೊಳಗೆ ಅಭ್ಯರ್ಥಿ ಘೋಷಣೆಯಾದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಎಲ್ಲರನ್ನು ನಾಮಪತ್ರ ಸಲ್ಲಿಕೆಗೆ ಕರೆಯಲು ಅಸಾಧ್ಯವಾಗಿತ್ತು. ಇನ್ನೊಂದೆಡೆ ಚುನಾವಣಾ ಕಣದಲ್ಲೇ ಇರುವ ಸಂದರ್ಭ ಇಲ್ಲಸಲ್ಲದ ವಿಚಾರಗಳು ಮಾಧ್ಯಮದಲ್ಲಿ ಪ್ರಸಾರಗೊಂಡು, ಮನೆಯಲ್ಲೂ ಚಿಂತೆಯ ವಾತಾವರಣ ನಿರ್ಮಿಸಿತ್ತು. ಇಂತಹ ಧೃತಿಗೆಡುವ ಸಮಯದಲ್ಲಿ ಹಿಂದು ಯುವ ಸೇನೆ ಕಾರ್ಯಕರ್ತರು…

Read More

UN NETWORKS ಉಳ್ಳಾಲ: ನೂತನ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ.ಅಮೃತ ಸೋಮೇಶ್ವರ ಅವರ ಸೋಮೇಶ್ವರದ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಅಧಿಕಾರ ಅವಧಿಯಲ್ಲಿ ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ನಡೆಸುತ್ತಾ, ಅಧಿಕಾರದಲ್ಲಿ ಇನ್ನಷ್ಟು ಎತ್ತರಕ್ಕೆ ಏರುವಂತಾಗಿರಿ ಎಂದು ಆಶೀರ್ವಾದ ಮಾಡಿದರು.ಈ ಸಂದರ್ಭ ಸುರೇಶ್ ಭಟ್ನಗರ, ಉಸ್ಮಾನ್ ಕಲ್ಲಾಪು, ದೀಪಕ್ ರೈ ಪಿಲಾರ್ ಮುಂತಾದವರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ರಾಜ್ಯದ ನೂತನ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮೇಶ್ವರ ನೆಹರೂನಗರದ ಪಶ್ಚಿಮ್ ರಿಹ್ಯಾಬ್ ಸೆಂಟರ್ ನಲ್ಲಿರುವ ವೃದ್ಧರಿಗೆ ಬಿರಿಯಾನಿ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದ ಕಳೆದ ಮೂರು ವರ್ಷಗಳಿಂದ ಸೋಮೇಶ್ವರ ನೆಹರುನಗರದ ಪಶ್ಚಿಮ್ ರಿಹ್ಯಾಬ್ ಸೆಂಟರ್ ಅನಥಾಲಯದ ವಾಸಿಗಳಿಗೆ ಹಬ್ಬದ ಪ್ರಯುಕ್ತ ವಿತರಿಸಲಾಗುವ ಹಬ್ಬದೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಲ್ಲಿ ಮಾತನಾಡಿ ತ್ಯಾಗ, ಪ್ರೀತಿ ಸಹನೆಯ ಧ್ಯೋತಕವಾಗಿರುವ ಈದ್ ಉಲ್ ಫಿತ್ರ್ ಹಬ್ಬವನ್ನು ಇಂತಹ ಅನಾಥಾಲಯದಲ್ಲಿ ಆಚರಿಸುವ ಕಾರ್ಯ ಮಹತ್ವದ್ದಾಗಿದೆ. ಈ ಮೂಲಕ ಹಬ್ಬದ ಸಂದೇಶವನ್ನು ಉತ್ತಮವಾಗಿ ಸಮಾಜಕ್ಕೆ ಮನವರಿಕೆ ಮಾಡಬಹುದು. ಕಳೆದ ಮೂರು ವರ್ಷಗಳಿಂದ ಇಂತಹ ಮಹತ್ಕಾರ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕೈಜೋಡಿಸಿರುವ ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಕಾರ್ಯ ಶ್ಲಾಘನೀಯ. ಎಲ್ಲರೂ ಚಿಂತೆ ಹಾಗೂ ಕಷ್ಟದಿಂದಲೇ ಬಾಳುವವರು. ಆಶ್ರಮ ವಾಸಿಗಳು ಎಂದಿಗೂ ಅನಾಥರಲ್ಲ, ಅಲ್ಲದೆ ಕಷ್ಟಗಳನ್ನು…

Read More

UN NETWORKS ಉಳ್ಳಾಲ: ಸಹನೆ, ಪ್ರೀತಿ, ತ್ಯಾಗ, ವಿಶ್ವಾಸ ದ ಜೊತೆಗೆ ಇನ್ನೊಬ್ಬರ ಕಷ್ಟವನ್ನು ಅರ್ಥೈಸಿಕೊಂಡು ಬಾಳಿಕೊಂಡು ಸಹೋದರತೆಯನ್ನು ಸಾರುವುದು ಹಬ್ಬದ ಸಂದೇಶವಾಗಿದೆ. ಪರಸ್ಪರ ತಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಶಾಂತಿಯಿಂದ ಬಾಳುವ ಮೂಲಕ ಬಲಿಷ್ಠ ಭಾರತ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹೇಳಿದರು. ಅವರ ಈದ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಒಂದು ತಿಂಗಳ ಶ್ರದ್ಧಾಪೂರ್ವಕ ಉಪವಾಸದಲ್ಲಿ ಭಾಗಿಯಾಗಿ ಇಂದು ಪವಿತ್ರ ರಂಝಾನ್ ಹಬ್ಬವನ್ನು ಆಚರಿಸುತ್ತಿರುವ ರಾಜ್ಯದ ಜನತೆಗೆ ಶುಭಾಷಯಗಳು. ಹಬ್ಬದ ಸಂದೇಶವನ್ನು ಎಲ್ಲರಿಗೂ ಸಾರುವ ಮೂಲಕ ಶಾಂತಿಯ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರಿಗೂ ಇದೆ. ಪಕ್ಷದ ಹೈಕಮಾಂಡಿಗೆ ಸಮರ್ಥರು ಅಂದಾಗ ಅಧಿಕಾರ ಕೊಟ್ಟಿದ್ದಾರೆ. ಸಮುದಾಯ ಒಬ್ಬರ ಕಿಸೆಯಲ್ಲಿ ಇರುವುದಿಲ್ಲ. ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಿರುವುದು ನನಗೆ ಕೊಟ್ಟಿರುವ ದೊಡ್ಡ ಅಗ್ನಿ ಪರೀಕ್ಷೆ. ಹೆಚ್ಚು…

Read More

UN NETWORKS ಉಳ್ಳಾಲ: ವಿದ್ಯೆಗೆ ಮಾತ್ರವಲ್ಲ, ಧಾರ್ಮಿಕ, ಸಾಮಾಜಿಕ ಎಲ್ಲ ಕ್ಷೇತ್ರಗಳಲ್ಲಿ ಅಶೋಕನಗರ ಫ್ರೆಂಡ್ಸ್ ಸರ್ಕಲ್ ನ ಯುವಕರು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಮಾಜ ಸೇವೆಯಲ್ಲಿ ಮುಂದುವರಿಯುತ್ತಾ ಬಡಮಕ್ಕಳಿಗೆ ಸಂಘ ದಾರಿದೀಪವಾಗುತ್ತಾ ಬೆಳೆಯಲಿ ಎಂದು ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ರಾಧಾಕೃಷ್ಣ ಹೇಳಿದರು. ಅವರು ಅಶೋಕನಗರ ಫ್ರೆಂಡ್ಸ್ ಸರ್ಕಲ್ ವತಿಯಿಂದ 25 ನೇ ವರ್ಷದ ಅಶೋಕನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಸ್ಥೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಸಮಾಜಪೂರಕ ಕೆಲಸದಲ್ಲಿ ಭಾಗಿಯಾಗುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಗಳಿಗೆ ತಮ್ಮ ಬೆಂಬಲ ಸದಾ ಇದೆ ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಜಿ. ಪಾಟೀಲ್ ಮಾತನಾಡಿ ಹಿಂದಿನಿಂದಲೂ ಶಾಲೆಯ ಶೇ.95 ರಷ್ಟು ವಿದ್ಯಾರ್ಥಿಗಳಿಗೆ ಸಂಘದ ಯುವಕರು ಪುಸ್ತಕವನ್ನು ನೀಡುತ್ತಲೇ ಬಂದಿದ್ದಾರೆ. ಇದರಿಂದ ಬಡ ಮಕ್ಕಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ನಾಗೇಶ್ ಬಜಿಲಕೇರಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸೇವೆ ಇನ್ನೂ ಮುಂದುವರಿದು ವಿದ್ಯಾ ದಾನದ ಒಂದು…

Read More

UN NETWORKS ದೇರಳಕಟ್ಟೆ: ರಕ್ತ ಅನ್ನುವುದು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುವಲ್ಲ, ಜನರೇ ದಾನವಾಗಿ ನೀಡುವುದರ ಮೂಲಕ ಹಲವು ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ| ಪಿ.ಯಸ್. ಪ್ರಕಾಶ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ , ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಸೈಗೋಳಿ ಕೆ.ಎಸ್.ಆರ್.ಪಿಯ ಏಳನೇ ಬೆಟಾಲಿಯನ್ ಪಡೆ ಆಶ್ರಯದಲ್ಲಿ ಕ್ಷೇಮ ಆಸ್ಪತ್ರೆಯ ಬ್ಲಡ್ ಬ್ಯಾಂಕಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ನಡೆದ ರಕ್ತದಾನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಹಿಂದೆ ಒಂದು ಬಾಟಲಿ ರಕ್ತ ಮಾತ್ರ ಒಬ್ಬನಿಗೆ ಸಿಗುತಿತ್ತು. ಆದರೆ ವೈಜ್ಞಾನಿಕತೆಯಿಂದ ಸದ್ಯ ಒಂದು ಬಾಟಲಿ ರಕ್ತವನ್ನು ನಾಲ್ಕು ಜನರಿಗೆ ಉಪಯೋಗಿಸಬಹುದಾಗಿದೆ. ಕ್ಷೇಮ ಆಸ್ಪತ್ರೆಯಲ್ಲಿ ಸೆಲ್ ಸಪರೇಟರ್, ಏರ್ ಫೆರಿಸಿಸ್ ಅನ್ನುವ ಸಾಧನಗಳನ್ನು ಅಳವಡಿಸಲಾಗಿದು. ಇದರಲ್ಲಿ ಡೆಂಗ್ಯು, ಮಲೇರಿಯಾ, ರಕ್ತದ…

Read More

UN NETWORKS ಉಳ್ಳಾಲ: ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾಗಿ ಆನಂದ ಎಸ್ ಕೊಂಡಾಣ ಆಯ್ಕೆಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಈಶ್ವರ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 2018-19ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ಡಾ| ಪಿ. ರಾಮಾನುಜಂ, ಉಪಾಧ್ಯಕ್ಷರಾಗಿ ಶಶಿಕಾಂತ್ ಪರ್ಯತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎನ್. ರಾಘವ, ಜೊತೆ ಕಾರ್ಯದರ್ಶಿಯಾಗಿ ಆನಂದ ಮಲಯಾಳಕೋಡಿ, ಕೋಶಾಧಿಕಾರಿಯಾಗಿ ಜಯಂತ ಪಿ.ಎಸ್., ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್, ಮಾಧವ ಕುಂದರ್, ಸಂಘಟನಾ ಕಾರ್ಯದರ್ಶಿಗಳಾಗಿ ಪದ್ಮನಾಭ ಕೊಲ್ಯ, ಸುರೇಶ್ ಮಾಡೂರು, ಲೋಕನಾಥ, ಸುರೇಶ್ ಬಿ., ಹರಿಶ್ಚಂದ್ರ ಅಡ್ಕ, ಪೂಜಾ ಸಂಚಾಲಕರಾಗಿ ಜಯರಾಮ ಪಿಲಿಕೂರು, ಗೋಪಾಲ ಕೊಂಡಾಣ, ದೇವದಾಸ ಮಡ್ಯಾರು, ಸಾಂಸ್ಕೃತಿಕ ಸಂಚಾಲಕರಾಗಿ ಗೋಪಾಲಕೃಷ್ಣ ಸೋಮೇಶ್ವರ, ರಮಾನಾಥ ಕೋಟೆಕಾರ್, ಪುರುಷೋತ್ತಮ ಅಡ್ಕ, ಮುತ್ತಪ್ಪ ಪೂಜಾರಿ, ಕುಸುಮಾಕರ್ ಕುಂಪಲ, ಯಕ್ಷಗಾನ ಸಂಚಾಲಕರಾಗಿ ಬಾಳಪ್ಪ ಪೂಜಾರಿ, ಶೇಷಪ್ಪ ಸುವರ್ಣ, ಉಳಿತಾಯ ನಿಧಿ ಸಂಚಾಲಕರಾಗಿ ತುಕಾರಾಮ ಎನ್.,…

Read More

UN NETWORKS ಉಳ್ಳಾಲ: ಆ ಮನೆಯಲ್ಲಿ ಪೆರ್ನಾಲ್ ಹಬ್ಬ ಕಳೆಗುಂದಿದೆ. ಗಾಳಿ, ಮಳೆ, ಸಿಡಿಲಿಗೆ ದಂಪತಿ ಮಕ್ಕಳನ್ನು ರಕ್ಷಿಸಿ ಮುರುಕು ಮನೆಯಲ್ಲೇ ರಾತ್ರಿ ಹಗಲು ಬಾಳುವಂತಹ ದುಸ್ಥಿತಿ. ಪ್ರತಿ ಮನೆಯಲ್ಲಿ ಹಬ್ಬದ ತಯಾರಿಯ ಪೂರ್ವಭಾವಿಯಾಗಿ ಹೊಸ ಬಟ್ಟೆಬರೆಗಳನ್ನು ಖರೀದಿಸುವ ಧಾವಂತದಲ್ಲಿ ಇದ್ದರೆ, ಇಲ್ಲಿ ಮನೆಮಂದಿ ಗಾಳಿ-ಮಳೆ ನಡುವೆ ಬದುಕುವುದು ಹೇಗೆ? ನಾಳೆಯ ಊಟಕ್ಕೆ ಏನು ಮಾಡುವುದು ಅನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ. ಬೆಳ್ಮ ಕನಕೂರು ಪದವು ನಿವಾಸಿ ಶೇಖ್ ಸಂಶುದ್ದೀನ್ ಕುಟುಂಬ ಇದೀಗ ಆರ್ಥಿಕವಾಗಿ ಕಂಗೆಟ್ಟು ಮುರುಕಲು ಮನೆಯಲ್ಲಿ ಇಬ್ಬರು ಎಳೆಯ ಹರೆಯದ ಮಕ್ಕಳು ಮತ್ತು ಪತ್ನಿ ಜತೆಗೆ ವಾಸಿಸುವ ಅನಿವಾರ್ಯತೆ ಎದುರಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಂಶುದ್ಧೀನ್ ಬಂದ ಆದಾಯದಲ್ಲೇ ಕನಕೂರುಪದವು ತಾನು ನೆಲೆಸಿದ್ದ ಸರಕಾರಿ ಜಾಗದಲ್ಲೇ ಮನೆಯನ್ನು ಕಟ್ಟಲು ಆರಂಭಿಸಿದ್ದರು. ಆದರೆ ಮನೆಯ ಗೋಡೆಯ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಕೆಲಸಕ್ಕೆ ಹೋದಲ್ಲಿ ಸಂಶುದ್ದೀನ್ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದು ಸೊಂಟದ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದರು. ಆನಂತರ ಉಂಟಾದ…

Read More