Author: UllalaVani

Kannada News From Coastal Karnataka

UN NETWORKS ಸುಳ್ಯ : ಮಳೆ ಬಂತೆಂದರೆ ಬಹುತೇಕ ಜಲಪಾತಗಳು ಮೈತುಂಬಿ ಹರಿಯುತ್ತದೆ. ಇದೇ ರೀತಿಯಲ್ಲಿ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದಲ್ಲಿನ ಚಾಮಡ್ಕ ಜಲಪಾತವೂ ಮೈತುಂಬಿ ಹರಿಯಲು ಆರಂಭಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಿಚಿತ್ರವೆಂದರೆ ಬೇರೆ ಕಡೆಗಳಲ್ಲಿ ಎಲ್ಲಿಯೂ ಕಾಣದ ರೀತಿಯ ಚಾಮಡ್ಕ ಜಲಪಾತದ ನೀರು ಪಶ್ಚಿಮ ದಿಕ್ಕಿನಿಂದ ಪೂರ್ವ ಧಿಕ್ಕಿಗೆ ಹರಿಯುತ್ತದೆ. ಬಂಟಮಲೆಯಲ್ಲಿ ಹುಟ್ಟುವ ಜಲಪಾತ ಕಂದಡ್ಕದ ಕುಟೇಲಿನಲ್ಲಿ ಪಯಸ್ವಿನಿ ನದಿ ಸೇರುತ್ತದೆ. ಸೇತುವೆ ಕೆಳಭಾಗದಲ್ಲಿ ಹರಿದು ಬರುವ ನೀರು ಎತ್ತರದಿಂದ ಕೆಳಗೆ ಬೀಳುವುದು ಮೈನವಿರೇಳಿಸುವಂತಹದ್ದು. ಅದರ ಕಳಗೆ ನಿಂತಲ್ಲಿ ನೀರಿನ ಏಟು ತಡೆಯಲಾಗದ ಸ್ಥಿತಿ. ಅಲ್ಲಿಂದ ಕೆಳಬೀಳುವ ನೀರು ಮೂರು ತೊರೆಗಳಾಗಿ ಹರಿಯುತ್ತಾ ಹೋಗುವುದರಿಂದ ಅಪಾಯಕಾರಿಯೂ ಆಗಿರುವುದಿಲ್ಲ. ಮೇಲ್ನೋಟಕ್ಕೆ ನೀರಿನ ಪ್ರವಾಹವೇ ಕಾಣಿಸಿದರೂ ಕೆಳಗೆ ಹೋಗಿ ನಿಂತಾಗ ಅದರ ಸೊಬಗು ಖುಷಿ ಕೊಡುತ್ತದೆ. ಹೋಗುವ ದಾರಿ : ಸುಳ್ಯ ತಾಲೂಕಿನಿಂದ 13 ಕಿ.ಮೀ ದೂರದಲ್ಲಿರುವ ಜಲಪಾತಕ್ಕೆ ಹೋಗಲು ಸುಗಮವಾದ ದಾರಿಯಿದೆ. ಕಾಡು ಬದಿಯ ಮಾರ್ಗದಲ್ಲೇ ಬಸ್ಸು ಅಥವಾ ಸ್ವಂತ ವಾಹನದಲ್ಲಿ…

Read More

UN NETWORKS ಮಂಗಳೂರು: ಆರ್ಯ ಎಜ್ಯುಕೇಷನಲ್ ಟ್ರಸ್ಟ್ ನ ಆರ್ಯ ಆಯುರ್ವೇದ ಪಂಚಕರ್ಮ ಹಾಗೂ ಫಿಟ್‍ನೆಸ್ ಕೇಂದ್ರ ಮಂಗಳೂರಿನ ಬಿಜೈ ನ್ಯೂ ರೋಡಿನ ಎರಡನೇ ಕ್ರಾಸಿನಲ್ಲಿ ಸೋಮವಾರ ಶುಭಾರಂಭಗೊಂಡಿತು. ಪಾರಂಪರ್ಯ ಆಯುರ್ವೇದ ಆಧಾರಿತ ಆರೋಗ್ಯ ಮತ್ತು ಚಿಕಿತ್ಸಾ ಕೇಂದ್ರದಲ್ಲಿ ಯೋಗ ಮತ್ತು ಜ್ಞಾನ ತರಬೇತಿ ಇಂದಿನಿಂದಲೇ ಆರಂಭಗೊಂಡಿದೆ. ಬೆಳಿಗ್ಗೆ 5.30 ರಿಂದ ಸಂಜೆ 7.30 ರವರೆಗೆ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.ಬಳಿಕ ಝುಂಬಾ ಬೆಳಿಗ್ಗೆ 8.30 ರಿಂದ 11.30ರವರೆಗೆ ಬೆಳಗ್ಗಿನ ಬ್ಯಾಚ್ ಮತ್ತು ಸಂಜೆ ಬ್ಯಾಚ್ 5.30 ರಿಂದ 7.30ರವರೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡಾ| ಸಂಜೀವ ದಂಡಕೇರಿ, ಕೃಷ್ಣಪ್ಪ ಬಂಗೇರ, ವೆಂಕಟೇಶಯ್ಯ.ವಿ.ಬೆಂಗಳೂರು, ರವಿಶಂಕರ್ ಮಿಜಾರ್, ಕೆ.ಎಲ್ . ಪೂಜಾರಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ಶೈಲೇಂದ್ರ ಬಿ.ವಿ, ಧಾರೇಶ್ ಅಂಚನ್. ಯಸ್, ಭಾರತಿ ಧಾರೇಶ್, ಲಿಖಿತಾ.ಯನ್ ಉಪಸ್ಥಿತರಿದ್ದರು. ಯೋಗ ಮತ್ತು ಧ್ಯಾನದ ತರಬೇತಿಯನ್ನು ಯೋಗಿಕ್ ಸೈನ್ಸ್ ಎಂ.ಎಸ್ಸಿ ಪದವೀಧರೆ ಉಮಾದೇವಿ ನೀಡಲಿದ್ದು, ಅಂತರಾಷ್ಟ್ರೀಯ ಮಟ್ಟದ ಝುಂಬಾ ತರಬೇತುದಾರೆ ನಮ್ರತಾ ನೀಡಲಿದ್ದಾರೆ. ಟ್ರಸ್ಟೀ ಭಾರತಿ ಧಾರೇಶ್…

Read More

UN NETWORKS ಉಳ್ಳಾಲ: ಕಾರುಗಳ ಎರಡರ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ‌ ಬೈಪಾಸ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತಲಪಾಡಿ ತಚ್ಚಣಿ‌ ನಿವಾಸಿ‌ ಮನೋಹರ್(50) ಮೃತ ದುರ್ದೈವಿ. ಮನೋಹರ್ ಅವರು ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದಾಗ ಕುಂಪಲದಿಂದ ತೊಕ್ಕೊಟ್ಟು ಚತುಷ್ಪಥ ರಸ್ತೆಯಿದ್ದರೂ ತಲಪಾಡಿ‌ ಕಡೆಗೆ ಮಾತ್ರ ಸಂಚರಿಸುವ ರಸ್ತೆಯಲ್ಲಿ ಎದುರು ಭಾಗದಿಂದ( ರಾಂಗ್ ಸೈಡ್) ಬಂದ ಕಾರು ಬೈಕ್ ಗೆ ಡಿಕ್ಕಿ‌ ಹೊಡೆದಿದೆ. ಹೊಡೆತದ ರಭಸಕ್ಕೆ ಬೈಕ್ ನಿಂದ ರಸ್ತೆಗೆಸೆಯಲ್ಪಟ್ಟ ಮನೋಹರ್ ಅವರ ತಲೆಯ ಮೇಲೆ ಹಿಂದಿನಿಂದ ಬಂದ ಕಾರು‌ ಚಲಿಸಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಮನೋಹರ್ ಅವರು ಖಾಸಗಿ‌ ಬಸ್ ಮೆನೇಜರ್ ಆಗಿ ಕೆಲವು‌ ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ವಿದೇಶಕ್ಕೆ ತೆರಳಿದ್ದರು. ಕಳೆದ ಕೆಲವು ವರ್ಷಗಳಿಂದ ಕುಟುಂಬದ ಮನೆಯಲ್ಲಿ ವಾಸಿಸುತ್ತಿದ್ದ…

Read More

UN NETWORKS ಉಳ್ಳಾಲ: ಸಹಕಾರಿ ಸಂಘ ಸಮಾಜಮುಖಿಯಾಗಿ ಸೇವೆಯನ್ನು ನಡೆಸುತ್ತಾ ಬಂದಿದ್ದು, ಹಲವು ಕಡೆಗಳಲ್ಲಿ ಶಾಖೆಯನ್ನು ತೆರೆದು ಸಮಾಜದ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಆರ್.ಇ.ಬಿ ಕಾಂಪ್ಲೆಕ್ಸ್ ನಿಂದ ತೊಕ್ಕೊಟ್ಟು ವಿಜಯ ಬ್ಯಾಂಕ್ ಸಮೀಪದ ಪ್ರಗತಿ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಗೊಂಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ತೊಕ್ಕೊಟ್ಟು ಶಾಖಾ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅನುಕೂಲಕರವಾದ ಜಾಗ ಬೇಕಾಗಿರುವುದರಿಂದ ಮಂಗಳೂರಿನ ಇನ್ನೊಂದು ಭಾಗ ಆಗಿರುವ ತೊಕ್ಕೊಟ್ಟು ಪ್ರದೇಶದಲ್ಲಿ ಜನಪರವಾಗಿ ಸೇವೆಯನ್ನು ಮಾಡುವ ಅವಕಾಶ ದೊರೆತಿದೆ. ವಿವಿಧ ಉದ್ದೇಶಗಳಿಗೆ, ಸೌಹಾರ್ದತೆಯನ್ನು ನೆಲೆಸುವ ಸಲುವಾಗಿ ಸಂಸ್ಥೆ ಕಾರ್ಯಾಚರಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಯಶಸ್ವಿ ಜನಪರ ಸೇವೆಯನ್ನು ಮಾಡುತ್ತಾ ಬಂದಿದೆ. ಈ ಮೂಲಕ ಸಂಸ್ಥೆಯೂ ಬೆಳೆಯುವುದು, ಸಮಾಜವೂ ಬೆಳೆಯಲು ಸಾಧ್ಯ. ತೊಕ್ಕೊಟ್ಟು ಪ್ರದೇಶ ಮಂಗಳೂರಿನ ಇನ್ನೊಂದು ಕೇಂದ್ರವಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳಿವೆ. ಈ ನಿಟ್ಟಿನಲ್ಲಿ ಆರಂಭವಾಗಿರುವ…

Read More

UN NETWORKS ಉಳ್ಳಾಲ: 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆಯನ್ನು ಅನುದಾನಿತ ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18.06.2018ರಂದು ನಡೆಸಲಾಯಿತು. ಇಲ್ಲಿ ಮತದಾನದ ಅನುಭವದ ವಾತವರಣ ಕಂಡು ಬಂತು. ಮತದಾನರ ಸಾಲು, ಮತದಾನದ ಪೆಟ್ಟಿಗೆ, ಮತದಾನದ ಬ್ಯಾಲೆಟ್ ಪೇಪರ್ ಮತ್ತು ಮತದಾನರು. ಇದರ ಪೂರ್ವ ತಯಾರಿಯಾಗಿ 4.06.2018ರಂದು 9 ಅಭ್ಯರ್ಥಿಗಳು ಶಾಲಾ ಮುಖ್ಯೋಪಾಧ್ಯಾಯನಿಯವರಿಗೆ ನಾಮ ಪತ್ರವನ್ನು ಸಲ್ಲಿಸಿದರು. ಎಲ್ಲಾ ಆಭ್ಯರ್ಥಿಗಳು ಶಾಲಾ ನಾಯಕಿ/ನಾಯಕ ಸ್ಥಾನಕ್ಕೆ ಸ್ಪರ್ಥಿಸಿದರು. 18.06.2018 ಮತದಾನ ನಡೆಯಿತು. ಶಾಲೆಯ ವಿದ್ಯಾರ್ಥಿಗಳಳಿಗೆ ಸಂಸತ್ತು ರಚನೆಯ ಬಗ್ಗೆ ಅರಿವನ್ನು ಮೂಡಿಸಲಾಯಿತು. ಮತದಾನದ ಎಲ್ಲಾ ಪ್ರಕ್ರಿಯೆಗಳು ಬಹು ಅಚ್ಚುಕಟ್ಟಾಗಿ ಅನುಸರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. 9 ಆಭ್ಯರ್ಥಿಗಳು: ಸೌರವ್ (ಚಿಹ್ನೆ-ಘಂಟೆ), ರೀಶಲ್ ಶೈನಾ ಮೊಂತೆರೊ (ಶಾಲಾ ಚೀಲ), ಆಶಿಕಾ ಅಮಿರಾ (ಬಾಲ್ದಿ), ಡೆನ್ಸನ್ ಕ್ರಾಸ್ತ (ಗಡಿಯಾರ), ಆಯಿಶಾ ಸುಹಾನಾ (ಪೆನ್ಸಿಲ್), ವಿಘ್ನೇಶ್ ರಾವ್ (ಕುರ್ಚಿ-ಡೆಸ್ಕ್), ಸಲ್ವಿಟಾ ಮೊಂತೆರೊ (ಛತ್ರಿ), ಸ್ವೀಡಲ್ ಡಿ’ಸೋಜ (ಪುಸ್ತಕ), ಆಕಾಶ್ (ಸೈಕಲ್).…

Read More

UN NETWORKS ಉಳ್ಳಾಲ: ರಾಜ್ಯದ ನೂತನ ಸಮ್ಮಿಶ್ರ ಸರಕಾರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ಆವರನ್ನು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪರವಾಗಿ ಗೌರವಿಸಲಾಯಿತು. ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದನಾಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಸುವಾಸಿನಿ ಜೆ. ಬಬ್ಬುಕಟ್ಟೆ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಕಾರ್ಯದರ್ಶಿಗಳಾದ ಡಿ.ಎನ್. ರಾಘವ, ಕೆ.ಎಮ್.ಕೆ. ಮಂಜನಾಡಿ, ವಾಸುದೇವ ರಾವ್, ಸತೀಶ್ ಭಂಡಾರಿ, ರತ್ನಾವತಿ ಜೆ. ಬೈಕಾಡಿ, ಮಲ್ಲಿಕಾ ಭಂಡಾರಿ, ಅನುಪಮ ಸಿ. ಬಬ್ಬುಕಟ್ಟೆ, ವಾಣಿ ಲೋಕಯ್ಯ, ಸರೋಜಾ ಕುಮಾರಿ ಹಾಗೂ ಲೀಲಾವತಿ ಉಪಸ್ಧಿತರಿದ್ದರು.

Read More

UN NETWORKS ಕೊಣಾಜೆ: ಕೊಣಾಜೆ ಗುಡ್ಡುಪಾಲು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಇದರ ಆಶ್ರಯದಲ್ಲಿ ಅಣ್ಣೆರೆಪಾಲು ಬಳಿ ನಡೆದ ಮಕ್ಕಳ ಕಬ್ಬಡಿ ಪಂದ್ಯಾಟದಲ್ಲಿ ಶ್ರೀ ರಾಮಾಂಜನೇಯ ಗುಡ್ಡುಪಾಲು ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಕುತ್ತಾರು ಫ್ರೆಂಡ್ಸ್ ತಂಡ ಪಡೆದುಕೊಂಡಿತು. ಪಂದ್ಯಾಟದಲ್ಲಿ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ತಂಡದ ಚರಣ್ ಕುಮಾರ್ ದೇವಂದಬೆಟ್ಟು ಸವ್ಯಸಾಚಿ ಪ್ರಶಸ್ತಿ ಪಡೆದುಕೊಂಡರೆ. ಕುತ್ತಾರು ತಂಡದ ತಾರನಾಥ್ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಶ್ರೀ ರಾಮಾಂಜನೇಯ ತಂಡದ ಪ್ರಸಾದ್ ಕಂಡಿಲ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಕುಡುಬಿ ಗೌಡ ಸಮಾಜದ ಹಿರಿಯರಾದ ಮಂಜುನಾಥ ಅಣ್ಣೆರೆಪಾಲು ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಕೊಣಾಜೆ ಗ್ರಾ. ಪಂ.ಮಾಜಿ ಸದಸ್ಯ ಹಾಗೂ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸ್ಥಾಪಕ ನರ್ಸುಗೌಡ ಅಣ್ಣೆರೆಪಾಲು, ಚಂದ್ರಹಾಸ್ ಕುತ್ತಾರ್, ಚಿತ್ತರಂಜನ್ ಕಂಡಿಲ, ದಿವಾಕರ್ ಕಂಡಿಲ, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ನಾಗೇಶ್ ಗುಡ್ಡುಪಾಲು, ಕಬಡ್ಡಿ ಪಂದ್ಯಾಟದ ಸಂಘಟಕ ಗೋಪಾಲ ಗೌಡ ಅಣ್ಣೆರೆಪಾಲು,…

Read More

UN NETWORKS ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರನ್ನು ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರ ಕೊಲ್ಯದ ವತಿಯಿಂದ ಅಭಿನಂದಿಸಲಾಯಿತು. ಶ್ರೀ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಐತಾಳ್, ನಾಗಬ್ರಹ್ಮ ಸೇವಾ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ, ಪದಾಧಿಕಾರಿಗಳಾದ ದೀಪಕ್ ಪಿಲಾರ್, ರಾಮ್ ದಾಸ್ ಶೆಟ್ಟಿ ಬೆಂಗಳೂರು, ಗಣೇಶ್ ಕೊಲ್ಯ, ರಾಮಚಂದ್ರ ಪಿಲಾರ್ , ಶೇಷಪ್ಪ ಸಾಲ್ಯಾನ್ ಮಂಜೇಶ್ವರ, ರಮೇಶ್ ಶಿವಬಾಗ್ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಉದ್ಯೋಗದೊಂದಿಗೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಕುರಿತು ಜನರಲ್ಲಿ ಜಾಗೃತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುನ್ನೂರು ಯುವಕ ಸಂಘ ಉದ್ಯೋಗ ಮಾಹಿತಿಯೊಂದಿಗೆ ಕಾನೂನು ಮಾಹಿತಿ ಶಿಬಿರವನ್ನು ಗ್ರಾಮದ ಜನರಿಗೆ ಸಂಘಟಿಸಿರುವುದು ಶ್ಲಾಘನೀಯ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು. ಕುತ್ತಾರಿನ ಮುನ್ನೂರು ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ಕಾನೂನು ಮಾಹಿತಿ ಶಿಬಿರ ಹಾಗೂ ಉದ್ಯೋಗ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮುನ್ನೂರು ನುವ ಗ್ರಾಮದ ಹೆಸರಿನಲ್ಲಿ ಕಳೆದ 50 ವರ್ಷಗಳಲ್ಲಿ ಸಾರ್ಥಕ ಸಮಾಜ ಸೇವೆ ನಡೆಸುತ್ತಿರುವ ಮುನ್ನೂರು ಯುವಕ ಸಂಘ ಯುವ ಪ್ರತಿಭೆಗಳಿಗೆ ಮಾರ್ಗದರ್ಶನದೊಂದಿಗೆ ಸಮಾಜಿಕ ಸಂಘಟನೆಯನ್ನು ನಡೆಸುತ್ತಿದೆ. ಇಂದಿನ ಯುವ ಜನಾಂಗ ಸಂಘಟನೆಗಳ ಮೂಲಕ ಸಮಾಜಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂದರು. ಅಖಿಲ ಭಾರತ ವಕೀಲರ ಸಂಘದ ದ.ಕ.ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು.…

Read More

UN NETWORKS ಉಳ್ಳಾಲ: ಶಿಸ್ತುಬದ್ಧ ಜೀವನ ರೂಪಿಸುವಿದರೊಂದಿಗೆ ಉತ್ತಮ ಭವಿಷ್ಯವನ್ನು ಕಂಡು ಕೊಳ್ಳುವಲ್ಲಿ ಬಾಲ ಸಂರಕ್ಷಣಾ ಕೇಂದ್ರದ ಮಕ್ಕಳು ಮುಂದಿನ ಶೈಕ್ಷಣಿಕ ಜೀವನದಲ್ಲಿ ಕಠಿಣ ಪರಿಶ್ರಮದೊಂದಿಗೆ ಬಾಲ್ಯದಲ್ಲಿಯೇ ಪ್ರಗತಿಯ ಹಾದಿಯನ್ನು ಕಂಡುಕೊಳ್ಳಲು ಇದು ಸೂಕ್ತ ಸಮಯ ಎಂದು ಲೆಕ್ಕ ಪರಿಶೋದಕ ಎಸ್‍ಎ.ಸ್. ನಾಯಕ್ ಮಂಗಳೂರು ಅಭಿಪ್ರಾಯಪಟ್ಟರು. ಕುತ್ತಾರಿನ ಮಂಗಳ ಸೇವಾ ಸಮಿತಿ ಟ್ರಸ್ಟ್ ನ ಆಶ್ರಯದ ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ಶೈಕ್ಷಣಿಕ ವರ್ಷದ ಶುಭಾರಂಭದ ಪ್ರಯುಕ್ತ ಸರಸ್ವತಿ ಪೂಜೆ ಹಾಗೂ ಗಣಹೋಮದ ಬಳಿಕ ನಡೆದ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಂಗಳಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಮೋಹನ್‍ದಾಸ್ ಅವರನ್ನು ಸನ್ಮಾನಿಸಲಾಯಿತು. ಮಂಗಳಾ ಸೇವಾ ಸಮಿತಿ ಟ್ರಸ್ಟ್ ಸಂಚಾಲಕ ಅನಂತ ಕೃಷ್ಣ ಭಟ್‍ ಸಂಸ್ಥೆಯ ಪರಿಚಯ ನೀಡಿ ಸ್ವಾಗತಿಸಿದರು. ಬಾಲಸಂರಕ್ಷಣಾ ಕೇಂದ್ರದ ವಿದ್ಯಾರ್ಥಿನಿ ಶಿವಾನಿ ಕಾರ್ಯಕ್ರಮ ನಿರ್ವಹಿಸಿದರು. ನಿಶಾ ವಂದಿಸಿದರು.

Read More