Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೋಟೆಕಾರು

ಕೋಟೆಕಾರು ಕಾಯರುಮಜಲು ತ್ಯಾಜ್ಯ ನಿರ್ವಹಣ ಘಟಕ ಸ್ಥಾಪನೆ ವಿರೋಧ

UllalaVaniBy UllalaVaniJune 6, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೋಟೆಕಾರು: ಮನೆಗಳು ಮಾತ್ರವಲ್ಲ, ದೇವ ಸಂಕಲ್ಪಗಳು, ನಾಗಚೈತನ್ಯ ವಾಸಸ್ಥಾನ, ದೈವಗಳ ತಾಣ, ದೇವತಾ ಸಂಕಲ್ಪ ಕುಣಿದಾಡುವ ತಾಣವಾದ ಕಾಯರ್‍ಮಜಲಿನ ಸುಮಾರು 9.98 ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಗೆ ಮುಂದಾದವರ ಮಾನಸಿಕ ಭಾವನೆಗಳ ಬಗ್ಗೆ ಸಂಶಯವಿದೆ ಎಂದು ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ಶ್ರೀ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿ ಖೇದ ವ್ಯಕ್ತಪಡಿಸಿದ್ದಾರೆ.

ಕೋಟೆಕಾರು ಕಾಯರ್ ಮಜಲು ಎಂಬಲ್ಲಿ ಯೋಜಿತ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಯ ದುಷ್ಪರಿಣಾಮದ ಕುರಿತು ಕೋಟೆಕಾರು ಗ್ರಾಮಸ್ಥರ ಸಮ್ಮುಖದಲ್ಲಿ , ಕಾಯರ್‍ಮಜಲು ದೇವರ ಅರಮನೆ ವಠಾರದಲ್ಲಿ ಭಾನುವಾರ ಜರಗಿದ ಬಹಿರಂಗ ಜಾಗೃತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಹಲವು ಮನೆಗಳು ಇರುವ ಪ್ರದೇಶದಲ್ಲೇ ಕಾನೂನು ಮೀರಿ ಘಟಕ ಸ್ಥಾಪನೆಗೆ ಮುಂದಾಗಿರುವುದು ದುರಂತ. ಪ್ರದೇಶದ ಪಾವಿತ್ರ್ಯತೆಯನ್ನು ತಿಳಿದು ಮಾಡಲು ಹೊರಟಿರುವುದರ ವಿರುದ್ಧ ಖೇದವಿದೆ. ಜಾಗದ ವೈಶಿಷ್ಟ್ಯತೆ ತಿಳಿದವರೇ ಜಾಗ ತೋರಿಸಿರುವುದು ಅಚ್ಚರಿಯ ಬೆಳವಣಿಗೆ. ಇದನ್ನು ಗ್ರಾಮದ ಜನತೆ ವಿರೋಧಿಸುವುದರ ಮೂಲಕ ಕಾರಣಿಕ ಕ್ಷೇತ್ರ ಕೊಂಡಾಣದ ಭಂಡಾರಮನೆ ಇರುವ ಮಣ್ಣಿನ ಪಾವಿತ್ರ್ಯತೆಯನ್ನು ಉಳಿಸಬೇಕಿದೆ. ಪ್ರದೇಶದಲ್ಲಿ ನಕಾರಾತ್ಮಕ ಭಾವಗಳ ಶಕ್ತಿಯಿದ್ದ ಸಂದರ್ಭ , ಜನ ಕಣ್ಣೀರಿನಲ್ಲೇ ದಿನ ದೂಡುತ್ತಿದ್ದ ಸಂದರ್ಭ ದೇವರಮನೆ ಸ್ಥಾಪಿಸುವುದರ ಮೂಲಕ ಪ್ರದೇಶದಲ್ಲಿ ಸಕಾರಾತ್ಮಕ ಬೆಳವಣಿಗೆ ನಡೆದಿದೆ. ಈ ನಡುವೆ ಕೋಟೆಕಾರು ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಜಾಗದ ಮೌಲ್ಯ ಗೊತ್ತಿಲ್ಲವೇ ? ಎಂದು ಪ್ರಶ್ನಿಸಿದ ಅವರು ಮನೆಯಿಲ್ಲದವರಿಗೆ ನಿವೇಶನ ನೀಡುವ ಆಸೆಯನ್ನು ತೋರಿಸಿ ಇದೀಗ ಅದೇ ಜಾಗವನ್ನು ಕಬಳಿಸುವುದರಲ್ಲಿ ನ್ಯಾಯವಿಲ್ಲ. ಎಲ್ಲಾ ಧರ್ಮದವರು ನಂಬಿಕೆಯಿಟ್ಟಂತಹ ಜಾಗವದು. ಪರಿಸರ ಇಲಾಖೆಯಿಂದ ಅನುಮತಿ ದೊರೆಯದೇ ಇದ್ದರೂ, ಆತುರಾತುರವಾಗಿ ಘಟಕ ನಿರ್ಮಿಸುವುದು ಯಾವ ಕಾರಣಕ್ಕಾಗಿ. ಎಂಟು ವಾರಗಳಿಂದ ಕಾನೂನಾತ್ಮಕ ರೀತಿಯಲ್ಲಿ ಹೋರಾಟಕ್ಕೆ ಇಳಿಯಲಾಗಿದೆ. ರಾಜ್ಯದ ಉಚ್ಛ ನ್ಯಾಯಾಲಯದಲ್ಲೂ ದಾವೆಯನ್ನು ಹೂಡಲಾಗಿದೆ. ಗ್ರಾಮಸ್ಥರ ಬೆಂಬಲ ಅಗತ್ಯ. ಮನೆಯಿರುವ ಪ್ರದೇಶದಲ್ಲಿ ಘಟಕ ನಿರ್ಮಾಣವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಜಿಲ್ಲಾಡಳಿತದಿಂದ ನಿಲ್ಲಿಸಲು ಸಾಧ್ಯ : ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ಪಾವಿತ್ರ್ಯತೆಯನ್ನು ಹೊಂದಿರುವ ಕ್ಷೇತ್ರದಲ್ಲಿ ಘಟಕ ಸ್ಥಾಪನೆಗೆ ಎಂದಿಗೂ ಬಿಡಲಾರೆವು. ಪಟ್ಟಣ ಪಂಚಾಯಿತಿಯಲ್ಲಿ ಈ ಬಗ್ಗೆ ಮಾತನಾಡಿದರೆ ಪ್ರಯೋಜನವಿಲ್ಲ. ಜಿಲ್ಲಾಡಳಿತವೇ ಹೊಣೆಯಾಗಿದ್ದು, ಅಲ್ಲೇ ಮನವಿ ಮಾಡಿ ಯೋಜನೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಬೇಕಿದೆ. ಈ ಹಿಂದೆ ಜಿ.ಪಂ ಸದಸ್ಯನಾಗಿದ್ದ ಸಂದರ್ಭ ಬಂಟ್ವಾಳದ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಮುಂದಾದಾಗಲೂ ವಿರೋಧಿಸಿದ ಫಲವಾಗಿ. ಇದೀಗ ತಾತ್ಕಾಲಿಕವಾದ ಘಟಕ ಇದ್ದು, ಶೀಘ್ರವೇ ಅದು ಸ್ಥಳಾಂತರವಾಗಲಿದೆ. ಕಾಯರ್ ಮಜಲಿನಲ್ಲಿ ಸ್ಥಾಪನೆಗೆ ಎಂದಿಗೂ ಬಿಡುವುದಿಲ್ಲ ಎಂದರು.

ಕುದುರೆಮುಖ ಬೆಟ್ಟ ಅಗೆತದಿಂದ ಕಡಲ್ಕೊರೆತ: ಹಿರಿಯ ಭುಜಂಗ ಶೆಟ್ಟಿ ಮಾತನಾಡಿ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ವಿರೋಧಗಳು ಕೇಳಿಬರುತ್ತಿದ್ದರೂ ಪರಿಸರಕ್ಕೆ ಮಾರಕವಾದಂತಹ ಯೋಜನೆಗಳು ಜಾರಿಯಾಗುತ್ತಲೇ ಇದೆ. ಕುದುರೆಮುಖ ದಲ್ಲಿ ಗಣಿಗಾರಿಕೆ ಆರಂಭದ ಸಂದರ್ಭ ಜನರ ವಿರೋಧ ಕೇಳಿಬಂದರೂ, ಸರಕಾರ ವಿಶ್ವಾಸಗಳನ್ನು ಮುಂದಿಟ್ಟು ಒಂದು ಬೆಟ್ಟವನ್ನು ಅಗೆದು ಕಬ್ಬಿಣ ಸಂಗ್ರಹಿಸಿಯೇ ಬಿಟ್ಟಿದೆ. ಇದರ ದುಷ್ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಆಪತ್ತಿಗೆ ಸಿಲುಕಿದೆ. ಅಂದಿನಿಂದ ಗಾಳಿಯ ಪ್ರಮಾಣ ಹೆಚ್ಚಾಗಿ ಉಳ್ಳಾಲ, ಸುರತ್ಕಲ್, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಆರಂಭವಾಗಿದೆ. ಅದೇ ರೀತಿಯಲ್ಲಿ ಮೀನು ಸಾಗಾಟದ ಲಾರಿಗಳಿಂದ ನೀರು, ಬೈಕಂಪಾಡಿ ರಸ್ತೆಯಲ್ಲಿ ರಾಸಾಯನಿಕಗಳು ಎದ್ದುಕಾಣುತ್ತಿವೆ. ವಿಶ್ವಾಸಗಳನ್ನು ಮುಂದಿಟ್ಟು ಸರಕಾರ ಯೋಜನೆಗಳನ್ನು ಮುಂದಿಟ್ಟು ಬಳಿಕ ಜನರನ್ನು ಆಪತ್ತಿನಲ್ಲಿ ಸಿಲುಕಿಸುತ್ತದೆ. 8 ಮಾರಕ ಟಾಕ್ಸಿನ್ ಗಳ ಪೈಕಿ ಏಳು ತ್ಯಾಜ್ಯದಿಂದ ಬರುತ್ತದೆ. ಅಂತಹ ಯೋಜನೆಯನ್ನು ಜನವಸತಿ ಪ್ರದೇಶದಲ್ಲಿ ನಿರ್ಮಿಸಲು ಹೊರಟಿರುವವರು ಜನರನ್ನು ಅಪಾಯದಲ್ಲಿ ಸಿಲುಕಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಹೇಳಿದ್ದು 3 ಎಕರೆ, 10 ಎಕರೆ ಒತ್ತುವರಿ : ನಿರ್ಮಿಸಲು ಉದ್ದೇಶಿಸಲಾಗಿರುವ ಯೋಜನೆಯ ವಿವರವನ್ನು ನೀಡಿದ ಅಪರ್ಣಾ ವಿ.ಭಟ್ ಮಾತನಾಡಿ ಕೇಂದ್ರದ ಸ್ವಚ್ಛ ಭಾರತ ಯೋಜನೆಯಡಿ ಪ್ರತಿಯೊಂದು ಸ್ಥಳೀಯಾಡಳಿತ ಸಂಸ್ಥೆಗಳ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಸೂಚನೆಯಿದೆ. ಪೌರಾಡಳಿತ ನಿರ್ದೇಶನಾಲಯದ ಸೂಚನೆಯಂತೆ ಕೋಟೆಕಾರು ಪಟ್ಟಣ ಪಂಚಾಯಿತಿಯನ್ನು ಗುರುತಿಸಲಾಗಿದ್ದು, ಅಲ್ಲಿನ ಆಡಳಿತ ಸೂಚಿಸಿದ ಪ್ರದೇಶದಲ್ಲಿ ಘಟಕ ನಿರ್ಮಿಸುತ್ತಾರೆ. ಒಟ್ಟು 5.17 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಅದರಲ್ಲಿ ಶೇ.25 ಕೇಂದ್ರ ಸರಕಾರ, ಶೇ.25 ರಾಜ್ಯ ಹಾಗೂ ಶೇ.50 ಸ್ಥಳೀಯಾಡಳಿತ ಭರಿಸಿ ನಿರ್ಮಿಸುವ ಯೋಜನೆಯಾಗಿದೆ. ಅತಿ ಹೆಚ್ಚು ಮಾಲಿನ್ಯಗೊಳಿಸುವ ಯೋಜನೆಯಾಗಿರುವುದರಿಂದ ರೆಡ್ ಕ್ಯಾಟಗರಿ ಲಿಸ್ಟ್ ನಲ್ಲಿ ಹಲವು ನಿಯಮಗಳನ್ನು ಪಾಲಿಸಬೇಕಾದ ಆದೇಶವಿದೆ. 3 ಎಕರೆ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿ, 2 ಮೀ ಅಗೆದು, 5 ಮೀ ಎತ್ತರದ ಗುಡ್ಡ ನಿರ್ಮಿಸಿ ತ್ಯಾಜ್ಯವನ್ನು ಹಾಕುವ ಯೋಜನೆ. 5 ಲಾರಿಗಳನ್ನು ಪಟ್ಟಣ ಪಂಚಾಯಿತಿಗೆ ನೀಡಿ, 30 ಮಂದಿಗೆ ಉದ್ಯೋಗ ಅವಕಾಶ ಅದರಲ್ಲಿದೆ. ಆದರೆ ಕಾಯರ್ ಮಜಲಿನಲ್ಲಿ ಹೇಳಿರುವುದು 3 ಎಕರೆ ಪ್ರದೇಶ ಆದರೆ 10 ಎಕರೆ ವ್ಯಾಪ್ತಿಯಲ್ಲಿ ಯೋಜನೆ ನಡೆಸಲಾಗಿದೆ. ತ್ಯಾಜ್ಯ ನೀರು ಹರಿಯಲು ಆರಂಭವಾದರೆ ಸ್ಥಳೀಯ ನಿವಾಸಿಗಳು ಕುಡಿಯುವ ನೀರು ವಿಷ ಆಗುವುದರಲ್ಲಿ ಸಂಶಯವಿಲ್ಲ. ಮೀಥೇನ್, ಕಾರ್ಬನ್ ಡಯಾಕ್ಸೈಡಿನಂತಹ ವಿಷಾನಿಲಗಳು ತಯಾರಾಗಿ ಶ್ವಾಸಕೋಶ ಸಮಸ್ಯೆ, ಕಣ್ಣುರಿ, ಉದರದ ಸಮಸ್ಯೆಗಳು ಖಂಡಿತಾ ಬಾಧಿಸಬಹುದು. ಸದ್ಯ ಕೋಟೆಕಾರು ಪ.ಪಂ ವ್ಯಾಪ್ತಿಯ ತ್ಯಾಜ್ಯ ಮಾತ್ರ ಸಂಗ್ರಹಿಸಲಾಗುವುದು ಎಂದು ಹೇಳಲಾಗುತ್ತಿದ್ದರೂ ಮುಂದೆ ಬೇರೆ ಕಡೆಯಿಂದಲೂ ತ್ಯಾಜ್ಯ ತಂದು ಹಾಕುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ನಿಯೋಜಿತ ಪ್ರದೇಶವನ್ನು ನಿವೇಶನಕ್ಕೆಂದು ಮೀಸಲಿಟ್ಟಿರುವ ದಾಖಲೆಯಿದೆ. 2016ರಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿರುವ ಆದೇಶದಂತೆ ಘಟಕ ನಿರ್ಮಿಸಲು ಅನುಮತಿಯೇ ಇಲ್ಲ. ಇತರೆ ಸರಕಾರಿ ಸಂಸ್ಥೆಗಳಿಂದಲೂ ಅನುಮತಿಯನ್ನು ಪಡೆಯಲಾಗಿಲ್ಲ. ಕುಮ್ಕಿ ಜಾಗವನ್ನು ಘಟಕ ಸ್ಥಾಪನೆಗೆಂದೇ ಕುಮ್ಕಿ ವಿರಹಿತ ಎಂದು ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ 2020ರವರೆಗಿನ ಮಾಸ್ಟರ್ ಪ್ಲಾನ್ ಮಾಡುತ್ತದೆ. ಅದರಲ್ಲಿಯೂ ಉಲ್ಲೇಖವಿಲ್ಲ. 10 ಮೀ ದೂರದಲ್ಲಿ ಊರಿನ ಜನರಿಗೆ ಕುಡಿಯುವ ನೀರು ಕೊಡುವ ಬೋರ್ ವೆಲ್ ಇದೆ. ಆದರೆ ಘಟಕ ಸ್ಥಾಪನೆಯಾದಲ್ಲಿ ಜನರಿಗೆ ವಿಷ ನೀರು ಕುಡಿಸಿದಂತೆ ಆಗಬಹುದು ಎಂದು ಗ್ರಾಮಸ್ಥರೂ ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿಶ್ರಾಂತ ಜಿಲ್ಲಾಧಿಕಾರಿ ಗಣಪತಿ, ಕಾಂಗ್ರೆಸ್ ಮುಖಂಡ ಈಶ್ವರ್ ಉಳ್ಳಾಲ್, ದೇವರಮನೆ ದೇವಸ್ಥಾನದ ಟ್ರಸ್ಟೀ ರವೀಂದ್ರ ಕೋಟೆಕಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 18ರಿಂದ ನಾಲ್ಕು ದಿನಗಳ ಯೋಗ ಶಿಬಿರ

June 18, 2026

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

June 17, 2026

ಉಳ್ಳಾಲ; ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ…!!

June 16, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ರಕ್ಷಕರು ಮನೆಯಲ್ಲಿ ಶಿಕ್ಷಕರಾಗಿರಬೇಕು- ಮೊಹಮ್ಮದ್ ಮನ್ಸೂರ್

By UllalaVaniJune 19, 20260

ಶಿಕ್ಷಣವು ಕೇವಲ ಶಾಲೆಯಲ್ಲಿ ಮಾತ್ರ ಕಲಿಯುವುದಲ್ಲ ಮಗು ಹುಟ್ಟಿನಲ್ಲಿಂದ ಸಾಯುವವರೆಗೆ ಮಗು ಕಲಿಯುತಿರಬೇಕು. ಮತ್ತು ಕಲಿಯುತ್ತಾ ಇರುತ್ತದೆ. ಮಗುವಿಗೆ ಎಳೆಯದರಲ್ಲೇ…

ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯದ ಹೊರಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನ ಖಾತ್ರಿ: ಸರ್ಕಾರದ ಆದೇಶ

June 19, 2026

ಎಂ.ಆರ್.ಜಿ. ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್, ಆತಿಥ್ಯ ಕ್ಷೇತ್ರಕ್ಕೆ ಮತ್ತೊಂದು ಮೈಲಿಗಲ್ಲು

June 19, 2026

ಮಣಿಪಾಲ: ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಢಿಕ್ಕಿ – ಪೋಷಕರ ವಿರುದ್ಧ ಕೇಸ್

June 18, 2026
1 2 3 … 1,975 Next
Automatic YouTube Gallery

ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!

ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!; ಪ್ರಿಯಕರನ ಜೊತೆ ಸಲುಗೆ; ಗೆಳತಿ ಸಂಸಾರದಲ್ಲಿ `ಹುಳಿ' ಹಿಂಡಿದ ಪ್ರಿಯತಮೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!
Now Playing
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ...
ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ; ಪ್ರಿಯತಮೆ ಅಂದರ್..!!; ಪ್ರಿಯಕರನ ಜೊತೆ ಸಲುಗೆ; ಗೆಳತಿ ಸಂಸಾರದಲ್ಲಿ `ಹುಳಿ' ಹಿಂಡಿದ ಪ್ರಿಯತಮೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೋಮೇಶ್ವರ ಪುರಸಭೆ ಸಭಾಂಗಣದಲ್ಲಿ `ಕಡಲ ಕೊರೆತ ತಡೆ ಯೋಜನೆಗಳ ಪ್ರಾತ್ಯಕ್ಷಿಕೆ'
Now Playing
ಸೋಮೇಶ್ವರ ಪುರಸಭೆ ಸಭಾಂಗಣದಲ್ಲಿ `ಕಡಲ ಕೊರೆತ ತಡೆ ಯೋಜನೆಗಳ ಪ್ರಾತ್ಯಕ್ಷಿಕೆ'
ಸೋಮೇಶ್ವರದಲ್ಲಿ ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಕುರಿತು ಸಾರ್ವಜನಿಕ ...
ಸೋಮೇಶ್ವರದಲ್ಲಿ ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಕುರಿತು ಸಾರ್ವಜನಿಕ ಸಭೆ;ಕಡಲಕೊರೆತ ತಡೆ ಯೋಜನೆಗಳ ಪ್ರಾತ್ಯಕ್ಷಿಕೆ ನೀಡಿದ ಸಲಹೆಗಾರರು ಮತ್ತು ಇಂಜಿನಿಯರ್

ಹಲವು ಪ್ರಶ್ನೆಗಳು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಾರ್ವಜನಿಕರು

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version