Author: UllalaVani

Kannada News From Coastal Karnataka

UN NETWORKS ಮಂಜೇಶ್ವರ : ದೇಶದಾದ್ಯಂತ ಕೋಮುವಾದವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದು ಅಪಾಯಕಾರಿ ,ವಿವಿಧ ಭಾಷೆಗಳ ಸಂಸ್ಕೃತಿಯ, ಶಾಂತಿ , ಸೌಹಾರ್ಧತೆಯ ತವರೂರು ಮಂಜೇಶ್ವರ , ಮಂಜೇಶ್ವರದ ಜನತೆಯು ಸೌಹಾರ್ಧತೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಹೇಳಿದ್ದಾರೆ.  ಅವರು ಮಂಜೇಶ್ವರ ಪ್ರೆಸ್ ಕ್ಲಬ್ ಹೊಸಂಗಡಿ ಹಿಲ್ ಸೈಡ್ ಸಭಾಂಗಣದಲ್ಲಿ ಆಯೋಜಿಸಿದ್ದ ಇಫ್ತಾರ್ ಸಂಗಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಂಜೇಶ್ವರ ಪ್ರೆಸ್ ಕ್ಲಬ್ ಆಯೋಜಿಸಿರುವ ಇಫ್ತಾರ್ ಸಂಗಮದಿಂದ ಮನುಷ್ಯರೊಳಗಿನ ಸೌಹಾರ್ಧತೆ ಇನ್ನಷ್ಟು ಹೆಚ್ಚುವಂತಾಗಲಿ ಎಂದು ಅವರು ಹೇಳಿದರು. ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ರಹಿಮಾನ್ ಉದ್ಯಾವರ ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಸಿ.ಪಿ.ಐ ಮುಖಂಡ ಬಿ.ವಿ ರಾಜನ್ , ಮಂಜೇಶ್ವರ ಬ್ಲಾಕ್ ಪಂಚಾಯತು ಸ್ಥಾಯೀ ಸಮಿತಿ ಸದಸ್ಯ ಮುಸ್ತಫಾ ಉದ್ಯಾವರ , ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯ ಲಕ್ಷ್ಮಣ್…

Read More

UN NETWORKS ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಜೂ.13 ರಂದು ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಸಲು ಉದ್ದೇಶಿಸಿದ್ದ ಇಫ್ತಾರ್ ಕೂಟ ರದ್ದುಗೊಂಡಿರುವ ಬಗ್ಗೆ ತಿಳಿದುಬಂದಿದೆ. ಕಳೆದ ವರ್ಷ ಪೇಜಾವರ ಸ್ವಾಮೀಜಿಯ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ, ನಮಾಝ್ ನಿರ್ವಹಿಸಲು ಅವಕಾಶ ನೀಡಿದ ಕಾರಣಕ್ಕೆ ಬಹಳಷ್ಟು ವಿವಾದ ಉಂಟಾಗಿತ್ತು. ಇದರ ವಿರುದ್ಧ ಶ್ರೀರಾಮ ಸೇನೆ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಬಾರಿ ಪೇಜಾವರ ಸ್ವಾಮೀಜಿ ಮಠದಿಂದ ಹೊರಗಡೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ಕೂಟ ನಡೆಸುವುದಾಗಿ ತಿಳಿಸಿದ್ದರು. ಈ ಬಗ್ಗೆ ಭಾರೀ ಚರ್ಚೆ ಹಾಗೂ ವಿರೋಧಗಳು ವ್ಯಕ್ತವಾಗಿತ್ತು. ಇದೀಗ ಸ್ವಾಮೀಜಿ ಮೇಲೆ ಒತ್ತಡ ಹೇರಿದ ಕಾರಣ ಇಫ್ತಾರ್ ಕೂಟವನ್ನು ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮಠದ ಮೂಲಗಳ ಪ್ರಕಾರ, ಸ್ವಾಮೀಜಿಗೆ ಎಡೆಬಿಡದ ಕಾರ್ಯಕ್ರಮಗಳು ಇರುವುದರಿಂದ ಈ ಬಾರಿಯ ಇಫ್ತಾರ್ ಕೂಟವನ್ನು ಕೈಬಿಡಲಾಗಿದೆ ಎಂದು ತಿಳಿಸಲಾಗಿದೆ. ಇದೇ ವಿಚಾರವಾಗಿ ಉಡುಪಿ ಪೇಜಾವರ ಸ್ವಾಮೀಜಿ ಬ್ಲಡ್ ಡೋನೆಟಿಂಗ್ ಟೀಮ್‍ನ…

Read More

UN NETWORKS ಉಳ್ಳಾಲ: ಶಾಸಕನಾಗಿ‌ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಆರೋಗ್ಯ ಹಾಗೂ ಆಹಾರ ಇಲಾಖೆ ಸಚಿವನಾಗಿ‌ ಸರಕಾರದ ಪ್ರತಿ‌ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ್ದಲ್ಲದೆ ಬಹಳಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದು ಕ್ಷೇತ್ರ ಹಾಗೂ ರಾಜ್ಯದ ಜನರ ಪ್ರೀತಿಗೆ ಪಾತ್ರನಾಗಿದ್ದು ಪಕ್ಷದ ಮುಖಂಡರು ನನ್ನ ಸೇವೆಯನ್ನು ಪರಿಗಣಿಸಿ ನೂತನ ಸಮಿಶ್ರ ಸರಕಾರದಲ್ಲಿ‌ಯೂ ಜನರ ಸೇವೆ ಮಾಡಲು ಸಚಿವ ಸ್ಥಾನ ನೀಡಿದ್ದಾರೆ. ಅವರ ನಂಬಿಕೆ ವಿಶ್ವಾಸಕ್ಕೆ ತಕ್ಕಂತೆ ಕೊಟ್ಟ ಇಲಾಖೆಯಡಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು. ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ವತಿಯಿಂದ ಶುಕ್ರವಾರ ದರ್ಗಾ ವಠಾರದಲ್ಲಿ ನೂತನ ಸಚಿವ ಹಾಗೂ ಶಾಸಕರುಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾಲ್ಕನೆಯ ಬಾರಿಗೆ ಶಾಸಕನಾಗಿ, ಎರಡನೆಯ ಬಾರಿ ಸಚಿವನಾಗಿ ಮುಂದುವರಿಯಲು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಶ್ರಮ ಸಾರ್ಥಕಗೊಳಿಸುತ್ತೇನೆ. ನನ್ನನ್ನು ನಂಬಿಕೊಂಡು ಕ್ಷೇತ್ರದಲ್ಲಾಗ ಬೇಕಾದ ಅಭಿವೃದ್ದಿ…

Read More

UN NETWORKS ಉಳ್ಳಾಲ : ಉಳ್ಳಾಲ ಭಾಗದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆ ಮತ್ತು ಗಾಳಿಗೆ ಹಲವೆಡೆ ಮರ ಬಿದ್ದು ಸುಮಾರು 70ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿಬಿದ್ದರೆ, ಮನೆ ಮತ್ತು ಅಂಗಡಿ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆಯೂ ನಡೆದಿದೆ. ಉರುಳಿಬಿದ್ದ ವಿದ್ಯುತ್ ಕಂಬಗಳು: ಮೆಸ್ಕಾಂ ವಿಭಾಗದ ಉಳ್ಳಾಲ-1 ಭಾಗದ ಮೊಗವೀರಪಟ್ನ, ಉಳ್ಳಾಲ ಹೊಯ್ಗೆ, ವಿಜಯನಗರ, ಮೂರುಕಟ್ಟ, ಆನಂದಾಶ್ರಮ ಶಾಲೆ, ಸೋಮೇಶ್ವರ ದೇವಸ್ಥಾನ ದ್ವಾರದ ಬಳಿ, ಸೋಮೇಶ್ವರ ಬೀಚ್ ಪ್ರದೇಶಗಳಲ್ಲಿ 25 ಕ್ಕೂ ಹೆಚ್ಚು ಕಂಬಗಳು ನೆಲಕ್ಕೆ ಉರುಳಿ ಧರಾಶಾಹಿಯಾಗಿದೆ. ಕೋಟೆಕಾರು ವಿಭಾಗದ ಸೋಮೇಶ್ವರ, ಉಚ್ಚಿಲ, ಕಿನ್ಯಾ ಬೆಳರಿಂಗೆ, ಮಾಡೂರು, ತಲಪಾಡಿ, ಬಜಂಗ್ರೆ, ಕನೀರುತೋಟ ಬಳಿ 28 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ದೇರಳಕಟ್ಟೆ (ಉಳ್ಳಾಲ-2) ಭಾಗದ ಬೆಳ್ಮ ಮಾಗಂತಡಿ, ಬರಿಕೆ, ಮಂಗಳಾಂತಿ, ಗಟ್ಟಿಕುದ್ರು, ಎಲಿಯಾರುಪದವು ಸ್ಥಳಗಳಲ್ಲಿ ತಂತಿ ತುಂಡಾಗಿ ನೆಲಕ್ಕೆ ಬಿದ್ದು ಮೆಸ್ಕಾಂ ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ. ಸಮುದ್ರ ತೀರದ ಪ್ರದೇಶಗಳಲ್ಲಿ ಶನಿವಾರ…

Read More

UN NETWORKS ಉಳ್ಳಾಲ: ಮೊಗವೀರಪಟ್ನ ಶಿವಾಜಿ ಕ್ಲಬ್ ಬಳಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕಂಬ ನೆಲಕ್ಕೆ ಬಿದ್ದರೂ, ಅದನ್ನು ತೆರವುಗೊಳಿಸದೆ ಅಪಾಯವನ್ನು ಆಹ್ವಾನಿಸುವ ಸ್ಥಿತಿ ಇದೆ. ಇದರಿಂದಾಗಿ ಸ್ಥಳೀಯರು ವಿದ್ಯುತ್ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಸಾಲು ಸಾಲಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸಾರ್ವಜನಿಕರು ನಡೆದಾಡುವ ರಸ್ತೆ ಬದಿಯಲ್ಲೇ ವಿದ್ಯುತ್ ಕಂಬ ಹಾಗೂ ತಂತಿಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ. ಈ ಕುರಿತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಹಾಗೂ ಲೈನ್ ಮೆನ್ ನೋಡಿ ಹೋಗಿದ್ದಾರೆ. ಆದರೆ 24 ಗಂಟೆಯಾದರೂ ತೆರವಾಗಲಿ, ದುರಸ್ತಿಯಾಗಲಿ ಮಾಡಲಿಲ್ಲ ಅನ್ನುವುದು ಸಾರ್ವಜನಿಕರ ಆರೋಪ. ಸಮುದ್ರ ಕಿನಾರೆಗೆ ನೂರಾರು ಪ್ರವಾಸಿಗರು, ಸ್ಥಳೀಯ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ದಾಟುತ್ತಿರುತ್ತಾರೆ. ಆದರೂ ಇಲಾಖೆಯವರು ತೆರವುಗೊಳಿಸದೇ ಇರುವುದರಿಂದ ತೊಂದರೆಯಾಗಿದೆ ಅನ್ನುವ ಆರೋಪ ಕೇಳಿಬಂದಿದೆ. ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಉಳ್ಳಾಲ ವ್ಯಾಪ್ತಿಯಲ್ಲಿ 70ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ…

Read More

UN NETWORKS ಮಂಗಳೂರು: ಕರಾವಾಳಿಯಲ್ಲಿ ಸುರಿದ ಭಾರೀ ಮಳೆಗೆ ನಗರದ ಹಂಪನಕಟ್ಟೆಯ ಐತಪ್ಪ ಶೆಟ್ಟಿ ಕಂಪೌಂಡಿನಲ್ಲಿ ಭಾನುವಾರ ಮುಂಜಾನೆ ಬೃಹತ್ ಮರ ಉರುಳಿ ಎರಡು ಮನೆಗಳಿಗೆ ಹಾಣಿಯಾದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಯಾಔಉದೇ ಪ್ರಾಣ ಹಾಣಿ ನಡೆದಿಲ್ಲ. ಸ್ಥಳಕ್ಕಾಗಿಮಿಸಿದ ಶಾಸಕ ವೇದವ್ಯಾಸ್ ಕಾಮತ್ ಅವರು ತಕ್ಷಣವೇ ಅಗ್ನಿ ಶಾಮಕದಳ, ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳನ್ನು ಮತ್ತು ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತೆರವು ಕ್ರಮಕ್ಕೆ ಸೂಚಿಸಿದರು.

Read More

UN NETWORKS ಉಳ್ಳಾಲ: ಮಳೆಗಾದಲ್ಲಿ ಜಿಲ್ಲೆಯಾದ್ಯಂತ ಸಮುದ್ರ ರಭಸವಾಗಿರುವುದರಿಂದ ಪ್ರವಾಸಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದಂತೆ ಜಿಲ್ಲೆಯ ಎಂಟು ಸಮುದ್ರ ಕಿನಾರೆಗಳಲ್ಲಿ 24 ಗೃಹರಕ್ಷಕ ಸಿಬ್ಬಂದಿ ಬೀಚ್ ಗಾರ್ಡ್‍ಗಳಾಗಿ ಕಾರ್ಯಾಚರಿಸುತ್ತಿದ್ದಾರೆ. ಅದರಲ್ಲಿ ಮೂವರು ಉಳ್ಳಾಲ ಸಮುದ್ರ ತೀರದಲ್ಲೂ ಕಾರ್ಯಾಚರಣೆಯನ್ನು ಭಾನುವಾರದಿಂದ ಆರಂಭಿಸಿದ್ದಾರೆ. ಜೀವರಕ್ಷಕದಳ ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರ ಜೂನ್ ತಿಂಗಳಿನಲ್ಲಿ ಜಿಲ್ಲಾಡಳಿತ ನೀಡಿದ ಆದೇಶದಂತೆ ಗೃಹರಕ್ಷಕ ಸಿಬ್ಬಂದಿಯನ್ನು ಸಮುದ್ರ ಕಿನಾರೆಗೆ ನೇಮಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಆದೇಶದಂತೆ ಇಂದಿನಿಂದ ಸಮುದ್ರ ಕಿನಾರೆಗಳಲ್ಲಿ ಸೇವೆಯನ್ನು ಆರಂಭಿಸಿದ್ದಾರೆ. ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ 1,2, ಪಣಂಬೂರು, ಸಸಿಹಿತ್ಲು, ಸುರತ್ಕಲ್, ಮುಕ್ಕ ಭಾಗಗಳಲ್ಲಿ ತಲಾ ಮೂರರಂತೆ ಗೃಹರಕ್ಷಕ ಸಿಬ್ಬಂದಿ ಸೇವೆ ನಡೆಸುತ್ತಿದ್ದಾರೆ. ಹೆಚ್ಚು ಪ್ರವಾಸಿಗರು ಬರುವ ಸ್ಥಳವನ್ನು ಗುರುತಿಸಿ ಅವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಗಾರ್ಡ್‍ಗಳು ಮಾಡುತ್ತಿದ್ದಾರೆ. ಮಳೆಗಾಲದ ಸಮುದ್ರ ತೀರದಲ್ಲಿ ಅಲೆಗಳ ರಭಸ ಹೆಚ್ಚಿರುತ್ತದೆ. ಅದೇ ಸಮಯದಲ್ಲಿ ಪ್ರವಾಸಿಗರು ಜಾಸ್ತಿ…

Read More

UN NETWORKS ಉಳ್ಳಾಲ : ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 2018-19ರ ಸಾಲಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ ಅವರು ಪುನರಾಯ್ಕೆಗೊಂಡಿದ್ದಾರೆ. ಉಳಿದಂತೆ ಪದಾಧಿಕಾರಿಗಳಾಗಿ ರಂಜನ್ ಎಂ.ನಾಯ್ಕ್ ದೇರೆಬೈಲ್,ಧನಲಕ್ಷ್ಮಿ ಎಂ.(ಉಪಾಧ್ಯಕ್ಷರು) ಮುರಳೀಧರ ನಾಯ್ಕ‌ (ಪ್ರಧಾನ ಕಾರ್ಯದರ್ಶಿ),ವೆಂಕಟೇಶ್ ಬಂಟ್ವಾಳ,ಆಶಾ ನಾಯ್ಕ ಗೋರಿಗುಡ್ಡೆ (ಕಾರ್ಯದರ್ಶಿಗಳು),ಚಂದ್ರಶೇಖರ್ ನಾಯ್ಕ ಬಪ್ಪಾಲ್ (ಕೋಶಾಧಿಕಾರಿ) ಆಯ್ಕೆಗೊಂಡಿದ್ದಾರೆ.ಮಂಜುನಾಥ ನಾಯ್ಕ ಸುಭಾಸ್ ನಗರ,ಇಂದುಶೇಖರ್ ಭಂಡಾರಬೈಲ್,ಮಹೇಶ್ ನಾಯ್ಕ ಬಂಟ್ವಾಳ,ಪ್ರವೀಣ್ ನಾಯ್ಕ ಬಂಟ್ವಾಳ,ಜಯಶೀಲ ಯು.ನಾಯ್ಕ ಬಜಾಲ್,ಮೋಹಿನಿ ಶೆಟ್ಟಿಬೊಟ್ಟು (ಸಂಘಟನಾ ಕಾರ್ಯದರ್ಶಿಗಳು) ಹಾಗೆಯೇ ಯೋಗೀಶ್ ನಾಯ್ಕ ಪಂಪ್ ವೆಲ್,ರಾಜೇಶ್ ನಾಯ್ಕ್ ಕೋಡಿಕಲ್,ಸುಭಾಸ್ ಕುಮಾರ್ ಬಿಜೈ,ಉಷಾ ರಂಜನ್ ದೇರೆಬೈಲ್,ಶೀಲಾ ಸುದೇಶ್ ಪಂಪ್ ವೆಲ್ ( ಕ್ರೀಡಾ ಕಾರ್ಯದರ್ಶಿಗಳು) ಉಳಿದಂತೆ33 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಕಾಫಿಕಾಡ್ ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಉಮಾನಾಥ ನಾಯ್ಕ ಉಳ್ಳಾಲ ಅವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ನಿಕಟಪೂರ್ವ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯ್ಕ ,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿಯ ಪ್ರ.ಕಾರ್ಯದರ್ಶಿ ಯು. ದಯಾನಂದ ನಾಯ್ಕ…

Read More

UN NETWORKS ಉಳ್ಳಾಲ: ತಂಡವೊಂದು ವಿದ್ಯಾರ್ಥಿ ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮರಾಠಿಮೂಲೆ ಮಸೀದಿ ಆವರಣದಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.ಕಿನ್ಯಾ ನಿವಾಸಿ ಸಕಲೈನ್ (16) ತಂಡದಿಂದ ದಾಳಿಗೊಳಗಾದ ವಿದ್ಯಾರ್ಥಿ. ನಾಟೆಕಲ್ ವಸತಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾಥಿಯಾಗಿದ್ದಾನೆ. ಈತನ ಮೇಲೆ ಮಂಜೇಶ್ವರ ಮೂಲದ ಮೂವರ ತಂಡ ಕೃತ್ಯ ಎಸಗಿದೆ. ಘಟನೆ ವಿವರ: ಶುಕ್ರವಾರ ಸಂಜೆ ಉಪವಾಸ ಬಿಡುವ ಸಮಯ ಸಕಲೈನ್ ಮತ್ತು ಆತನ ಸಹಪಾಠಿ ಅರಾಫ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿತ್ತು. ಬಳಿಕ ಶಾಲಾ ಅಧ್ಯಾಪಕರು ಅದನ್ನು ಸಮಾಧಾನಿಸಿ ಇಬ್ಬರನ್ನು ನಮಾಜಿಗೆಂದು ಮರಾಟಿಮೂಲೆ ಮಸೀದಿಗೆ ಕಳುಹಿಸಿದ್ದರು. ಆದರೆ ಈ ಪೈಕಿ ಅರಾಫ್ ಎಂಬಾತ ಮೊಬೈಲ್ ಮೂಲಕ ತನ್ನ ಪರಿಚಿತರಿಗೆ ವಿಚಾರ ತಿಳಿಸಿ, ಸಕಲೈನ್ ಗೆ ಗತಿ ಕಾಣಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಮಸೀದಿಯ ಹೊರ ಆವರಣದಲ್ಲಿ ನಮಾಜಿನಲ್ಲಿ ತೊಡಗಿದ್ದ ಸಕಲೈನ್ ಬಳಿ ಬಂದ ಮೂವರ ತಂಡ ಅಲ್ಲಿಂದ ಏಕಾಏಕಿ ಹೊರಗೆಳೆದು ಹಾಕಿ ಸ್ಟಿಕ್ ಮೂಲಕ ಮಾರಣಾಂತಿಕ ದಾಳಿ…

Read More

UN NETWORKS ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನ ಎದುರಿನ ಮರದ ಟೊಂಗೆವೊಂದು ಬಿದ್ದು ನಾಲ್ವರಿಗೆ ಗಾಯವಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಾರ್ನಮಿಕಟ್ಟೆಯ ಸುರೇಖಾ ಶೆಟ್ಟಿ (53), ನಂದಿಗುಡ್ಡ ನಿವಾಸಿ ಪ್ರಮೀಳಾ ಸುವರ್ಣ (49), ಜಪ್ಪು ಕುಟ್ಪಾಡಿಯ ನವಿನ್ ಮಡಿವಾಳ (45) ಹಾಗೂ ಮಾರ್ನಮಿಕಟ್ಟೆಯ ತೇಜಸ್ವಿನಿ (20) ಗಾಯಗೊಂಡವರು. ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ದೇವಸ್ಥಾನದ ಎದುರಿನ ಅಶೋಕ ಮರದ ರೆಂಬೆಯೊಂದು ತುಂಡಾಗಿ ಬಿದ್ದಿದ್ದು, ಈ ಸಂದರ್ಭ ಅಲ್ಲಿದ್ದ ನಾಲ್ಕು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಆ್ಯಕ್ಟಿವಾ ದ್ವಿಚಕ್ರ ವಾಹನವೊಂದಕ್ಕೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More