Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಅಪರಾಧ ಸುದ್ದಿಗಳು

ಸ್ಥಳೀಯರಿಂದ ಸುಂಕ ವಸೂಲಿ ಟೋಲ್ ಸಂಗ್ರಹ ತಡೆದು ಒಂದು ಗಂಟೆ ಪ್ರತಿಭಟನೆ

UllalaVaniBy UllalaVaniJune 27, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ತಲಪಾಡಿ: ಸ್ಥಳೀಯರಿಗೆ ಟೋಲ್ ಸಂಗ್ರಹಿಸುವುದನ್ನು ಮುಂದುವರಿಸಿದಲ್ಲಿ ಮತ್ತು ನಿರಂತರವಾಗಿ ವಾಹನ ಸವಾರರಿಗೆ ದಬ್ಬಾಳಿಕೆ, ಕಿರುಕುಳ ಮುಂದುವರಿದಲ್ಲಿ ತಲಪಾಡಿಯಿಂದಲೇ ಟೋಲ್ ಬೂತ್ ಅನ್ನು ತೆಗೆಯುವಂತೆ ಮಾಡುತ್ತೇವೆ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಎಚ್ಚರಿಸಿದ್ದಾರೆ. ಸ್ಥಳೀಯರಿಗೆ ಶುಕ್ರವಾರದಿಂದ ಸುಂಕ ವಸೂಲಿ ಮಾಡಿದ ಟೋಲ್ ಬೂತ್‍ನ ನಿರ್ಣಯವನ್ನು ಖಂಡಿಸಿ ತಲಪಾಡಿ ಗ್ರಾಮಸ್ಥರು ರಾಜಕೀಯರಹಿತವಾಗಿ ಟೋಲ್ ಎದುರುಗಡೆ ಒಂದು ಗಂಟೆ ಕಾಲ ವಾಹನಗಳನ್ನು ಉಚಿತವಾಗಿ ಕಳುಹಿಸುವ ಮೂಲಕ ಟೋಲ್ ಬೂತ್ ಅನ್ನು ಒಂದು ಗಂಟೆ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ತಲಪಾಡಿ ಟೋಲ್ ಬೂತಿನಲ್ಲಿ ವಾಹನ ಸವಾರರಿಗೆ ನಿರಂತರ ಕಿರುಕುಳ ನೀಡುವ ಮೂಲಕ ತಾಳ್ಮೆ ಪರೀಕ್ಷೆ ಮಾಡುವ ಕಾರ್ಯ ಆಗುತ್ತಿದೆ. ಹೋಗುವಾಗ ಸುಂಕ ವಸೂಲಿ ಮಾಡದೆ ಉಚಿತ ಬಿಟ್ಟರೂ, ಬರಬೇಕಾದರೆ ಸುಂಕ ವಸೂಲಿ ಮಾಡುವ ಕಾರ್ಯ ಆಗುತ್ತಿದೆ. ಅದನ್ನು ಕೊಡಲು ಒಪ್ಪದಿದ್ದರೆ ವಾಹನದಲ್ಲಿರುವ ಕುಟುಂಬದವರ ಸಮ್ಮುಖದಲ್ಲೇ ಗೂಂಡಾಗಳನ್ನು ಕರೆಸಿ ಬೆದರಿಕೆ ನೀಡುವ ಕೆಲಸವಾಗುತ್ತಿದೆ. ಆಂದ್ರ, ಉತ್ತರಪ್ರದೇಶ ಮೂಲದವರು ಕಾರ್ಯ ನಿರ್ವಹಿಸುವ ಟೋಲ್ ನಲ್ಲಿ ನಿರಂತರ ಕನ್ನಡಿಗರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಟೋಲ್ ಸಂಗ್ರಹಿಸುವ ನವಯುಗ ಕಂಪೆನಿ ಅಧಿಕಾರಿಗಳು ಯಾವುದೇ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಮುಂದೆಯೂ ಇದೇ ರೀತಿಯಲ್ಲಿ ಮುಂದುವರಿದಲ್ಲಿ ತಲಪಾಡಿಯಲ್ಲಿ ಟೋಲ್ ಇರುವುದೇ ಸಂಶಯ ಎಂದು ಎಚ್ಚರಿಸಿದರು.

ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಮಾತನಾಡಿ ಗ್ರಾಮದಲ್ಲಿ ಅನೇಕ ಧಾರ್ಮಿಕ ಕೇಂದ್ರಗಳಿವೆ. ಅಲ್ಲಿಗೆ ಸ್ಥಳೀಯ ಭಕ್ತರು ಬಂದು ಹೋಗುತ್ತಿರುತ್ತಾರೆ. ಜತೆಗೆ ಸ್ಥಳೀಯ ಟೆಂಪೋ ಚಾಲಕರು, ಕಾರು ಚಾಲಕರು ನಿರಂತರವಾಗಿ ಟೋಲ್ ಸಿಬ್ಬಂದಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ರಾ.ಹೆ.ಯನ್ನು ಸರಿಯಾಗಿ ನಿರ್ಮಿಸದೆ, ಚರಂಡಿ ವ್ಯವಸ್ಥೆಯೂ ಇಲ್ಲದೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ತಲಪಾಡಿ, ಕುಂಪಲ, ಕೊಲ್ಯದಲ್ಲಿ ಅಪಘಾತವಾಗಿ ಜೀವ ಹಾನಿಯೂ ಸಂಭವಿಸಿದೆ. ಸಂಸದರು ಎಚ್ಚರಿಕೆಯನ್ನು ನೀಡಿದ್ದಾರೆ. ಇದೀಗ ನಡೆದಿರುವ ಪ್ರತಿಭಟನೆ ಸಾಂಕೇತಿಕವಾಗಿದ್ದು, ಭಾನುವಾರ ಟೋಲ್ ಅಧಿಕಾರಿಗಳನ್ನು ಕರೆದು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ನೀಡಿದ್ದಾರೆ. ಅದಕ್ಕಾಗಿ ತಾತ್ಕಾಲಿಕವಾಗಿ ಹೋರಾಟವನ್ನು ನಿಲ್ಲಿಸುತ್ತಿದ್ದೇವೆ. ಅದರಲ್ಲಿಯೂ ಸ್ಥಳೀಯರ ಜೊತೆಗೆ ಆಟವಾಡಿದಲ್ಲಿ ಖಂಡಿತಾ ಸಹಿಸುವುದಿಲ್ಲ, ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಗಣೇಶ್ ತಲಪಾಡಿ ಮಾತನಾಡಿ ಗ್ರಾಮದಲ್ಲಿ ಟೋಲ್ ಆರಂಭದಲ್ಲಿ ಊರಿಗೆ ಲಾಭದಾಯಕ ಯೋಜನೆ ಎಂದು ಭಾವಿಸಿದ್ದೆವು. ಇದೀಗ ಗ್ರಾಮದ ಜನ ನರಕಯಾತನೆ ಅನುಭವಿಸುವಂತಾಗಿದೆ. ಬಸ್ ನಿಲ್ದಾಣವಿಲ್ಲ, ಸರ್ವಿಸ್ ರಸ್ತೆಗಳೇ ಇಲ್ಲ ಮೂಲಭೂತ ಸೌಕರ್ಯಗಳು ಇಲ್ಲದೇ ಇದ್ದರೂ, ಟೋಲ್ ಸಂಗ್ರಹಿಸಲಾಗುತ್ತಿದೆ. ಉಚ್ಛನ್ಯಾಯಾಲಯದ ಆದೇಶದಂತೆ ರಾ.ಹೆ.ಯಲ್ಲಿ ಒಂದು ನಿಮಿಷಕ್ಕಿಂತ ಹೆಚ್ಚು ತಡೆ ಉಂಟಾದಲ್ಲಿ ಸುಂಕ ಪಾವತಿಸುವಂತಿಲ್ಲ ಅನ್ನುವುದಿದೆ. ಆದರೆ ಇಲ್ಲಿ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಸಿದ್ದೀಖ್ ಕೊಳಂಗೆರೆ ಮಾತನಾಡಿ ಟೋಲ್ ಗೇಟಿನಲ್ಲಿ ಸ್ಥಳೀಯರಿಗೆ ಉಚಿತ ಕೊಡಲೇಬೇಕು. ಇಲ್ಲವಾದಲ್ಲಿ ರಾಜಕೀಯ ರಹಿತವಾಗಿ ಒಟ್ಟಾಗಿ ಖಂಡಿಸುತ್ತೇವೆ. ಯಾವುದೇ ದಬ್ಬಾಳಿಕೆಗೆ ಹೆದರುವುದಿಲ್ಲ. ಸ್ಥಳಿಯರಿಗೆ ಸುಂಕ ವಸೂಲಿ ಮಾಡಿದಲ್ಲಿ, ಎಲ್ಲಾ ವಾಹನಗಳನ್ನು ಉಚಿತವಾಗಿ ತೆರಳುವಂತೆ ಮಾಡುವುದಾಗಿ ಎಚ್ಚರಿಸಿದರು.

ಸ್ಥಳದಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಜಮಾಯಿಸಿ ಟೋಲ್ ವಿರೋಧಿ ಘೋಷಣೆಗಳನ್ನು ಕೂಗಿದರು. ಎರಡು ಕಡೆಗಳಲ್ಲಿ ವಾಹನಗಳನ್ನು ಟೋಲ್ ಬೂತಿನಲ್ಲಿ ಉಚಿತವಾಗಿ ಕಳುಹಿಸುವ ಮೂಲಕ ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೊಲಿಸರು ಪ್ರತಿಭಟನಾಕಾರರ ಮನವೊಲಿಸಿ, ಟೋಲ್ ಅಧಿಕಾರಿಗಳ ಜತೆಗೆ ಮೊಬೈಲಿನ ಮೂಲಕ ಸಂಪರ್ಕಿಸಿ ಭಾನುವಾರ ಸಾರ್ವಜನಿಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಬಳಿಕ ಸ್ಥಳೀಯರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟು, ಭಾನುವಾರದವರೆಗೆ ಕಾದು ಮುಂದಿನ ನಿರ್ಧಾರವನ್ನು ಕೈಗೊಳ್ಳುವ ಭರವಸೆ ನೀಡಿದರು.
ಸ್ಥಳೀಯರಾದ ಅಬ್ಬಾಸ್ ಉಚ್ಚಿಲ್, ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.

ಡಿವೈಎಫ್‍ಐನಿಂದ ಪ್ರತಿಭಟನೆಯ ಎಚ್ಚರಿಕೆ
ಇಲ್ಲಿನ ತಲಪಾಡಿ ನವಯುಗ ಟೋಲ್ ಸಂಗ್ರಹ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಹಾಗೂ ಅಲ್ಲಿ ಬೀಡುಬಿಟ್ಟಿರುವ ಬಾಡಿಗೆ ಗೂಂಡಾಗಳು ವಾಹನ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದು ಈ ಹಿಂದೆ ಸ್ಥಳೀಯ ನಡೆದ ಒಪ್ಪಂದವನ್ನು ಉಲ್ಲಂಘಿಸಿ ಈಗ ಸ್ಥಳೀಯ ನಿವಾಸಿಗಳಿಂದ ಆಧಾರ್ ಕಾರ್ಡ್ , ವೋಟರ್ ಕಾರ್ಡ್ , ಅಥವಾ ಡ್ರೈವಿಂಗ್ ಲೈಸೆನ್ಸ್ ಬದಲಾಗಿ ವಾಹನದ ಆರ್.ಸಿ ತೋರಿಸುವಂತೆ ಒತ್ತಾಯಿಸುತ್ತಿದ್ದು ಇದರಿಂದಾಗಿ ಇಲ್ಲಿನ ಸ್ಥಳೀಯ ನಿವಾಸಿಗಳು ತಮ್ಮ ಸ್ನೇಹಿತರ ಅಥವಾ ತಮ್ಮ ಸಂಬಂಧಿಕರ ಹೆಸರಿನಲ್ಲಿರುವ ವಾಹನಗಳನ್ನು ಚಲಾಯಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನವಯುಗ ಕಂಪೆನಿ ಈ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳ ಮತ್ತು ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಪ್ಪಿದ ನೀತಿ ನಿಯಮಗಳಿಗೆ ವಿರುಧ್ಧವಾಗಿ ಈ ರೀತಿಯ ಹೊಸ ಕಾನೂನನ್ನು ಇಲ್ಲಿನ ಸ್ಥಳೀಯ ನಿವಾಸಿಗಳ ಮೇಲೆ ಹೇರುತ್ತಿದ್ದು ಈ ನಿಯಮವನ್ನು ಕೂಡಲೇ ರದ್ದುಗೊಳಿಸಬೇಕು . ಇಲ್ಲದೇ ಇದ್ದಲ್ಲಿ ಡಿವೈಎಫ್‍ಐ ಸಂಘಟನೆ ಸ್ಥಳೀಯ ನಿವಾಸಿಗಳ ಜೊತೆ ಸೇರಿ ಟೋಲ್‍ಗೇಟ್ ವಿರುದ್ಧ ಹೋರಾಟ ನಡೆಸಲಿದೆ ಎಂದು ಉಳ್ಳಾಲ ವಲಯ ಡಿವೈಎಫ್‍ಐ ತಿಳಿಸಿದೆ.

ಪಂಪುವೆಲ್‍ನಿಂದ ತಲಪಾಡಿವರೆಗಿನ ಹೆದ್ದಾರಿ ಕೆಲಸ ಪೂರ್ಣವಾಗುವ ಮೊದಲೇ ಇಲ್ಲಿ ಟೋಲ್ ಸಂಗ್ರಹ ಕೇಂದ್ರವನ್ನು ತೆರೆದು ನವಯುಗ ಕಂಪೆನಿ ಹಣಗಳಿಸಲು ಆರಂಭಿಸಿತ್ತು ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಬೆಂಬಲವೂ ಇತ್ತು. ಆ ಸಮಯದಲ್ಲಿ ತ್ವರಿತಗತಿಯಲ್ಲಿ ಹೆದ್ದಾರಿ ಕೆಲಸವನ್ನು ಪೂರ್ಣಗೊಳಿಸುವುದಾಗಿ ಹೇಳಿದ ಕಂಪೆನಿ ಅಧಿಕಾರಿಗಳು ಇನ್ನೂ ಪಂಪ್‍ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯ ಶೇ50 ರಷ್ಟನ್ನು ಪೂರ್ಣಗೊಳಿಸಲು ವಿಫಲರಾಗಿದ್ದಾರೆ . ಅಂಬಿಕಾ ರೋಡ್ , ಕುಂಪಲ , ಕೋಟೆಕಾರ್ , ಉಚ್ಚಿಲ , ತಲಪಾಡಿ ಪ್ರದೇಶಗಳಲ್ಲಿ ಇನ್ನೂ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ . ಈ ಕಾರಣದಿಂದಾಗಿ ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಕಂಪೆನಿ ಕೂಡಲೇ ಇತ್ತ ಗಮನ ಹರಿಸಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಈ ಹಿಂದಿನ ಒಪ್ಪಂದದಂತೆ ಸ್ಥಳೀಯರಿಗೆ ಟೋಲ್‍ನಿಂದ ವಿನಾಯಿತಿ ನೀಡಬೇಕೆಂದು ಡಿವೈಎಫ್‍ಐ ಒತ್ತಾಯಿಸಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ ಪೋಸ್ಟ್: ಕಠಿಣ ಕ್ರಮಕ್ಕೆ ಯು.ಟಿ. ಖಾದರ್ ಸೂಚನೆ

March 3, 2026

ವಿದೇಶಿ ಕರೆನ್ಸಿ ಅಕ್ರಮ ಸಾಗಾಟ – ಓರ್ವ ಪುರುಷ, ಇಬ್ಬರು ಮಹಿಳೆಯರು ಸೆರೆ

March 2, 2026

ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ – ವ್ಯಕ್ತಿಯ ರಕ್ಷಣೆ

March 2, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
KARNATAKA

ಯುಕೆಟಿಎಲ್ ಪರಿಹಾರ ವಿವಾದ: ಕರ್ನಾಟಕಕ್ಕಿಂತ ಕೇರಳದ ರೈತರಿಗೆ ಹೆಚ್ಚಿನ ಪರಿಹಾರ ಸಿಕ್ಕಿದೆಯೇ? ಇಲ್ಲಿದೆ ಅಸಲಿ ಲೆಕ್ಕಾಚಾರ

By UllalaVaniMarch 3, 20260

ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗವು (UKTL) ದಕ್ಷಿಣ ಕನ್ನಡ ಜಿಲ್ಲೆಯ ಗದ್ದೆ ಮತ್ತು ತೋಟಗಳ ಮೂಲಕ ಹಾದುಹೋಗುತ್ತಿರುವಾಗ,…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ ಪೋಸ್ಟ್: ಕಠಿಣ ಕ್ರಮಕ್ಕೆ ಯು.ಟಿ. ಖಾದರ್ ಸೂಚನೆ

March 3, 2026

ವಿದೇಶಿ ಕರೆನ್ಸಿ ಅಕ್ರಮ ಸಾಗಾಟ – ಓರ್ವ ಪುರುಷ, ಇಬ್ಬರು ಮಹಿಳೆಯರು ಸೆರೆ

March 2, 2026

ಇರಾನ್ ದಾಳಿ ; ಕರಾವಳಿಗರಲ್ಲಿ ಆತಂಕ ಬೇಡ – ಅನಿವಾಸಿ ಭಾರತೀಯರ ಮಾಹಿತಿ

March 2, 2026
1 2 3 … 1,819 Next
Automatic YouTube Gallery

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್   ಶಿಲಾನ್ಯಾಸ
Now Playing
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ...
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
Now Playing
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ...
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭ

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳೀನ್ ಕಟೀಲ್ ಮಾಹಿತಿ

#ullalavani #news #tulunad #ullala #latestnews #breakingnews #package #mangalore #Sasihitlutemple
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d