UN NETWORKS ಕೊಣಾಜೆ: ಸಮುದಾಯ ಭವನಗಳು ಸಮಾಜದ ಸಂಪತ್ತಾಗಿದ್ದು ಯುವಪೀಳಿಗೆಗೆ ನೀಡುವ ದೊಡ್ಡ ಕೊಡುಗೆಯಾಗಿದೆ. ಯಾವುದೇ ಸಮಾಜ ಭವನ ನಿರ್ಮಾಣಕ್ಕೆ ಮುಂದಾದಾಗ ಸರ್ಕಾರ ಮುಂದೆ ನಿಂತು ಸಂಪೂರ್ಣ ಸಹಕಾರ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ 38ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹಿರಿಯರನ್ನು ಕಣ್ಣೀರು ಹಾಕಿಸಿದ ಯಾರೂ ಉದ್ಧಾರ ಆಗಿಲ್ಲ. ಯುವಪೀಳಿಗೆ ಹಿರಿಯರಿಂದ ಆಸ್ತಿ, ಅಂತಸ್ತಿಗಿಂತ ಅನುಭವ ಪಡೆದು ಮುನ್ನಡೆದಾಗ ದೇಶ, ಸಮಾಜದ ಸಂಪತ್ತಾಗಲು ಸಾಧ್ಯ. ಹೆತ್ತವರು ಸರ್ಕಾರದ ಮೇಲೆ ವಿಶ್ವಾಸ ಇಡುವ ಜೊತೆ ತಮ್ಮ ಮಕ್ಕಳ ಮೇಲೆ ಹೆಚ್ಚು ವಿಶ್ವಾಸ ಇಟ್ಟು ಶಿಕ್ಷಣ ನೀಡಬೇಕಿದೆ ಎಂದು ಹೇಳಿದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ `ಸಮಾಜ ಏನಾಗಬೇಕು ಎನ್ನುವ ಸ್ಪಷ್ಟ ನಿರ್ಧಾರ ನಮಗಿರವೇಕು, ಮಂದಿರ, ಭವನ ನಿರ್ಮಾಣ, ಕಾರ್ಯಕ್ರಮಗಳು ಒಂದು ಭಾಗ…
Author: UllalaVani
UN NETWORKS ತಲಪಾಡಿ : ಮಕ್ಕಳು ಬುದ್ಧಿಮತ್ತೆಯಲ್ಲಿ ಬುದ್ಧಿಯಲ್ಲಿ ಮಾತ್ರ ಬೆಳವಣಿಗೆ ಅಲ್ಲ ಆಧುನಿಕ ಶಿಕ್ಷಣದ ಜೊತೆ ಮಕ್ಕಳ ಮಾನಸಿಕ, ದೈಹಿಕವಾಗಿ ಸದೃಡಗೊಳಿಸುವುದರೊಂದಿಗೆ ಅವರಲ್ಲಿ ಉತ್ತಮ ಭಾವನೆ, ಸಂಸ್ಕಾರವನ್ನು ನೀಡುವ ಮೂಲಕ ಸರ್ವಾಂಗೀಣ ಶಿಕ್ಷಣಕ್ಕೆ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಆದ್ಯತೆ ನೀಡುತ್ತಿದ್ದು, ಇದಕ್ಕೆ ಪೂರಕವಾಗಿ ಹೊನಲು ಬೆಳಕಿನ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್ ಅಭಿಪ್ರಾಯಪಟ್ಟರು. ಶಾರದಾ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆಯಾದ ತಲಪಾಡಿ ದೇವಿನಗರದಲ್ಲಿರುವ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯ ಆವರಣದಲ್ಲಿ ಶಾರದಾ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ನಡೆದ ವೈಭವದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ ನೀಡುವ ಉದ್ಧೇಶದಿಂದ ತುಳುನಾಡು ಎಜ್ಯುಕೇಶನಲ್ ಟ್ರಸ್ಟ್ ನಮ್ಮ ಹಿರಿಯರು ಪ್ರಾರಂಬಿಸಿ, ಇತರ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಬೆಳೆಸಿದ್ದು ಮಂಗಳೂರಿನಲ್ಲಿರುವ ಶಾರದಾ ವಿದ್ಯಾಲಯ, ವಾಮಂಜೂರಿನಲ್ಲಿರುವ ಶುಬೋಧಯ ವಿದ್ಯಾಲಯ, ತಲಪಾಡಿ ದೇವಿನಗರದಲ್ಲಿರುವ ಶಾರದವಿದ್ಯಾನಿಕೇತ , ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಮೌಲ್ಯಯುತ ಶಿಕ್ಷಣದೊಂದಿಗೆ ಕ್ರೀಡಾ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ…
UN NETWORKS ಮಂಗಳೂರು: ಅಂತಾರಾಷ್ಟ್ರೀಯ ವಾಗ್ಮಿ ಎ.ಎಂ ನೌಷಾದ್ ಬಾಖವಿ ಡಿ,27 ಗುರುವಾರ ಮಂಗಳೂರಿನ ಕಣ್ಣೂರು ಹೈವೇ ಗ್ರೌಂಡ್‍ನಲ್ಲಿ ಎಸ್ಕೆಎಸ್ಸೆಸ್ಸೆಫ್ ಕಣ್ಣೂರು ಕ್ಲಸ್ಟರ್ ವತಯಿಂದ ನಡೆಯುವ ಡಿಕೆಎಸ್‍ಎಫ್ ಜಾಮಿಅಃ ನೂರಿಯ್ಯ ವಿದ್ಯಾ ಸಂಸ್ಥೆಯ ಪ್ರಚಾರ ಸಮ್ಮೇಳನದಲ್ಲಿ ಮುಖ್ಯ ಪ್ರಭಾಷಣ ಮಾಡಲ್ಲಿದ್ದಾರೆ.
UN NETWORKS ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಕಿನ್ಯ ಸೆಕ್ಟರ್ ಇದರ 2018ರ ಸಾಲಿನ ವಾರ್ಷಿಕ ಮಹಾಸಭೆ ಸೆಕ್ಟರ್ ಅಧ್ಯಕ್ಷ ಇರ್ಫಾನ್ ನೂರಾನಿ ಅಧ್ಯಕ್ಷತೆಯಲ್ಲಿ ನಡೆಯಿತು. ನಮ್ಮನ್ನಗಲಿದ ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಕಾರ್ಯಕರ್ತರ ಪರಲೋಕ ವಿಜಯಕ್ಕಾಗಿ ಝಿಕ್ರ್ ಮಜ್ಲಿಸ್ ಹಾಗೂ ದುಆ ಕಾರ್ಯಕ್ರಮ ವನ್ನು ಸೈಯ್ಯದ್ ಶಿಹಾಬುದ್ದೀನ್ ಅಲ್ ಬುಖಾರಿ ಕಿನ್ಯ ನಡೆಸಿದರು. ನಂತರ ಡಿವಿಜನ್ ಚುಣಾವಣಾಧಿಕಾರಿ ಇಲ್ಯಾಸ್ ಪೊಟ್ಟೋಳಿಕೆ ನೇತೃತ್ವದಲ್ಲಿ ನಡೆದ ಸಭೆಯನ್ನು ಸೈಯ್ಯದ್ ಆಬಿದ್ ತಂಙಳ್ ಮೀಂಪ್ರಿ ಉದ್ಘಾಟಿಸಿ, ಹಳೆ ಸಮಿತಿಯನ್ನು ಬರ್ಕಾಸ್ತುಗೊಳಿಸಿದರು. ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಇರ್ಫಾನ್ ನೂರಾನಿ, ಉಪಾಧ್ಯಕ್ಷರಾಗಿ ಸೈಯ್ಯದ್ ಆಬಿದ್ ತಂಙಳ್, ಜಹ್ಫರ್ ಖುತುಬಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಫಯಾಝ್ ಕಿನ್ಯ, ಜೊತೆ ಕಾರ್ಯದರ್ಶಿ ಬಶೀರ್ ಕೂಡಾರ, ಫಯಾಝ್ ಉಕ್ಕುಡ, ಕೋಶಾಧಿಕಾರಿಯಾಗಿ ಅಯ್ಯೂಬ್ ಖುತುಬಿನಗರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಆಶಿಕ್ ಮೀಂಪ್ರಿ, ಹೈಸ್ಕೂಲ್ ಕನ್ವೀನರ್ ಸಾಧಿಕ್ ಕುರಿಯ, ಇಶಾರ ಕನ್ವೀನರ್ ನುಹ್ಮಾನ್ ಕೂಡಾರ,ಎಸ್ ಬಿ ಎಸ್ ಕನ್ವೀನರ್ ಇಕ್ಬಾಲ್ ಖುತುಬಿನಗರ…
UN NETWORKS ಉಳ್ಳಾಲ: ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ತೊಕ್ಕೊಟ್ಟು ಸಮೀಪದ ಸಿ.ಎಸ್.ಐ ಬಿಷಪ್ ಸಾಜೆಂಟ್ ಸ್ಮಾರಕ ಚರ್ಚ್‍ಗೆ ಭೇಟಿ ನೀಡಿದ ಸೋಶಿಯಲ್‍ಅಚೀವ್‍ಮೆಂಟ್ ಪಾರ್ಮ್‍ನ ಸದಸ್ಯರು ಚರ್ಚ್‍ನ ಸಭಾಪಾಲಕರಾದ ರೆ.ಜಯಕುಮಾರ್ ಕೋಟ್ಯಾನ್ ರವರಿಗೆ ಹೂಗುಚ್ಛ ನೀಡಿ ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿದರು. ಈ ಸಂದರ್ಭ ಸಭಾ ಪಾಲಕ ಜಯಕುಮಾರ್ ಕೋಟ್ಯಾನ್ ಅವರು, ಕ್ರಿಸ್‍ಮಸ್ ಹಬ್ಬ ಸೌಹಾರ್ದತೆಯನ್ನೇ ಬಯಸುತ್ತದೆ. ಏಸು ಜನತೆಗೆ ಶಾಂತಿಯ ಸಂದೇಶವನ್ನೇ ಸಾರಿದ್ದಾರೆ. ಎಲ್ಲಾ ಧರ್ಮಗಳು ಶಾಂತಿಯನ್ನೇ ಸಾರಿವೆ. ನಾವು ಅದನ್ನು ಪಾಲಿಸೋಣ ಎಂದು ಸಂದೇಶ ನೀಡಿದರು. ಸೋಶಿಯಲ್‍ಅಚೀವ್‍ಮೆಂಟ್ ಫಾರ್ಮ್‍ನ ಅಧ್ಯಕ್ಷ ನಾಸಿರ್ ಸಾಮಣಿಗೆ, ಸ್ಥಾಪಕ ಅಧ್ಯಕ್ಷ ನಿಯಾಝ್ ಸಾಮಣಿಗೆ, ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಪದಾಧಿಕಾರಿಗಳಾದ ಯೆನೆಪೋಯ ಕಾಲೇಜಿನ ಪ್ರಾದ್ಯಾಪಕ ನಿಯಾಝ್, ಕೋಶಾಧಿಕಾರಿ ಅಮೀರ್ ಶಾಫಿ, ಮೊಹಿದಿನ್ ಮಂಜನಾಡಿ, ಹನೀಫ್ ಕುತ್ತಾರ್, ಮನ್ಸೂರ್ ಸಾಮಣಿಗೆ, ರಹ್ಮಾನ್ ಕೊಣಾಜೆ, ನಶಾತ್ ಹಾಗೂ ಚರ್ಚ್‍ನ ಯುವಜನ ಅನ್ಯೋನ್ಯ ಕೂಟದ ಅಧ್ಯಕ್ಷ ಕೀರ್ತನ್ ಸೋನ್ಸ್, ಕಾರ್ಯದರ್ಶಿ ಪ್ರಶಾಂತ್ ಕೋಟಿಯನ್, ಕೋಶಾಧಿಕಾರಿ ಶೈಲೇಶ್ ಪಾಲನ್ನ ಮತ್ತು ಸಲಹೆಗಾರರಾದ…
UN NETWORKS ಉಳ್ಳಾಲ: ಬಿ.ಜೆ.ಪಿ. ಮಂಗಳೂರು ಕ್ಷೇತ್ರದ ವತಿಯಿಂದ, ತೊಕ್ಕೊಟಿನ ಪಕ್ಷದ ಕಛೇರಿಯಲ್ಲಿ, ಭಾರತ ರತ್ನ, ದೇಶದ ಮಾಜಿ ಪ್ರಧಾನಿ, ಅಜಾತ ಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 95 ನೆ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಆಚರಿಸಲಾಯಿತು. ಈ ಸಂಧರ್ಬದಲ್ಲಿ ಕ್ಷೇತ್ರದ ಬಿ.ಜೆ.ಪಿ. ಅಧ್ಯಕ್ಚರಾದ ಸಂತೋಷ್ ಕುಮಾರ್ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ಹಿರಿಯರಾದ ಸಂಜೀವ ಶೆಟ್ಟಿ, ತಾಲೂಕು ಪಂ. ಸದಸ್ಯರಾದ ರವಿಶಂಕರ್, ಕೋಟೆಕಾರ್ ಪಟ್ಟಣ ಪಂ. ಉಪಾಧ್ಯಕ್ಷೆ ಭಾರತಿ ಗಟ್ಟಿ, ಸದಸ್ಯರಾದ ಅನಿಲ್ ಬಗಂಬಿಲ, ಉಳ್ಳಾಲ ನಗರಸಭೆಯ ಸದಸ್ಯರಾದ ರಾಜೇಶ್ ಯು.ಬಿ., ಉಳ್ಳಾಲ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಪ್ರ.ಕಾರ್ಯದರ್ಶಿ ಪ್ರಶಾಂತ್ ಕಾಪಿಕಾಡ್, ರಂಜಿತ್ ಗಟ್ಟಿ ಉಪಸ್ಥಿತಿರಿದ್ದರು.
UN NETWORKS ಉಳ್ಳಾಲ: ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕದ ಸಹಯೋಗದೊಂದಿಗೆ ಫಾಲ್ಕೋನ್.ಎಫ್.ಸಿ ಮತ್ತು ಬ್ರದರ್ಸ್ ಕೋಟೆಪುರ ಆಶ್ರಯದಲ್ಲಿ 5 ಜನರ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟವು ಕೋಟೆಪುರ ಟಿಪ್ಪು ಸುಲ್ತಾನ್ ಮೈದಾನದಲ್ಲಿ ನಡೆಯಿತು. ಕಾರ್ಯ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯ ದ.ಕ.ಜಿಲ್ಲಾ ಅಧ್ಯಕ್ಷರಾದ ಅನಿಲ್ ದಾಸ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಫಾಲ್ಕೋನ್.ಎಫ್.ಸಿ ಮತ್ತು ಬ್ರದರ್ಸ್ ಕೋಟೆಪುರ ಸಂಘಟನೆಯ ಜವಾಬ್ದಾರಿಯುತ ಕ್ರೀಡಾ ಸ್ಪೂರ್ತಿಯ ಯುವಕರ ತಂಡ ರಕ್ಷಣಾ ವೇದಿಕೆಯೊಂದಿಗೆ ಕೈ ಜೋಡಿಸಿ ನಾವೆಲ್ಲರೂ ಜಾತಿ ಮತ ಧರ್ಮದವರೆಲ್ಲರೂ ಒಂದಾಗಿದ್ದೇವೆ ಎಂಬ ಉತ್ತಮ ಸಂದೇಶ ನೀಡಿದ್ದಾರೆ, ಈ ಸಂದೇಶವು ಮುಂದಿನ ದಿನಗಳಲ್ಲಿ ಇದೇ ಉಳ್ಳಾಲ ಪರಿಸರದಲ್ಲಿ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟ ನಡೆಯಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ ಎಂದು ಅಭಿಪ್ರಾಯ ಪಟ್ಟರು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಮದಸೂದನ್ ಗೌಡ, ಉಳ್ಳಾಲ ವಲಯದ ಅಧ್ಯಕ್ಷ ಫೈರೋಜ್, ಪ್ರಧಾನ ಕಾರ್ಯದರ್ಶಿ ಇಫ್ತಿಕಾರ್, ಉದ್ಯಮಿ ಯು.ಹಸೈನಾರ್, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್…
UN NETWORKS ಉಳ್ಳಾಲ: ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ (ರಿ)ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶರೀಯತ್ ಕಾಲೇಜು,ಜೂನಿಯರ್ ಕಾಲೇಜು, ದಅವಾ ಕಾಲೇಜು, ಮೋರಲ್ ಅಕಾಡೆಮಿ, ಹಿಫ್ಝುಲ್ ಖುರಾನ್ ಕಾಲೇಜು ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಬಳಿಕ ಮಾತನಾಡಿದ ಅವರು ನಾವೆಲ್ಲರೂ ಸಂತೋಷದ ನೆಮ್ಮದಿಯ, ತಾಳ್ಮೆಯ, ಸಹೋದರತೆಯ ಜೀವನವನ್ನು ಮಾಡಲು ದೇವರು ನಮಗೆ ವಿಶೇಷವಾದ ಶಕ್ತಿ ನೀಡಿ ಸರ್ವರ ಪ್ರೀತಿಗೆ ಪಾತ್ರವಾಗುವ ಅವಕಾಶ ಸಿಗಲಿ ಎಂದು ಹೇಳಿದರು.ಸಯ್ಯದ್ ಮದನಿ ದರ್ಗಾ ಅಧ್ಯಕ್ಷರಾದ ಅಬ್ದುಲ್ ರಶೀದ್ ಹಾಜಿ ಅಧ್ಯಕ್ಷತೆವಹಿಸಿದರು, ಅಬ್ದುಲ್ಲ ಫೈಝಿ ವೆಲ್ಲಿಮುಕ್ಕ ದುಆ ನೆರವೇರಿಸಿದರು, ಶರೀಅತ್ ಕಾಲೇಜು ಪ್ರಾಂಶುಪಾಲರಾದ ಉಸ್ಮಾನ್ ಫೈಝಿ ತೋಡಾರ್, ಅರಬಿಕ್ ಟ್ರಸ್ಟ್ ಮುಫತ್ತಿಸ್ ಸುಲೈಮಾನ್ ಸಖಾಫಿ, ಸಯ್ಯದ್ ಮದನಿ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹಾ ಮೊಹಮ್ಮದ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಉಳ್ಳಾಲ ನಗರ…
UN NETWORKS ತೊಕ್ಕೊಟ್ಟು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯ ವಾರ್ಷಿಕ ರ್ಯಾಲಿ ಕಾರ್ಯಕ್ರಮವು ತೊಕ್ಕೊಟ್ಟು ಹೋಲಿ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ನಗರ ಸಭೆಯ ಪೌರ ಆಯುಕ್ತರಾದ ವಾಣಿ ವಿ. ಆಳ್ವ ಇವರು ವಿದ್ಯಾರ್ಥಿಗಳು ಎಳವೆಯಲ್ಲೇ ಶಿಸ್ತು, ಮಾನವೀಯ ಮೌಲ್ಯಗಳು, ಧೈರ್ಯ, ಸೇವಾ ಗುಣ, ಹೊಂದಾಣಿಕೆ ಮುಂತಾದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಈ ನೆಲೆಯಲ್ಲಿ ಸ್ಕೌಟ್-ಗೈಡ್ ಚಳುವಳಿ ಅತ್ಯುತ್ತಮ ವೇದಿಕೆಯಾಗಿದೆ ಎಂದರು. ಅಧ್ಯಕ್ಷತೆಯನ್ನು ಹೋಲಿ ಏಂಜಲ್ಸ್ ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಸಿಸ್ಟರ್ ಸೆವರಿನ್ ಫೆರ್ನಾಂಡಿಸ್ ವಹಿಸಿ ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಆರೋಗ್ಯಕರವಾದ ಜೀವನವನ್ನು ಸಾಗಿಸಲು ಸಾಧ್ಯವೆಂದರು. ಮುಖ್ಯ ಅತಿಥಿಯಾಗಿ ಸೈಂಟ್ ಸಬೆಸ್ಟಿಯನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ನಥಾಲಿಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ವಾದ್ಯ ವೃಂದದಲ್ಲಿ ಸಹಕರಿಸಿದ ಜೋಯ್‍ಲ್ಯಾಂಡ್ ಶಾಲೆಯ ಮಕ್ಕಳನ್ನು ಅಭಿನಂದಿಸಲಾಯಿತು. ಜಿಲ್ಲಾ ಸಂಸ್ಥೆಯ ತರಬೇತಿ…
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಸಂಭ್ರಮದ ಕ್ರಿಸ್ ಮಸ್ ಹಬ್ಬದ ಆಚರಣೆ ನಡೆಯಿತು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಂಗಳೂರು ಬಿಷಪ್ ಫಾ. ಪೀಟರ್ ಪೌಲ್ ಸಲ್ದಾನ್ಹ ಭಾಗವಹಿಸಿದರು. ಚರ್ಚ್ ಧರ್ಮಗುರು ಫಾ. ಜೆಬಿ ಸಲ್ದಾನ್ಹ ಜೊತೆಗಿದ್ದರು. ಭಜನಾ ಮಂದಿರಕ್ಕೆ ಸೌಹಾರ್ದ ಭೇಟಿ : ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮಂಗಳೂರು ಬಿಷಪ್ ಡಾ| ಪೀಟರ್ ಪೌಲ್ ಸಲ್ದಾನ್ಹ, ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಚರ್ಚ್ ಆಡಳಿತ ಮಂಡಳಿ ಸದಸ್ಯರು , ಚರ್ಚಿನ ಹತ್ತಿರದಲ್ಲೇ ಇರುವ ಶ್ರೀ ವಿಠೋಭ ರುಕ್ಮಯೀ ಭಜನಾ ಮಂಡಳಿ ವಾರ್ಷಿಕೋತ್ಸವ ಸಮಾರಂಭಕ್ಕೆ ಭೇಟಿ ನೀಡಿ, ಕ್ರಿಸ್‍ಮಸ್ ಹಬ್ಬದ ಸಿಹಿತಿಂಡಿಗಳನ್ನು ಹಂಚಿಕೊಂಡರು. ಇದೇ ಸಂದರ್ಭ ಮಾತನಾಡಿದ ಬಿಷಪ್ ಪೌಲ್ ಸಲ್ದಾನ್ಹ ಮಂದಿರದ ವಾರ್ಷಿಕೋತ್ಸವ ಸಮಾರಂಭದ ಶುಭಾಷಯಗಳನ್ನು ಸಲ್ಲಿಸಿದರು. ಕ್ರಿಸ್ ಮಸ್ ಹಬ್ಬದ ಮತ್ತು ಮಂದಿರದ ವಾರ್ಷಿಕೋತ್ಸವ ಆಚರಣೆ ಮೂಲಕ ಎಲ್ಲರಿಗೂ ದೇವರ ಆಶೀರ್ವಾದ ದೊರೆಯಲಿ. ಕುಟುಂಬಗಳು ಸಂತಸದಿಂದ ಬಾಳಲಿ ಎಂದು ಹಾರೈಸಿದರು. ಸಚಿವ ಯು.ಟಿ.ಖಾದರ್ ಮಾತನಾಡಿ `…

