UN NETWORKS ಉಳ್ಳಾಲ : ಖುವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ 2018 – 2019 ನೇ ಸಾಲಿನ ಮದ್ರಸ ಪ್ರಾರಂಭೋತ್ಸವ ಹಾಗು ಮನೆ ಮನೆಗೆ ಸಸಿ ವಿತರಣಾ ಕಾರ್ಯಕ್ರಮ ಕಲ್ಲಾಪು ಪಟ್ಲದ ಮದ್ರಸ ಹಾಲ್‍ನಲ್ಲಿ ನಡೆಯಿತು. ತಖ್ವಾ ಜುಮಾ ಮಸೀದಿ ಪಟ್ಲ ಅಧ್ಯಕ್ಷರಾದ ಮಹಮೂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮದ್ರಸ ಪ್ರಾರಂಭೋತ್ಸವವನ್ನು ಕಲ್ಲಾಪುವಿನ ಸಮಾಜ ಸ್ನೇಹಿಯೋರ್ವರ ಸಂಪೂರ್ಣ ಸಹಕಾರದೊಂದಿಗೆ ಮನೆ ಮನೆಗೆ ಸಸಿ ವಿತರಿಸುವ ಮೂಲಕ ವೈವಿಧ್ಯಮಯ ರೀತಿಯಲ್ಲಿ ಆಚರಿಸಲಾಯಿತು. ಮದ್ರಸ ಅಧ್ಯಾಪಕ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಮಾತನಾಡಿ ಅರಿವಿನಂಗಳಕ್ಕೆ ಮನುಕುಲವನ್ನು ನಡೆಸಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಪವಿತ್ರ ಇಸ್ಲಾಂ ಎಂಬ ಶಾಂತಿಯ ಜೀವನದರ್ಶನಗಳ ಆರಂಭದ ಹೆಜ್ಜೆ ಮದ್ರಸಗಳು ಆಗಿದೆ. ಮದ್ರಸ ರಂಗದ ಸ್ಪಷ್ಟ ರಚನಾಕಾರ ಸಂಸ್ಥಾಪಕ ಮರ್ಹೂಂ ನೂರುಲ್ ಉಲಮಾ ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಹಿಂದೆ ಊರು ಕೇರಿಗಳಿಗೆ ಪಾದಯಾತ್ರೆ ಮಾಡಿ ಅರೆಹೊಟ್ಟೆಯಲ್ಲಿ ಸಾಗಿ ಮದ್ರಸ ಸಂಸ್ಥಾಪನೆಯ ಸಂದೇಶ ಮುಟ್ಟಿಸಿ ಪ್ರಾಯೋಗಿಕತೆಗೆ ತಂದ…
Author: UllalaVani
UN NETWORKS ಉಳ್ಳಾಲ : ಸಮ್ಮೇಳನ, ವಿಚಾರ ಸಂಕಿರಣಗಳು ದಾದಿಯರಲ್ಲಿರುವ ಕೌಶಲ್ಯ ವೃದ್ಧಿಗೆ ಪೂರಕ ಎಂದು ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಜಿ ಶ್ರೀಕುಮಾರ್ ಮೆನನ್ ಅಭಿಪ್ರಾಯಪಟ್ಟರು. ಯೆನೆಪೋಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಾದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಮುದಾಯ ಅರೋಗ್ಯ ವಿಭಾಗ ಇದರ ಆಶ್ರಯದಲ್ಲಿ ಸೋಂಕು ನಿಯಂತ್ರಣದಲ್ಲಿ ನರ್ಸಿಂಗ್‍ನ ಪಾತ್ರ ಎಂಬ ವಿಷಯದಲ್ಲಿ ನಡೆದ ಒಂದು ದಿನದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಯೊಂದಿಗೆ ಆಸ್ಪತ್ರೆಯ ಹೆಚ್ಚಿನ ಕಾರ್ಯದಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ. ದಾದಿಯರು ತಮ್ಮ ವೃತ್ತಿ ಸಂಬಂಧಿಸಿದ ಅನೇಕ ಹೊಸ ವಿಚಾರಗಳತ್ತ ಜ್ಞಾನವನ್ನು ಬೆಳೆಸುವಲ್ಲಿ ಪೂರಕ ಚಟುವಟಿಕೆಗಳಲ್ಲಿ ನಿರತರಾಗಬೇಕು. ಈ ನಿಟ್ಟಿನಲ್ಲಿ ವಿಚಾರ ಸಂಕಿರಣಗಳಿಂದ ತಮ್ಮಲ್ಲಿರುವ ಕೌಶಕ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದರು. ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಡಾ| ಲೀನಾ ಕೆ.ಸಿ.ದಿನದ ಮಹತ್ವವನ್ನು ವಿವರಿಸಿದರು. ಸಮ್ಮೇಳನದಲ್ಲಿ ಮಂಗಳೂರಿನ ವಿವಿಧ ಆಸ್ಪತ್ರೆಯ ಸಂಪನ್ಮೂಲ ವ್ಯಕ್ತಿಗಳು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಪತಿ ರಾವ್,…
UN NETWORKS ಉಳ್ಳಾಲ: ಸ್ವಚ್ಛ ಸರ್ವೇಕ್ಷಣ 2018ರ ಸಮೀಕ್ಷಯೆಡಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆ ರಾಜ್ಯಕ್ಕೆ 250 ಸ್ಥಳೀಯ ಸಂಸ್ಥೆಗಳ ಪೈಕಿ ನಾಲ್ಕನೇ ರ್ಯಾಂಕ್ ಹಾಗೂ ಜಿಲ್ಲೆಯಲ್ಲಿ ಮೊದಲನೇ ರ್ಯಾಂಕ್ ಪಡೆದಿದೆ. ಈ ಮೂಲಕ ದಕ್ಷಿಣ ಭಾರತ (ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ಪಾಂಡಿಚೇರಿ ರಾಜ್ಯಗಳ) ವಿಭಾಗದಲ್ಲಿ 1113 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಉಳ್ಳಾಲ ನಗರಸಭೆ 10ನೇ ರ್ಯಾಂಕ್ ಪಡೆದಿದೆ. ಜ.22 ರಿಂದ 25ರವರೆಗೆ ಸರ್ವೇಕ್ಷಣ 2018ರ ಮಾರ್ಗಸೂಚಿಯಂತೆ 2017-18 ನೇ ಸಾಲಿನ ದಾಖಲಾತಿ ಕ್ರೋಢೀಕರಿಸಿ ಕೇಂದ್ರ ಸರಕಾರದಿಂದ ನೇಮಿಸಿದ ತಂಡದಿಂದ ಒಟ್ಟು 3 ಹಂತದ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿತ್ತು. ಅದರಲ್ಲಿ ನಗರದ ಸ್ವಚ್ಛತೆ, ಸೇವಾ ಹಂತದ ಪ್ರಗತಿ, ಸ್ವತಂತ್ರ್ಯ ಮೌಲ್ಯಮಾಪನ, ಪ್ರತ್ಯಕ್ಷ ನೇರ ವೀಕ್ಷಣೆ ಹಾಗೂ ಸಾರ್ವಜನಿಕರ ಅಭಿಪ್ರಾಯಗಳ ಸಮೀಕ್ಷೆ ನಡೆದಿತ್ತು. ಸಮೀಕ್ಷೆ ಕಾರ್ಯದಲ್ಲಿ ಸಹಕಾರ ನೀಡಿದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು,…
UN NETWORKS ಸೋಮೇಶ್ವರ: ರಾಜ್ಯದಾದ್ಯಂತ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಕೆಲಸಗಳು ಆಗುತ್ತಿದ್ದು, ಧಾರ್ಮಿಕ ನೆಲೆಯಲ್ಲಿ ಎಲ್ಲಾ ಸಮಾಜದವರು ಸಾಮರಸ್ಯದಿಂದ ಕೂಡಿ ಆಚರಿಸುವ ಕ್ಷೇತ್ರಗಳ ಇತಿಹಾಸವಿದೆ. ಈ ನಿಟ್ಟಿನಲ್ಲಿ ಲೋಕಲ್ಯಾಣಕ್ಕಾಗಿ ಶಿವನ ಮಹತ್ವದ ಆಚರಣೆಯಾದ ಸೀಯಾಳಾಭಿಷೇಕವನ್ನು ಹಮ್ಮಿಕೊಂಡಿರುವ ಕಾರ್ಯ ಅರ್ಥಪೂರ್ಣ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದ್ದಾರೆ. ಅವರು ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ, ನಾಡಿನ ಏಕತೆ ಮತ್ತು ಐಕ್ಯತೆಗಾಗಿ , ಸರ್ವಜನರ ಇಷ್ಟಾರ್ಥ ಸಿದ್ಧಿಗಾಗಿ ಸೋಮವಾರ ಕ್ಷೇತ್ರದಲ್ಲಿ ಜರಗಿದ ಶ್ರೀ ಸೋಮನಾಥ ದೇವರಿಗೆ ಸೀಯಾಳ ಅಭಿಷೇಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿವ ದೇವರಿಗೆ ಸಿಯಾಳ ಅಭಿಷೇಕ ಮಹತ್ವದ ಆರಾಧನೆಯಾಗಿದೆ. ರಾಜ್ಯದ ಎಲ್ಲೆಡೆಯೂ ಕ್ಷೇತ್ರಗಳಲ್ಲಿ ಇಲ್ಲದ ಶಿಷ್ಟಾಚಾರ, ಶ್ರದ್ಧೆ ಜಿಲ್ಲೆಯ ಕ್ಷೇತ್ರಗಳಲ್ಲಿ ಪಾಲನೆಯಾಗುತ್ತಿದೆ. ಸೋಮೇಶ್ವರ ದೇವಸ್ಥಾನ ಎಲ್ಲಾ ಧರ್ಮದವರು ಬರುವ ಕ್ಷೇತ್ರ. ಇಲ್ಲಿನ ಜೀರ್ಣೋದ್ಧಾರ ಕಾಮಗಾರಿಯೂ ನಡೆಯುತ್ತಿದ್ದು, ಮುಂದಿನ ವರ್ಷ ಬ್ರಹ್ಮಕಲಶೋತ್ಸವವೂ ಜರಗಲಿದೆ. ಕ್ಷೇತ್ರದ ಶಾಸಕರು ಹಾಗೂ ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅವರ ಪ್ರೋತ್ಸಾಹದಿಂದ…
UN NETWORKS ಕೊಣಾಜೆ: ಕೊಣಾಜೆ ಗ್ರಾಮದ ದಾಸರಮೂಲೆ ಎಂಬಲ್ಲಿ ಕಾಂಕ್ರೀಟು ಪಿಲ್ಲರ್ ಹಾಕಿ ನಿರ್ಮಿಸಿದ್ದ ಬೃಹತ್ ಆವರಣಗೋಡೆ ಮಳೆಯಿಂದಾಗಿ ಕುಸಿದು ಹಾನಿಯಾಗಿರುವ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.ಈ ಸಂದರ್ಭದಲ್ಲಿ ಮನೆಯೊಳಗೆ ಮಲಗಿದ್ದ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಣಾಜೆಯ ದಾಸರಮೂಲೆಯ ನಿರ್ಮಲಾ ಎಂಬವರ ಮನೆಗೆ ಪಕ್ಕದ ಮನೆಯ ಏರು ಪ್ರದೇಶದಲ್ಲಿರುವ ದೇವಣ್ಣ ಶೆಟ್ಟಿ ಎಂಬವರ ಮನೆಯ ಆವರಣಗೋಡೆಯು ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ಕುಸಿದು ಬಿದ್ದಿದೆ. ಕುಸಿತದ ಪರಿಣಾಮ ನಿರ್ಮಲಾ ಅವರ ಮನೆಯ ಮೇಲ್ಚಾವಣಿಗೆ ಹಾನಿಯಾಗಿದ್ದು, ಗೋಡೆಯು ಬಿರುಕುಗೊಂಡು ಹಾನಿಯಾಗಿದೆ. ಘಟನೆ ಸಂಭವಿಸಿದಾಗ ಮನೆಯೊಳಗೆ ನಿರ್ಮಲಾ ಸೇರಿದಂತೆ ಅವರ ಮಕ್ಕಳಾದ ವಿದ್ಯಾ, ರಮೇಶ ಹಾಗೂ ಅಳಿಯ ಪುಟ್ನಂಜ, ಮೊಮ್ಮಕ್ಕಳು ಸೇರಿ ಒಟ್ಟು ಆರು ಜನ ಮಲಗಿದ್ದರು. ಆವರಣ ಗೋಡೆಯು ಕುಸಿದ ಶಬ್ಧ ಕೇಳಿದಾಗ ಮನೆಯೊಳಗಿದ್ದವರು ಮನೆಯಿಂದ ಹೊರಗೆ ಓಡಿ ಬಂದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಆವರಣ ಗೋಡೆಯ ಬಳಿ ವಿದ್ಯುತ್ ಕಂಬವೂ ಅಪಾಯದಲ್ಲಿದ್ದು, ಮುಂಜಾಗ್ರತವಾಗಿ ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವನ್ನು…
UN NETWORKS ಸುಳ್ಯ : ಮಳೆ ಬಂತೆಂದರೆ ಬಹುತೇಕ ಜಲಪಾತಗಳು ಮೈತುಂಬಿ ಹರಿಯುತ್ತದೆ. ಇದೇ ರೀತಿಯಲ್ಲಿ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದಲ್ಲಿನ ಚಾಮಡ್ಕ ಜಲಪಾತವೂ ಮೈತುಂಬಿ ಹರಿಯಲು ಆರಂಭಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ವಿಚಿತ್ರವೆಂದರೆ ಬೇರೆ ಕಡೆಗಳಲ್ಲಿ ಎಲ್ಲಿಯೂ ಕಾಣದ ರೀತಿಯ ಚಾಮಡ್ಕ ಜಲಪಾತದ ನೀರು ಪಶ್ಚಿಮ ದಿಕ್ಕಿನಿಂದ ಪೂರ್ವ ಧಿಕ್ಕಿಗೆ ಹರಿಯುತ್ತದೆ. ಬಂಟಮಲೆಯಲ್ಲಿ ಹುಟ್ಟುವ ಜಲಪಾತ ಕಂದಡ್ಕದ ಕುಟೇಲಿನಲ್ಲಿ ಪಯಸ್ವಿನಿ ನದಿ ಸೇರುತ್ತದೆ. ಸೇತುವೆ ಕೆಳಭಾಗದಲ್ಲಿ ಹರಿದು ಬರುವ ನೀರು ಎತ್ತರದಿಂದ ಕೆಳಗೆ ಬೀಳುವುದು ಮೈನವಿರೇಳಿಸುವಂತಹದ್ದು. ಅದರ ಕಳಗೆ ನಿಂತಲ್ಲಿ ನೀರಿನ ಏಟು ತಡೆಯಲಾಗದ ಸ್ಥಿತಿ. ಅಲ್ಲಿಂದ ಕೆಳಬೀಳುವ ನೀರು ಮೂರು ತೊರೆಗಳಾಗಿ ಹರಿಯುತ್ತಾ ಹೋಗುವುದರಿಂದ ಅಪಾಯಕಾರಿಯೂ ಆಗಿರುವುದಿಲ್ಲ. ಮೇಲ್ನೋಟಕ್ಕೆ ನೀರಿನ ಪ್ರವಾಹವೇ ಕಾಣಿಸಿದರೂ ಕೆಳಗೆ ಹೋಗಿ ನಿಂತಾಗ ಅದರ ಸೊಬಗು ಖುಷಿ ಕೊಡುತ್ತದೆ. ಹೋಗುವ ದಾರಿ : ಸುಳ್ಯ ತಾಲೂಕಿನಿಂದ 13 ಕಿ.ಮೀ ದೂರದಲ್ಲಿರುವ ಜಲಪಾತಕ್ಕೆ ಹೋಗಲು ಸುಗಮವಾದ ದಾರಿಯಿದೆ. ಕಾಡು ಬದಿಯ ಮಾರ್ಗದಲ್ಲೇ ಬಸ್ಸು ಅಥವಾ ಸ್ವಂತ ವಾಹನದಲ್ಲಿ…
UN NETWORKS ಮಂಗಳೂರು: ಆರ್ಯ ಎಜ್ಯುಕೇಷನಲ್ ಟ್ರಸ್ಟ್ ನ ಆರ್ಯ ಆಯುರ್ವೇದ ಪಂಚಕರ್ಮ ಹಾಗೂ ಫಿಟ್‍ನೆಸ್ ಕೇಂದ್ರ ಮಂಗಳೂರಿನ ಬಿಜೈ ನ್ಯೂ ರೋಡಿನ ಎರಡನೇ ಕ್ರಾಸಿನಲ್ಲಿ ಸೋಮವಾರ ಶುಭಾರಂಭಗೊಂಡಿತು. ಪಾರಂಪರ್ಯ ಆಯುರ್ವೇದ ಆಧಾರಿತ ಆರೋಗ್ಯ ಮತ್ತು ಚಿಕಿತ್ಸಾ ಕೇಂದ್ರದಲ್ಲಿ ಯೋಗ ಮತ್ತು ಜ್ಞಾನ ತರಬೇತಿ ಇಂದಿನಿಂದಲೇ ಆರಂಭಗೊಂಡಿದೆ. ಬೆಳಿಗ್ಗೆ 5.30 ರಿಂದ ಸಂಜೆ 7.30 ರವರೆಗೆ ಕೇಂದ್ರದಲ್ಲಿ ತರಬೇತಿ ನಡೆಯಲಿದೆ.ಬಳಿಕ ಝುಂಬಾ ಬೆಳಿಗ್ಗೆ 8.30 ರಿಂದ 11.30ರವರೆಗೆ ಬೆಳಗ್ಗಿನ ಬ್ಯಾಚ್ ಮತ್ತು ಸಂಜೆ ಬ್ಯಾಚ್ 5.30 ರಿಂದ 7.30ರವರೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡಾ| ಸಂಜೀವ ದಂಡಕೇರಿ, ಕೃಷ್ಣಪ್ಪ ಬಂಗೇರ, ವೆಂಕಟೇಶಯ್ಯ.ವಿ.ಬೆಂಗಳೂರು, ರವಿಶಂಕರ್ ಮಿಜಾರ್, ಕೆ.ಎಲ್ . ಪೂಜಾರಿ ಭಾಗವಹಿಸಿದ್ದರು. ಟ್ರಸ್ಟಿಗಳಾದ ಶೈಲೇಂದ್ರ ಬಿ.ವಿ, ಧಾರೇಶ್ ಅಂಚನ್. ಯಸ್, ಭಾರತಿ ಧಾರೇಶ್, ಲಿಖಿತಾ.ಯನ್ ಉಪಸ್ಥಿತರಿದ್ದರು. ಯೋಗ ಮತ್ತು ಧ್ಯಾನದ ತರಬೇತಿಯನ್ನು ಯೋಗಿಕ್ ಸೈನ್ಸ್ ಎಂ.ಎಸ್ಸಿ ಪದವೀಧರೆ ಉಮಾದೇವಿ ನೀಡಲಿದ್ದು, ಅಂತರಾಷ್ಟ್ರೀಯ ಮಟ್ಟದ ಝುಂಬಾ ತರಬೇತುದಾರೆ ನಮ್ರತಾ ನೀಡಲಿದ್ದಾರೆ. ಟ್ರಸ್ಟೀ ಭಾರತಿ ಧಾರೇಶ್…
UN NETWORKS ಉಳ್ಳಾಲ: ಕಾರುಗಳ ಎರಡರ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಬೈಪಾಸ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತಲಪಾಡಿ ತಚ್ಚಣಿ ನಿವಾಸಿ ಮನೋಹರ್(50) ಮೃತ ದುರ್ದೈವಿ. ಮನೋಹರ್ ಅವರು ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ಸಂಚರಿಸುತ್ತಿದ್ದಾಗ ಕುಂಪಲದಿಂದ ತೊಕ್ಕೊಟ್ಟು ಚತುಷ್ಪಥ ರಸ್ತೆಯಿದ್ದರೂ ತಲಪಾಡಿ ಕಡೆಗೆ ಮಾತ್ರ ಸಂಚರಿಸುವ ರಸ್ತೆಯಲ್ಲಿ ಎದುರು ಭಾಗದಿಂದ( ರಾಂಗ್ ಸೈಡ್) ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಬೈಕ್ ನಿಂದ ರಸ್ತೆಗೆಸೆಯಲ್ಪಟ್ಟ ಮನೋಹರ್ ಅವರ ತಲೆಯ ಮೇಲೆ ಹಿಂದಿನಿಂದ ಬಂದ ಕಾರು ಚಲಿಸಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಮನೋಹರ್ ಅವರು ಖಾಸಗಿ ಬಸ್ ಮೆನೇಜರ್ ಆಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ವಿದೇಶಕ್ಕೆ ತೆರಳಿದ್ದರು. ಕಳೆದ ಕೆಲವು ವರ್ಷಗಳಿಂದ ಕುಟುಂಬದ ಮನೆಯಲ್ಲಿ ವಾಸಿಸುತ್ತಿದ್ದ…
UN NETWORKS ಉಳ್ಳಾಲ: ಸಹಕಾರಿ ಸಂಘ ಸಮಾಜಮುಖಿಯಾಗಿ ಸೇವೆಯನ್ನು ನಡೆಸುತ್ತಾ ಬಂದಿದ್ದು, ಹಲವು ಕಡೆಗಳಲ್ಲಿ ಶಾಖೆಯನ್ನು ತೆರೆದು ಸಮಾಜದ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಆರ್.ಇ.ಬಿ ಕಾಂಪ್ಲೆಕ್ಸ್ ನಿಂದ ತೊಕ್ಕೊಟ್ಟು ವಿಜಯ ಬ್ಯಾಂಕ್ ಸಮೀಪದ ಪ್ರಗತಿ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಗೊಂಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ತೊಕ್ಕೊಟ್ಟು ಶಾಖಾ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಅನುಕೂಲಕರವಾದ ಜಾಗ ಬೇಕಾಗಿರುವುದರಿಂದ ಮಂಗಳೂರಿನ ಇನ್ನೊಂದು ಭಾಗ ಆಗಿರುವ ತೊಕ್ಕೊಟ್ಟು ಪ್ರದೇಶದಲ್ಲಿ ಜನಪರವಾಗಿ ಸೇವೆಯನ್ನು ಮಾಡುವ ಅವಕಾಶ ದೊರೆತಿದೆ. ವಿವಿಧ ಉದ್ದೇಶಗಳಿಗೆ, ಸೌಹಾರ್ದತೆಯನ್ನು ನೆಲೆಸುವ ಸಲುವಾಗಿ ಸಂಸ್ಥೆ ಕಾರ್ಯಾಚರಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಯಶಸ್ವಿ ಜನಪರ ಸೇವೆಯನ್ನು ಮಾಡುತ್ತಾ ಬಂದಿದೆ. ಈ ಮೂಲಕ ಸಂಸ್ಥೆಯೂ ಬೆಳೆಯುವುದು, ಸಮಾಜವೂ ಬೆಳೆಯಲು ಸಾಧ್ಯ. ತೊಕ್ಕೊಟ್ಟು ಪ್ರದೇಶ ಮಂಗಳೂರಿನ ಇನ್ನೊಂದು ಕೇಂದ್ರವಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳಿವೆ. ಈ ನಿಟ್ಟಿನಲ್ಲಿ ಆರಂಭವಾಗಿರುವ…
UN NETWORKS ಉಳ್ಳಾಲ: 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ರಚನೆಯನ್ನು ಅನುದಾನಿತ ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 18.06.2018ರಂದು ನಡೆಸಲಾಯಿತು. ಇಲ್ಲಿ ಮತದಾನದ ಅನುಭವದ ವಾತವರಣ ಕಂಡು ಬಂತು. ಮತದಾನರ ಸಾಲು, ಮತದಾನದ ಪೆಟ್ಟಿಗೆ, ಮತದಾನದ ಬ್ಯಾಲೆಟ್ ಪೇಪರ್ ಮತ್ತು ಮತದಾನರು. ಇದರ ಪೂರ್ವ ತಯಾರಿಯಾಗಿ 4.06.2018ರಂದು 9 ಅಭ್ಯರ್ಥಿಗಳು ಶಾಲಾ ಮುಖ್ಯೋಪಾಧ್ಯಾಯನಿಯವರಿಗೆ ನಾಮ ಪತ್ರವನ್ನು ಸಲ್ಲಿಸಿದರು. ಎಲ್ಲಾ ಆಭ್ಯರ್ಥಿಗಳು ಶಾಲಾ ನಾಯಕಿ/ನಾಯಕ ಸ್ಥಾನಕ್ಕೆ ಸ್ಪರ್ಥಿಸಿದರು. 18.06.2018 ಮತದಾನ ನಡೆಯಿತು. ಶಾಲೆಯ ವಿದ್ಯಾರ್ಥಿಗಳಳಿಗೆ ಸಂಸತ್ತು ರಚನೆಯ ಬಗ್ಗೆ ಅರಿವನ್ನು ಮೂಡಿಸಲಾಯಿತು. ಮತದಾನದ ಎಲ್ಲಾ ಪ್ರಕ್ರಿಯೆಗಳು ಬಹು ಅಚ್ಚುಕಟ್ಟಾಗಿ ಅನುಸರಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. 9 ಆಭ್ಯರ್ಥಿಗಳು: ಸೌರವ್ (ಚಿಹ್ನೆ-ಘಂಟೆ), ರೀಶಲ್ ಶೈನಾ ಮೊಂತೆರೊ (ಶಾಲಾ ಚೀಲ), ಆಶಿಕಾ ಅಮಿರಾ (ಬಾಲ್ದಿ), ಡೆನ್ಸನ್ ಕ್ರಾಸ್ತ (ಗಡಿಯಾರ), ಆಯಿಶಾ ಸುಹಾನಾ (ಪೆನ್ಸಿಲ್), ವಿಘ್ನೇಶ್ ರಾವ್ (ಕುರ್ಚಿ-ಡೆಸ್ಕ್), ಸಲ್ವಿಟಾ ಮೊಂತೆರೊ (ಛತ್ರಿ), ಸ್ವೀಡಲ್ ಡಿ’ಸೋಜ (ಪುಸ್ತಕ), ಆಕಾಶ್ (ಸೈಕಲ್).…

