Author: UllalaVani

Kannada News From Coastal Karnataka

UN NETWORKS ಸೋಮೇಶ್ವರ: ದೇಶದ ಮಾಜಿ ಪ್ರಧಾನಿ, ಭಾರತ ಕಂಡ ಅಧ್ಬುತ ಮೇಧಾವಿ ರಾಜಕಾರಣಿ, ದೇಶದ ಅಭಿವೃದ್ಧಿಯ ಹರಿಕಾರ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯ ಆರೋಗ್ಯ ದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಾಗಿದ್ದಾರೆ. ವಿಶ್ವದೆದುರು ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಏರಿಸಿದ ಮಹಾನ್ ನಾಯಕನ ಆರೋಗ್ಯ ಶೀಘ್ರವಾಗಿ ಸುದಾರಿಸಿ ಗುಣಮುಖರಾಗಿಲಿ ಎಂದು ದೇಶ ಭಕ್ತ ಸಂಘಟನೆ ಭಗತ್‌‌ ಸಿಂಗ್‌‌ ಸೇವಾ ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಈ ಸಂಧರ್ಭದಲ್ಲಿ ಗೌರವ ಸಲಹೆಗಾರರಾದ ಆನಂದ್ ಕೆ ಅಸೈಗೋಳಿ, ಉಪಾಧ್ಯಕ್ಷರಾದ ರವಿ ಶೆಟ್ಟಿ ಮಾಡೂರು, ಮೋಹನ್ ಸಾಲ್ಯಾನ್, ಗೋಪಿನಾಥ್ ಬಗಂಬಿಲ, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಪ್ರಮುಖರಾದ ಪ್ರವೀಣ್ ಎಸ್.ಕುಂಪಲ, ಹರೀಶ್ ಅಂಬ್ಲಮೊಗರು,ರಾಕೇಶ್ ಬೈಪಾಸ್, ಕಿರಣ್ ಕೊಲ್ಯ, ಪ್ರವೀಣ್ ಬಸ್ತಿ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಬಂಟ್ವಾಳ: ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಸಂದರ್ಭದಲ್ಲಿ ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ ಚಿತ್ರಮಂದಿರ ಸಮೀಪ ತಲವಾರು ಝಳಪಿಳಿಸಿ ಅಟ್ಟಾಡಿಸಿ ಬೆದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಜರಂಗದಳದ ಕಾರ್ಯಕರ್ತ ಭುವಿತ್ ಶೆಟ್ಟಿ ನೇತೃತ್ವದ ಗುಂಪು ಬಡ್ಡಕಟ್ಡೆಯ ಕ್ಷೌರದಂಗಡಿಗೆ ಭಾನುವಾರ ನುಗ್ಗಿ ಅಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಸುರೇಂದ್ರ ಭಂಡಾರಿ ನೇತೃತ್ವದ ಗುಂಪು ಭುವಿತ್ ಶೆಟ್ಟಿ ಗುಂಪಿನವರ ಮೇಲೆ‌ ಸೋಮವಾರ ಹಲ್ಲೆಗೆ ಯತ್ನಿಸಿದೆ. ಈ ಸಂದರ್ಭದಲ್ಲಿ ಸುರೇಂದ್ರ ತಲವಾರು ಹಿಡಿದು ತಿರುಗಾಡುತ್ತಾ ಬೆದರಿಕೆ ಹಾಕುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಬಿಜೆಪಿ ಕಾರ್ಯಕರ್ತರಾದ ಗಣೇಶ್ ರೈ ಮಾಣಿ ಹಾಗೂ ಪುಷ್ಪರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರೇಂದ್ರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Read More

UN NETWORKS ತಲಪಾಡಿ: ಶಾಲಾ ಕಾಲೇಜು ಗಳು ಕೃಷಿಯತ್ತ ಮುಖ ಮಾಡುವುದು ಇತ್ತೀಚಿನ ದಿನಗಳ ಉತ್ತಮ ಬೆಳವಣಿಗೆ. ಈ ಮೂಲಕ ಮಕ್ಕಳಿಗೆ ಕೃಷಿ ಸಂಸ್ಕೃತಿಯ ಪರಿಚಯ ಕಾರ್ಯ ನಡೆಯುತ್ತಿದೆ. ಇಲ್ಲೊಂದು ಶಾಲೆ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಸಾವಯವ ಕೃಷಿಯನ್ನು ಒಂದು ವಿಷಯವಾಗಿ ಅಳವಡಿಸಿಕೊಂಡು ಕಡ್ಡಾಯ ಕೃಷಿ ಶಿಕ್ಷಣಕ್ಕೆ ಮುಂದಾಗಿದೆ. ತಲಪಾಡಿಯ ದೇವಿನಗರದಲ್ಲಿರುವ ಶಾರದಾ ವಿದ್ಯಾನಿಕೇತನ ಪಬ್ಲಿಕ್‌ ಶಾಲೆಯ 5ನೇ ತರಗತಿಯಿಂದ 10ನೇ ತರಗತಿವರೆಗಿನ ಸುಮಾರು 900 ವಿದ್ಯಾರ್ಥಿಗಳು ಕೃಷಿ ಪಾಠದ ಲಾಭ ಪಡೆಯಲಿದ್ದಾರೆ. ಪ್ರತೀ ತರಗತಿಗೂ ಪಠ್ಯಕ್ರಮವನ್ನು ಕೃಷಿ ವಿಜ್ಞಾನಿಗಳ ಸಹಕಾರದೊಂದಿಗೆ ಶಾಲಾ ಆಡಳಿತ ರಚಿಸಿದೆ. ಒಂದು ತರಗತಿಯಲ್ಲಿ ಥಿಯರಿ ಮತ್ತು ಎರಡು ತರಗತಿಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಪ್ರತ್ಯೇಕ ಪರೀಕ್ಷೆಯೂ ಇದ್ದು, ಪ್ರತೀ ವಿದ್ಯಾರ್ಥಿಗೆ ಥಿಯರಿ ಮತ್ತು ಪ್ರಾಯೋಗಿಕ ಕಾರ್ಯಕ್ಕೆ ಅಂಕ ನಿಗದಿಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಸುಷ್ಮಾ ದಿನಕರ್‌ ಹೇಳಿದ್ದಾರೆ. ಕೃಷಿ ಪದವೀಧರರಿಂದ ಪಾಠ ಕೃಷಿ ಪಾಠಕ್ಕೆಂದೇ ಇಲ್ಲಿ ಏಳು ಮಂದಿ ಕೃಷಿ ಪದವೀಧರರಿದ್ದಾರೆ. ಕೃಷಿ ವಿಜ್ಞಾನ ಸ್ನಾತಕೋತ್ತರ…

Read More

UN NETWORKS ಅಂಬ್ಲಮೊಗರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಅಡು ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ಮುನ್ನೂರು – ಅಂಬ್ಲಮೊಗರು ಸಂಪರ್ಕ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪರ್ಯಾಯ ರಸ್ತೆ ಈಗಾಗಲೇ ಮುಳುಗಡೆಯಾಗಿದೆ. ಸಂಚಾರ ಸ್ಥಗಿತಗೊಳ್ಳುವ ಭೀತಿಯಲ್ಲಿ ಸ್ಥಳೀಯ ಜನರಿದ್ದಾರೆ. ಅಂಬ್ಲಮೊಗರು ಸಹಿತ ಸುತ್ತಮುತ್ತಲಿನ ಪ್ರದೇಶದಿಂದ ಮುನ್ನೂರು ಸಂಪರ್ಕಿಸುವ ಏಕೈಕ ಸಂಪರ್ಕ ಸೇತುವೆ ಇದಾಗಿದ್ದು, ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಕೆಲ ದಿನಗಳ ಹಿಂದೆ ಸೇತುವೆ ಅಗಲೀಕರಣ ಕಾಮಗಾರಿ ಪ್ರಾರಂಭಗೊಂಡಿತ್ತು. ಇಲ್ಲಿ ತಗ್ಗು ಪ್ರದೇಶಗಳಿರುವುದರಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಇವು ಜಲಾವೃತಗೊಂಡಿವೆ?. ಪರ್ಯಾಯ ರಸ್ತೆಯ ಮೂಲಕ ಕೃತಕ ನೆರೆ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪೂರ್ಣ ನೀರು ತುಂಬಿ ಹರಿಯುತ್ತಿದ್ದು ಸಂಚಾರಕ್ಕೆ ತಡೆಯಾಗಿದೆ. ಪರದಾಡುತ್ತಿರುವ ಚಾಲಕರು ಪರ್ಯಾಯ ರಸ್ತೆಯಲ್ಲಿ ಘನ ವಾಹನಗಳು ಶ್ರಮಪಟ್ಟು ಸಂಚರಿಸಿದರೆ, ದ್ವಿಚಕ್ರ ವಾಹನ ಚಾಲಕರಿಗೆ ಸಂಚರಿಸುವುದೇ ದುಸ್ತರವಾಗಿದೆ. ರಭಸವಾಗಿ ನೀರು ಮಾರ್ಗದಲ್ಲಿ ಹರಿಯುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ವಾಹನವನ್ನು ಮುಂದಕ್ಕೆ ಕೊಂಡೊಯ್ಯಲಾಗದೆ ಪರದಾಡುತ್ತಿದ್ದಾರೆ. ಪರ್ಯಾಯ ರಸ್ತೆಯು…

Read More

UN NETWORKS ಉಳ್ಳಾಲ: ಕ್ಷೇತ್ರದ ಸರ್ವ ಧರ್ಮದ ಜನರ ಬೆಂಬಲದಿಂದ ಶಾಸಕನಾಗಿ ಆಯ್ಕೆಯಾಗುವ ಮೂಲಕ ಸಚಿವನಾಗುವ ಅವಕಾಶ ಸಿಕ್ಕಿದ್ದು, ಜನರ ಆಶೋತ್ತರದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟಿನ ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಗೌರವ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಚರ್ಚ್‍ನ ಸಹಾಯಕ ಧರ್ಮಗುರು ಪಾ| ಸ್ಟ್ಯಾನಿ ಪಿಂಟೋ ಖಾದರ್ ಅವರನ್ನು ಗೌರವಿಸಿದರು.ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ಪಾ| ಲೈಝಿಲ್ ಡಿ.ಸೋಜ, ಸಿಸ್ಟರ್ ಕಾರ್ಮಿಲ್ ಮಿಸ್ಕಿತ್, ಹೋಲಿ ಏಂಜೆಲ್ಸ್ ಶಾಲಾ ಮುಖ್ಯಸ್ಥೆ ಸಿಸ್ಟರ್ ಸೆವರಿನ್ ಫೆರ್ನಾಂಡೀಸ್, ಚರ್ಚ್‍ನ ಕಾರ್ಯಕಾರಿ ಸಮಿತಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಕಣಚೂರು ಮೋನು, ಸದಾಶಿವ ಉಳ್ಳಾಲ, ತಾಲೂಕು ಪಂಚಾಯತ್ ಆಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಬಾಝಿಲ್ ಡಿ.ಸೋಜ, ರಿಚ್ಚಾರ್ಡ್ ವೇಗಸ್ ಧರ್ಮನಗರ, ಡೆನ್ನಿಸ್ ಡಿ.ಸೋಜ, ಶಿವಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ತಲಪಾಡಿ: ದೇಶದಲ್ಲಿ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಗೆ ಗುರಿಯಾಗಿ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು ಅದರ ಬಗ್ಗೆ ಜನರಲ್ಲಿ ಜಾಗೃತಿ ಅತೀ ಅಗತ್ಯ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಈ ರೋಗದ ಜಾಗೃತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ ಎಂದು ಯೇನೆಪೋಯ ಮೆಡಿಕಲ್ ಕಾಲೇಜಿನ ಅಂಕೋಲಜಿ ವಿಭಾಗದ ಮುಖ್ಯಸ್ಥ ಡಾ| ಇಬ್ರಾಹಿಂ ನಾಗನೂರು ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ರೋಗದ ಕಾರಣಗಳು, ಗುಣಲಕ್ಷಣಗಳು ಮತ್ತು ಚಿಕಿತ್ಸೆಯ ಸವಿವರ ಮಾಹಿತಿಯನ್ನು ಯೆನಪೋಯ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳಾದ ಡಾ| ರಚನಾ ಪ್ರಭು, ಡಾ| ಪ್ರಜ್ಞಾ ಕಿಣಿ ಮತ್ತು ಡಾ| ಇಮ್ರಾನ್ ಪಾಶ ವಿದ್ಯಾರ್ಥಿಗಳಿಗೆ ನೀಡಿದರು ಮತ್ತು ಈ ರೋಗದ ಬಗೆಗಿನ ವಿದ್ಯಾರ್ಥಿಗಳ ಸಂದೇಹವನ್ನು ಪರಿಹರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸುಷ್ಮಾ…

Read More

UN NETWORKS ಉಳ್ಳಾಲ: ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಗ್ರಾಹಕರು ಪಡೆದ ಸೇವೆಯೇ ಈ ಸಂಘದ ಬೆಳವಣಿಗೆಗೆ ಸ್ಪೂರ್ತಿ ಎಂದು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಭಿಪ್ರಾಯಪಟ್ಟರು. ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆಯ ತೃತೀಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳ್ಳಾಲ ಶಾಖೆಯು ಕಳೆದ ಮೂರು ವರ್ಷದ ಅವಧಿಯಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿ ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಈ ಯಶಸ್ಸು ಅಭಿವೃದ್ದಿಗೆ ಸಂಘದ ಸದಸ್ಯರು, ಗ್ರಾಹಕರು ಕಾರಣಿಭೂತರು ಎಂದರು. ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ಮಾತನಾಡಿ ಸಂಘದಲ್ಲಿ ಕೆ.ಎಸ್.ಅರ್.ಟಿ.ಸಿ ಮತ್ತು ಖಾಸಗಿ ಟಿಕೇಟ್ ಬುಕ್ಕಿಂಗ್ ಅಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಹಾಗೂ ಮಣಿಪಾಲ್ ಆರೋಗ್ಯ ಕಾರ್ಡ್‍ನ್ನು ನೋಂದಯಿಸುವ ಸೌಲಭವಿದ್ದು, ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಸಂಘದ ಸದಸ್ಯರು , ಸಿಬಂದಿಗಳು ಮತ್ತು ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭೆಯಲ್ಲಿ ಸಂಘದ…

Read More

UN NETWORKS ಉಳ್ಳಾಲ: ಇಂದಿನ ಕಾಲದಲ್ಲಿ ರಾಮಾಯಣದಂತಹ ಕಥೆಗಳನ್ನು ಹರಿಕಥೆಯ ಮೂಲಕ ತಿಳಿಸುವುದರಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಉಳಿಸಿ ಬೆಳೆಸಲು ಸಹಕಾರಿ ಎಂದು ಹರಿಕಥಾ ಸತ್ಸಂಗ ಸಮಿತಿಯ ಗೌರವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು. ಕೀರ್ತನ ಪ್ರವೀಣ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೊರು ಇವರ ಎರಡನೇ ವರ್ಷದ ಶ್ರೀ ರಾಮಾಯಣ ಮಾಸಾಚರಣೆಯ ಅಂಗವಾಗಿ ಜಿಲ್ಲೆಯ ವಿವಿದೆಡೆ ಜು. 16ರಿಂದ ಆ.7ರವರೆಗೆ ನಡೆಯಲಿರುವ ಹರಿಕಥಾ ಸತ್ಸಂಗ, ರಾಮನಾಮ ಜಪಯಜ್ಞ ಹಾಗೂ ಆದಿತ್ಯ ಹೃದಯ ಹವನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಕೊಲ್ಯ ಶ್ರೀ ಸೌಭಾಗ್ಯ ಸಭಾಭವನ ದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳ ನಿರ್ಮಾಣ ಮಾಡಲು ಹರಿಕಥಾ ಸತ್ಸಂಗ ತುಂಬಾ ಒಳ್ಳೆಯ ಕೆಲಸ. ಆ ಕಾರ್ಯಕ್ರಮವನ್ನು ಎಲ್ಲರೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟು ಸೇರಿ ಕೆಲಸ ಮಾಡೋಣ ಎಂದು ಹೇಳಿದರು. ಪುಂಡರಿಕಾಕ್ಷ ಬೆಳ್ಳೊರು ಮಾತನಾಡಿ ಮನೆ ಮನೆಗೆ ರಾಮಾಯಣ ಮನಮನಕೆ ರಾಮಾಯಣ ಮುಟ್ಟಿಸುವ ಆಮೂಲಕ…

Read More

UN NETWORKS ಉಳ್ಳಾಲ: ಪರಿಸರ ನಾಶದಿಂದ ಜಲ ಸಂಪನ್ಮೂಲಕ್ಕೂ ತೊಂದರೆಯಾಗುತ್ತಿದ್ದು, ಜನರಲ್ಲಿ ಜಲಸಂರಕ್ಷಣೆಯ ಕುರಿತು ಜಾಗೃತಿ ಮೂಡದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದು ಚಂದ್ರಹಾಸ ಕೊಲ್ಯ ಅಭಿಪ್ರಾಯಪಟ್ಟರು. ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ತೊಕ್ಕೋಟು ಇದರ ವತಿಯಿಂದ ಕೊಲ್ಯ ಶಾರದಾ ಸಭಾಭವನದಲ್ಲಿ ಸಹಕಾರಿ ಸದಸ್ಯರಿಗೆ ಜಲ ಹಾಗೂ ಆಹಾರದ ಸದ್ಬಳಕೆಯ ಕುರಿತು ನಡೆದ ಕಾರ್ಯಗಾರದಲ್ಲಿ ಜಲಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷರು-ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಆಹಾರ ಸದ್ಬಳಕೆಯ ಬಗ್ಗೆ ಸುರೇಶ್ ಮಂಗಳೂರು ಇವರು ಮಾಹಿತಿ ನೀಡಿದರು. ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಸ್ವಾಗತಿಸಿದರು. ನಾರಾಯಣ ಕುಂಪಲ ಪ್ರಸ್ತಾವನೆಗೈದರು ಸೋಮೇಶ್ವರ ಮಂಡಲ ಬೌದ್ಧಿಕ ಪ್ರಮುಖ ಸಂತೋಶ್ ಕುಂಪಲ ವಂದಿಸಿದರು.ಯೋಜನಾಧಿಕಾರಿ ಜಿತೇಂದ್ರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಒಟ್ಟು 80 ಜನ ಸಹಕಾರಿ ಸದಸ್ಯರು ಸದುಪಯೋಗ ಪಡೆದರು.

Read More

UN NETWORKS ಮಂಗಳೂರು: ನಗರದ ಕೇಂದ್ರ ಮಾರುಕಟ್ಟೆಯ ಬೀದಿ ಬದಿ ಹಣ್ಣು ಹಂಪಲು ವ್ಯಾಪಾರಸ್ಥರಿಂದ ಕೇಂದ್ರ ಮಾರುಕಟ್ಟೆಯಲ್ಲಿ ರವಿವಾರ ಸಂಜೆ ಇಫ್ತಾರ್ ಕೂಟ ನಡೆಯಿತು. ಇಫ್ತಾರ್ ಕೂಟದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಮಾಜಿ ಮೇಯರ್ ಅಶ್ರಫ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಬೆಳ್ಮ ಗ್ರಾ.ಪಂ. ಉಪಾಧ್ಯಕ್ಷ ಸತ್ತಾರ್ ಸಿ.ಎಂ., ಶಿವಣ್ಣ, ನೂರುದ್ದೀನ್ ಕುದ್ರೋಳಿ, ಮುಹಮ್ಮದ್ ಹಾರಿಸ್ ದೇರಳಕಟ್ಟೆ, ಫಝಲ್ ಕುದ್ರೋಳಿ, ಇಸ್ಮಾಯೀಲ್ ಕಣ್ಣೂರು, ಜಲೀಲ್ ವಳಚ್ಚಿಲ್, ಫಾರೂಕ್ ಬೆಳ್ಮಕಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Read More