UN NETWORKS ಉಳ್ಳಾಲ: ಹೊರರಾಜ್ಯದ ದರೋಡೆ ತಂಡವೊಂದು ದ.ಕ-ಉಡುಪಿ ಜಿಲ್ಲೆಗಳಿಗೆ ಕಾಲಿಟ್ಟಿದ್ದು, ಗಮನ ಬೇರೆಡೆ ಸೆಳೆದು ದರೋಡೆಗೈಯ್ಯುವ ತಂಡ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಉಳ್ಳಾಲ ಮತ್ತು ಕೊಣಾಜೆ ಠಾಣಾ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಿಸಿಆರ್ ಮೂಲಕ ಜಾಗೃತರಾಗಿರಲು ಘೋಷಣೆ ನಡೆಸುತ್ತಿದ್ದಾರೆ. https://www.youtube.com/watch?v=gX21ldOcmLA ಐದು ಮಂದಿಯ ತಂಡ ಉಡುಪಿ ಜಿಲ್ಲೆಯಲ್ಲಿ ಕಾಲಿಟ್ಟು, ಈಗಾಗಲೇ ದರೋಡೆ ನಡೆಸಿದೆ. ನಿರ್ಜನ ಪ್ರದೇಶಗಳಲ್ಲಿ ಕಾರ್ಯಾಚರಿಸುವ ತಂಡ ರಸ್ತೆಯಲ್ಲಿ ಹೋಗುವವರನ್ನು ತಡೆದು, ರಸ್ತೆಯಲ್ಲಿ ಒಂದು ಕೊಲೆಯಾಗಿದೆ, ಅಥವಾ ಗಲಾಟೆಯಾಗುತ್ತಿದೆ, ಎಂದು ಹೇಳುತ್ತದೆ. ಬಳಿಕ ನಿಮ್ಮಲ್ಲಿರುವ ಸೊತ್ತುಗಳನ್ನು ತಮ್ಮಲ್ಲಿ ನೀಡಿ ನೀವು ರಸ್ತೆಯಲ್ಲಿ ಮುಂದೆ ಹೋಗಿ, ಇನ್ನೊಂದು ಭಾಗದಲ್ಲಿ ನಾವು ತಂದು ಕೊಡುತ್ತೇವೆ ಎಂದು ನಂಬಿಸಿ ಅಮಾಯಕರನ್ನು ದರೋಡೆ ನಡೆಸುತ್ತಿದೆ. ಇದೀಗ ತಂಡ ಮಂಗಳೂರಿಗೂ ಕಾಲಿಸಿರಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಕಂಟ್ರೋಲ್ ರೂಂ ಆದೇಶದಂತೆ ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಹೈಅಲಟ್ ್ ಘೋಷಿಸಿದ್ದಾರೆ. ಪಿಸಿಆರ್ ವಾಹನದ ಮೂಲಕ ಸಾರ್ವಜನಿಕವಾಗಿ ಜಾಗೃತಿ ಪ್ರಕಟಣೆಯನ್ನು ನೀಡುತ್ತಿದ್ದಾರೆ. ಈಗಾಗಲೇ…
Author: UllalaVani
UN NETWORKS ತೊಕ್ಕೊಟ್ಟು: ಲಾರಿಯೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದ ಘಟನೆ ಚೆಂಬುಗುಡ್ಡೆ ಸಮೀಪ ಸೋಮವಾರ ಸಂಭವಿಸಿದೆ. ಎಲಿಯಾರುಪದವುನಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಬಸ್ಸಿನ ಮುಂಭಾಗದಲ್ಲಿ ರಾಡನ್ನು ಹೇರಿಕೊಂಡು ಲಾರಿಯೊಂದು ಮುಡಿಪು ಕಡೆಗೆ ತೆರಳುತಿತ್ತು. ಚೆಂಬುಗುಡ್ಡೆ ಮಾರ್ಗಮಧ್ಯೆ ಲಾರಿ ಚಾಲಕ ಹಠಾತ್ ಆಗಿ ಬ್ರೇಕ್ ಒತ್ತಿದ ಪರಿಣಾಮ ಹಿಂಬದಿಯಲ್ಲಿದ್ದ ಬಸ್ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಬಸ್ಸಿನ ಗಾಜು ಸಂಪೂರ್ಣ ಹಾನಿಯಾಗಿದೆ.
UN NETWORKS ಉಳ್ಳಾಲ: ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದ ಬೆಂಗಳೂರು ದಂಪತಿ ಹಾಗೂ ಇಬ್ಬರು ಮಕ್ಕಳಲ್ಲಿ ಬಾಲಕಿಯೊಬ್ಬಳು ಸಮುದ್ರ ಪಾಲಾಗಿ ದಂಪತಿ ಮತ್ತು ಇನ್ನೋರ್ವ ಬಾಲಕಿಯನ್ನು ಸ್ಥಳೀಯ ಜೀವರಕ್ಷಕರೊಬ್ಬರೇ ರಕ್ಷಿಸಿರುವ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಬೆಂಗಳೂರು ಬನಶಂಕರಿ ನಿವಾಸಿ ಚಿಂತಾಮಣಿ ಮತ್ತು ಶ್ರದ್ಧಾ ದಂಪತಿ ಪುತ್ರಿ ಮೈತ್ರಿ ಕೇಟ್ಕರ್ (5) ಮೃತ ಬಾಲಕಿ. ಇನ್ನೋರ್ವ ಬಾಲಕಿ ಗಾರ್ಜಿ ಕೇಟ್ಕರ್(6) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಸ್ಥಳದಲ್ಲಿ ಲೈಫ್ ಗಾಡ್ 9 ಆಗಿರುವ ಅಶೋಕ್ ಅವರು ದಂಪತಿ ಹಾಗೂ ಇಬ್ಬರು ಮಕ್ಕಳು ಸಮುದ್ರಪಾಲಾಗುತ್ತಿದ್ದಂತೆ ಒಬ್ಬರೇ ಸಮುದ್ರಕ್ಕೆ ಹಾರಿ ಕ್ಯಾನ್ ಸಹಾಯದ ಮೂಲಕ ಮೂವರನ್ನು ಹರಸಾಹಸ ಪಟ್ಟು ಮೊದಲಿಗೆ ಹೊರತಂದು ರಕ್ಷಿಸಿದ್ದಾರೆ. ಇನ್ನೋರ್ವ ಬಾಲಕಿ ಮೈತ್ರಿ ಆಳ ಸಮುದ್ರದಲ್ಲಿದ್ದರೂ ಬೃಹತ್ ಅಲೆಗಳ ನಡುವೆ ಹೋರಾಡಿ, ಹೊರತರುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.
UN NETWORKS ಮಂಗಳೂರು: ಅದು ದ.ಕ ಜಿಲ್ಲೆಯ ಕಟ್ಟಕಡೆಯ ಕುಗ್ರಾಮ. ಈ ಮಧ್ಯೆ ನಕ್ಸಲ್ ಪೀಡಿತ ಪ್ರದೇಶ ಅನ್ನೋ ಹಣೆಪಟ್ಟಿ ಹೊಂದಿರೋ ಹಿಂದುಳಿದ ಪ್ರದೇಶ. ಹೀಗಾಗಿಯೇ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರೋ ಒಂದು ಪುಟ್ಟ ಹಳ್ಳಿ. ಆದ್ರೆ ಇಂದು ಮಾತ್ರ ಆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಹಾದಿಯಾಗಿ ಜಿಲ್ಲೆಯ ಎಲ್ಲಾ ಅಧಿಕಾರಿಗಳ ದಂಡೇ ಆಗಮಿಸುತ್ತು. ಇದಕ್ಕೆ ಕಾರಣವಾಗಿದ್ದು ರಾಜ್ಯದಲ್ಲೇ ಮೊದಲ ಬಾರಿಗೆ ದ.ಕ ಜಿಲ್ಲೆಯ ಪತ್ರಕರ್ತರು ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮ. ಕುತ್ಲೂರು..ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಟ್ಟಕಡೆಯ ಗ್ರಾಮ. ದ.ಕ ಜಿಲ್ಲೆ ಅಭಿವೃದ್ದಿ ಹೊಂದುತ್ತಿದ್ದರೂ ಈ ಕುತ್ಲೂರು ಅನ್ನೋ ಗ್ರಾಮಕ್ಕೆ ಇಂದಿಗೂ ಅದೆಷ್ಟೋ ಸರ್ಕಾರಿ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಈ ಗ್ರಾಮ ಇಂದಿಗೂ ಕುಗ್ರಾಮವಾಗಿಯೇ ಇದೆ. ಈ ಮಧ್ಯೆ ಸುಮಾರು 15-20 ವರ್ಷಗಳ ಹಿಂದೆ ಇಲ್ಲಿ ನಕ್ಸಲರು ಕಾಣಿಸಿಕೊಂಡು ಹಲವು ವರ್ಷಗಳ ಕಾಲ ಅವ್ರ ಚಟುವಟಿಕೆ…
UN NETWORKS ತೊಕ್ಕೊಟ್ಟು: ದೇಶದ ಭವಿಷ್ಯ ಯುವಸಮುದಾಯ ಹಾಗೂ ಇಂದಿನ ವಿದ್ಯಾರ್ಥಿಗಳ ಕೈಯಲ್ಲಿದೆ. ಶಾಲಾ ಜೀವನದಲ್ಲಿ ಸಿಗುವಂತಹ ಅವಕಾಶ ಬಳಸಿ ದೇಶದ ಭವಿಷ್ಯ ರೂಪಿಸುವ ಕನಸು ಕಾಣಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದ್ದು ಅದಕ್ಕಾಗಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅಭಿಪ್ರಾಯಪಟ್ಟರು. ಭಾರತ್ ಸ್ಕೌಟ್ಸ್-ಗೈಡ್ಸ್ ದ.ಕ.ಜಿಲ್ಲಾ ಸಂಸ್ಥೆ ಮಂಗಳೂರು, ಉಳ್ಳಾಲ ಸ್ಥಳೀಯ ಸಂಸ್ಥೆ ಮತ್ತು ಸಂತ ಸೆಬಾಸ್ಟಿಯನ್ ಸಮೂಹ ವಿದ್ಯಾಸಂಸ್ಥೆಗಳ ಸಹಭಾಗಿತ್ವದಲ್ಲಿ ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಶಿಕ್ಷಣ ಸಂಸ್ಥೆ ಹಾಗೂ ಹೋಲಿ ಏಂಜಲ್ಸ್ ಶಾಲೆಯಲ್ಲಿ ನಡೆದ ಮೂರು ದಿನಗಳ ಸ್ಕೌಟ್ಸ್-ಗೈಡ್ಸ್ ಮೇಳ-2018ರ ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ನಾವು ಭಾಗವಹಿಸುವ ಚಟುವಟಿಕೆ, ಕಲಿಕೆ ಬಹುಕಾಲ ಉಳಿಯುತ್ತದೆ. ಆ ನಿಟ್ಟಿನಲ್ಲಿ ಈ ಹಂತದಲ್ಲಿ ಸಿಗುವ ಅವಕಾಶ ಉತ್ತಮವಾಗಿ ಬಳಸಿಕೊಳ್ಳಬೇಕು. ದೇಶಪ್ರೇಮ ಎಂಬುದು ನಮ್ಮಲ್ಲಿ ಸದಾ ಇರಬೇಕು ಎಂದು ಹೇಳಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ರಾಮಶೇಷ…
UN NETWORKS ದೇರಳಕಟ್ಟೆ : ಭಿನ್ನ ಕೋಮಿನ ಯುವಕರಿಬ್ಬರ ಮೇಲೆ ಮೂರು ಮಂದಿ ಯುವಕರ ತಂಡ ಹಲ್ಲೆ ನಡೆಸಿದ ಘಟನೆಗೆ ನಡೆದಿದ್ದು ಈ ಪ್ರಕರಣ ಸಂಬಂಧ ಶಾಂತಿನಗರ ನಿವಾಸಿ ಮಾಜಿ ರೌಡಿಶೀಟರ್ ಲುಕ್ ಮನ್ ಎಂಬಾತನನ್ನು ಬಂಧಿಸಲಾಗಿದೆ.ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಶನಿವಾರ ಬಂದಿದ್ದ ಯುವಕರ ಮೇಲೆ ಮೂವರು ಯುವಕರು ಹಲ್ಲೆಸಿದ್ದಾರೆ. ಹಲ್ಲೆಯಿಂದ ಯುವಕ ಗಾಯಗೊಂಡಿದ್ದು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ವಿವರ: ಕೇರಳದ ತ್ರಿಶೂರು ಮೂಲದ ಯುವಕರಿಬ್ಬರು ದೇರಳಕಟ್ಟೆಯ ಆಸ್ಪತ್ರೆಗೆ ಬಂದಿದ್ದು ಈ ವೇಳೆ ಪರಿಚಯಸ್ಥ ಹುಡುಗಿಯನ್ನು ಭೇಟಿ ಮಾಡಿ ಹೋಟೇಲ್ ನಲ್ಲಿ ಉಪಾಹಾರ ಸೇವಿಸುತ್ತಿದ್ದರು ಈ ಬಗ್ಗೆ ಹೋಟೆಲ್ ಸಿಬ್ಬಂದಿ ಒಬ್ಬಾತ ತನ್ನ ಆಪ್ತರಿಗೆ ಮಾಹಿತಿ ನೀಡಿದ್ದು ಅದರಂತೆ ಮೂರು ಮಂದಿಯ ತಂಡ ಯುವಕರಿಗೆ ಹಲ್ಲೆ ನಡೆಸಿದೆ. ಯುವಕರ ಮೊಬೈಲ್ ಕಿತ್ತುಕೊಂಡಿದ್ದಾರೆ ಎನ್ನಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಪಕರಣ ದಾಖಲಾಗಿದೆ.
UN NETWORKS ಉಳ್ಳಾಲ: ಕಂಟೈನರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ರಾ.ಹೆ.66 ರ ಕಲ್ಲಾಪುವಿನಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ. ಕುಂಪಲ ಆಶ್ರಯಕಾಲನಿ ನಿವಾಸಿ ಯತೀಶ್ (24) ಮೃತರು. ಎಂಸಿ ಎಫ್ ನಲ್ಲಿ ಉದ್ಯೋಗ ಹೊಂದಿದ್ದ ಇವರು ಬೈಕಿನಲ್ಲಿ ಮಂಗಳೂರಿನಿಂದ ಕುಂಪಲ ಕಡೆಗೆ ತೆರಳುವ ಸಂದರ್ಭ ಕಲ್ಲಾಪು ಸಮೀಪ ಕಂಟೈನರ್ ಲಾರಿಯಡಿ ಬಿದ್ದು ಮೃತ ಪಟ್ಟಿದ್ದಾರೆ . ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಇಂಡಿಯಾನ ಆಸ್ಪತ್ರೆಗೆ ದಾಖಲಿಸಲ್ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
UN NETWORKS ಪಾವೂರು: ಅಧ್ಯಾಪಕರು ಎಂದಿಗೂ ವಿದ್ಯಾರ್ಥಿಗಳ ಬಳಿ ಜಾತಿ, ಧರ್ಮ ತೋರಿಸದೆ ಶಿಕ್ಷಣ ನೀಡುತ್ತಾರೆ, ಅದೇ ರೀತಿ ವಿದ್ಯಾರ್ಥಿಗಳೂ ಶಿಕ್ಷಕರನ್ನು ಗೌರವಿಸುವ ಭಾವನೆ ಹೊಂದಿದಾಗ ವಿದ್ಯೆ ತನ್ನಿಂತಾನೇ ತಲೆಗೆ ಹೋಗುತ್ತದೆ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಅಭಿಪ್ರಾಯಪಟ್ಟರು. ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಪ್ರತಿಭಾ ಪ್ರದರ್ಶನ `ಸಂವತ’ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.ನಮಗೆ ಗೋಡೆಗಳಲ್ಲಿ ತೂಗು ಹಾಕಿರುವ ಫೊಟೋದಲ್ಲಿ ಇರುವವರು ಮಾದರಿಗಳಾಗಿರಬಾರದು. ಅದರ ಬದಲು ನಮಗೆ ಶಿಕ್ಷಣ ನೀಡಿ ಸರಿದಾರಿ ತೋರಿಸುವ ಶಿಕ್ಷಕರು, ನಮ್ಮನ್ನು ಸಲಹುವ ಹೆತ್ತವರನ್ನು ಮಾದರಿಯಾಗಿ ಸ್ವೀಕರಿಸಿದಾಗ ಜೀವನದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಹೇಳಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಉದ್ಘಾಟಿಸಿದರು. ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ಐ.ಬಿ.ಹಸೈನಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕೆ.ಎಸ್., ಪಾವೂರು ಗ್ರಾಮ ಪಂಚಾಯಿತಿ ಸದಸ್ಯೆ ಸುನಿಯಾ ಲೋಬೋ, ಕೊಣಾಜೆ…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ವಾರ್ಷಿಕ ಕ್ರೀಡಾಕೂಟ ಸಮಾರಂಭವು ಶುಕ್ರವಾರ ಮಂಗಳೂರು ವಿವಿಯ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಭೋಜ ಪೂಜಾರಿಯವರು ಉದ್ಘಾಟಿಸಿ ಕ್ರೀಡೆಯು ನಮ್ಮಲ್ಲಿ ಆರೋಗ್ಯವನ್ನು ಕಾಪಾಡುವುದರೊಂದಿಗೆ ಜೀವನದಲ್ಲಿ ಸದಾ ಚೈತನ್ಯವನ್ನು ನೀಡುತ್ತದೆ. ಆದ್ದರಿಂದ ಇಂತಹ ಕ್ರೀಡಾಕೂಟಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಹೇಳಿದರು.ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ಮಾತನಾಡಿ, ಮಂಗಳೂರು ವಿವಿಯ ಶಿಕ್ಷಕೇತರ ಉದ್ಯೋಗಿಗಳ ಸಂಘವು ಕಳೆದ ಹಲವಾರು ವರ್ಷಗಳಿಂದ ವಿವಿಯಲ್ಲಿ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಬಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷರಾದ ಕಮಲಾಕ್ಷಿ ಪಿ.ಶೆಟ್ಟಿ, ಕಾರ್ಯದರ್ಶಿ ತಝ್ನೀಜ್ ಬಾನು, ಕ್ರೀಡಾ ಸಂಚಾಲಕರಾದ ರವಿ.ಎಚ್.ಎಂ, ಖಚಾಂಚಿ ಸುಮಂಗಲಿ, ಮಾಧವ ಸೋಮೇಶ್ವರ, ವೈದ್ಯಕೀಯ ನಿಧಿಯ ಶಿವಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಹರೀಶ್ ಪೂಜಾರಿ ಹಾಗೂ ಚಂದ್ರ ಕಾರ್ಯಕ್ರಮ ನಿರೂಪಸಿದರು. ಬಳಿಕ ವಿವಿದ ಕ್ರೀಡಾಕೂಟಗಳಲ್ಲಿ ಸಂಘದ ಸದಸ್ಯರು ಭಾಗವಹಿಸಿದರು.
UN NETWORKS ಕೆ.ಸಿ.ರೋಡ್: ಶಾಲೆಗೆ ನುಗ್ಗಿದ ಕಳ್ಳರು ಬಾಗಿಲು ಒಡೆದು ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ಸಂಗ್ರಹಿಸಲಾಗಿದ್ದ ರೂ.81,000 ನಗದು ಕಳವು ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ಯಾ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಕಾಲೇಜು ಪ್ರಾಂಶುಪಾಲರ ಕೊಠಡಿಯ ಬೀಗ ಒಡೆದು ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ಸಂಗ್ರಹಿಸಲಾಗಿದ್ದ ರೂ. 73,000 ನಗದು ಹಾಗೂ ಮುಖ್ಯೋಪಾಧ್ಯಾಯಿನಿ ಗೆ ಸೇರಿದ ರೂ.8,000 ನಗದು ಕಳವುಗೈದಿದ್ದಾರೆ. ಸ್ಥಳಕ್ಕೆ ಉಳ್ಳಾಲ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿನಾಯಕ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಗಾಂಜಾ ಮಾಫಿಯಾ ವಿರುದ್ಧ ದನಿ ಎತ್ತಿದ್ದರು : ಶನಿವಾರ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ ಉಳ್ಳಾಲ ಪೊಲೀಸರ ಜಂಟಿ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆದಿತ್ತು .ಇದೇ ವೇಳೆ ಗಾಂಜಾ ವಿಚಾರಕ್ಕೆ ಸಂಬಂಧಿಸಿ ಪ್ರಸ್ತಾಪ ನಡೆದಿತ್ತು. ಇದೇ ದ್ವೇಷದಿಂದ ಕಳವು ನಡೆದಿರುವ ಸಾಧ್ಯತೆಗಳಿರಬಹುದೆಂದು ಶಾಲಾ ಆಡಳಿತ ಮಂಡಳಿ ಸಂಶಯ…

