UN NETWORKS ಉಳ್ಳಾಲ: ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಇದರ ಅಂಗ ಸಂಸ್ಥೆಯಾದ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಸರಿ ಶಾಖೆ ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಕುಂಪಲ ಶಾಲಾ ಮಕ್ಕಳಿಗೆ ಯೋಗಾಭ್ಯಾಸ ಮತ್ತು ಯೋಗದ ಬಗ್ಗೆ ಮಾಹಿತಿ ಶಿಬಿರವನ್ನು ಕುಂಪಲ ಶಾಲೆಯಲ್ಲಿ ನಡೆಸಲಾಯಿತು. ಕೇಸರಿ ಯೋಗ ಶಾಖೆ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಬಂಧುಗಳು ಕಾರ್ಯಕ್ರಮ ನಡೆಸಿ ಕೊಟ್ಟರು., ಶಾಲಾ ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಕೇಸರಿ ಮಿತ್ರ ವೃಂದ ಮತ್ತು ಕೇಸರಿ ಮಾತೃಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Author: UllalaVani
UN NETWORKS ಕೊಣಾಜೆ: ಯೋಗದ ಮೂಲಕ ಮಾನಸಿಕ ಕೇಂದ್ರಿಕರಣದದ ಜೊತೆಗೆ ಶಾರೀರಿಕವಾಗಿಯೂ ಬಲವರ್ಧನೆ ಮಾಡಬಹುದು ಹಾಗೂ ವಿವಿಧ ಆಸನಗಳು ಆರೋಗ್ಯ ವೃದ್ಧಿಗೆ ಕಾರಣವಾಗುತ್ತವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ, ವಿಭಾಗದ ಮುಖ್ಯಸ್ಥರಾದ ಡಾ| ಕೆ. ಕೃಷ್ಣ ಶರ್ಮ ಅಭಿಪ್ರಾಯಪಟ್ಟರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶ್ವಮಂಗಳ ಸಭಾಭವನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಾಗಿ ಭಾಗವಹಿಸಿ ಮಾತನಾಡಿದರು. ಆಡಳಿತ ಮಂಡಳಿಯ ಮುಖ್ಯಸ್ಥ ಪ್ರೊ| ಬಿ.ಇಸ್ಮಾಯಿಲ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯ ಮೂಲಕ ನಾವು ಗುರಿಯನ್ನು ತಲುಪಬಹುದು. ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸ್ವಲ್ಪ ಅವಧಿಯನ್ನು ಯೋಗಕ್ಕಾಗಿ ಮೀಸಲಿಡಬೇಕು ಎಂದರು. ಈ ಸಂದರ್ಭದಲ್ಲಿ ಯೋಗ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿಗಳಾದ ಅಮಿಯಾದಾಸ್ ಹಾಗೂ ಆದಿತ್ಯ ಕೃಷ್ಣ ಅವರು ಸರಳವಾದ ಕೆಲವೊಂದು ಆಸನಗಳನ್ನು ತಿಳಿಸಿಕೊಟ್ಟರು.ವಿದ್ಯಾರ್ಥಿನಿ ಗಾನ ಗೌಶಿಕ್ ಯೋಗ ದಿನದ ಬಗ್ಗೆ ಮಾತನಾಡಿದರು.ಪ್ರೌಢ ಶಾಲಾ ಮುಖ್ಯಸ್ಥೆ ಪ್ರಿಯ ಎನ್, ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಡಾ| ಶಿವಣ್ಣ ಶಿಕ್ಷಕ ಹಾಗೂ ಶಿಕ್ಷಕೇತರರೂ…
UN NETWORKS ಹರೇಕಳ : ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ, ಹರೇಕಳ ಸಭಾಂಗಣದಲ್ಲಿ ಪೋಷಕರ ಸಭೆಯು ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಾಲೂಕು ಸಮನ್ವಯ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ವಲಯ ಸಂಪನ್ಮೂಲ ಅಧಿಕಾರಿಗಳಾದ ಗೀತಾ ಶ್ಯಾನುಭೋಗ್‍ರವರು ಮಾತನಾಡುತ್ತಾ ಇಂದು ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಶಿಕ್ಷಕರ ಪಾತ್ರದಷ್ಟೇ ಪೋಷಕರ ಪಾತ್ರ ಕೂಡ ಪ್ರಾಮುಖ್ಯವಾಗಿರುತ್ತದೆ ಎಂದರು. ಅನುದಾನಿತ ವಿದ್ಯಾಸಂಸ್ಥೆ ಎಂಬುದು ಒಂದು ರಥದ 4 ಚಕ್ರವಿದ್ದಂತೆ.ಇದು ಕ್ರಮವಾಗಿ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ, ಅಧ್ಯಾಪಕ ವೃಂದ ಮತ್ತು ಪೋಷಕರು ಇವು ನಾಲ್ಕು ಕೂಡ ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿಯ ಪಥದಲ್ಲಿ ನಡೆಯುತ್ತದೆ ಮತ್ತು ವಿದ್ಯಾರ್ಥಿಗಳ ಭವಿಷ್ಯವು ರೂಪುಗೊಳ್ಳುತ್ತದೆ. ಈ ನೆಲೆಯಲ್ಲಿ ಪೋಷಕರು ಕಾರ್ಯಪ್ರವೃತ್ತರಾಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಜಯರಾಮ ಆಳ್ವ ಪೋಡಾರು ವಹಿಸಿದರು. ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ.ಯವರಾದ ಸುಗುಣರವರು ಉಪಸ್ಥಿತರಿದ್ದರು. ಶಾಲಾಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಯವರು ಪ್ರಾಸ್ತಾವಿಕವಾಗಿ ವಿದ್ಯಾ…
UN NETWORKS ತಲಪಾಡಿ: ಸ್ಥಳೀಯರಿಗೆ ಟೋಲ್ ಸಂಗ್ರಹಿಸುವುದನ್ನು ಮುಂದುವರಿಸಿದಲ್ಲಿ ಮತ್ತು ನಿರಂತರವಾಗಿ ವಾಹನ ಸವಾರರಿಗೆ ದಬ್ಬಾಳಿಕೆ, ಕಿರುಕುಳ ಮುಂದುವರಿದಲ್ಲಿ ತಲಪಾಡಿಯಿಂದಲೇ ಟೋಲ್ ಬೂತ್ ಅನ್ನು ತೆಗೆಯುವಂತೆ ಮಾಡುತ್ತೇವೆ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಎಚ್ಚರಿಸಿದ್ದಾರೆ. ಸ್ಥಳೀಯರಿಗೆ ಶುಕ್ರವಾರದಿಂದ ಸುಂಕ ವಸೂಲಿ ಮಾಡಿದ ಟೋಲ್ ಬೂತ್‍ನ ನಿರ್ಣಯವನ್ನು ಖಂಡಿಸಿ ತಲಪಾಡಿ ಗ್ರಾಮಸ್ಥರು ರಾಜಕೀಯರಹಿತವಾಗಿ ಟೋಲ್ ಎದುರುಗಡೆ ಒಂದು ಗಂಟೆ ಕಾಲ ವಾಹನಗಳನ್ನು ಉಚಿತವಾಗಿ ಕಳುಹಿಸುವ ಮೂಲಕ ಟೋಲ್ ಬೂತ್ ಅನ್ನು ಒಂದು ಗಂಟೆ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ತಲಪಾಡಿ ಟೋಲ್ ಬೂತಿನಲ್ಲಿ ವಾಹನ ಸವಾರರಿಗೆ ನಿರಂತರ ಕಿರುಕುಳ ನೀಡುವ ಮೂಲಕ ತಾಳ್ಮೆ ಪರೀಕ್ಷೆ ಮಾಡುವ ಕಾರ್ಯ ಆಗುತ್ತಿದೆ. ಹೋಗುವಾಗ ಸುಂಕ ವಸೂಲಿ ಮಾಡದೆ ಉಚಿತ ಬಿಟ್ಟರೂ, ಬರಬೇಕಾದರೆ ಸುಂಕ ವಸೂಲಿ ಮಾಡುವ ಕಾರ್ಯ ಆಗುತ್ತಿದೆ. ಅದನ್ನು ಕೊಡಲು ಒಪ್ಪದಿದ್ದರೆ ವಾಹನದಲ್ಲಿರುವ ಕುಟುಂಬದವರ ಸಮ್ಮುಖದಲ್ಲೇ ಗೂಂಡಾಗಳನ್ನು ಕರೆಸಿ ಬೆದರಿಕೆ ನೀಡುವ ಕೆಲಸವಾಗುತ್ತಿದೆ. ಆಂದ್ರ, ಉತ್ತರಪ್ರದೇಶ ಮೂಲದವರು…
UN NETWORKS ಉಳ್ಳಾಲ: ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದು ನಿಜವಾದ ದೇಶ ಪ್ರೇಮವಾಗಿದೆ. ಈ ಉದ್ದೇಶದಲ್ಲಿ ಆರಂಭಗೊಂಡಿರುವ ಹೊಸ ರಹ್ಮಾನಿಯ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಕಾರ್ಯ ಶ್ಲಾಘನೀಯ ಎಂದು ವಸತಿ ಮತ್ತು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಉಚ್ಚಿಲಗುಡ್ಡೆಯ ಹೊಸ ರಹ್ಮಾನಿಯ ಮಸ್ಜಿದ್ ವಠಾರ ಇದರ ಹೊಸ ರಹ್ಮಾನಿಯ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಎಸ್.ಉಚ್ಚಿಲ ಇವರ ರಹ್ಮಾನಿಯ ಆಂಗ್ಲ ಮಾಧ್ಯಮ ಶಾಲಾ ಕೊಠಡಿಯನ್ನು ಉದ್ಘಾಟಿಸಿದ ಬಳಿಕ ಸನ್ಮಾನ ಸ್ವೀಕರಿಸಿ ಗುರುವಾರ ಮಾತನಾಡಿದರು. ಉಚ್ಚಿಲ ಭಾಗದ ಎಲ್ಲಾ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧಾರ್ಮಿಕ, ಲೌಕಿಕ ಶಿಕ್ಷಣದ ಜೊತೆಗೆ ಸಾಮಾಜಿಕ ಶಿಕ್ಷಣವನ್ನು ಒದಗಿಸುವಲ್ಲಿ ಮದ್ರಸ ಕಮಿಟಿ ಯಶಸ್ವಿಯಾಗಿದೆ. ತರಗತಿಯಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಬಲಿಷ್ಠರಾದಲ್ಲಿ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ಜನ ಪ್ರತಿನಿಧಿಯಾಗಲಿ ಅಧಿಕಾರಿಗಳು ಬಲಿಷ್ಠರಾದಲ್ಲಿ ದೇಶ ಬದಲಾಗುವುದಿಲ್ಲ. ಆರಂಭದಲ್ಲಿ 26 ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಆರಂಭಿಸಿದ ಶಾಲೆ ಇದೀಗ…
UN NETWORKS ತೊಕ್ಕೊಟ್ಟು: ಶೈಕ್ಷಣಿಕ ಕೇಂದ್ರದ ಹೆಬ್ಟಾಗಿಲು, ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ತೊಕ್ಕೊಟ್ಟು ಜಂಕ್ಷನ್ ನ ಅವ್ಯವಸ್ಥೆಯಿಂದಾಗಿ ವಾಹನ ಚಾಲಕರು, ಪಾದಚಾರಿಗಳು ದಿನನಿತ್ಯ ಪರದಾಡುವಂತಾಗಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ತೊಕ್ಕೊಟ್ಟು ಜಂಕ್ಷನ್ ನಲ್ಲಿ ದಿನವೊಂದಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಂದೆಡೆ ಅಗಲೀಕರಣಕ್ಕಾಗಿ ಕಟ್ಟಡಗಳು ನೆಲಸಮವಾದರೆ ಕೆಲವು ಕಟ್ಟಡಗಳು ಶಿಥಿಲ ಸ್ಥಿತಿಯಲ್ಲಿ ಹಾಗೇ ಉಳಿದಿವೆ. ಅರ್ಧದಲ್ಲೇ ನಿಂತ ಫ್ಲೈಓವರ್ ಕಾಮಗಾರಿ ತೊಕ್ಕೊಟ್ಟಿನಲ್ಲಿ ಫ್ಲೈಓವರ್ ಕಾಮಗಾರಿ ಪ್ರಾರಂಭಗೊಂಡು 8 ವರ್ಷಗಳೇ ಕಳೆದಿದೆ. ಪ್ರಾರಂಭದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿತ್ತು. ಆದರೆ ಫ್ಲೈಓವರ್ ರಸ್ತೆಗೆ ಸಂಪರ್ಕಿಸುವ ಬಾಕ್ಸ್ ನಿರ್ಮಾಣವನ್ನು ಸಂಸ್ಥೆ ಹೊರಗುತ್ತಿಗೆ ನೀಡಿದ ಬಳಿಕ ಕಾಮಗಾರಿ ನಿಧಾನ ಗತಿಯತ್ತ ಸಾಗಿದೆ. ತೊಕ್ಕೊಟ್ಟು ಜಂಕ್ಷನ್‌ನಿಂದ ಓವರ್ ಬ್ರಿಡ್ಜ್ ಸಂಪರ್ಕಿಸುವವರೆಗಿನ ಬಾಕ್ಸ್ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಸಮಸ್ಯೆ ಕಡಿಮೆಯಿತ್ತು. ಆದರೆ ಆರು ತಿಂಗಳ ಹಿಂದೆ ತೊಕ್ಕೊಟ್ಟು ಜಂಕ್ಷನ್ ನಿಂದ ಕಲ್ಲಾಪು ಸಂಪರ್ಕಿಸುವ ಭಾಗದಲ್ಲಿ ಬಾಕ್ಸ್ ಕಾಮಗಾರಿಗೆ ರಸ್ತೆ ಅಗೆದದ್ದೇ ತೊಕ್ಕೊಟ್ಟಿನ ಅವ್ಯವಸ್ಥೆಗೆ ಕಾರಣವಾಗಿದೆ. ಫುಟ್‌ಪಾತ್ ನಲ್ಲಿ ಗುಂಡಿಗಳು ಫುಟ್ ಪಾತ್…
UN NETWORKS ಮುಡಿಪು: ಕುರ್ನಾಡು ಗ್ರಾ. ಪಂ. ವ್ಯಾಪ್ತಿಯ ಮಿತ್ತ ಕೋಡಿ ಅಮೃತ ಕಲ್ಪ ಎಂಬಲ್ಲಿ ಮುಡಿಪು- ಮೆಲ್ಕಾರ್ ಮುಖ್ಯರಸ್ತೆ ಮೇಲೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಯಿತು. ಸೋಮವಾರ ಸಂಜೆಯಿಂದ ಧಾರಾಕಾರ ಮಳೆ ಸುರಿದಿತ್ತು. ಮಂಗಳವಾರ ಬೆಳಗ್ಗಿನ ಜಾವ ಕುರ್ನಾಡು ಬಳಿ ಗುಡ್ಡ ಕುಸಿದಿದ್ದು, ಮುಡಿಪುವಿನಿಂದ ಬಿ.ಸಿ. ರೋಡ್ ಕಡೆ ಸಂಚರಿಸುವ ವಾಹನಗಳಿಗೆ ತಡೆಯಾಯಿತು. ಈ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಬೋಳಿಯಾರ್ ಕುರ್ನಾಡು ಮಾರ್ಗವಾಗಿ ಮುಡಿಪು ಮತ್ತು ಬಿ.ಸಿ.ರೋಡ್ ಕಡೆ ಸಂಚಾರ ನಡೆಸಿದವು.
UN NETWORKS ಕೋಟೆಕಾರು : ಭಾರೀ ಮಳೆಗೆ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಮಾಡೂರು ಶ್ರೀ ಪಾಡಂಗರ ಭಗವತಿ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆಯಿಡೀ ಜಲಾವೃತಗೊಂಡು ಸುಮಾರು 150 ಮನೆಮಂದಿಗೆ ಅತಂತ್ರ ಸ್ಥಿತಿ ಮಂಗಳವಾರ ನಿರ್ಮಾಣವಾಯಿತು. ಒಂದು ಕಿ.ಮೀ ಉದ್ದದ ರಸ್ತೆಯಿಡೀ ಜಲಾವೃತಗೊಂಡು ಮೊಣಕಾಲುವರೆಗೆ ನೀರು ತುಂಬಿದೆ. ಪರಿಣಾಮ ಆ ರಸ್ತೆಯಲ್ಲಿ ತೆರಳುವ ವಾಹನಗಳು ತೆರಳಲು ಸಾಧ್ಯವಾಗದೆ, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ , ಉದ್ಯೋಗಿಗಳು ಕೆಲಸ ಕಾರ್ಯಗಳಿಗೆ ತೆರಳಲು ಸಾಧ್ಯವಾಗದೆ ಮನೆಯಲ್ಲೇ ಉಳಿಯುವಂತಾಯಿತು. ಸುಮಾರು 50 ಮನೆಗಳ ಮೆಟ್ಟಿಲುವರೆಗೆ ನೀರು ತುಂಬಿದ್ದು, ಇನ್ನೊಂದು ದಿನ ಮಳೆಯಾದರೆ ಮನೆಯೊಳಗೆ ನೀರು ನುಗ್ಗುವ ಆತಂಕದಲ್ಲಿ ಜನರಿದ್ದಾರೆ. ಅವೈಜ್ಞಾನಿಕ ಕಿಂಡಿಅಣೆಕಟ್ಟು : 2017-18 ನೇ ಸಾಲಿನಲ್ಲಿ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರಕಾರ ಕೈಗೊಂಡ ಯೋಜನೆಯಂತೆ, ಜಿಲ್ಲಾ ಪಂಚಾಯಿತಿ ಅನುದಾನದಡಿ ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಅದು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ ಅನ್ನುವುದು ಸ್ಥಳೀಯರ ಆರೋಪ. ಕಿರಿದಾದ ಕಿಂಡಿ ಅಣೆಕಟ್ಟು ದೊಡ್ಡ ಪ್ರಮಾಣದಲ್ಲಿ…
UN NETWORKS ಉಳ್ಳಾಲ : ಕೃಷಿ ಕೂಲಿ ಕಾರ್ಮಿಕರ ಕೊರತೆಯಿಂದ ಜಿಲ್ಲೆಯಲ್ಲಿ ಕೃಷಿಕಾರ್ಯಗಳು ಹಿನ್ನಡೆಯಾಗುತ್ತಿದ್ದು ಇಂತಹ ಸಂದರ್ಭದಲ್ಲಿ ಯಾಂತ್ರೀಕೃತ ಭತ್ತದ ಕೃಷಿಗೆ ಪ್ರೋತ್ಸಾಹ ನೀಡುವ ಮೂಲಕ ರೈತರನ್ನು ಬೆಂಬಲಿಸುವ ಕಾರ್ಯವನ್ನು ನಡೆಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದ್ದು ಕೃಷಿ ಯಂತ್ರಧಾರೆ ಯೋಜನೆಯ ಲಾಭವನ್ನು ಎಲ್ಲಾ ಕೃಷಿಕರೂ ಪಡೆಯುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು. ಅವರು ಅಂಬ್ಲಮೊಗರು ಗ್ರಾಮದ ಮದಕ ಪಡ್ಯಾರಮನೆ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ಇದರ ಆಶ್ರಯದಲ್ಲಿ `ರೈತ ಕೃಷಿ ಪಾಠಶಾಲೆ ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ `ಕೃಷಿ ಯಾಂತ್ರಿಕರಣ` ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತರು ಭತ್ತದ ಕೃಷಿ ಲಾಭದಾಯಕವಲ್ಲ ಎನ್ನುವ ನಿಟ್ಟಿನಲ್ಲಿ ಕೃಷಿ ನಡೆಸಲು ಹಿಂಜರಿಯುತ್ತಿದ್ದಾರೆ. ಆದರೆ ಆಧುನಿಕ ಕೃಷಿ ಪದ್ಧತಿಯಲ್ಲಿ ಕೃಷಿ ನಡೆಸಿದರೆ ಕೃಷಿಯಲ್ಲಿ ಲಾಭ ಮಾಡಿಕೊಳ್ಳಲಲು ಸಾಧ್ಯವಿದೆ. ಇಂತಹ ಸಂದರ್ಭದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ…
UN NETWORKS ತಲಪಾಡಿ: ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿರುವ ಯೋಗ ಶಿಕ್ಷಣದ ಮಹತ್ವ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಈ ಶಿಕ್ಷಣವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ಟ್ ಆಫ್ ಲಿವಿಂಗ್‍ನ ಯೋಗ ಶಿಕ್ಷಕಿ ಸುಮನಾ ಕಾಮತ್ ಅಭಿಪ್ರಾಯಟ್ಟರು. ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣದ ಮಾರ್ಗದರ್ಶನ ನೀಡಿ ಮಾತನಾಡಿದರು ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್‍ನ ತಂಡವು ಶಾರದಾ ವಿದ್ಯಾನಿಕೇತನ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಸನಗಳಾದ ಚಕ್ರಾಸನ, ವಜ್ರಾಸನ, ಗರುಡಾಸನ, ಉಷ್ಟ್ರಾಸನ, ಭುಜಂಗಾಸನ, ಮಕರಾಸನ, ಬಕಾಸನ, ಪ್ರಾಣಾಯಮಗಳನ್ನು ಪ್ರಾತ್ಯಕ್ಷಿತೆಯ ಮೂಲಕ ತಿಳಿಸಿಕೊಟ್ಟರು. ದೈಹಿಕ ಶಿಕ್ಷಕಿ ಅರುಣಾ ಕಾರ್ಯಕ್ರಮ ನಿರೂಪಿಸಿದರು, ಶಾಲಾ ಪ್ರಾಂಶುಪಾಲೆ ಸುಷ್ಮಾ ಜನಾರ್ಧನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

