Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಪರಿಸರ ಸ್ನೇಹಿಯಾಗುವ ಉದ್ದೇಶದಿಂದ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಶೇ.20 ರಷ್ಟು ವಿದ್ಯುತ್ ಉಳಿಸುವ ಸಲುವಾಗಿ 498 ಕಿಲೋ ವಾಟ್ಸ್ ವಿದ್ಯುತ್ ಉತ್ಪಾದಿಸುವ ಸೌರ ಫಲಕವನ್ನು ಅಳವಡಿಸಲಾಗಿದೆ ಎಂದು ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ|.ಎಂ ವಿಜಯಕುಮಾರ್ ಹೇಳಿದರು. ಅವರು ಯೆನೆಪೋಯ ಕ್ಯಾಂಪಸ್ಸಿನಲ್ಲಿ ಅಳವಡಿಸಲಾದ ಸೌರ ಫಲಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸೌರ ಫಲಕದ ಅಳವಡಿಕೆಯಿಂದಾಗಿ ಕ್ಯಾಂಪಸ್ಸಿನಲ್ಲಿ ಶೇ. 20 ರಷ್ಟು ವಿದ್ಯುತ್ ಉಳಿಸಲು ಸಾಧ್ಯವಾಗಿದೆ. ಪರಿಸರ ಸ್ನೇಹಿಯಾಗಿ ಬೆಳೆಯುತ್ತಿರುವ ವಿಶ್ವವಿದ್ಯಾಲಯಕ್ಕೆ ಇದೊಂದು ಹಿರಿಮೆ ತಂದಿದೆ. ಸದ್ಯ ಅಳವಡಿಸಿರುವ ಸೌರ ಫಲಕದಿಂದ 498 ಕಿಲೋ ವಾಟ್ಸ್ ವಿದ್ಯುತ್ ಉತ್ಪಾದನೆಯಾಗಲಿದೆ. ಬರುವ ದಿನಗಳಲ್ಲಿ ಶೇ. 100 ರಷ್ಟು ವಿದ್ಯುತ್ ಸೌರಶಕ್ತಿಯಿಂದಲೇ ದೊರೆಯುವಂತಹ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದರು. https://www.youtube.com/watch?v=GDXxBzvXnZo ಯೆನೆಪೋಯ ವಿ.ವಿ ಹಣಕಾಸು ವಿಭಾಗದ ನಿರ್ದೇಶಕ ಫರ್ಹಾದ್ ಯೆನೆಪೋಯ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಶ್ರೀಕುಮಾರ್ ಮೆನನ್, ಹಣಕಾಸು ಅಧಿಕಾರಿ ಮಹಮ್ಮದ್ ಬಾವಾ.ಪಿ, ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ|.ಬಿ.ಹೆಚ್.ಶ್ರೀಪತಿ ರಾವ್, ವೈದ್ಯಕೀಯ…

Read More

UN NETWORKS ಉಳ್ಳಾಲ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ, ಜಿಲ್ಲೆಯ ಆಯ್ದ ಧಾರ್ಮಿಕ ಸಂಸ್ಥೆಯಡಿ ಸರ್ಕಾರದ ವಿವಿಧ ಯೋಜನೆ ಬಗ್ಗೆ ಮತ್ತು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ದಿಗೊಳ್ಳುವಂತಹ ಕಾರ್ಯಗಳ ಬಗ್ಗೆ ಜನರಿಗೆ ತಲುಪಲು ಸಹಾಯಕವಾಗುವಂತೆ ಮಾಹಿತಿ ಕೇಂದ್ರ ಸ್ಥಾಪಿಸುವ ಯೋಜನೆಯಡಿ ದ.ಕ ಜಿಲ್ಲೆಯ 5ಧಾರ್ಮಿಕ ಸಂಸ್ಥೆಯ ಪೈಕಿ ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗ ಕಮಿಟಿಯು ಆದರ್ಶ (ಮಿಸಾಲಿ) ಮಸೀದಿಯಾಗಿ ಆಯ್ಕೆಗೊಂಡಿರುತ್ತದೆ. ಮಿಸಾಲಿ ಮಸೀದಿ ಕಾರ್ಯನಿರ್ವಹಣೆಗೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಗೆ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಅಲ್‍ಹಾಜಿ ಕನಚೂರು ಮೋನುರವರು 80ಸಾವಿರ ರುಪಾಯಿಯ ಚೆಕ್ಕ್ ನ್ನು ವಕ್ಫ್ ಕಛೇರಿಯಲ್ಲಿ ವಿತರಿಸಿದರು. ಈ ಸಂದರ್ಭ ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ ಉಪಸ್ಥಿತರಿದ್ದರು. ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಆಡಳಿತ ಕಮಿಟಿ ಆದರ್ಶ ಮಸೀದಿಯಾಗಿ…

Read More

UN NETWORKS ಉಳ್ಳಾಲ: ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮಹಿಳೆಯರಿಗಾಗಿ ಒಂದು ವರ್ಷದ ವಿಶೇಷ ಕೋರ್ಸ್ ಮಹಿಳಾ ಶರೀಅತ್ ಕಾಲೇಜ್” ಗೆ ಜೂನ್ 28 ಗುರುವಾರ ಚಾಲನೆ ನೀಡಲಾಯಿತು.ಟ್ರಸ್ಟ್ ಅಧ್ಯಕ್ಷರಾದ ಏಷ್ಯನ್ ಅಹ್ಮದ್ ಬಾವಾ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಇಸ್ಮಾಈಲ್ ಅಲ್ ಅಹ್ ದಲ್ ತಂಙಳ್ ಆದೂರು, ಕೇರಳ ರವರು ಉಧ್ಘಾಟಿಸಿದರು. ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ವಿ.ಯು ಇಸ್ಹಾಖ್ ಝುಹ್ರಿ ಸೂರಿಂಜೆ ವಿಷಯ ಮಂಡಿಸಿದರು.ಕಾಲೇಜ್ ನ ಪ್ರೊಫೆಸರುಗಳಾದ ಅಬೂಬಕರ್ ಸಿದ್ದೀಖ್ ಅಹ್ಸನಿ ಹಾಗೂ ಆಯಿಶಾ ಫರ್ವೀನ ಕಾಲೇಜ್ ನ ನೀತಿ, ನಿಯಮಗಳನ್ನು ವಿವರಿಸಿದರು.ತಾಜುಲ್ ಉಲಮಾ ಮಸ್ಜಿದ್ ನ ಇಮಾಮ್ ಅಶ್ರಫ್ ಸ ಅದಿ, ಟ‍್ರಸ್ಟ್ ಕೋಶಾಧಿಕಾರಿ ಹಾಜಿ ಬಶೀರ್ ಅಹ್ಮದ್ ದೇರಳಕಟ್ಟೆ,ಸದಸ್ಯರಾದ ಯೂಸುಫ್ ರಝ್ವಿ, ಹಾಜಿ ಅಹ್ಮದ್ ಕಬೀರ್ ಆ, ಹಮೀದ್ ಹಾಜಿ ದೇರಳಕಟ್ಟೆ ಭಾಗವಹಿಸಿದ್ದರು.

Read More

UN NETWORKS ಉಳ್ಳಾಲ: ಜಿಲ್ಲೆಯಾದ್ಯಂತ ಕುಂಭದ್ರೋಣ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕ ಸೊತ್ತುಗಳಿಗೆ ಅಪಾರ ಹಾನಿಯಾಗಿದೆ . ರಾಜ್ಯ ಸರಕಾರ ತುರ್ತು ಕ್ರಮಕೈಗೊಂಡು ಶೀಘ್ರವೇ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಉಳ್ಳಾಲ ನಗರಸಭೆ ವ್ಯಾಪ್ತಿಯ 23 ನೇ ವಾರ್ಡಿನಲ್ಲಿ ಬುಧವಾರ ಕುಸಿದುಬಿದ್ದ ಶಾರದಾ ಎಂಬವರ ಮನೆಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಕೆರೆಬೈಲುಗುಡ್ಡೆಯಲ್ಲಿ ಮನೆ ಕುಸಿತಗೊಂಡಿರುವ ಕುರಿತು ಜಿಲ್ಲಾಧಿಕಾರಿ ಜತೆಗೆ ಮಾತನಾಡಿ ತ್ವರಿತ ಪರಿಹಾರ ಮತ್ತು ದುರಸ್ತಿ ಕಾರ್ಯಕ್ಕೆ ಸೂಚಿಸುತ್ತೇನೆ. ಈಗಾಗಲೇ ಕಂದಾಯ ಅಧಿಕಾರಿ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಸಾರ್ವಜನಿಕ ಸೊತ್ತುಗಳಿಗೆ ಹಾನಿ, ರಸ್ತೆಗಳಿಗೆ ಹಾನಿಯಾಗಿದೆ. ರಾಜ್ಯ ಸರಕಾರ ಕೂಡಲೇ ಸಂತ್ರಸ್ತರ ಹಾಗೂ ಸಾರ್ವಜನಿಕ ಸೊತ್ತುಗಳ ಹಾನಿ ಕುರಿತ ವರದಿ ಸಂಗ್ರಹಿಸಿ ಪರಿಹಾರವನ್ನು ಘೋಷಿಸಿ ತುರ್ತಾಗಿ ಒದಗಿಸಬೇಕಿದೆ ಎಂದರು. ಈ ಸಂದರ್ಭ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ…

Read More

UN NETWORKS ತಲಪಾಡಿ: ವಿದ್ಯಾರ್ಥಿಗಳು ಮಾದಕ ದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು, ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯೆನಪೋಯ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ವೈದ್ಯೆ ಡಾ| ಪಲ್ಲವಿ ಅಭಿಪ್ರಾಯಪಟ್ಟರು. ಅವರು ಶಾರದಾ ವಿದ್ಯಾನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ಮಾದಕ ವಸ್ತುಗಳ ಸೇವನೆಗೆ ಕಾರಣ, ಪರಿಣಾಮ ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗಿ ಆತ ಸಮಾಜಕ್ಕೊಂದು ಶಾಪಗ್ರಸ್ತ ವ್ಯಕ್ತಿಯಾಗಿ ಸಮಾಜದ ಅಧಃ ಪತನಕ್ಕೆ ಕಾರಣನಾಗುತ್ತಾನೆ. ಇಂತಹ ಸಂದರ್ಭ ದಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಅತೀ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸುಷ್ಮ ದಿನಕರ್, ಉಪಪ್ರಾಂಶುಪಾಲ ಮೋಹನ್ ದಾಸ್, ಯೆನಪೋಯ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥೆ…

Read More

UN NETWORKS ಉಳ್ಳಾಲ: ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸುವುದರೊಂದಿಗೆ ಸ್ವಸ್ಥ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಶಿಕ್ಷಣ ನೀಡುವ ಅಗತ್ಯವಿದ್ದು, ಈ ನಿಟ್ಟಿಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹೆತ್ತವರು ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ಗೌರವ ಅಧ್ಯಕ್ಷ ಸೀತಾರಾಮ ಬಂಗೇರ ಅಭಿಪ್ರಾಯಪಟ್ಟರು. ಕೊಲ್ಯ ಶಾರದಾ ಸದನದಲ್ಲಿ ನಡೆದ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಪ್ರಾಥಮಿಕ ಶಾಲಾ ಆಯ್ದ ಮಕ್ಕಳಿಗೆ ಸಹಾಯಧನ ಹಾಗೂ ಪರಿಸರ ಪ್ರೀತಿ ಸಂರಕ್ಷಣೆಗಾಗಿ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುಂಪಲ ಇದರ ನಿವೃತ ಮುಖ್ಯೋಪಾಧ್ಯಾಯ ವಿಶ್ವನಾಥ ಎಮ್. ಕೆ. ಪರಿಸರ ಪ್ರೇಮಿ ಮಾದವ ಉಳ್ಳಾಲ್, ಕೊಲ್ಯ ಆದರ್ಶ ಮಿತ್ರ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್,ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷ ಯಶೋಧರ…

Read More

UN NETWORKS ಮಂಗಳೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಸ್ಕಾರ್ಫ್ ಅದು ಅವರ ಹಕ್ಕು ಅದನ್ನು ಕಸಿದುಕೊಳ್ಳುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯ ನೀತಿ ಖಂಡನೀಯ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ ಎಂ ತಿಳಿಸಿದ್ದಾರೆ. ಸ್ಕಾರ್ಫ್ ಕಾರಣ ಮುಂದಿಟ್ಟುಕೊಂಡು ಕೆಲವು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದ್ದು ಕಾಲೇಜು ಮಂಡಳಿಯ ಈ ನಡವಳಿಕೆ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವಂತಿದೆ. ಈ ತೀರ್ಮಾನ ವಿದ್ಯಾರ್ಥಿನಿಯರ ಉಜ್ವಲ ಭವಿಷ್ಯವನ್ನು ಹಾನಿಗೊಳಿಸುವಂತಿದೆ. ಈ ನಿಟ್ಟಿನಲ್ಲಿ ಸ್ಕಾರ್ಫ್ ವಿವಾದವನ್ನು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರ ಜೊತೆ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕು, ಈ ವಿವಾದದಲ್ಲಿ ಬಡ ವಿದ್ಯಾರ್ಥಿನಿಯರ ಶಿಕ್ಷಣ ಕಸಿದು ಕೊಳ್ಳದೆ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿ ಕೊಡಬೇಕು ಎಂದು ರವೂಫ್ ಸಿ ಎಂ ಆಗ್ರಹಿಸಿದರು.

Read More

UN NETWORKS ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ ಇದರ ಉಳ್ಳಾಲ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಆನಂದ ಶೆಟ್ಟಿ ಎಂ. ಆಯ್ಕೆಯಾಗಿದ್ದಾರೆ. ಗ್ರಾಮ ಸಮಿತಿಯ ಮಹಾಸಭೆಯಲ್ಲಿ 2018-20ನೇ ಸಾಲಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಮೂನ್‍ಲೈಟ್, ಮಾರ್ಗದರ್ಶಕರಾಗಿ ಗಂಗಾಧರ ಶೆಟ್ಟಿ, ಡಾ| ಆರ್.ಕೆ. ಶೆಟ್ಟಿ, ಗೌರವ ಸಲಹೆಗಾರರಾಗಿ ವೈ. ಜಯರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಹರೀಶ್ ಆಳ್ವ, ವಿದ್ಯಾಧರ್ ಶೆಟ್ಟಿ, ಶಾಂತಾ ಆರ್.ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಶೆಟ್ಟಿ, ರೇಣುಕಾ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತ ಭಂಡಾರಿ, ಕೋಶಾಧಿಕಾರಿಯಾಗಿ ಇಂದಿರಾ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಗೋಪಾಲ ಶೆಟ್ಟಿ, ಉಮಾವತಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ, ಅಶೋಕ ಶೆಟ್ಟಿ, ಕಾರ್ಯಕಾರಿ ಸದಸ್ಯರುಗಳಾಗಿ ಇಂದಿರಾ ಅಶೋಕ್ ಶೆಟ್ಟಿ, ಸುಜೀರ್ ಶೆಟ್ಟಿ, ಲೀಲಾ ಜಯಂತ್ ಶೆಟ್ಟಿ, ಸಮಿತಾ ಶೆಟ್ಟಿ ಇವರುಗಳನ್ನು ಆಯ್ಕೆಮಾಡಲಾಯಿತು. ಯುವ ವಿಭಾಗಕ್ಕೆ ಆಕಾಶ್ ಎ. ಶೆಟ್ಟಿ, ಸೃಜನ್ ಶೆಟ್ಟಿ, ಕ್ರೀಡಾ ವಿಭಾಗಕ್ಕೆ…

Read More

UN NETWORKS ಉಳ್ಳಾಲ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳಲ್ಲಿ ಮಳೆ ನೀರು ಹರಿದು ಹೊಂಡ ನಿರ್ಮಾಣವಾಗಿ ಹೆದ್ದಾರಿ66ರ ನೇತ್ರಾವತಿ ಸೇತುವೆಯಿಂದ ಉಳ್ಳಾಲ ಕಾಪಿಕಾಡ್ ವರೆಗೆ ಸಂಚಾರ ಆಸ್ತವ್ಯಸ್ತವಾಯಿತು. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿಯಿಂದ ಸುಮಾರು ಒಂದು ಕಿ. ಮೀ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಸರ್ವೀಸ್ ರಸ್ತೆ ಇಕ್ಕಾಟ್ಟಾಗಿದ್ದು, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಸಂಸ್ಥೆ ನಿರ್ಮಿಸಿದ್ದ ಚರಂಡಿ ಹೊಂಡ ಬಿದ್ದು ಸಂಪೂರ್ಣ ಚರಂಡಿ ಮಣ್ಣು ತುಂಬಿದೆ. ಚೆಂಬುಗುಡ್ಡೆ ಕಡೆಯಿಂದ ಹರಿಯುವ ಮಳೆ ನೀರು ಸಂಪೂರ್ಣ ಹೆದ್ದಾರಿಯಲ್ಲಿ ಹರಿದ ಪರಿಣಾಮ ಸರ್ವೀಸ್ ರಸ್ತೆ ಸಂಪೂರ್ಣ ಹೊಂಡ ಮಯವಾಗಿದೆ. ಮಳೆಗಾಲ ಆರಂಭದಲ್ಲಿ ತೊಕ್ಕೊಟ್ಟು ಜಂಕ್ಷನ್ ಮುಳುಗಡೆಯಾಗಿದ್ದು, ಬಳಿಕ ರಸ್ತೆ ಹೊಂಡಗಳು ಹೆಚ್ಚಾಗಿ ಸಂಚಾರಕ್ಕೆ ತಡೆಯಾಗಿದ್ದು ವಾಹನಗಳು ಬ್ಲಾಕ್‍ನಲ್ಲೇ ನಿಂತು ಸರದಿ ಸಾಲಿನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಯಿತು. ಬ್ಲಾಕ್ ಸಮಸ್ಯೆಯಿಂದ ಕೆಲವು ಬಸ್‍ಗಳು ನಿಗದಿತ ಸಮಯಕ್ಕೆ ಉಳ್ಳಾಲ, ಮತ್ತು ತಲಪಾಡಿಗೆ ತಲುಪಲು…

Read More

UN NETWORKS ಉಳ್ಳಾಲ: ಮನೆಯೊಂದು ಕುಸಿದು ಬಿದ್ದು ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ 23 ನೇ ವಾರ್ಡಿನ ಕೆರೆಬೈಲು ಎಂಬಲ್ಲಿ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಕೆರೆಬೈಲು ಗುಡ್ಡೆ ನಿವಾಸಿ ಶಾರದಾ (50) ಗಾಯಗೊಂಡವರು. ಇವರಿಗೆ ಸೇರಿದ ಮನೆಯಲ್ಲಿ ಸೊಸೆ ಮತ್ತು ಮೊಮ್ಮಗ ಇದ್ದು, ಮನೆ ಮುರಿದು ಬೀಳುವ ಸದ್ದು ಕೇಳುತ್ತಿದ್ದಂತೆ ಇಬ್ಬರು ಹೊರ ಓಡಿಬಂದರೆ, ಶಾರದಾ ಅವರು ಮನೆಯೊಳಗೆ ಸಿಲುಕಿಕೊಂಡು ಗಾಯಗೊಂಡಿದ್ದಾರೆ. ಅವರನ್ನೂ ಕೂಡಲೇ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ.

Read More