UN NETWORKS
ಉಳ್ಳಾಲ: ಮಂಗಳೂರಿನ ಬೋಂದೇಲ್‍ನಲ್ಲಿ ಮತ ಎಣಿಕೆ ಒಂದೆಡೆಯಾದರೆ ಕ್ಷೇತ್ರದ ವಿಜಯ ಮಾಲೆ ಯಾರಿಗೆ, ಮತ್ತು ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವ ಕುತೂಹಲ ಕ್ಷೇತ್ರದ ಜನತೆಯಲ್ಲಿ ಕುತೂಹಲ. ಮಂಗಳೂರು ಕ್ಷೇತ್ರದ(ಉಳ್ಳಾಲ)ಲ್ಲಿ ಬೆಳಗ್ಗಿನಿಂದಲೇ ಜಂಕ್ಷನ್ ಪ್ರದೇಶಗಳಲ್ಲಿ ಜನರಿದೆ ಬಿಕೋ ಎನ್ನುತ್ತಿದ್ದರೆ, ಜನರೆಲ್ಲ ಟಿ.ವಿ. ಅಳವಡಿಸಿರುವ ಅಂಗಡಿಗಳಲ್ಲಿ, ತಮ್ಮ ತಮ್ಮ ಮನೆಗಳಲ್ಲಿ ಕುತೂಹಲದಿಂದ ಫಲಿತಾಂಶ ವೀಕ್ಷಣೆಯಲ್ಲಿ ತೊಡಗಿಸಿಕೊಂಡರು.


ಮಂಗಳೂರು ಕ್ಷೇತ್ರದಲ್ಲಿ ಮಂಗಳವಾರ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.ಬೋಳಿಯಾರ್, ಮುಡಿಪು, ದೇರಳಕಟ್ಟೆ, ತೊಕ್ಕೊಟ್ಟು, ಉಳ್ಳಾಲ ಸೇರಿದಂತೆ ಹೆಚ್ಚಿನ ಜಂಕ್ಷನ್‍ಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ ಜನರು ಕುತೂಹಲದಲ್ಲಿ ಟಿ.ವಿ.ಯನ್ನು ವೀಕ್ಷಿಸುವುದು ಕಂಡು ಬಂದರೆ, ಬೋಳಿಯಾರ್ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಾದರೂ ಅಂಗಡಿಗಳು ತೆರೆದಿರಲಿಲ್ಲ.ವಾಹನ ಸಂಚಾರ ವಿರಳತೆ ಮತ್ತು ಜನರೋಡಾಟ ಕಡಿಮೆಯಾದ್ದರಿಂದ ರಿಕ್ಷಾ ಚಾಲಕರು ಬಾಡಿಗೆಯಿಲ್ಲದೆ ಮೊಬೈಲ್‍ಗಳಲ್ಲಿ ಫಲಿತಾಂಶ ವೀಕ್ಷಿಸುವುದು ಕಂಡು ಬಂತು.
ಚುನಾವಣಾ ಫಲಿತಾಂಶ ಕಾರ್ಯಕರ್ತರಲ್ಲಿ ನಿರಾಸಕ್ತಿ : ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಠಿಣ ಸ್ಪರ್ಧೆಯಿದೆ. ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ ಎನ್ನುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಅಭ್ಯರ್ಥಿ ಸೋಲುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಸಕ್ತಿ ಕಂಡು ಬಂತು ಒಂದೆಡೆ ರಾಜ್ಯದಲ್ಲಿ ಅತ್ಯಧಿಕ ಸ್ಥಾನವನ್ನು ಪಡೆದ ಸಂಭ್ರಮವಿದ್ದರು. ಕ್ಷೇತ್ರದಲ್ಲಿ ಸ್ಥಾನ ಕಳೆದುಕೊಂಡಿದ್ದರಿಂದ ಕಾರ್ಯಕರ್ತರು ಅತ್ತ ಸಂಭ್ರಮ ಆಚರಣೆ ನಡೆಸಿಲ್ಲ.
ಖಾದರ್ ರೋಡ್‍ಶೋ : ಸಂಜೆಯವರೆಗೆ ಯಾವುದೇ ಸಂಭ್ರಮವಿಲ್ಲದ ಉಳ್ಳಾಲದಲ್ಲಿ ಸಂಜೆಯಾಗುತ್ತಿದ್ದಂತೆ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಮಂಗಳೂರಿನಿಂದ ಉಳ್ಳಾಲದ ವರಗೆ ರೋಡ್ ಶೋ ನಡೆಯಿತು. ಉಳ್ಳಾಲ ದರ್ಗಾದಲ್ಲಿ ಪ್ರಾರ್ಥನೆ ನೆರವೇರಿಸದ ಬಳಿಕ ತನ್ನ ತಂದೆ ತಾಯಿಯ ಖಬರ್‍ಗೆ ಭೇಟಿ ನೀಡಿ ಬಳಿಕ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರ, ಸಂತ ಸೆಬಾಸ್ತಿಯನ್ನರ ಚರ್ಚ್‍ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
ವಿಜಯೋತ್ಸವ ಇಲ್ಲ : ಯು.ಟಿ.ಖಾದರ್
ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದೇ ಸ್ಥಾನ ಪಡೆದ ಹಿನ್ನಲೆಯಲ್ಲಿ ಈ ಬಾರಿ ವಿಜಯೋತ್ಸವ ಮತ್ತು ಪಟಾಕಿ ಸಿಡಿಸಿ ಸಂಭ್ರಮವನ್ನು ಆಚರಿಸುವುದಿಲ್ಲ. ಕ್ಷೇತ್ರದಲ್ಲಿ ಎಷ್ಟೇ ವಿರೋಧವಿದ್ದರೂ ಈ ವಿರೋಧಕ್ಕೆ ಕಾರಣ ಏನು ಎಂಬುವುದನ್ನು ಮುಂದಿನ ಬೂತ್ ಮಟ್ಟದಲ್ಲಿ ಚರ್ಚೆ ನಡೆಸಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುತ್ತೇನೆ. ನನನ್ನು ಚುನಾವಣೆ ಸಂದರ್ಭದಲ್ಲಿ ವಿರೋಧಿಸುದವರನ್ನು ಒಟ್ಟಾಗಿ ಸೇರಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.



