UN NETWORKS
ಕೋಟೆಕಾರ್: ಪ್ರಪಂಚದಲ್ಲಿ 84ಲಕ್ಷ ಜೀವಿಗಳನ್ನು ಸೃಷ್ಟಿಸಿದ ಬಳಿಕ ಮನುಷ್ಯನ ಸೃಷ್ಟಿಯಾಗುತ್ತದೆ. ಹಾಗಾಗಿ ಮನುಷ್ಯನ ದೇಹಕ್ಕಿಂತ ಅವನು ಬದುಕಿನುದ್ದಕ್ಕೂ ಪಡೆದ ಜ್ಞಾನ ಬಲು ಶ್ರೇಷ್ಠ. ಮನುಷ್ಯ ಭೋಗ ಜೀವನ ಬದಿಗೆ ಸರಿಸಿ ಯೋಗ ಜೀವನ ನಡೆಸಬೇಕು ಎಂದು ಬಿಎಸ್‍ಎನ್‍ಎಲ್ ಡಿಜಿಎಂ ಕುಂಬ್ಳೇಕರ್ ಮೋಹನ್ ಕುಮಾರ್ ನುಡಿದರು.
ಕೋಟೆಕಾರಿನ ಶೃಂಗೇರಿ ಶಂಕರಮಠದಲ್ಲಿ ಬುಧವಾರ ನಡೆದ ಶ್ರೀ ಗೌರೀ ಹಬ್ಬದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.”ಸೇವಾಹಿ ಧರ್ಮ ಮರಮೋ ಧರ್ಮ” ಎಂಬ ನುಡಿಯಂತೆ ಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು. ನಾವು ದುಡಿದ ಸಂಪತ್ತು ದುಡ್ಡು. ಆ ದುಡ್ಡಿನಲ್ಲಿ ಧರ್ಮ ಕಾರ್ಯ ಮಾಡಬೇಕು. ಇತರ ಮಾರ್ಗದಲ್ಲಿ ದುಡಿದದ್ದು ಹಣ. ಅದು ಹೆಣವಾಗುವ ಸಾಧ್ಯತೆ ಇದೆ. ಹಾಗೆಯೇ ಯಾವುದೇ ವ್ಯಕ್ತಿ ಜಾತಿಯಲ್ಲಿ ಶೂದ್ರರಾಗಿಲ್ಲ. ಅವರವರ ಕರ್ಮಾನುಸಾರ ಜಾತಿ ನಿರ್ಣಯ ಎಂದು ನುಡಿದರು.
ಮನುಷ್ಯನ ಅಂತರಂಗ ಪರಿಶುದ್ಧವಾದರೆ ಮಾತ್ರ ನಾದ ಬಹಳ ಸೊಗಸಾಗಿ ಮೂಡಿಬರಬಹುದು. ಭಗವಾನ್ ಶ್ರೀಕೃಷ್ಣ ತನ್ನ ಕೈಯಲ್ಲಿರುವ ಕೊಳಲಿಗೆ ತುಟಿ ಸ್ಪರ್ಶಿಸಿ ಸಪ್ತ ಸ್ವರ ಹೊರಡಿಸುತ್ತಾನೆ. ಕೃಷ್ಣ ಹೊರತುಪಡಿಸಿ ಬೇರೆ ಯಾರೂ ಕೂಡಾ ನಾನು ದೇವರು ಅನ್ನಲಿಲ್ಲ. ಅಷ್ಟಕ್ಕೂ ಅವನು ತಲೆಯಲ್ಲಿ ನವಿಲು ಗರಿ ಹೊಂದಿದ್ದು ಪಾವಿತ್ಯಕ್ಕೆ ಶ್ರೇಷ್ಠನಾದವನು. ಹಾಗಾಗಿ ನಮ್ಮ ಪಾವುತ್ಯತೆ ಕಾಪಾಡುವುದು ಅತಿ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಂದಾಲ್ ಪೋಲಿ ಫಿಲ್ಮ್ಸ್ ಲಿಮಿಟೆಡ್‍ನ ಮಾಜಿ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಇನ್ನ ಚಂದ್ರಕಾಂತ ರಾವ್ ಮಾತನಾಡಿ ವಿದ್ಯಾದಾನ ಬಲುಶ್ರೇಷ್ಠ. ನಮ್ಮ ಟ್ರಸ್ಟ್ ಮೂಲಕ ಅಂತಹ ಕೆಲಸ ಮಾಡುತ್ತಾ ಬಂದಿದ್ದೇನೆ. ನಾವು ದಾನ ಧರ್ಮ ಮಾಡುತ್ತಾ ಬಾಳಿದರೆ ಬದುಕು ಸಂತಸಮಯವಾಗಿರುತ್ತದೆ ಎಂಬುದು ಆನುಭವ ಸತ್ಯ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರಿನ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ,
ಉತ್ಸವ ಸಮಿತಿ ಗೌರವ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ್, ಶ್ರೀ ರಮಾನಂದ ಸ್ವಾಮೀಜಿ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಮಧುಸೂಧನ್ ಆಯರ್, ಉಡುಪಿ ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಉಮೇಶ್ ಎ. ನಾೈಕ್, ಮಂಗಳೂರು ಆರ್ಯ ಮರಾಠ ಸಮಾಜಸೇವಾ ಸಂಘದ ಅಧ್ಯಕ್ಷ ಯತೀಂದ್ರ ಬಹುಮಾನ್, ನ್ಯಾಯವಾದಿ ವಿಜಯ ಕುಮಾರ್, ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಆಂದ ಕೊಂಡಾಣ, ನಾಟಿವೈದ್ಯ ವಾಸುದೇವ ಸವಣೂರು, ಕೋಶಾಧಿಕಾರಿ ಡಾ. ಮಾಧವಿ ವಿಜಯ ಕುಮಾರ್, ಪ್ರಧಾನ ಕೊಪ್ಪಲು, ಮಹಿಳಾ ವಿಭಾಗ ಪ್ರಧಾನ ಕಾರ್ಯದರ್ಶಿ ಜಯಶ್ರೀ ಪ್ರಫುಲ್ಲದಾಸ್ ಹಾಗೂ ಉತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಬೊಳ್ಳಾವ ವಿದ್ಯಾಶಂಕರ ಉಪಸ್ಥಿತರಿದ್ದರು.
ಕೋಟೆಕಾರಿನ ಶೃಂಗೇರಿ ಶಾಖಾ ಮಠದ ಧರ್ಮಾಧಿಕಾರಿ ಪ್ರೊ. ಸತ್ಯಶಂಕರ ಬೊಳ್ಳಾವ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು ವಂದಿಸಿದರು.
ಇದಕ್ಕೂ ಮುನ್ನ ಬೆಳಗ್ಗೆ ಶ್ರೀಗೌರೀ ವಿಗ್ರಹ ಪ್ರತಿಷ್ಠೆ, ಧಾರ್ಮಿಕ ಸಭೆ, ಸುಮಂಗಲೀ ಪೂಜೆ, “ಮೀನಾಕ್ಷಿ ಕಲ್ಯಾಣ” ಯಕ್ಷಗಾನ ತಾಳಮದ್ದಲೆ ನಡೆಯಿತು.


