UN NETWORKS ದೇರಳಕಟ್ಟೆ: ಕಣಚೂರು ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಇ)ನ 2017-18 ರ ಪಬ್ಲಿಕ್ ಪರೀಕ್ಷೆಯಲ್ಲಿ 18 ವಿದ್ಯಾರ್ಥಿಗಳು ಅತೀ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗದವರಿಂದಲೂ ಹೃತ್ಪೂರ್ವಕ ಅಭಿನಂದನೆಗಳು.
Author: UllalaVani
UN NETWORKS ಮುಡಿಪು: ಮಂಗಳೂರಿಗೆ ಕೇರಳದ ಕೊಚ್ಚಿಯಿಂದ ಗ್ಯಾಸ್ ಪೈಪ್‍ಲೈನ್ ಬರುತ್ತದೆ, ಮುಂದೆ ಮನೆ ಮನೆಗೆ ನಳ್ಳಿ ನೀರಿನಂತೆ ಗ್ಯಾಸ್ ಪೂರೈಕೆಯಾಗುತ್ತದೆ, ಮಂಗಳೂರು ಮತ್ತಷ್ಟು `ಸ್ಮಾರ್ಟ್’ ಆಗುತ್ತದೆ ಎಂಬ ದೊಡ್ಡ ದೊಡ್ಡ ಕನಸುಗಳನ್ನು ನಗರವಾಸಿಗಳು ಕಾಣುತ್ತಿದ್ದರೆ, ಅತ್ತ ಗ್ಯಾಸ್ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿರುವ ಜಾಗದ ನೂರಾರು ರೈತರು, ಭೂಮಾಲೀಕರು ಈಗಲೇ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಭವಿಷ್ಯದಲ್ಲಿ ಏನು ಅಪಾಯ ಕಾದಿದೆಯೋ ಎನ್ನುವ ಆತಂಕವೂ ಅವರನ್ನು ಹೈರಾಣುಗೊಳಿಸುತ್ತಿದೆ. ಕೇರಳದ ಕೊಚ್ಚಿಯಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಸುವ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಗೇಲ್)ನ ಪೈಪ್‍ಲೈನ್ ಕಾಮಗಾರಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ- ಬಿಸಿಲೆನ್ನದೆ ಭರದಿಂದ ನಡೆಯುತ್ತಿದೆ. ಒಟ್ಟು 437 ಕಿ.ಮೀ. ಉದ್ದದ ಪೈಪ್‍ಲೈನ್‍ನಲ್ಲಿ ದ.ಕ. ಜಿಲ್ಲೆಯ 34 ಕಿ.ಮೀ. ಸೇರಿದ್ದು, ಅದರಲ್ಲಿ 25 ಕಿ.ಮೀ.ಗೂ ಅಧಿಕ ಕಾಮಗಾರಿ ಪ್ರಗತಿಯಲ್ಲಿದೆ. ಕೇರಳದಲ್ಲಿ ಭಾರಿ ಪ್ರತಿರೋಧದ ನಡುವೆಯೇ ಕಾಮಗಾರಿ ನಡೆಯುತ್ತಿದ್ದರೆ, ದಕ್ಷಿಣ ಕನ್ನಡದ ರೈತರು ಹಾಗೂ ಭೂ ಮಾಲೀಕರಿಗೆ ಪರಿಹಾರ ನೀಡಿ ಬಾಯಿ ಮುಚ್ಚಿಸುತ್ತಿರುವುದರಿಂದ…
UN NETWORKS ತಲಪಾಡಿ: ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಇಂದಿನಿಂದಲೇ ಪಣ ತೊಡುವ ಮೂಲಕ ಸ್ವಚ್ಛ ಭಾರತದ ರಾಯಭಾರಿಗಳಾಗಬೇಕು ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು. ಅವರು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ 5ನೇ ತರಗತಿಯಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜೀವನ ಶಿಕ್ಷಣದ ಅಂಗವಾಗಿ ನೂತನವಾಗಿ ಪರಿಚಯಿಸುತ್ತಿರುವ ಸಾವಯವ ಕೃಷಿ ಅಧ್ಯಯನ ಪಠ್ಯಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ನಾವು ನಿತ್ಯ ಜೀವನದಲ್ಲಿ ಪ್ರತಿಯೊಂದು ಕಾರ್ಯಕ್ಕೆ ಪ್ಲಾಸ್ಟಿಕ್‍ಗೆ ಜೋತು ಬಿದ್ದಿದ್ದೇವೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಯೋಮಿತಿಯವರು ಪ್ಲಾಸ್ಟಿಕ್ ಬಳಕೆ ಮಾಡಿ ಎಲ್ಲೆಂದರಲ್ಲಿ ಬಿಸಾಡುವ ಪರಿಪಾಠ ಬೆಳೆಸಿಕೊಂಡಿದ್ದು ಇದರಿಂದ ಪರಿಸರ ನಾಶಕ್ಕೆ ಕಾರಣರಾಗಿತ್ತಿದ್ದೇವೆ. ಪರಿಸರ ನಾಶದಿಂದ ಕುಡಿಯುವ ನೀರು ಮಲಿನಗೊಳ್ಳುತ್ತಿದ್ದು, ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳು ಇಂದಿನಿಂದಲೇ ಮನಸ್ಸಿನಲ್ಲಿ ನಿರ್ಧಾರ ಮಾಡಿ ಪ್ಲಾಸ್ಟಿಕ್ ಮುಕ್ತ ಜೀವನಕ್ಕೆ ನಾಂದಿ ಹಾಡಬೇಕು ಎಂದ ಅವರಿ ವಿದ್ಯಾನಿಕೇತನದಲ್ಲಿ…
UN NETWORKS ಮಂಗಳೂರು:ಯು.ಟಿ.ಖಾದರ್ ಮತ್ತೊಮ್ಮೆ ಕರ್ನಾಟಕ ಸರಕಾರದ ಸಂಪುಟ ದರ್ಜೆಯ ಸಚಿವರಾಗಿರುವುದು ದ.ಕನ್ನಡ, ಉಡುಪಿ, ಕೊಡುಗು ಜಿಲ್ಲೆಗಳ ಅಭಿವೃದ್ಧಿ ಮತ್ತು ಸಾಮರಸ್ಯ ಬಯಸುವ ಜನರ ಗೆಲುವಾಗಿದೆ ಎಂದು ದ.ಕನ್ನಡ ಜಿಲ್ಲಾ ಕಾಂಗ್ರೇಸ್ ವಕ್ತಾರ ಫಾರೂಕ್ ಉಳ್ಳಾಲ್ ವಿಶ್ಲೇಷಿಸಿದ್ದಾರೆ. ಸಿದ್ಧರಾಮಯ್ಯ ನೇತ್ರತ್ವದ ಸರಕಾರ ಜನಪರ ಆಡಳಿತ ನೀಡಿಯೂ ದ.ಕನ್ನಡದಲ್ಲಿ ಯುಟಿಕೆ ಪ್ರತಿನಿಧಿಸುವ ಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ, ಹಾಗೂ ಉಡುಪಿ, ಕೊಡುಗು ಜಿಲ್ಲೆಗಳ ಎಲ್ಲಾ ಕ್ಷೇತ್ರಗಳಲ್ಲೂ ಕಂಡ ಪರಾಜಯ ಮತ್ತು ಬಿಜೆಪಿಯ ಗೆಲುವಿನಿಂದ ಕಳವಳಕ್ಕೊಳಗಾದವರಿಗೆ, ನೂತನ ಸಮಿಶ್ರ ಸರಕಾರದ ಸಂಪುಟದಲ್ಲಿ ಯು.ಟಿ.ಖಾದರ್ ಪ್ರಮುಖ ಖಾತೆಯ ಸಚಿವರಾಗಿರುವುದು,ಹುರುಪು, ಉತ್ಸಾಹ , ಸಂಭ್ರಮ ತಂದಿದೆ ಎಂದು ಫಾರೂಕ್ ಉಳ್ಳಾಲ್ ಹೇಳಿದ್ದಾರೆ. ಸರಳತೆ ಮತ್ತು ಎಲ್ಲರ ವಿಶ್ವಾಸಕ್ಕೆ ಪಾತ್ರವಾಗುವ ಖಾದರ್ ರವರ ಜನಪರ ನಿಲುವು ಈ ಭಾಗದ ಜನರ ಬೇಡಿಕೆಗಳಿಗೆ ನ್ಯಾಯ ಒದಗಲಿದೆ. ಪಕ್ಷ ಮತ್ತು ನಾಡಿನ ಅಭ್ಯುದಯಕ್ಕೆ ಯುಟಿ ಖಾದರ್, ಅರ್ಹ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಆರೋಗ್ಯ ಮತ್ತು ಆಹಾರ…
UN NETWORKS ಉಳ್ಳಾಲ: ಭಾರತ ಸರಕಾರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ,ಅರಣ್ಯ ಮತ್ತು ಪರಿಸರ ಜೀವಿ ಶಾಸ್ತ್ರ ಇಲಾಖೆ ಮತ್ತು ಸೋಮೇಶ್ವರ ಗ್ರಾಮ ಪಂಚಾಯತ್ ವಯಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉಚ್ಚಿಲ ಕಡಲ ಕಿನಾರೆ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಬುದವಾರ ಬೆಳಿಗ್ಗೆ ನಡೆಯಿತು.ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಎಳವೆಯಿಂದಲೇ ಸ್ವಚ್ಚತೆಯನ್ನು ತಮ್ಮ ತಮ್ಮ ಮನೆಯಿಂದ ಪ್ರಾರಂಭಿಸುವುದರಿಂದ ಪರಿಸರ ಪ್ರೇಮದ ಬಗ್ಗೆ ಆಸಕ್ತಿ ಮೂಡುತ್ತದೆ ಎಂದರು. ಮಂಗಳೂರು ಪರಿಸರ ಇಲಾಖೆ ಪ್ರಾದೇಶಿಕ ನಿರ್ದೇಶಕ ಡಾ/ದಿನೇಶ್ ಕುಮಾರ್ ವೈ.ಕೆ, ಮಂಗಳೂರು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್.ಯು, ಮಂಗಳೂರು ಪರಿಸರ ಇಲಾಖೆ ಅರಣ್ಯಾಧಿಕಾರಿ ಉತ್ತಮ್,ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್,ಪುರುಷೋತ್ತಮ ಅಡ್ಕ, ಮನೋಹರ ಪುತ್ರನ್, ಶರೀಪ್ ಉಪಸ್ಥಿತರಿದ್ದರು. ತಲಪಾಡಿ ಶಾರದಾನಿಕೇತನ, ತಲಪಾಡಿ ಪ್ರೌಢ ಶಾಲೆ,ಉಚ್ಚಿಲ ಬೋವಿ ಪ್ರೌಢ ಶಾಲೆ, ಕೊಲ್ಯ ಜೋಯಿಲಾಂಡ್ ಆಂಗ್ಲ ಮಾದ್ಯಮ…
UN NETWORKS ಉಳ್ಳಾಲ: ರೋಟರಿ ಕ್ಲಬ್ ದೇರಳಕಟ್ಟೆ ದಶಮಾನೋತ್ಸವ “ರೋಟರಿ ಸೇವಾಶ್ರೀ ಪ್ರಶಸ್ತಿ “ರೋಟರಿ ಕ್ಲಬ್ ದೇರಳಕಟ್ಟೆಯ ದಶಮಾನೋತ್ಸವ ಕಾರ್ಯಕ್ರಮ ತೊಕ್ಕೊಟ್ಟಿನ ಅಂಬಿಕಾ ರಸ್ತೆ ಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿದ್ದ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ರೋಹಿನಾಥ್ ಪಿ ಮಾತನಾಡಿ ರೋಟರಿ ಕ್ಲಬ್ ದೇರಳಕಟ್ಟೆ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸೇವಾ ಕಾರ್ಯ ಎಲ್ಲಾ ಕ್ಲಬ್ ಗಳಿಗೆ ಮಾದರಿ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಕಳೆದ ಹತ್ತು ವರ್ಷಗಳಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಎಲ್ಲಾ ಅಧ್ಯಕ್ಷ ,ಕಾರ್ಯದರ್ಶಿ,ನಿರ್ದೇಶಕರು,ಪದಾಧಿಕಾರಿಗಳಿಗೆ ಸರ್ವ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟೂ ಸಮಾಜ ಮುಖಿ ಕಾರ್ಯಗಳನ್ನು ಮಾಡೋಣ ಎಂದರು . ಇದೇ ಸಂಧರ್ಭ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಐವರಿಗೆ ಕ್ಲಬ್ ನ ಪ್ರತಿಷ್ಟಿತ”ರೋಟರಿ ಸೇವಾಶ್ರೀ ಪ್ರಶಸ್ತಿ” ನೀಡಿ ಗೌರವಿಸಲಾಯಿತು . ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟೀಯ ಕಬ್ಬಡ್ಡಿ ಕ್ರೀಡಾಪಟು…
UN NETWORKS ಉಳ್ಳಾಲ: ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ಬಹರೈನ್ ರಾಷ್ಟ್ರೀಯ ಸಮಿತಿ ಯ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಮನಾಮ ಕೆಸಿಎಫ್ ಸೆಂಟರ್ ನಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ನೂತನ ಸಾಲಿನ ಅಧ್ಯಕ್ಷ ರಾಗಿ ಜಮಾಲುದ್ದೀನ್ ವಿಟ್ಟಲ್, ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಶರೀಫ್ ಕಕ್ಕೆಪದವು, ಕೋಶಾಧಿಕಾರಿಯಾಗಿ ಎಸ್.ಎಂ. ಫಾರೂಖ್ ಕುಂಬ್ರ,ಉಪಾಧ್ಯಕ್ಷರುಗಳಾಗಿ ಸಯ್ಯದ್ ಅಲಿ ತಂಬುತಡ್ಕ , ಅಬ್ದುಲ್ ಅಝೀಝ್ ಸುಳ್ಯ, ಹನೀಫ್ ಕಿನ್ಯ *ಕಾರ್ಯದರ್ಶಿಗಳಾಗಿ* ಫಝಲ್ ಸುರತ್ಕಲ್, ಅಶ್ರಫ್ ರೆಂಜಾಡಿ, ಅಬ್ದುಲ್ ಕರೀಂ ಮಾಝಾ ಕೆ.ಸಿ.ರೋಡ್, ಇವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ* ರಿಯಾಝ್ ಸುಳ್ಯ, ಇಖ್ಬಾಲ್ ಮಂಜನಾಡಿ,ಮುಹಮ್ಮದ್ ಬಲ್ಕಾಡ್,ಅಬ್ದುಸಮದ್ ಉಜಿರ್ಬೆಟ್ಟು,, ಅಶ್ರಫ್ ಬೇಂಗಿಲ,ಶಾಫಿ ಕಬಕ,ಝಕರಿಯಾ ಎಣ್ಮೂರ್,ಸುಹೈಲ್ ಮೂಲರಪಟ್ನ, ಮುಹ್ಸಿನ್ ಸುಳ್ಯ, ಮನ್ಸೂರ್ ಬೆಳ್ಮ, ಸಲೀಂ ಕೆ.ಸಿ.ರೋಡ್,ಅಬ್ದುಲ್ ಮಜೀದ್ ಮುಕ್ಕ,ಹಾರಿಸ್ ಒಕ್ಕೆತ್ತೂರ್, ಸೂಫಿ ಪೈಂಬಚಾಲ್, ಮೂಸ ಪೈಂಬಚಾಲ್, ಅಶ್ರಫ್ ಕಿನ್ಯ, ನೌಫಲ್ ವಿಟ್ಲ, ಹನೀಫ್ ಗುರುವಾಯನಕೆರೆ, ಅಬ್ದುಲ್…
UN NETWORKS ಬಾಯಾರ್: ಕಾಸರಗೋಡುವಿನ ಬಾಯಾರ್ ಮುಜಮ್ಮಉ ಸಖಾಫಾತ್ ಸುನ್ನಿಯ್ಯಾದಲ್ಲಿ ಜೂನ್7 ರಮಳಾನಿನ 23ನೇ ರಾತ್ರಿಯಂದು ಪ್ರಾರ್ಥನಾ ಸಮ್ಮೇಳನ ಪ್ರಯುಕ್ತ ಸಮೂಹಿಕ ಇಫ್ತಾರ್ ಹಾಗೂ ಕೂಟು ಪ್ರಾರ್ಥನೆ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ಅಲ್-ಬುಖಾರಿ ಬಾಯಾರ್ ತಂಙಳ್ ನೇತೃತ್ವದಲ್ಲಿ ಮುಜಮ್ಮಉ ಸಖಾಫಾತಿ ಸುನ್ನಿಯ್ಯಾ ವಠಾರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮ್ಯಾನೇಜರ್ ಸಿದ್ದೀಕ್ ಸಖಾಫಿ ಬಾಯಾರ್ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
UN NETWORKS ಕೊಣಾಜೆ: ವಿಶ್ವಮಂಗಳ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಪರಿಸರ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರದ ಮಹತ್ತ್ವವನ್ನು ಕುರಿತು ಮಾತನಾಡಿದರು. ಘೋಷಣೆಗಳೊಂದಿಗೆ, ಕೊಣಾಜೆ ಪರಿಸರದಲ್ಲಿ ಜಾಥಾವನ್ನು ನಡೆಸಿದ ಬಳಿಕ ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಪರಿಸರಗೀತೆಯನ್ನು ಹಾಡುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಹಾಗೂ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
UN NETWORKS ನಾಟೆಕಲ್: ಕಣಚೂರು ಪಬ್ಲಿಕ್ ಸ್ಕೂಲ್‍ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆಯ ಕುರಿತಾದ ಭಾಷಣ ಹಾಗೂ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಪರಿಸರದ ಕುರಿತು ಜಾಗೃತಿಯನ್ನು ಮೂಡಿಸುವ ಸಲುವಾಗಿ ಘೋಷಣೆಯೊಂದಿಗೆ ಭಿತ್ತಿಪತ್ರವನ್ನು ಪ್ರದರ್ಶಿಸಲಾಯಿತು. ಮಕ್ಕಳು ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಜನಜಾಗೃತಿ ಮೂಡಿಸಿದರು.

