Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಮೊಗವೀರಪಟ್ನ ಶಿವಾಜಿ ಕ್ಲಬ್ ಬಳಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕಂಬ ನೆಲಕ್ಕೆ ಬಿದ್ದರೂ, ಅದನ್ನು ತೆರವುಗೊಳಿಸದೆ ಅಪಾಯವನ್ನು ಆಹ್ವಾನಿಸುವ ಸ್ಥಿತಿ ಇದೆ. ಇದರಿಂದಾಗಿ ಸ್ಥಳೀಯರು ವಿದ್ಯುತ್ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಸಾಲು ಸಾಲಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸಾರ್ವಜನಿಕರು ನಡೆದಾಡುವ ರಸ್ತೆ ಬದಿಯಲ್ಲೇ ವಿದ್ಯುತ್ ಕಂಬ ಹಾಗೂ ತಂತಿಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ. ಈ ಕುರಿತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಹಾಗೂ ಲೈನ್ ಮೆನ್ ನೋಡಿ ಹೋಗಿದ್ದಾರೆ. ಆದರೆ 24 ಗಂಟೆಯಾದರೂ ತೆರವಾಗಲಿ, ದುರಸ್ತಿಯಾಗಲಿ ಮಾಡಲಿಲ್ಲ ಅನ್ನುವುದು ಸಾರ್ವಜನಿಕರ ಆರೋಪ. ಸಮುದ್ರ ಕಿನಾರೆಗೆ ನೂರಾರು ಪ್ರವಾಸಿಗರು, ಸ್ಥಳೀಯ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ದಾಟುತ್ತಿರುತ್ತಾರೆ. ಆದರೂ ಇಲಾಖೆಯವರು ತೆರವುಗೊಳಿಸದೇ ಇರುವುದರಿಂದ ತೊಂದರೆಯಾಗಿದೆ ಅನ್ನುವ ಆರೋಪ ಕೇಳಿಬಂದಿದೆ. ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಉಳ್ಳಾಲ ವ್ಯಾಪ್ತಿಯಲ್ಲಿ 70ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ…

Read More

UN NETWORKS ಮಂಗಳೂರು: ಕರಾವಾಳಿಯಲ್ಲಿ ಸುರಿದ ಭಾರೀ ಮಳೆಗೆ ನಗರದ ಹಂಪನಕಟ್ಟೆಯ ಐತಪ್ಪ ಶೆಟ್ಟಿ ಕಂಪೌಂಡಿನಲ್ಲಿ ಭಾನುವಾರ ಮುಂಜಾನೆ ಬೃಹತ್ ಮರ ಉರುಳಿ ಎರಡು ಮನೆಗಳಿಗೆ ಹಾಣಿಯಾದ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಯಾಔಉದೇ ಪ್ರಾಣ ಹಾಣಿ ನಡೆದಿಲ್ಲ. ಸ್ಥಳಕ್ಕಾಗಿಮಿಸಿದ ಶಾಸಕ ವೇದವ್ಯಾಸ್ ಕಾಮತ್ ಅವರು ತಕ್ಷಣವೇ ಅಗ್ನಿ ಶಾಮಕದಳ, ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳನ್ನು ಮತ್ತು ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತೆರವು ಕ್ರಮಕ್ಕೆ ಸೂಚಿಸಿದರು.

Read More

UN NETWORKS ಉಳ್ಳಾಲ: ಮಳೆಗಾದಲ್ಲಿ ಜಿಲ್ಲೆಯಾದ್ಯಂತ ಸಮುದ್ರ ರಭಸವಾಗಿರುವುದರಿಂದ ಪ್ರವಾಸಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದಂತೆ ಜಿಲ್ಲೆಯ ಎಂಟು ಸಮುದ್ರ ಕಿನಾರೆಗಳಲ್ಲಿ 24 ಗೃಹರಕ್ಷಕ ಸಿಬ್ಬಂದಿ ಬೀಚ್ ಗಾರ್ಡ್‍ಗಳಾಗಿ ಕಾರ್ಯಾಚರಿಸುತ್ತಿದ್ದಾರೆ. ಅದರಲ್ಲಿ ಮೂವರು ಉಳ್ಳಾಲ ಸಮುದ್ರ ತೀರದಲ್ಲೂ ಕಾರ್ಯಾಚರಣೆಯನ್ನು ಭಾನುವಾರದಿಂದ ಆರಂಭಿಸಿದ್ದಾರೆ. ಜೀವರಕ್ಷಕದಳ ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರ ಜೂನ್ ತಿಂಗಳಿನಲ್ಲಿ ಜಿಲ್ಲಾಡಳಿತ ನೀಡಿದ ಆದೇಶದಂತೆ ಗೃಹರಕ್ಷಕ ಸಿಬ್ಬಂದಿಯನ್ನು ಸಮುದ್ರ ಕಿನಾರೆಗೆ ನೇಮಿಸಲಾಗಿತ್ತು. ಇದೀಗ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಆದೇಶದಂತೆ ಇಂದಿನಿಂದ ಸಮುದ್ರ ಕಿನಾರೆಗಳಲ್ಲಿ ಸೇವೆಯನ್ನು ಆರಂಭಿಸಿದ್ದಾರೆ. ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ 1,2, ಪಣಂಬೂರು, ಸಸಿಹಿತ್ಲು, ಸುರತ್ಕಲ್, ಮುಕ್ಕ ಭಾಗಗಳಲ್ಲಿ ತಲಾ ಮೂರರಂತೆ ಗೃಹರಕ್ಷಕ ಸಿಬ್ಬಂದಿ ಸೇವೆ ನಡೆಸುತ್ತಿದ್ದಾರೆ. ಹೆಚ್ಚು ಪ್ರವಾಸಿಗರು ಬರುವ ಸ್ಥಳವನ್ನು ಗುರುತಿಸಿ ಅವರಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಗಾರ್ಡ್‍ಗಳು ಮಾಡುತ್ತಿದ್ದಾರೆ. ಮಳೆಗಾಲದ ಸಮುದ್ರ ತೀರದಲ್ಲಿ ಅಲೆಗಳ ರಭಸ ಹೆಚ್ಚಿರುತ್ತದೆ. ಅದೇ ಸಮಯದಲ್ಲಿ ಪ್ರವಾಸಿಗರು ಜಾಸ್ತಿ…

Read More

UN NETWORKS ಉಳ್ಳಾಲ : ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 2018-19ರ ಸಾಲಿಗೆ ನೂತನ ಅಧ್ಯಕ್ಷರಾಗಿ ನರಸಿಂಹ ನಾಯ್ಕ ಅವರು ಪುನರಾಯ್ಕೆಗೊಂಡಿದ್ದಾರೆ. ಉಳಿದಂತೆ ಪದಾಧಿಕಾರಿಗಳಾಗಿ ರಂಜನ್ ಎಂ.ನಾಯ್ಕ್ ದೇರೆಬೈಲ್,ಧನಲಕ್ಷ್ಮಿ ಎಂ.(ಉಪಾಧ್ಯಕ್ಷರು) ಮುರಳೀಧರ ನಾಯ್ಕ‌ (ಪ್ರಧಾನ ಕಾರ್ಯದರ್ಶಿ),ವೆಂಕಟೇಶ್ ಬಂಟ್ವಾಳ,ಆಶಾ ನಾಯ್ಕ ಗೋರಿಗುಡ್ಡೆ (ಕಾರ್ಯದರ್ಶಿಗಳು),ಚಂದ್ರಶೇಖರ್ ನಾಯ್ಕ ಬಪ್ಪಾಲ್ (ಕೋಶಾಧಿಕಾರಿ) ಆಯ್ಕೆಗೊಂಡಿದ್ದಾರೆ.ಮಂಜುನಾಥ ನಾಯ್ಕ ಸುಭಾಸ್ ನಗರ,ಇಂದುಶೇಖರ್ ಭಂಡಾರಬೈಲ್,ಮಹೇಶ್ ನಾಯ್ಕ ಬಂಟ್ವಾಳ,ಪ್ರವೀಣ್ ನಾಯ್ಕ ಬಂಟ್ವಾಳ,ಜಯಶೀಲ ಯು.ನಾಯ್ಕ ಬಜಾಲ್,ಮೋಹಿನಿ ಶೆಟ್ಟಿಬೊಟ್ಟು (ಸಂಘಟನಾ ಕಾರ್ಯದರ್ಶಿಗಳು) ಹಾಗೆಯೇ ಯೋಗೀಶ್ ನಾಯ್ಕ ಪಂಪ್ ವೆಲ್,ರಾಜೇಶ್ ನಾಯ್ಕ್ ಕೋಡಿಕಲ್,ಸುಭಾಸ್ ಕುಮಾರ್ ಬಿಜೈ,ಉಷಾ ರಂಜನ್ ದೇರೆಬೈಲ್,ಶೀಲಾ ಸುದೇಶ್ ಪಂಪ್ ವೆಲ್ ( ಕ್ರೀಡಾ ಕಾರ್ಯದರ್ಶಿಗಳು) ಉಳಿದಂತೆ33 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಕಾಫಿಕಾಡ್ ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಉಮಾನಾಥ ನಾಯ್ಕ ಉಳ್ಳಾಲ ಅವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ನಿಕಟಪೂರ್ವ ಪ್ರ.ಕಾರ್ಯದರ್ಶಿ ಕೋಡಿ ಜಯ ನಾಯ್ಕ ,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿಯ ಪ್ರ.ಕಾರ್ಯದರ್ಶಿ ಯು. ದಯಾನಂದ ನಾಯ್ಕ…

Read More

UN NETWORKS ಉಳ್ಳಾಲ: ತಂಡವೊಂದು ವಿದ್ಯಾರ್ಥಿ ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮರಾಠಿಮೂಲೆ ಮಸೀದಿ ಆವರಣದಲ್ಲಿ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ.ಕಿನ್ಯಾ ನಿವಾಸಿ ಸಕಲೈನ್ (16) ತಂಡದಿಂದ ದಾಳಿಗೊಳಗಾದ ವಿದ್ಯಾರ್ಥಿ. ನಾಟೆಕಲ್ ವಸತಿ ಶಾಲೆಯ ಒಂಭತ್ತನೇ ತರಗತಿ ವಿದ್ಯಾಥಿಯಾಗಿದ್ದಾನೆ. ಈತನ ಮೇಲೆ ಮಂಜೇಶ್ವರ ಮೂಲದ ಮೂವರ ತಂಡ ಕೃತ್ಯ ಎಸಗಿದೆ. ಘಟನೆ ವಿವರ: ಶುಕ್ರವಾರ ಸಂಜೆ ಉಪವಾಸ ಬಿಡುವ ಸಮಯ ಸಕಲೈನ್ ಮತ್ತು ಆತನ ಸಹಪಾಠಿ ಅರಾಫ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿತ್ತು. ಬಳಿಕ ಶಾಲಾ ಅಧ್ಯಾಪಕರು ಅದನ್ನು ಸಮಾಧಾನಿಸಿ ಇಬ್ಬರನ್ನು ನಮಾಜಿಗೆಂದು ಮರಾಟಿಮೂಲೆ ಮಸೀದಿಗೆ ಕಳುಹಿಸಿದ್ದರು. ಆದರೆ ಈ ಪೈಕಿ ಅರಾಫ್ ಎಂಬಾತ ಮೊಬೈಲ್ ಮೂಲಕ ತನ್ನ ಪರಿಚಿತರಿಗೆ ವಿಚಾರ ತಿಳಿಸಿ, ಸಕಲೈನ್ ಗೆ ಗತಿ ಕಾಣಿಸುವಂತೆ ಸೂಚಿಸಿದ್ದ ಎನ್ನಲಾಗಿದೆ. ಮಸೀದಿಯ ಹೊರ ಆವರಣದಲ್ಲಿ ನಮಾಜಿನಲ್ಲಿ ತೊಡಗಿದ್ದ ಸಕಲೈನ್ ಬಳಿ ಬಂದ ಮೂವರ ತಂಡ ಅಲ್ಲಿಂದ ಏಕಾಏಕಿ ಹೊರಗೆಳೆದು ಹಾಕಿ ಸ್ಟಿಕ್ ಮೂಲಕ ಮಾರಣಾಂತಿಕ ದಾಳಿ…

Read More

UN NETWORKS ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನ ಎದುರಿನ ಮರದ ಟೊಂಗೆವೊಂದು ಬಿದ್ದು ನಾಲ್ವರಿಗೆ ಗಾಯವಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಾರ್ನಮಿಕಟ್ಟೆಯ ಸುರೇಖಾ ಶೆಟ್ಟಿ (53), ನಂದಿಗುಡ್ಡ ನಿವಾಸಿ ಪ್ರಮೀಳಾ ಸುವರ್ಣ (49), ಜಪ್ಪು ಕುಟ್ಪಾಡಿಯ ನವಿನ್ ಮಡಿವಾಳ (45) ಹಾಗೂ ಮಾರ್ನಮಿಕಟ್ಟೆಯ ತೇಜಸ್ವಿನಿ (20) ಗಾಯಗೊಂಡವರು. ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ದೇವಸ್ಥಾನದ ಎದುರಿನ ಅಶೋಕ ಮರದ ರೆಂಬೆಯೊಂದು ತುಂಡಾಗಿ ಬಿದ್ದಿದ್ದು, ಈ ಸಂದರ್ಭ ಅಲ್ಲಿದ್ದ ನಾಲ್ಕು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಆ್ಯಕ್ಟಿವಾ ದ್ವಿಚಕ್ರ ವಾಹನವೊಂದಕ್ಕೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

UN NETWORKS ಇರಾ: ಇರಾ ಸಮೀಪದ ಕಲ್ಲಾಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಬದಿಯ ಚರಂಡಿಗೆ ಉರುಳಿ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಕಡಲ್ಕೊರೆತ ತಡೆಗೆ ಕಲ್ಲು ಸಾಗಾಟ ನಡೆಸುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

Read More

UN NETWORKS ಬಾಯಾರ್ : ಉಲೇಮಾಗಳ ಗೌರವವನ್ನು ಉಳಿಸುವ ಕೆಲಸ ಎಲ್ಲಾ ಯುವಸಮುದಾಯದಿಂದ ಆಗಬೇಕಿದೆ. ಅವರ ಹೆಸರಿಗೆ ಕಪ್ಪು ಚುಕ್ಕೆ ತರುವಂತಹ ಕೆಲಸವನ್ನು ಯಾರೂ ಮಾಡದಿರಿ ಎಂದು ರಾಜ್ಯದ ನೂತನ ವಸತಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ಅವರು ಕಾಸರಕೋಡುವಿನ ಬಾಯಾರ್ ಮುಜಮ್ಮಉ ಸಖಾಫಾತ್ ಸುನ್ನಿಯ್ಯಾದಲ್ಲಿ ರಮಳಾನಿನ 23ನೇ ರಾತ್ರಿ ಪ್ರಯುಕ್ತ ಗುರುವಾರ ಅಯೋಜಿಸಿದ ಪ್ರಾರ್ಥನಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಮಕ್ಕಳು, ಯುವಸಮುದಾಯ ಎಲ್ಲರೂ ಉಲೇಮಾ, ತಂಙಳ್ ಅವರಿಂದ ಸಾಧ್ಯವಾದಷ್ಟು ದುಆ ಪಡೆದಲ್ಲಿ ಒಳಿತು. ಈ ಮೂಲಕ ಧಾರ್ಮಿಕ ಶಕ್ತಿ ಅವರಲ್ಲಿ ಜಾಗೃತಿಯಾಗುತ್ತದೆ. ಎರಡನೇ ಬಾರಿ ಸಚಿವನಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ನಡೆಸಿ ತಕ್ಷಣ ಖಾತೆಗೆ ಸಂಬಂಧಿಸಿದ ಸೆಕ್ರೆಟರಿಯನ್ನಾಗಲಿ, ಕಚೇರಿಯನ್ನಾಗಲಿ ಹುಡುಕಲು ಮುಂದಾಗಿಲ್ಲ. ಬದಲಾಗಿ ಪುತ್ರಿಯನ್ನು ಕೇರಳದ ಮಹ್‍ಅದನಿ ಸಂಸ್ಥೆಗೆ ಬಿಟ್ಟು, ಸಯ್ಯದ್ ಖಲೀಲ್ ತಂಙಳ್ ಕಡಲುಂಡಿ ಅವರ ಸಂದರ್ಶನ ನಡೆಸಿ ತೃಪ್ತನಾದೆ. ಅಲ್ಲಿಂದ ಉಳ್ಳಾಲದ ಅಸ್ತಂಗತ ಖಾಝಿ ತಾಜುಲ್ ಉಲೇಮಾ ಅವರ ಮಕ್‍ಬರ ಸಂದರ್ಶನಗೈದು, ನೇರವಾಗಿ ಬಾಯಾರು ತಂಙಳ್ ಅವರ…

Read More

UN NETWORKS ಮಂಗಳೂರು: ಭಾರತ ಚುನಾವಣಾ ಆಯೋಗದ ಅಧಿಸೂಚನೆಯಂತೆ ಕರ್ನಾಟಕ ನೈರುತ್ಯ ಪದವೀಧರ/ಶಿಕ್ಷಕರ ಕ್ಷೇತ್ರದ ದೈವಾರ್ಷಿಕ ಚುನಾವಣೆಗೆ ದ.ಕ.ಜಿಲ್ಲೆಯಲ್ಲಿ ಕ್ರಮವಾಗಿ ಪದವೀಧರ ಕ್ಷೇತ್ರಕ್ಕಾಗಿ 23 ಮತಗಟ್ಟೆಗಳು ಮತ್ತು ಶಿಕ್ಷಕರ ಕ್ಷೇತ್ರಕ್ಕಾಗಿ 14 ಮತಗಟ್ಟೆಗಳನ್ನು ಅಳವಡಿಸಲಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತದಾರರ ಪಟ್ಟಿಗಳಲ್ಲಿ ಹೆಸರು ನೋಂದಾಯಿಸಿರುವ ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಬಹುದು. ಅಲ್ಲದೆ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದವರು ಅಧಿಕೃತ ದಾಖಲೆಗಳಲ್ಲಿ ಯಾವುದಾದರೊಂದನ್ನು ಮತಗಟ್ಟೆಯಲ್ಲಿ ಹಾಜರುಪಡಿಸಿ, ಮತದಾನ ಮಾಡಬಹುದಾಗಿದೆ. ಪದವೀಧರರ ಕ್ಷೇತ್ರ ಮತಗಟ್ಟೆಗಳು: ಮುಲ್ಕಿ-ನಗರ ಪಂಚಾಯತ್ ಕಟ್ಟಡ, ಮೂಡುಬಿದಿರೆ-ಪುರಸಭೆ ಕಟ್ಟಡ (2 ಮತಗಟ್ಟೆ), ಸುರತ್ಕಲ್-ಗೋವಿಂದದಾಸ ಕಾಲೇಜು (2 ಮತಗಟ್ಟೆ), ಬಜಪೆ-ಪಂಚಾಯತ್ ಕಟ್ಟಡ, ಗುರುಪುರ- ಸರಕಾರಿ ಪದಪೂರ್ವ ಕಾಲೇಜು, ಹಂಪನಕಟ್ಟೆ-ಯುನಿವರ್ಸಿಟಿ ಕಾಲೇಜು ಮಂಗಳೂರು-(5 ಮತಗಟ್ಟೆಗಳು), ಕೊಣಾಜೆ-ವಿಶ್ವ ಮಂಗಳಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೊಣಾಜೆ, ಬಬ್ಬುಕಟ್ಟೆ-ದ.ಕ. ಜಿಲ್ಲಾ ಪಂಚಾಯತ್ ಹೈಯರ್ ಪ್ರೈಮರಿ ಸ್ಕೂಲ್, ಬಿ.ಸಿ. ರೋಡ್-ಮಿನಿ ವಿಧಾನ ಸೌಧ ತಾಲೂಕು…

Read More

UN NETWORKS ಮಂಗಳೂರು, ಉಡುಪಿ,: ದ.ಕ. ಜಿಲ್ಲೆ ಮತ್ತು ಉಡುಪಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಉಡುಪಿಯಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿನ್ಸ್ ಪ್ರಾಥಮಿಕ, ಪ್ರೌಢಶಾಲೆ ಹಾಗು ಪದವಿ ಪೂರ್ವ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಿದ್ದಾರೆ. ಮಂಗಳೂರಿನಲ್ಲಿ ಮಳೆ ಬಿರುಸು ಪಡೆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದ.ಕ ಜಿಲ್ಲೆ ಶಾಲೆಗಳಿಗೆ ಇಂದು ಮತ್ತೆ ನಾಳೆ ರಜೆ ಘೋಷಿಸಿದ್ದಾರೆ.

Read More