UN NETWORKS
ಮುಡಿಪು: ಸಂಬಾರತೋಟ ವಿಸ್ಡಮ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸಂಸ್ಥೆಯ ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಸಂಬಾರತೋಟ ನೂರಾನಿಯ್ಯಾ ಜುಮಾ ಮಸೀದಿ ಖತೀಬರಾದ ಪಿ.ಕೆ.ಮುಹಮ್ಮದ್ ಮದನಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯೆಗೆ ಇರುವಷ್ಟು ಪ್ರಾಧಾನ್ಯತೆ ಈ ಲೋಕದಲ್ಲಿ ಬೇರೆ ಯಾವುದಕ್ಕೂ ಇಲ್ಲ, ಈ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಹೂ ಹಾಕುವ ಕಲ್ಲು ಸಮೂಹ ಸಂಪನ್ಮೂಲ ವ್ಯಕ್ತಿ ಆಶಾ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಸಂಬಾರತೋಟ ನೂರಾನಿಯ್ಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ, ಪ್ರಧಾನ ಕಾರ್ಯದರ್ಶಿ ಎಸ್,ಇ.ಮುಹಮ್ಮದ್,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬೂಬಕರ್ ಕೊಡೆಕ್ಕಲ್, ಅಹ್ಮದ್ ಕುಂಞ ಕತ್ತರ್, ಸಂಬಾರತೋಟ ಶಾಲಾ ಮುಖ್ಯೋಪದ್ಯಾಯಿನಿ ಶಹನಾಝ್ ಪರ್ವಿನ್, ಸಂಬಾರತೋಟ ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಎಚ್.ಎಮ್.ಶಾಹುಲ್ ಹಮೀದ್, ವಿಸ್ಡಮ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಆಸೀಪ್.ಎಸ್.ಕೆ, ಸಲಹೆಗಾರ ಸಿ.ಎ.ಹನೀಫ್, ಶಬೀರ್ ಕತ್ತರ್, ಸದಸ್ಯರಾದ ಯಾಸೀರ್, ಬಾತೀಶ್,ತಫ್ಸೀರ್, ಝಮೀರ್,ನವಾಝ್,ಉಬೈದ್ ಉಪಸ್ಥಿತರಿದ್ದರು.
ಸಂಬಾರತೋಟ ವಿಸ್ಡಮ್ ವೆಲ್ಫೇರ್ ಅಸೋಸಿಯೇಶನ್ ಉಪಾಧ್ಯಕ್ಷ ಮುಹಮ್ಮದ್ ಅಸ್ಗರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಅನೀಶ್ ದನ್ಯವಾದಗೈದರು.


