UN NETWORKS ಉಳ್ಳಾಲ: ರಾಜ್ಯದ ನೂತನ ಸಮ್ಮಿಶ್ರ ಸರಕಾರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಮತ್ತು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ಆವರನ್ನು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪರವಾಗಿ ಗೌರವಿಸಲಾಯಿತು. ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದನಾಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಸುವಾಸಿನಿ ಜೆ. ಬಬ್ಬುಕಟ್ಟೆ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಕಾರ್ಯದರ್ಶಿಗಳಾದ ಡಿ.ಎನ್. ರಾಘವ, ಕೆ.ಎಮ್.ಕೆ. ಮಂಜನಾಡಿ, ವಾಸುದೇವ ರಾವ್, ಸತೀಶ್ ಭಂಡಾರಿ, ರತ್ನಾವತಿ ಜೆ. ಬೈಕಾಡಿ, ಮಲ್ಲಿಕಾ ಭಂಡಾರಿ, ಅನುಪಮ ಸಿ. ಬಬ್ಬುಕಟ್ಟೆ, ವಾಣಿ ಲೋಕಯ್ಯ, ಸರೋಜಾ ಕುಮಾರಿ ಹಾಗೂ ಲೀಲಾವತಿ ಉಪಸ್ಧಿತರಿದ್ದರು.
Author: UllalaVani
UN NETWORKS ಕೊಣಾಜೆ: ಕೊಣಾಜೆ ಗುಡ್ಡುಪಾಲು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ಇದರ ಆಶ್ರಯದಲ್ಲಿ ಅಣ್ಣೆರೆಪಾಲು ಬಳಿ ನಡೆದ ಮಕ್ಕಳ ಕಬ್ಬಡಿ ಪಂದ್ಯಾಟದಲ್ಲಿ ಶ್ರೀ ರಾಮಾಂಜನೇಯ ಗುಡ್ಡುಪಾಲು ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಕುತ್ತಾರು ಫ್ರೆಂಡ್ಸ್ ತಂಡ ಪಡೆದುಕೊಂಡಿತು. ಪಂದ್ಯಾಟದಲ್ಲಿ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ ತಂಡದ ಚರಣ್ ಕುಮಾರ್ ದೇವಂದಬೆಟ್ಟು ಸವ್ಯಸಾಚಿ ಪ್ರಶಸ್ತಿ ಪಡೆದುಕೊಂಡರೆ. ಕುತ್ತಾರು ತಂಡದ ತಾರನಾಥ್ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಪಡೆದುಕೊಂಡರು, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಶ್ರೀ ರಾಮಾಂಜನೇಯ ತಂಡದ ಪ್ರಸಾದ್ ಕಂಡಿಲ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಕುಡುಬಿ ಗೌಡ ಸಮಾಜದ ಹಿರಿಯರಾದ ಮಂಜುನಾಥ ಅಣ್ಣೆರೆಪಾಲು ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಿದರು. ಕೊಣಾಜೆ ಗ್ರಾ. ಪಂ.ಮಾಜಿ ಸದಸ್ಯ ಹಾಗೂ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸ್ಥಾಪಕ ನರ್ಸುಗೌಡ ಅಣ್ಣೆರೆಪಾಲು, ಚಂದ್ರಹಾಸ್ ಕುತ್ತಾರ್, ಚಿತ್ತರಂಜನ್ ಕಂಡಿಲ, ದಿವಾಕರ್ ಕಂಡಿಲ, ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ನಾಗೇಶ್ ಗುಡ್ಡುಪಾಲು, ಕಬಡ್ಡಿ ಪಂದ್ಯಾಟದ ಸಂಘಟಕ ಗೋಪಾಲ ಗೌಡ ಅಣ್ಣೆರೆಪಾಲು,…
UN NETWORKS ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರನ್ನು ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರ ಕೊಲ್ಯದ ವತಿಯಿಂದ ಅಭಿನಂದಿಸಲಾಯಿತು. ಶ್ರೀ ಕ್ಷೇತ್ರದ ಧರ್ಮದರ್ಶಿ ಭಾಸ್ಕರ ಐತಾಳ್, ನಾಗಬ್ರಹ್ಮ ಸೇವಾ ಸಮಿತಿ ಅಧ್ಯಕ್ಷ ಸುಶಾಂತ್ ಭಂಡಾರಿ, ಪದಾಧಿಕಾರಿಗಳಾದ ದೀಪಕ್ ಪಿಲಾರ್, ರಾಮ್ ದಾಸ್ ಶೆಟ್ಟಿ ಬೆಂಗಳೂರು, ಗಣೇಶ್ ಕೊಲ್ಯ, ರಾಮಚಂದ್ರ ಪಿಲಾರ್ , ಶೇಷಪ್ಪ ಸಾಲ್ಯಾನ್ ಮಂಜೇಶ್ವರ, ರಮೇಶ್ ಶಿವಬಾಗ್ ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಉದ್ಯೋಗದೊಂದಿಗೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಕುರಿತು ಜನರಲ್ಲಿ ಜಾಗೃತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುನ್ನೂರು ಯುವಕ ಸಂಘ ಉದ್ಯೋಗ ಮಾಹಿತಿಯೊಂದಿಗೆ ಕಾನೂನು ಮಾಹಿತಿ ಶಿಬಿರವನ್ನು ಗ್ರಾಮದ ಜನರಿಗೆ ಸಂಘಟಿಸಿರುವುದು ಶ್ಲಾಘನೀಯ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು. ಕುತ್ತಾರಿನ ಮುನ್ನೂರು ಯುವಕ ಮಂಡಲದ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ಕಾನೂನು ಮಾಹಿತಿ ಶಿಬಿರ ಹಾಗೂ ಉದ್ಯೋಗ ಮಾಹಿತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮುನ್ನೂರು ನುವ ಗ್ರಾಮದ ಹೆಸರಿನಲ್ಲಿ ಕಳೆದ 50 ವರ್ಷಗಳಲ್ಲಿ ಸಾರ್ಥಕ ಸಮಾಜ ಸೇವೆ ನಡೆಸುತ್ತಿರುವ ಮುನ್ನೂರು ಯುವಕ ಸಂಘ ಯುವ ಪ್ರತಿಭೆಗಳಿಗೆ ಮಾರ್ಗದರ್ಶನದೊಂದಿಗೆ ಸಮಾಜಿಕ ಸಂಘಟನೆಯನ್ನು ನಡೆಸುತ್ತಿದೆ. ಇಂದಿನ ಯುವ ಜನಾಂಗ ಸಂಘಟನೆಗಳ ಮೂಲಕ ಸಮಾಜಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂದರು. ಅಖಿಲ ಭಾರತ ವಕೀಲರ ಸಂಘದ ದ.ಕ.ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು.…
UN NETWORKS ಉಳ್ಳಾಲ: ಶಿಸ್ತುಬದ್ಧ ಜೀವನ ರೂಪಿಸುವಿದರೊಂದಿಗೆ ಉತ್ತಮ ಭವಿಷ್ಯವನ್ನು ಕಂಡು ಕೊಳ್ಳುವಲ್ಲಿ ಬಾಲ ಸಂರಕ್ಷಣಾ ಕೇಂದ್ರದ ಮಕ್ಕಳು ಮುಂದಿನ ಶೈಕ್ಷಣಿಕ ಜೀವನದಲ್ಲಿ ಕಠಿಣ ಪರಿಶ್ರಮದೊಂದಿಗೆ ಬಾಲ್ಯದಲ್ಲಿಯೇ ಪ್ರಗತಿಯ ಹಾದಿಯನ್ನು ಕಂಡುಕೊಳ್ಳಲು ಇದು ಸೂಕ್ತ ಸಮಯ ಎಂದು ಲೆಕ್ಕ ಪರಿಶೋದಕ ಎಸ್‍ಎ.ಸ್. ನಾಯಕ್ ಮಂಗಳೂರು ಅಭಿಪ್ರಾಯಪಟ್ಟರು. ಕುತ್ತಾರಿನ ಮಂಗಳ ಸೇವಾ ಸಮಿತಿ ಟ್ರಸ್ಟ್ ನ ಆಶ್ರಯದ ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ಶೈಕ್ಷಣಿಕ ವರ್ಷದ ಶುಭಾರಂಭದ ಪ್ರಯುಕ್ತ ಸರಸ್ವತಿ ಪೂಜೆ ಹಾಗೂ ಗಣಹೋಮದ ಬಳಿಕ ನಡೆದ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಂಗಳಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಯೋಧ ಮೋಹನ್‍ದಾಸ್ ಅವರನ್ನು ಸನ್ಮಾನಿಸಲಾಯಿತು. ಮಂಗಳಾ ಸೇವಾ ಸಮಿತಿ ಟ್ರಸ್ಟ್ ಸಂಚಾಲಕ ಅನಂತ ಕೃಷ್ಣ ಭಟ್ ಸಂಸ್ಥೆಯ ಪರಿಚಯ ನೀಡಿ ಸ್ವಾಗತಿಸಿದರು. ಬಾಲಸಂರಕ್ಷಣಾ ಕೇಂದ್ರದ ವಿದ್ಯಾರ್ಥಿನಿ ಶಿವಾನಿ ಕಾರ್ಯಕ್ರಮ ನಿರ್ವಹಿಸಿದರು. ನಿಶಾ ವಂದಿಸಿದರು.
UN NETWORKS ಉಳ್ಳಾಲ: ಉಳ್ಳಾಲದಲ್ಲಿ ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅನಪೇಕ್ಷಿತ ಗುಂಪು ಘರ್ಷನೆಯ ಹೆಸರಿನಲ್ಲಿ ಹಿಂದೂ,ಮುಸ್ಲಿಂ ಎರಡೂ ಸಮುದಾಯದ 60ಕ್ಕೂ ಮಿಕ್ಕಿದ ಅಮಾಯಕರು ಆರೋಪಿಗಳಾಗಿ ಕೋರ್ಟ್ ಗಳಲ್ಲಿ ಅಳೆಯುತ್ತಿದ್ದು, ಉಧ್ಯೋಗ ನಷ್ಟ ಹಾಗೂ ಸಂಪಾದನೆಯು ಇಲ್ಲದೇ ಅತೀವ ಕಷ್ಟಪಡುತ್ತಿದ್ದಾರೆ. ಸರಕಾರ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಮಾಯಕರ ಮೇಲಿನ ಈ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕಂದು ಜಾತ್ಯತೀತ ಜನತಾದಳದ ಮುಖಂಡ ನಝೀರ್ ಉಳ್ಳಾಲ್ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಮತ್ತು ಉಪ ಮುಖ್ಯಮಂತ್ರಿ,ಹಾಗೂ ಗೃಹ ಸಚಿವರಾದ ಪರಮೇಶ್ವರ್ ರವರನ್ನು ಆಗ್ರಹಿಸಿದ್ದಾರೆ. ಉಳ್ಳಾಲದಲ್ಲಿ ಸದ್ಬಾವಣೆ,ಮತ್ತು ಶಾಶ್ವತ ಸೌಹಾರ್ಧತೆಯನ್ನು ಬೆಳೆಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಈ ಕುರಿತು ಪತ್ರ ಬರೆದು ಒತ್ತಾಯಿಸಿರುವ ನಝೀರ್ ಉಳ್ಳಾಲ್, ಮಂಗಳೂರು ಕ್ಷೇತ್ರದ ಶಾಸಕರೂ, ಸಚಿವರೂ,ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ರವರು ಅಮಾಯಕರ ಮೇಲಿನ ಈ ಪ್ರಕರಣವನ್ನ ಹಿಂತೆಗೆಯಲು ಮುತುವರ್ಜಿವಹಿಸಬೇಕಂದು,ವಿನಂತಿಮಾಡಿಕೊಂಡಿದ್ದಾರೆ. ಉಳ್ಳಾಲ ಜಾತ್ಯಾತೀತ ಜನತಾದಳದ ನಿಯೋಗವು ಸಧ್ಯದಲ್ಲೇ ಮುಖ್ಯಮಂತ್ರಿಮತ್ತು ಉಪಮುಖ್ಯಮಂತ್ರಿಯವರನ್ನು ಬೇಟಿಯಾಗಿ ಮೊಕದ್ದಮೆಗಳನ್ನು ಹಿಂತೆಗೆಯಲು,ಒತ್ತಾಯಿಸಲಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UN NETWORKS ಹರೇಕಳ: ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸೌಜನ್ಯ ಸ್ಕೌಟ್‍ದಳ ಮತ್ತು ಗೈಡ್ ಕಂಪನಿಯ ಉದ್ಘಾಟನಾ ಸಮಾರಂಭ ಮತ್ತು ವಿವಿಧ ಶಾಲಾ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪುನಃಶ್ಚೇತನ ಶಿಬಿರವು ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಹಾಯಕ ಆಯುಕ್ತರಾದ ವಿನೋದ್ ಚೇವಾರು ಇವರು ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲೇ ದೇಶಪ್ರೇಮ, ಶಿಸ್ತು, ಸಂಸ್ಕಾರ, ಧೈರ್ಯ, ಮಾನವೀಯತೆ ಮುಂತಾದ ಜೀವನ ಮೌಲ್ಯಗಳನ್ನು ಸ್ಕೌಟಿಂಗ್ ಕಲಿಸುತ್ತದೆ. ಆಧುನೀಕತೆಯ ಬದುಕಿನಲ್ಲಿ ವಿದ್ಯಾರ್ಥಿಗಳು ತಮ್ಮ ಊಟ ಮಾಡುವ ತಟ್ಟೆಯನ್ನು ಪೋಷಕರು ತೊಳೆದು ಕೊಡುವ ಕಾಲಘಟ್ಟದಲ್ಲಿ ಸ್ಕೌಟಿಂಗ್ ಇಂತಹ ಸಣ್ಣ ಸಣ್ಣ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸರಿಯಾದ ಜ್ಞಾನವನ್ನು ಕಲಿಸುತ್ತದೆ ಎಂದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಕೆ. ರವೀಂದ್ರ ರೈ ವಹಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ವಿದ್ಯಾ ಸಂಸ್ಥೆಯ ಒಬ್ಬ ಸ್ಕೌಟ್ ರಾಷ್ಟ್ರಪತಿ ಪುರಸ್ಕಾರವನ್ನೂ ಆರು ಮಂದಿ ಗೈಡ್ಸ್ ರಾಜ್ಯ ಪುರಸ್ಕಾರ ಪದವಿಯನ್ನುಗಳಿಸುವುದರೊಂದಿಗೆ, ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳು, ಮಾತ್ರವಲ್ಲದೆ ವ್ಯಕ್ತಿತ್ವಕ್ಕೆ ಪೂರಕವಾದ ಹಲವಾರು…
UN NETWORKS ಮಂಗಳೂರು: ಬಿಜೆಪಿ ಗೆದ್ದರೆ ದೇಶ ಗೆದ್ದಂತೆ ಅನ್ನುವ ಸತ್ಯಾಂಶವನ್ನು ಮನದಲ್ಲಿಟ್ಟುಕೊಂಡು ದೇವರಂತಹ ಕಾರ್ಯಕರ್ತರು ಉತ್ತರ ಕ್ಷೇತ್ರದಲ್ಲಿ ನಿಸ್ವಾರ್ಥದಿಂದ ದುಡಿದ ಕಾರಣ ಅತ್ಯಧಿಕ ಮತಗಳ ಅಂತರದಲ್ಲಿ ಗೆಲುವು ಸಾಧ್ಯವಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ವೈ ಭರತ್ ಶೆಟ್ಟಿ ಹೇಳಿದರು. ಅವರು ಕಾವೂರಿನ ಸುವರ್ಣ ಸಹಕಾರಿ ಸದನದಲ್ಲಿ ಹಿಂದು ಯುವಸೇನೆ ಕಾವೂರು , ಆಕಾಶಭವನ, ಶಾಂತಿನಗರ, ಪಂಜಿಮೊಗರು ಘಟಕಗಳ ಆಶ್ರಯದಲ್ಲಿ ಭಾನುವಾರ ಜರಗಿದ ನೂತನ ಮೂವರು ಶಾಸಕರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಚುನಾವಣೆಯನ್ನು ಎದುರಿಸಿದ ನಂತರವೇ ತಿಳಿದುಬಂತು ಚುನಾವಣೆ ರಾಜಕೀಯವೇ ಬೇರೆ, ಸಂಘಟನೆ ರಾಜಕೀಯವೇ ಬೇರೆ ಎಂದು.ನಾಮಪತ್ರ ಸಲ್ಲಿಸುವ ಕೊನೆಯ ಎರಡು ದಿನಗಳೊಳಗೆ ಅಭ್ಯರ್ಥಿ ಘೋಷಣೆಯಾದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಎಲ್ಲರನ್ನು ನಾಮಪತ್ರ ಸಲ್ಲಿಕೆಗೆ ಕರೆಯಲು ಅಸಾಧ್ಯವಾಗಿತ್ತು. ಇನ್ನೊಂದೆಡೆ ಚುನಾವಣಾ ಕಣದಲ್ಲೇ ಇರುವ ಸಂದರ್ಭ ಇಲ್ಲಸಲ್ಲದ ವಿಚಾರಗಳು ಮಾಧ್ಯಮದಲ್ಲಿ ಪ್ರಸಾರಗೊಂಡು, ಮನೆಯಲ್ಲೂ ಚಿಂತೆಯ ವಾತಾವರಣ ನಿರ್ಮಿಸಿತ್ತು. ಇಂತಹ ಧೃತಿಗೆಡುವ ಸಮಯದಲ್ಲಿ ಹಿಂದು ಯುವ ಸೇನೆ ಕಾರ್ಯಕರ್ತರು…
UN NETWORKS ಉಳ್ಳಾಲ: ನೂತನ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ.ಅಮೃತ ಸೋಮೇಶ್ವರ ಅವರ ಸೋಮೇಶ್ವರದ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಅಧಿಕಾರ ಅವಧಿಯಲ್ಲಿ ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ನಡೆಸುತ್ತಾ, ಅಧಿಕಾರದಲ್ಲಿ ಇನ್ನಷ್ಟು ಎತ್ತರಕ್ಕೆ ಏರುವಂತಾಗಿರಿ ಎಂದು ಆಶೀರ್ವಾದ ಮಾಡಿದರು.ಈ ಸಂದರ್ಭ ಸುರೇಶ್ ಭಟ್ನಗರ, ಉಸ್ಮಾನ್ ಕಲ್ಲಾಪು, ದೀಪಕ್ ರೈ ಪಿಲಾರ್ ಮುಂತಾದವರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ರಾಜ್ಯದ ನೂತನ ವಸತಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ಈದ್ ಉಲ್ ಫಿತ್ರ್ ಹಬ್ಬವನ್ನು ಸೋಮೇಶ್ವರ ನೆಹರೂನಗರದ ಪಶ್ಚಿಮ್ ರಿಹ್ಯಾಬ್ ಸೆಂಟರ್ ನಲ್ಲಿರುವ ವೃದ್ಧರಿಗೆ ಬಿರಿಯಾನಿ ವಿತರಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದ ಕಳೆದ ಮೂರು ವರ್ಷಗಳಿಂದ ಸೋಮೇಶ್ವರ ನೆಹರುನಗರದ ಪಶ್ಚಿಮ್ ರಿಹ್ಯಾಬ್ ಸೆಂಟರ್ ಅನಥಾಲಯದ ವಾಸಿಗಳಿಗೆ ಹಬ್ಬದ ಪ್ರಯುಕ್ತ ವಿತರಿಸಲಾಗುವ ಹಬ್ಬದೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಲ್ಲಿ ಮಾತನಾಡಿ ತ್ಯಾಗ, ಪ್ರೀತಿ ಸಹನೆಯ ಧ್ಯೋತಕವಾಗಿರುವ ಈದ್ ಉಲ್ ಫಿತ್ರ್ ಹಬ್ಬವನ್ನು ಇಂತಹ ಅನಾಥಾಲಯದಲ್ಲಿ ಆಚರಿಸುವ ಕಾರ್ಯ ಮಹತ್ವದ್ದಾಗಿದೆ. ಈ ಮೂಲಕ ಹಬ್ಬದ ಸಂದೇಶವನ್ನು ಉತ್ತಮವಾಗಿ ಸಮಾಜಕ್ಕೆ ಮನವರಿಕೆ ಮಾಡಬಹುದು. ಕಳೆದ ಮೂರು ವರ್ಷಗಳಿಂದ ಇಂತಹ ಮಹತ್ಕಾರ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕೈಜೋಡಿಸಿರುವ ಹೆಲ್ಪ್ ಇಂಡಿಯಾ ಫೌಂಡೇಷನ್ನಿನ ಕಾರ್ಯ ಶ್ಲಾಘನೀಯ. ಎಲ್ಲರೂ ಚಿಂತೆ ಹಾಗೂ ಕಷ್ಟದಿಂದಲೇ ಬಾಳುವವರು. ಆಶ್ರಮ ವಾಸಿಗಳು ಎಂದಿಗೂ ಅನಾಥರಲ್ಲ, ಅಲ್ಲದೆ ಕಷ್ಟಗಳನ್ನು…

