UN NETWORKS ಕೊಣಾಜೆ: ವಿದ್ಯಾರ್ಥಿಗಳು ತರಗತಿಯ ಪಠ್ಯ ಕಲಿಕೆಯೊಂದಿಗೆ ಕೀಡೆ, ಸಾಂಸ್ಕೃತಿಕ ಮತ್ತಿತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಿದರೆ ಮಕ್ಕಳು ಸರ್ವತೋಮುಖ ಬೆಳವಣಿಗೆ ಕಾಣುವುದರಲ್ಲಿ ಸಂಶಯವಿಲ್ಲ ಎಂದು ಮಂಗಳೂರು ಮೇಯರ್ ಭಾಸ್ಕರ್ ಕೆ. ಅಭಿಪ್ರಾಯಪಟ್ಟಿದ್ದಾರೆ. ಕೊಣಾಜೆ ಮಂಗಳಗಂಗೋತ್ರಿಯ ವಿಶ್ವಮಂಗಳ ಎಜುಕೇಶನ್ ಸೊಸೈಟಿ ವತಿಯಿಂದ ವಿಶ್ವಮಂಗಳ ಶಾಲೆಯ ಆವರಣದಲ್ಲಿ ನಡೆದ ಸಂಸ್ಥೆಯ ಪೂರ್ವಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿ.ಯು.ಕಾಲೇಜಿನ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಮಂಗಳೂರು ವಿ.ವಿ.ಯ ಪ್ರಭಾರ ಕುಲಪತಿ ಪ್ರೊ.ಈಶ್ವರ ಪಿ. ಮಾತನಾಡಿ, ದೇಶದ ಜನಸಂಖ್ಯೆಯ ಪೈಕಿ ಸುಮಾರು 30 ಕೋಟಿಯಷ್ಟು ಮಂದಿ ಯುವಜನತೆಯೇ ಇದೆ. ಈ ಮೂಲಕ ದೇಶದಲ್ಲಿ ಉತ್ತಮ ಸಂಖ್ಯೆಯ ಯುವ ಮಾನವ ಸಂಪನ್ಮೂಲ ಇದ್ದು, ಶಿಕ್ಷಕರು ಇವರ ಸಾಮಥ್ರ್ಯವನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಮಕ್ಕಳ ಕೌಶಲ್ಯ ಬೆಳವಣಿಗೆ ಜೊತೆಗೆ ಅವರ ಗುಣನಡತೆ, ಮಾನವೀಯ ಅಂಶಗಳನ್ನೂ ಬೆಳೆಸಿಕೊಳ್ಳಬೇಕು. ಅವರಲ್ಲಿರುವ ಅನ್ವೇಷಣಾ ಪ್ರವೃತ್ತಿಗೆ ನೀರೆರೆಯಬೇಕು ಎಂದು ಶಿಕ್ಷಕರಿಗೆ…
Author: UllalaVani
UN NETWORKS ಮುಡಿಪು: ಅಂಗಡಿ ಮಾಲೀಕರೊಬ್ಬರಿಗೆ ಎರಡನೇ ಬಾರಿ ನಕಲಿ ನೋಟು ನೀಡಿ ವಂಚಿಸಲು ಮುಂದಾತನನ್ನು ಸಾರ್ವಜನಿಕರೇ ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು ಹೂಹಾಕುವಕಲ್ಲು ಸಮೀಪ ನಡೆದಿದೆ. ಮುಡಿಪು ಭಾಗದಲ್ಲಿ ಅಂಗಡಿ ಮಾಲೀಕರಿಗೆ ನಕಲಿ ನೋಟು ನೀಡಿ ವಂಚಿಸುವ ಜಾಲ ವ್ಯಾಪಕವಾಗಿದೆ ಎಂದು ತಿಳಿದುಬಂದಿದೆ. ಇರಾ ನಿವಾಸಿ ಅಬ್ಬಾಸ್ (45) ಎಂಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಈತನ ಬಳಿ ರೂ.500 ರ ನಾಲ್ಕು ಕಲರ್ ಝೆರಾಕ್ಸ್ ನೋಟು ಪತ್ತೆಯಾಗಿದೆ. ಕನ್ಯಾನದ ಅಂಗಡಿಯೊಂದರಲ್ಲಿ ರೂ.2000 ಚಿಲ್ಲರೆ ಕೇಳಿದಕ್ಕೆ ಆತ ಇಂತಹ ನೋಟು ನೀಡಿರುವುದಾಗಿ ತಿಳಿಸಿದ್ದಾನೆ. ಎರಡನೇ ಬಾರಿ ವಂಚಿಸಲು ಯತ್ನ : ಹೂಹಾಕುವಕಲ್ಲು ನಿವಾಸಿ ತಿಮ್ಮಪ್ಪ ಎಂಬವರ ಅಂಗಡಿಗೆ ಎರಡು ವಾರಗಳ ಹಿಂದೆಯೂ ರೂ.500 ರ ನೋಟು ನೀಡಿ ವಂಚಿಸಲಾಗಿತ್ತು. ಆತನಿಗಾಗಿ ಕಾಯುತ್ತಲೇ ಇದ್ದ ತಿಮ್ಮಪ್ಪ ಅವರ ಅಂಗಡಿಗೆ ಮತ್ತೆ, ಅಬ್ಬಾಸ್ ಕಲರ್ ಝೆರಾಕ್ಸ್ ನೋಟು ತಂದು ಸಾಮಾನು ಕೇಳಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಅವರು ಸ್ಥಳೀಯರನ್ನು ಕರೆದು…
UN NETWORKS ಉಳ್ಳಾಲ: ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ಕರೆ ನೀಡಿರುವ ಜ.8,9 ರ ಅಖಿಲ ಭಾರತ ಮುಷ್ಕರಕ್ಕೆ ಸಿಪಿಐಎಂ ನ ಉಳ್ಳಾಲ ವಲಯ ಸಮಿತಿ ಬೆಂಬಲ ಸೂಚಿಸಿದೆ. ಬೆಲೆ ಏರಿಕೆಯನ್ನು ತಡೆಗಟ್ಟಬೇಕು ,ಕಾರ್ಮಿಕರ ಕನಿಷ್ಟವೇತನ ಮಾಸಿಕ ರೂ.18000 ನಿಗದಿಗೊಳಿಸಬೇಕು, ಗುತ್ತಿಗೆ ಆಧಾರಿತ ಕಾರ್ಮಿಕರನ್ನು ಖಾಯಂಗೊಳಿಸಬೇಕು.ವಾರ್ಷಿಕ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ ಕೈಗೊಳದಳಬೇಕು , ಎಲ್ಲಾ ನಿವೃತ್ತ ಕಾರ್ಮಿಕರಿಗೆ ಕನಿಷ್ಟ ರೂ.3000 ಪಿಂಚಣಿ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅಸಂಘಟಿತ ಮತ್ತು ಕೃಷಿಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಸರಕಾರಿ ಕ್ಷೇತ್ರದ ಕೈಗಾರಿಕೆಗಳ ಖಾಸಗೀಕರಣ ನಿಲ್ಲಿಸಬೇಕು ,ಬೀಡಿಕಾರ್ಮಿಕರರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು, ಮುಂತಾದ ಹನ್ನೆರಡು ಅಂಶಗಳ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಯುತ್ತಿದೆ. ರೈತ ಕಾರ್ಮಿಕರ ಹಿತಾಸಕ್ತಿಯನ್ನು ನಿರ್ಲಕ್ಷಿಸುತ್ತಿರುವ ಕೇಂದ್ರದ ಎನ್ ಡಿ ಎ ಸರಕಾರವು ಮುಕ್ತವಾಗಿ ಈ ದೇಶದ ಬಂಡವಾಳಿಗರ ಪರ ನೀತಿಯನ್ನು ಅನುಸರಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಕೇಂದ್ರ ಸರಕಾರವು ಜನ ಸಾಮಾನ್ಯರ ಪರವಾಗಿ ತನ್ನ…
UN NETWORKS ಉಳ್ಳಾಲ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನ ಸಾಮಾನ್ಯರ ಹಿತಕಾಪಾಡುವ ಬದಲು ತನ್ನ ಅಧಿಕಾರ ಉಳಿಸಿಕೊಳ್ಳುವ ಕೆಲಸ ಮಾಡುತ್ತಿವೆ. ಕಾರ್ಮಿಕರ ಬಗ್ಗೆಯಾಗಲಿ ಜನ ಸಾಮಾನ್ಯರ ಪ್ರಶ್ನೆಗಳ ಕುರಿತು ಮುತುವರ್ಜಿ ವಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಜ.8,9 ರ ಅಖಿಲ ಭಾರತ ಮುಷ್ಕರಕ್ಕೆ ಸಿಐಟಿಯು ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಸಿಐಟಿಯು ಮುಖಂಡ ಕೃಷ್ಣಪ್ಪ ಸಾಲ್ಯಾನ್ ಹೇಳಿದ್ದಾರೆ. ಸಿಐಟಿಯು ಉಳ್ಳಾಲ ವಲಯ ಮಟ್ಟದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೀಡಿಕಾರ್ಮಿಕರಿಗೆ ಕನಿಷ್ಠ ಮಜೂರಿ 40.00 ಏರಿಕೆಯಾಗಿದ್ದು ಎಂಟು ತಿಂಗಳು ಕಳೆದರು ಮಾಲೀಕರು ನೀಡದೇ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ. ಹಲವು ಹೋರಾಟ ಮಾಡಿ ಸರಕಾರದ ಗಮನ ಸೆಳೆದರು ಕಾರ್ಮಿಕ ಮಂತ್ರಿಗಳು ಕೂಡ ಗಮನ ಹರಿಸಿಲ್ಲ ಎ.2015 ರಿಂದ 2017 ರ ವರೆಗೆ ಮೂರು ವರ್ಷದ 12.75 ಪೈ ತುಟ್ಟಿ ಭತ್ತೆ ಕೂಡ ನೀಡಲಿಲ್ಲ. ವಾರಕ್ಕೆ 6 ದಿನ ಕೆಲಸ ಮಾಡಬೇಕಾಗಿದ್ದ ಮಾಲೀಕರು ಸರಿಯಾಗಿ ಕೆಲಸ ನೀಡುತ್ತಿಲ್ಲ. ಕಳಪೆ ಮಟ್ಟದ ಎಲೆ ವಿತರಿಸಿ ಬೀಡಿಕಾರ್ಮಿಕರನ್ನು…
UN NETWORKS ಕೋಟೆಕಾರು : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಕೆ.ಸಿ.ರೋಡ್ ಘಟಕದ ವತಿಯಿಂದ ಸಾಂತ್ವನ ಯೋಜನೆಯಡಿ 7ನೇ ವರ್ಷದ 7 ಜೊತೆ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಡಿ.30ರಂದು ಬೆಳಗ್ಗೆ 10.00 ಗಂಟೆಗೆ ಕೋಟೆಕಾರ್ ನೂರ್‍ಮಹಲ್‍ನಲ್ಲಿ ನಡೆಯಲಿದೆ. ಕಾಸರಗೋಡು ಜಾಮಿಆ ಸಅದಿಯಾ ಪ್ರೊಫೆಸರ್ ಅಲ್‍ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲೆ ಸಂಯುಕ್ತ ಖಾಝಿ ಅಲ್‍ಹಾಜ್ ಅಲ್‍ಫುಖಾಹಾಅ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ನಿಖಾಹ್ ನೇತೃತ್ವ ವಹಿಸಲಿರುವರು. ಸಿ.ಟಿ.ಎಮ್. ಸೈಯ್ಯದ್ ಮುಹಮ್ಮದ್ ಸಲೀಮ್ ಅಸ್ಸಖಾಫ್ ತಂಙಳ್ ಕೆ.ಸಿ.ರೋಡ್, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಅಲ್‍ಹಾಜ್ ಜಿ.ಎಮ್.ಮುಹಮ್ಮದ್ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಎಮ್‍ಎಸ್‍ಎಮ್ ಅಬ್ದುರಶೀದ್ ಝೈನಿ ಅಲ್‍ಕಾಮಿಲ್ ಎಮ್.ಎ, ಎಸ್.ವೈ.ಎಸ್. ದ.ಕ. ಜಿಲ್ಲಾಧ್ಯಕ್ಷ ಅಲ್‍ಹಾಜ್ ಉಸ್ಮಾನ್ ಸಅದಿ ಪಟ್ಟೋರಿ, ಮ್ಯಾರೇಜ್ ಸೆಲ್‍ನ ಅಧ್ಯಕ್ಷ ಯು.ಬಿ. ಮುಹಮ್ಮದ್ ಇನ್ನಿತರರು ಭಾಗವಹಿಸಲಿದ್ದಾರೆ. ಕೆ.ಸಿ.ರೋಡು ಎಸ್‍ವೈಎಸ್ ಕಳೆದ ಹತ್ತು ವರ್ಷಗಳಿಂದ 125 ಮನೆಗಳಿಗೆ ತಲಾ 10ಕೆ.ಜಿ.ಯಂತೆ ಬಡವರಿಗೆ…
UN NETWORKS ಮುಡಿಪು: ಕೈರಂಗಳದ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿ ಉತ್ಸವ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನವು ಡಿ. 29 ಮತ್ತು 30 ರಂದು ನಡೆಯಲಿದ್ದು ಸಕಲ ಸಿದ್ಧತೆ ನಡೆದಿದೆ ಎಂದು ಉತ್ಸವ ಸಮಿತಿ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಅವರು ಹೇಳಿದರು. ಅವರು ಪುಣ್ಯಕೋಟಿನಗರ ಶ್ರೀ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಯುವ ಜನತೆಯ ನಡೆ ಕೃಷಿ ಕ್ಷೇತ್ರದ ಕಡೆಗೆ ದ್ಯೇಯ ವಾಕ್ಯದೊಂದಿಗೆ ಉತ್ಸವ ನಡೆಯಲಿದ್ದು, ತೆಂಗು ಕೃಷಿ ಹಾಗೂ ಮೌಲ್ಯವರ್ದನೆ, ಗೇರು ಹಾಗೂ ಕರಿಮೆಣಸು, ಕೊಕ್ಕೊ ಬೆಳೆ ಸಂರಕ್ಷಣೆ ಮತ್ತು ಸಂವರ್ದನೆ, ಕೃಷಿ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪ್ರಭಾವ, ಅಡಿಕೆ ಬಳೆ ನಿರ್ವಹಣೆ ಹಾಗೂ ಆದರ್ಶ ಕೃಷಿಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೃಷಿ ಉತ್ಸವದಲ್ಲಿ ಕೃಷಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ, ಯಂತ್ರಗಳ ಪ್ರದರ್ಶನ, ಸುಧಾರಿತ ಕೃಷಿ ಪದ್ದತಿಗಳ ಪರಿಚಯ, ಕೃಷಿ ತೋಟಗಾರಿಕಾ ಇಲಾಖೆ ಮಳಿಗೆಗಳು, ಸಹಕಾರಿ ಸಂಘಗಳು ಭಾಗವಹಿಸಲಿವೆ ಎಂದರು.ಕೃಷಿ ಉತ್ಸವದಲ್ಲಿ ಪಾಲ್ಗೊಳ್ಳು 132…
UN NETWORKS ನರಿಂಗಾನ: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (ಕಾಸ್ಕ್) ನರಿಂಗಾನ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಡಿ. 30ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ತನಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲರಕೋಡಿಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
UN NETWORKS ಉಳ್ಳಾಲ: ದ.ಕ. ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಡೆದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ- 2018 ಸಮಾರೋಪ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ನಡೆಯಿತು. ಸಮಾರೋಪದಲ್ಲಿ ಮಂಗಳೂರಿನ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಶ್ರೀ ವೇದಮೂರ್ತಿ ಮಾತನಾಡಿ ಗೃಹರಕ್ಷಕರು ದಿನದ 24 ಗಂಟೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಇರುತ್ತದೆ. ಪೊಲೀಸ್ ಇಲಾಖೆಗೆ ಹೆಗಲು ಕೊಟ್ಟು ಕೆಲಸ ನಿರ್ವಹಿಸುವ ಗೃಹರಕ್ಷಕರಿಗೆ ದೈಹಿಕ ಕ್ಷಮತೆ ಅತೀ ಅಗತ್ಯ. ಆ ನಿಟ್ಟಿನಲ್ಲಿ ಕ್ರೀಡಾಕೂಟಗಳು ಅತೀ ಅವಶ್ಯಕ ಮತ್ತು ಎಲ್ಲ ಗೃಹರಕ್ಷಕರಿಗೂ ಆಟೋಟಗಳಲ್ಲಿ ಪಾಲ್ಗೊಳ್ಳ್ಳುವ ಅವಕಾಶ ಸಿಗಬೇಕು ಎಂದು ಅಭಿಪ್ರಾಯಪಟ್ಟರು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ. ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು.ಲಯನ್ಸ್ ಕ್ಲಬ್ ಮಂಗಳೂರು ಉಪಾಧ್ಯಕ್ಷ ಸತೀಶ್ ರೈ ಬಹುಮಾನ ವಿತರಿಸಿದರು. ವಿಕಾಸ್ ಸಮೂಹ ಸಂಸ್ಥೆಯ ಡೀನ್ ಮಂಜುಳಾ ಅನಿಲ್ ರಾವ್, ಕಚೇರಿ ಅಧೀಕ್ಷ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ.ಟಿ.ಎಸ್., ಲಯನ್ಸ್ ಕ್ಲಬ್ ಮಂಗಳೂರು ಕಾರ್ಯದರ್ಶಿ ಹೇಮರಾವ್ ಮತ್ತು ಲಯನ್ಸ್ ಕ್ಲಬ್…
UN NETWORKS ಉಚ್ಚಿಲ: ರಾಷ್ಟ್ರೀಯ ದಂತ ವೈದ್ಯರ ದಿನದ ಅಂಗವಾಗಿ ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಉಚ್ಚಿಲಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ ಚೂಂತಾರು ಅವರು ಮಕ್ಕಳಿಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಟೂತ್‍ಬ್ರಷ್, ಟೂತ್ ಪೇಸ್ಟ್ ಗಳ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಹೇಗೆ ಮತ್ತು ಯಾವ ರೀತಿ ಹಲ್ಲು ಉಜ್ಜಬೇಕು ಎಂಬುದರ ಬಗ್ಗೆ ಉಪದೇಶ ನೀಡಿದರು. ಸುಂದರ, ಸುದೃಡ ಆರೋಗ್ಯವಂತ ಹಲ್ಲುಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ 40ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ಮತ್ತು ದಂತ ಆರೋಗ್ಯ ಮಾಹಿತಿ ಕರಪತ್ರವನ್ನು ಪ್ರತಿಷ್ಠಾನದ ವತಿಯಿಂದ ನೀಡಲಾಯಿತು. ಶಾಲಾ ಶಿಕ್ಷಕಿಯರುಗಳಾದ ಬಬಿತಾ ಹಾಗೂ ಶೋಭಿಕಾ ಉಪಸ್ಥಿತರಿದ್ದರು.
UN NETWORKS ಫಜೀರು: ಯಾವುದೇ ಧರ್ಮದಲ್ಲೂ ಅತ್ಯಾಚಾರ, ಕೋಮುವಾದ ಪ್ರೋತ್ಸಾಹ ನೀಡಿಲ್ಲ. ಯಾವುದೇ ಧರ್ಮಗುರುಗಳೂ ಅಂತಹ ವಿಚಾರವನ್ನೂ ಭೋದಿಸಿಲ್ಲ. ಆದರೂ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಮಲಾರ್ ಜುಮಾ ಮಸೀದಿ ಖತೀಬ್ ಎಂ.ಎ.ರಿಯಾಝ್ ಫೈಝಿ ಅಭಿಪ್ರಾಯಪಟ್ಟರು. ಫಜೀರ್ ಮೆರ್ಸಿಯಮ್ಮನವರ ಧರ್ಮಕೇಂದ್ರದ ವತಿಯಿಂದ ಮಂಗಳವಾರ ಚರ್ಚ್ ಮೈದಾನದಲ್ಲಿ ನಡೆದ `ಬಂಧುತ್ವ ಕ್ರಿಸ್ಮಸ್’ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೋಮು ಗಲಭೆ, ಅತ್ಯಾಚಾರ, ಅನಾಚಾರ ನಡೆದಾಗ ಅದನ್ನು ಧರ್ಮದ ಆಧಾರದಲ್ಲಿ ನೋಡಬಾರದು. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರು ಧರ್ಮಹೀನರಾಗಿದ್ದಾರೆ. ತಪ್ಪು ಕೃತ್ಯದಲ್ಲಿ ಭಾಗಿಯಾದವರಿಗೆ ಬುದ್ಧಿವಾದ ಹೇಳಿ ಸರಿದಾರಿಗೆ ತರುವ ಪ್ರಯತ್ನದ ಮೂಲಕ ಧರ್ಮದ ಪಾವಿತ್ರ್ಯತೆ ಕಾಪಾಡಬೇಕು ಎಂದು ಹೇಳಿದರು. ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಗಂಗಾಧರ್ ಪೂಜಾರಿ ಮಾತನಾಡಿ, ಶಾಂತಿ, ಪ್ರೀತಿ, ಸಹನೆಯನ್ನು ಭೋದಿಸಿದ, ಶಿಲುಬೆಗೇರುವ ಸಂದರ್ಭದಲ್ಲೂ ದುಷ್ಟರಿಗೆ ಕ್ಷಮೆ ಬೇಡಿದ ಏಸು ಕ್ರಿಸ್ತರ ಸಂದೇಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸಿ ಶಾಂತಿಯುತ ಸಮಾಜ ನಿರ್ಮಿಸಬೇಕಿದೆ ಎಂದು ಹೇಳಿದರು. ಮೆರ್ಸಿಯಮ್ಮನವರ ಧರ್ಮಕೇಂದ್ರದ…

