Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಧಾರ್ಮಿಕ ಶಿಕ್ಷಣ ಓರ್ವ ಉತ್ತಮ ಮನುಷ್ಯನ್ನಾಗಿ ಪರಿವರ್ತಿಸುತ್ತದೆ. ಧಾರ್ಮಿಕ ವಿದ್ಯಾಭ್ಯಾಸ ಪಡೆಯುವುದು ಸಮಾಜದ ಎಲ್ಲಾ ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ಅಲ್-ಬುಖಾರಿ ಕೂರತ್ ತಂಙಳ್ ಹೇಳಿದರು. ಅವರು ಉಳ್ಳಾಲ ಹಳೆಕೋಟೆಯಲ್ಲಿ ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದ ತಾಜುಲ್ ಉಲಮಾ ಮದ್ರಸ ಪಾರಂಭೋತ್ಸವದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಧಾರ್ಮಿಕ ವಿದ್ಯೆಗೆ ಮಹತ್ವ ಕಡಿಮೆಯಾಗುತ್ತಿದ್ದು ಪೋಷಕರು ಲೌಕಿಕ ವಿದ್ಯಾಭ್ಯಾಸಕ್ಕೆ ನೀಡುವ ಮಹತ್ವವನ್ನು ಧಾರ್ಮಿಕ ವಿದ್ಯೆಗೂ ನೀಡಬೇಕು ಎಂದು ಹೇಳಿದರು.ಅಧ್ಯಕ್ಷ ಯು.ಎಚ್ ಯುಸೂಫ್, ಕಾರ್ಯದರ್ಶಿ ಅಬೂಬಕ್ಕರ್, ಉಪಾಧ್ಯಕ್ಷ ಅಬುಸಾಲಿ,ಕೋಶಾಧಿಕಾರಿ ರಫೀಕ್, ಸಂಚಾಲಕ ಅಬ್ದುಲ್ ಸತ್ತಾರ್, ಅಬ್ಬಾಸ್ ಕೊಟೆಪುರ, ಜಮಾಲ್ ಮುಸ್ಲಿಯಾರ್, ರಫೀಕ್ ಮದನಿ, ಹಮೀದ್ ಮುಸ್ಲಿಯಾರ್, ಸಲೀಂ ಸಅದಿ ಹೊನ್ನಾವರ, ಇಸ್ಮಾಯಿಲ್ ತೊಕ್ಕೋಟ್ಟು ಮುಂತಾದವರು ಉಪಸ್ಥಿತರಿದರು.

Read More

UN  NETWORKS ಕೊಣಾಜೆ: ಇಂದಿನ ಯುವಸಮುದಾಯ ಕ್ಷಣಸುಖಕ್ಕಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ, ಇಂತಹ ಸಂದರ್ಭದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಣಾಜೆ ವಲಯ ಇದರ ಆಶ್ರಯದಲ್ಲಿ ಮಂಗಳವಾರ ಕೊಣಾಜೆ ಪದವು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಕ ವ್ಯಸನಿಗಳಿಂದ ಮನೆ ಅಥವಾ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಲಾಭವಿಲ್ಲ, ಅಂತಹವರನ್ನು ಸಮಾಜ ಕೆಟ್ಟ ದೃಷ್ಟಿಯಿಂದಲೇ ನೋಡುತ್ತದೆ. ಈ ಪಿಡುಗು ನಿವಾರಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಬಿರಗಳ ಮೂಲಕ ಶ್ರಮಿಸುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿ ಅಚ್ಚುತ ಗಟ್ಟಿ ಮಾತನಾಡಿ, ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹೆತ್ತವರು, ಪೋಷಕರು ಮಕ್ಕಳನ್ನು ಜೊತೆ ಸೇರಿಸಿ ಅಮಲು ಪದಾರ್ಥ ಸೇವಿಸುವುದರಿಂದ ಮನೆಯಿಂದಲೇ ಅಮಲು ವ್ಯಸನಕ್ಕೆ ಪ್ರೋತ್ಸಾಹ…

Read More

UN NETWORKS ಹರೇಕಳ: ಜ್ಞಾನ ವೃದ್ಧಿ ಮತ್ತು ಉದ್ಯೋಗಕ್ಕಾಗಿ ನಾವು ಎಷ್ಟು ಭಾಷೆ ಬೇಕಾದರೂ ಕಲಿಯಬಹುದು, ಆದರೆ ಮಾತೃ ಮತ್ತು ನಾಡಿನ ಭಾಷೆ ಮರೆಯಬಾರದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಭಿಪ್ರಾಯಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶಾಲಾ ಪಠ್ಯೇತರ ಚಟುವಟಿಕೆಯ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಶಾಲೆಗಳಲ್ಲಿ ಕಲಿತ ಅದೆಷ್ಟೋ ಮಂದಿ ಉನ್ನತ ಸ್ಥಾನಕ್ಕೇರಿ ದೇಶ, ನಾಡಿಗೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣದ ಮಾಧ್ಯಮದ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಪಡೆಯಬಹುದು ಎಂದರು. ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ| ರಘುನಾಥ ರೈ ಮಾತನಾಡಿ ಯಾವುದೇ ಕಾರ್ಯ ಯಶಸ್ಸುಗೊಳ್ಳಬೇಕಾದರೆ ಎಲ್ಲರೂ ಒಟ್ಟು ಸೇರಬೇಕು, ಶಿಕ್ಷಣ ಸಂಸ್ಥೆಗಳೂ ಸಾಧನೆ ಮಾಡಬೇಕಾದರೆ ವಿವಿಧ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಕಾರ್ಯಕ್ರಮ ಅಯೋಜಿಸುವುದು…

Read More

UN NETWORKS ಕೊಣಾಜೆ: ಇಂದು ಜಮೀನು ಇಲ್ಲದವರೂ ತರಕಾರಿ ಬೆಳೆಸುವುದು ಕಷ್ಟವಲ್ಲ, ಗೋಣಿ ಚೀಲದಲ್ಲಿ ಬೀಜ ಹಾಕಿ ಟೆರೇಸ್‍ನಲ್ಲೂ ತರಕಾರಿ ಬೆಳೆಸಬಹುದು, ಈ ಬಗ್ಗೆ ಆಸಕ್ತಿ ವಹಿಸಿ ಶಾಲೆಯ ಬಿಸಿಯೂಟಕ್ಕೆ ಹೆಚ್ಚು ತರಕಾರಿ ತಂದವರಿಗೆ ಬಹುಮಾನ ನೀಡಲಾಗುವುದು ಎಂದು ಪ್ರಗತಿಪರ ಕೃಷಿಕ ಸುದರ್ಶನ್ ರಾವ್ ಹೇಳಿದರು. ಕೊಣಾಜೆ ಪದವು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಬ್ಯಾಂಕ್ ಗ್ರಾಮಾಭಿವೃದ್ಧಿ ಸಮಿತಿ ಕೊಣಾಜೆ, ಮಂಗಳ ಗ್ರಾಮೀಣ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ತರಕಾರಿ ಬೀಜ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಳೆ ಪ್ರಾಯದಲ್ಲೇ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇಂದಿನದ್ದಾಗಿದೆ. ಮಕ್ಕಳು ಮಣ್ಣು ಮುಟ್ಟಬಾರದು ಎಂದು ಪೋಷಕರು ಬಯಸಿದರೆ ಅದನ್ನೇ ದುರುಪಯೋಗಪಡಿಸುವ ಮಕ್ಕಳು ಮೊಬೈಲ್‍ನಲ್ಲೇ ಕಾಲ ಕಳೆಯುವ ಭೀತಿ ಇದೆ ಎಂದು ಹೇಳಿದರು. ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸದಾಶಿವ ಆಚಾರಿ ಮಾತನಾಡಿ, ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಷ್ಠಾನದಿಂದ ತರಕಾರಿ…

Read More

UN NETWORKS ಉಳ್ಳಾಲ: ಚುನಾವಣಾ ಪೂರ್ವ ಪ್ರಣಾಲಿಕೆ,ಭರವಸೆಗಳಲ್ಲಿ ಜೆ.ಡಿ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು,ನೀಡಿದ ವಾಗ್ಧಾನದಂತೆ ವಿಧ್ಯೆ ಮತ್ತು ಉಧ್ಯೋಗದಲ್ಲಿ ನಿಕೃಷ್ಟ ಸ್ಥಿತಿಯಲ್ಲಿರುವ ಮುಸ್ಲಿಂ ಜನಾಂಗದ ಸಬಲೀಕರಣಕ್ಕಾಗಿ ನ್ಯಾಯಮೂರ್ತಿ ರಾಜೇಂದ್ರ ಕುಮಾರ ಸಾಚಾರ್ ಸಮಿತಿ ಸೂಚಿಸಿದ ಶಿಪಾರಸುಗಳನ್ನು ಜಾರಿಗೊಳಿಸುವ ,ಮತ್ತು ಪ್ರತಿ ಜಿಲ್ಲೆಯಲ್ಲೂ ಮುಸ್ಲಿಂ ಮಕ್ಕಳಿಗೆ ಉಚಿತ ವಸತಿ ಶಾಲೆಯನ್ನು ಸ್ಥಾಪಿಸುವ ಯೋಜನೆಯನ್ನು ಸಾಮಾನ್ಯ ಕನಿಷ್ಟ ಕಾರ್ಯಕ್ರಮ ದಲ್ಲಿ ಸೇರಿಸಿಕೊಳ್ಳಬೇಕು ಎಂದು ಜೆ.ಡಿ.ಎಸ್ ಮುಖಂಡ ನಝೀರ್ ಉಳ್ಳಾಲ್ ರವರು ಮುಖ್ಯಮಂತ್ರಿ ಕುಮಾರ ಸ್ವಾಮಿ,ಜೆ.ಡಿ.ಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿಧ್ಧರಾಮಯ್ಯ ರವನ್ನು ಒತ್ತಾಯಿಸಿದ್ದಾರೆ. ಹೆಚ್.ಡಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವಿಧ್ಯೆ ಮತ್ತು ಉಧ್ಯೋಗದಲ್ಲಿ ಮುಸಲ್ಮಾನರಿಗೆ 4%ಮೀಸಲಾತಿ ಮತ್ತು 4 ಮುಸ್ಲಿಂ ವಸತಿ ಶಾಲೆಯನ್ನ ಸ್ಥಾಪಿಸಿದ್ದರು. ಅದನ್ನೇ ಮಾದರಿಯಾಗಸಿ ಕಾರ್ಯಕ್ರಮ ಜಾರಿಗೊಳಿಸಬೇಕೆಂದು ನಝೀರ್ ಉಳ್ಳಾಲ್ ಆಗ್ರಹಿಸಿದ್ದಾರೆ.

Read More

UN NETWORKS ಸೋಮೇಶ್ವರ : ಸರಕಾರಿ ಪ್ರೌಢಶಾಲೆ ಸೋಮೇಶ್ವರ ಉಚ್ಚಿಲ ಶಾಲೆಯ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಯ ಪಯುಕ್ತ ಯೋಗಾಭ್ಯಾಸವನ್ನು ನಡೆಸಲಾಯಿತು. ವಿದ್ಯಾರ್ಥಿನಿ ಅನುಷ ವಿಶ್ವಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿ ವಿಶ್ವ ಮನುಕುಲಕ್ಕೆ ಪ್ರಾಚೀನ ಭಾರತವು ನೀಡಿರುವ ಅಪೂರ್ವ ಕೊಡುಗೆಗಳಲ್ಲಿ ಯೋಗವೂ ಒಂದು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಮತ್ತು ಲೌಕಿಕ ಜ್ಞಾನಾರ್ಜನೆಗೆ ಯೋಗ ಅತೀ ಮುಖ್ಯ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸರಳ ವ್ಯಾಯಮ, ಸೂರ್ಯ ನಮಸ್ಕಾರ,ಪ್ರಾಣಾಯಾಮಗಳನ್ನು ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶೈಲಜಾ ಕೆ.ಉಳ್ಳಾಲ್ ಇವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಯಿತು. ಯೋಗಾಭ್ಯಾಸವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು.

Read More

UN NETWORKS ಉಳ್ಳಾಲ: ಮಳೆಹಾನಿಯಿಂದ ತೊಂದರೆಗೊಳಗಾಗಿರುವ ಫಲಾನುಭವಿಗಳಿಗೆ ಗರಿಷ್ಟ ಮಟ್ಟದ ಪರಿಹಾರವನ್ನು ಶೀಘ್ರವೇ ನೀಡುವಲ್ಲಿ ಮತ್ತು ಸ್ಥಳೀಯರು, ಗ್ರಾಮಪಂಚಾಯತ್ ಮತ್ತು ಜಿಲ್ಲಾಡಳಿತದ ಮೂಲಕ ಮುಂಜಾಗರೂಕತಾ ಕ್ರಮಕ್ಕೆ ಕ್ರಮೃ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ತಿಳಿಸಿದರು. ಅವರು ಸಿಡಿಲು ಬಡಿದು ಹಾನೀಗೀಡಾದ ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗೋಡಿ ಪ್ರದೇಶದ ಸದಾಶಿವ ಶೆಟ್ಟಿ ಅವರ ಮನೆಗೆ ಮತ್ತು ಅಂಬ್ಲಮೊಗರು ಗುಡ್ಡ ಕುಸಿತದಿಂದ ಹಾನಿಗೀಡಾದ ಮದಕ ನಿವಾಸಿಗಳಾದ ಅಬ್ಬಾಸ್, ರಝಾಕ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿದೆ. ಜಿಲ್ಲಾಡಳಿತ ಸಮೀಕ್ಷೆ ನಡೆಸಿದ್ದು ಪರಿಹಾರ ನೀಡಲಾಗುವುದು. ಸಿಡಿಲು ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಯಾವ ಯಾವ ಪ್ರದೇಶದಲ್ಲಿ ಅತೀ ಹೆಚ್ಚು ಸಿಡಿಲು ಬಡಿದಿವೆಯೋ, ಆ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ಸಿಡಿಲನ್ನು ತಡೆಗಟ್ಟುವ ಸಿಡಿಲು ನಿರೋದಕ ಉಪಕರಣವನ್ನು ಅಳವಡಿಸಲು ಸಂಭಂದ ಪಟ್ಟ ಇಲಾಖೆಗೆ ಮತ್ತು ಗ್ರಾಮ…

Read More

UN NETWORKS ಹರೇಕಳ: ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಬಲಿಷ್ಠರಾಗಬೇಕಾದರೆ ಯೋಗವನ್ನು ದೈನಂದಿನ ಚಟುವಟಿಕೆಯನ್ನಾಗಿ ರೂಢಿಸಿಕೊಳ್ಳಬೇಕು ಎಂದು ಉದ್ಯಮಿ ಹರಿಶ್ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು. ಶ್ರೀರಾಮಕೃಷ್ಣ ಅನುದಾನಿತ ಪ್ರೌಢ ಶಾಲೆ, ಹರೇಕಳ ಇದರ ಸೌಜನ್ಯ ಸ್ಕೌಟ್ ದಳ ಮತ್ತು ಚೈತನ್ಯ ಕ್ರೀಡಾ ಸಂಘ, ವತಿಯಿಂದ ರಾಮಕೃಷ್ಣ ಸಭಾಂಗಣದಲ್ಲಿ ನಡೆದ ವಿಶ್ವಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಪ್ರಾಣಾಯಾಮವು ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿ ಒಳ್ಳೆಯ ಭವಿಷ್ಯವನ್ನು ನಿರ್ಮಾಣ ಮಾಡಲು ತಯಾರಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್ ಮಂಗಳಗಂಗೊತ್ರಿಯ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಪಜೀರುಗುತ್ತುರವರು ಪ್ರತಿ ದಿನ ಯೋಗ ಮಾಡುವುದರಿಂದ ಮನಸ್ಸು ಪರಿಶುದ್ಧಗೊಂಡು ಉಲ್ಲಾಸದಿಂದ ಇರಲು ಸಾಧ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಕೆ. ರವೀಂದ್ರ ರೈ ವಹಿಸಿದ್ದರು. ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ಯೋಗ ಸದಸ್ಯರಾದ ಶಿವಪ್ರಕಾಶ್ ಪಕ್ಕಳ, ಸುನೀತಾ ಉದಯ ಕುಮಾರ್, ರೇಖಾ ಇವರು ಯೋಗಾಭ್ಯಾಸವನ್ನು ನೆರವೇರಿಸಿ ಕೊಟ್ಟರು.…

Read More

UN NETWORKS ಉಳ್ಳಾಲ: ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಇದರ ಅಂಗ ಸಂಸ್ಥೆಯಾದ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಸರಿ ಶಾಖೆ ಇದರ ವತಿಯಿಂದ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಕುಂಪಲ ಶಾಲಾ ಮಕ್ಕಳಿಗೆ ಯೋಗಾಭ್ಯಾಸ ಮತ್ತು ಯೋಗದ ಬಗ್ಗೆ ಮಾಹಿತಿ ಶಿಬಿರವನ್ನು ಕುಂಪಲ ಶಾಲೆಯಲ್ಲಿ ನಡೆಸಲಾಯಿತು. ಕೇಸರಿ ಯೋಗ ಶಾಖೆ ಮತ್ತು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಬಂಧುಗಳು ಕಾರ್ಯಕ್ರಮ ನಡೆಸಿ ಕೊಟ್ಟರು., ಶಾಲಾ ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಕೇಸರಿ ಮಿತ್ರ ವೃಂದ ಮತ್ತು ಕೇಸರಿ ಮಾತೃಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Read More

UN NETWORKS ಕೊಣಾಜೆ: ಯೋಗದ ಮೂಲಕ ಮಾನಸಿಕ ಕೇಂದ್ರಿಕರಣದದ ಜೊತೆಗೆ ಶಾರೀರಿಕವಾಗಿಯೂ ಬಲವರ್ಧನೆ ಮಾಡಬಹುದು ಹಾಗೂ ವಿವಿಧ ಆಸನಗಳು ಆರೋಗ್ಯ ವೃದ್ಧಿಗೆ ಕಾರಣವಾಗುತ್ತವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ, ವಿಭಾಗದ ಮುಖ್ಯಸ್ಥರಾದ ಡಾ| ಕೆ. ಕೃಷ್ಣ ಶರ್ಮ ಅಭಿಪ್ರಾಯಪಟ್ಟರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶ್ವಮಂಗಳ ಸಭಾಭವನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಾಗಿ ಭಾಗವಹಿಸಿ ಮಾತನಾಡಿದರು. ಆಡಳಿತ ಮಂಡಳಿಯ ಮುಖ್ಯಸ್ಥ ಪ್ರೊ| ಬಿ.ಇಸ್ಮಾಯಿಲ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯ ಮೂಲಕ ನಾವು ಗುರಿಯನ್ನು ತಲುಪಬಹುದು. ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಸ್ವಲ್ಪ ಅವಧಿಯನ್ನು ಯೋಗಕ್ಕಾಗಿ ಮೀಸಲಿಡಬೇಕು ಎಂದರು. ಈ ಸಂದರ್ಭದಲ್ಲಿ ಯೋಗ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿಗಳಾದ ಅಮಿಯಾದಾಸ್ ಹಾಗೂ ಆದಿತ್ಯ ಕೃಷ್ಣ ಅವರು ಸರಳವಾದ ಕೆಲವೊಂದು ಆಸನಗಳನ್ನು ತಿಳಿಸಿಕೊಟ್ಟರು.ವಿದ್ಯಾರ್ಥಿನಿ ಗಾನ ಗೌಶಿಕ್ ಯೋಗ ದಿನದ ಬಗ್ಗೆ ಮಾತನಾಡಿದರು.ಪ್ರೌಢ ಶಾಲಾ ಮುಖ್ಯಸ್ಥೆ ಪ್ರಿಯ ಎನ್, ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಡಾ| ಶಿವಣ್ಣ ಶಿಕ್ಷಕ ಹಾಗೂ ಶಿಕ್ಷಕೇತರರೂ…

Read More