UN NETWORKS ಕೆ.ಸಿ.ರೋಡು: ಕಡುಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬದಲ್ಲಿರುವ ಹೆಣ್ಮಕ್ಕಳ ವಿವಾಹ ಕಾರ್ಯದಲ್ಲಿ ಸಹಾಯ ಮಾಡುವವರಿಗೆ ದೇವನ ಸಹಾಯ ಖಚಿತ. ಕಾರ್ಯಕರ್ತರು ಫಲಾನುಭವಿಗಳನ್ನು ಹುಡುಕುವ ಸಂದರ್ಭ ಸ್ಥಳೀಯ ಪ್ರದೇಶಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕಾಗಿದೆ ಎಂದು ಕಾಸರಗೋಡು ಜಾಮಿಆ ಸಅದಿಯಾ ಪ್ರೊಫೆಸರ್ ಅಲ್ಹಾಜ್ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಕೆ.ಸಿ.ರೋಡ್ ಘಟಕದ ವತಿಯಿಂದ ಸಾಂತ್ವನ ಯೋಜನೆಯಡಿ ಕೋಟೆಕಾರ್ ನೂರ್ಮಹಲ್ನಲ್ಲಿ ಭಾನುವಾರ ನಡೆದ 7ನೇ ವರ್ಷದ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಣ, ಸಂಪತ್ತು ಉಳ್ಳವರು ಕೇವಲ ಮದುವೆ ದಿನ ನಿಗದಿಪಡಿಸುವ ಸಂದರ್ಭ ಸಾವಿರಗಟ್ಟಲೆ ಜನ ಸೇರಿಸಿ, ಲಕ್ಷಗಟ್ಟಲೆ ಹಣ ವ್ಯಯಿಸುವಂತಹ ದುಂದುವೆಚ್ಚದ ಕಾರ್ಯಕ್ರಮಗಳನ್ನು ಕೈಬಿಟ್ಟು ಬಡವರು, ನಿರ್ಗತಿಕರ ಕಷ್ಟ ನಿವಾರಣೆಗಾಗಿ ಹಣ ವ್ಯಯಿಸಿದಾಗ ಕಾಯಿಲೆಗಳೂ ದೂರವಾಗಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್ಹಾಜ್ ಅಲ್ಫುಖಾಹಾ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ನಿಖಾಹ್ ನೇತೃತ್ವ ವಹಿಸಿದ್ದರು.…
Author: UllalaVani
UN NETWORKS ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಅನ್ನು ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕಟೀಲ್ ಜೊತೆಗೆ ಡಿವೈಎಫ್ ಐ ಕಾರ್ಯಕರ್ತರು ಸೇರಿಕೊಂಡು ಉದ್ಘಾಟಿಸಿದರು.ಕೇಳುವಾಗ ಇದೊಂದು ಅಚ್ಚರಿಯೇ ಹೌದು. ಆದರೆ ವಾಸ್ತವವಾಗಿ ಕಾಮಗಾರಿ ಮುಗಿಸುವ ದಿನಾಂಕ ನೀಡಿರುವ ಸಂಸದರು ತಪ್ಪಿದ್ದಾರೆ ಎಂದು ಆರೋಪಿಸಿ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಸೇತುವೆಯನ್ನು ಮೂವರ ಮುಖವಾಡವನ್ನು ಧರಿಸಿ ಅಣುಕು ಉದ್ಘಾಟನೆ ನಡೆಸುವ ಮೂಲಕ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಡಿವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ, ತಲಪಾಡಿಯಿಂದ ಕುಂದಾಪುರದವರೆಗೆ ಹೆದ್ದಾರಿ ದುರಸ್ತಿಗೊಳಿಸಲು ಅಸಾಧ್ಯವಾಗಿದೆ. ನ,.1, ಡಿ.30 ಎಂದು ನಳಿನ್ ಕಟೀಲ್ ದಿನಕ್ಕೊಂದು ಹೇಳಿಕೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಅನ್ನುತ್ತಾ ಸುಳ್ಳು ಹೇಳಿಕೆಗಳನ್ನೇ ನೀಡುತ್ತಲೇ ಬಂದಿದ್ದಾರೆ. ಫೆ.28 ರ ಒಳಗೆ ಸಂಚಾರ ಮುಕ್ತ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ತಪ್ಪು ಹಾದಿಗೆ ಕೊಂಡೊಯುವ ಪ್ರಯತ್ನವಾಗಿದೆ. ಜನರಲ್ಲಿನ ಆಕ್ರೋಶ ಕಡಿಮೆ ಗೊಳಿಸುವ…
UN NETWORKS ಕೈರಂಗಳ: ಮದುವೆಗೆ ಹೆಣ್ಣು ಸಿಗುವುದಿಲ್ಲ ಎಂಬ ಸಮಸ್ಯೆ ಹಾಗೂ ಪ್ರತಿಷ್ಠೆಯ ವಿಚಾರಕ್ಕಾಗಿ ಯುವಕರು ಕೃಷಿ ಚಟುವಟಿಕೆಗಳಿಂದ ದೂರ ಉಳಿದು ನಗರ ಪ್ರದೇಶಗಳಲ್ಲಿ ಕೆಲಸ ಮಾಡುವಂತಹ ಸ್ಥಿತಿಯಿದೆ ಎಂದು ಪೆರ್ಲ ನಳಂದ ವಿದ್ಯಾಲಯದ ಪ್ರಾಂಶುಪಾಲ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕೃಷಿ ತಜ್ಞ ವಿಘ್ನೇಶ್ವರ ವರ್ಮುಡಿ ಅಭಿಪ್ರಾಯಪಟ್ಟರು. ಕೈರಂಗಳ ಪುಣ್ಯಕೋಟಿನಗರದ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಡಿಪು ವಲಯದ ಸಹಭಾಗಿತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕೃಷಿ ಉತ್ಸವ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿ ಯಾವುದೇ ಮೂಲ ಶಿಕ್ಷಣದ ಮಾನದಂಡ. ಮೀಸಲಾತಿಯ ಪ್ರಬೇಧವೂ ಇಲ್ಲದೆ ಹೆಚ್ಚಿನ ಆದಾಯ ತಂದುಕೊಡುವ ಏಕೈಕ ಕ್ಷೇತ್ರವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಉತ್ಸವವನ್ನು ಯಶಸ್ವಿಯಾಗಿ ನಡೆಸುವುದು ಸುಲಭದ ಮಾತಲ್ಲ. ಆದರೆ ಕೈರಂಗಳದಲ್ಲಿ ಸಂಘಟಕರ ಕಾರ್ಯ ಶ್ಲಾಘನೀಯ. ಕೃಷಿಯಿಂದಾಗಿ ಈಗಲೂ ಸಂಸ್ಕಾರ ಉಳಿದಿವೆ. ವಿಶ್ವವೇ ಕೃಷಿ ಕ್ಷೇತ್ರವನ್ನು ಅವಲಂಬಿಸಿದ್ದರೂ…
UN NETWORKS ಉಳ್ಳಾಲ: ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಉಳ್ಳಾಲ ನಿವಾಸಿ ಯುವಕ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉಳ್ಳಾಲ ವಿದ್ಯಾರಣ್ಯನಗರ ನಿವಾಸಿ ವಸಂತ ಎಂಬವರ ಪುತ್ರ ಅಕ್ಷಯ್ (22) ಸಾವನ್ನಪ್ಪಿದವರು. ಡಿ.9 ರಂದು ಮಂಗಳೂರಿನ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಕ್ಷಯ್ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಎಲುಬು ಮುರಿತಕ್ಕೆ ಸಂಬಂಧಪಟ್ಟು ಚಿಕಿತ್ಸೆ ನೀಡಿದ್ದಾರೆನ್ನಲಾಗಿದ್ದು, ಆದರೆ ಹೊಟ್ಟೆಯೊಳಗೆ ಆಗಿರುವ ಗಾಯದ ಕುರಿತು ಪರಿಶೀಲನೆ ನಡೆಸಿರಲಿಲ್ಲ. ಇದರಿಂದ ಅಕ್ಷಯ್ ಅಕ್ಷಯ್ ಸಾವನ್ನಪ್ಪಿದ್ದಾರೆಂಬುದು ಸ್ನೇಹಿತರ ಆರೋಪವಾಗಿದೆ. ಇವರು ಉತ್ತಮ ಕ್ರಿಕೆಟ್ ಆಟಗಾರರಾಗಿದ್ದುಕೊಂಡು, ಉಳ್ಳಾಲದ ಸ್ವಸ್ತಿಕ್ ಕ್ರಿಕೆಟರ್ಸ್ ತಂಡದ ಸದಸ್ಯರಾಗಿದ್ದರು. ಅಪಾರ ಸ್ನೇಹಿತರನ್ನು ಹೊಂದಿರುವ ಇವರು ಸೌಮ್ಯ ಸ್ವಭಾವದವರಾಗಿದ್ದರು. ನ.13 ರಂದು ಸುರತ್ಕಲ್ ಹೊನ್ನಕಟ್ಟೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಕುತ್ತಾರು ಸುಭಾಷನಗರ ನಿವಾಸಿ ಸಾವನ್ನಪ್ಪಿದ ಅಕ್ಷಯ್ , ಇವರ…
UN NETWORKS ಯೆನೆಪೋಯ : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಬಳಿಯ ಸ್ಟೂಡೆಂಟ್ ಹೌಸ್ ಎಂಬ ಕಟ್ಟಡದ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಯೆನೆಪೋಯ ಆಸ್ಪತ್ರೆ ಬಳಿಯ ಶಾಂತಿಬಾಗ್ ನಿವಾಸಿ ಮೊಹಮ್ಮದ್ ಅಕ್ಬರ್(22), ಶಾಂತಿಬಾಗ್ ಫಾತಿಮಾ ಹಾಸ್ಟೆಲ್ ಬಳಿ ನಿವಾಸಿ ಮೊಹಮ್ಮದ್ ಮುಸಾವಿರ್(23)ಎಂದು ಗುರುತಿಸಲಾಗಿದೆ.ಡಿ.22 ರಂದು ಕೋಟೆಕಾರು ಗ್ರಾಮದ ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಬಳಿಯಿರುವ ಸಹಾಲ್ ಸ್ಟೂಡೆಂಟ್ ಹೌಸ್ ಎಂಬಲ್ಲಿ ಲೆನಿನ್ ಮತ್ತು ಅವರ ಸ್ನೇಹಿತ ವಿಷ್ಣು ಪ್ರಕಾಶನ್ ಪಿ ಪಿ ರವರು ಇದ್ದಾಗ ಆರೋಪಿಗಳಾದ ಲುಕ್ಮಾನ್, ಅಕ್ಬರ್ ಮತ್ತು ಇತರ ಇಬ್ಬರು ಯುವಕರು ರೂಮಿನ ಒಳಗಡೆ ಬಂದು ಲೆನಿನ್ ಮತ್ತು ವಿಷ್ಣು ಪ್ರಕಾಶ್ ಟಿ ಪಿ ರವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ರೂ. 8000/- ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್ ಮತ್ತು ಅದರಲ್ಲಿದ್ದ ಸಿಮ್ ಮತ್ತು…
UN NETWORKS ಮುಂಬಯಿ: ದಕ್ಷಿಣ ಕನ್ನಡ ಕಾರ್ಕಳ ಅತ್ತೂರು ಮೂಲದ ಮುಂಬಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ ಅತ್ತೂರು ಇವರು ಆಪ್ಟಿಮಲ್ ವಿೂಡಿಯಾ ಸೊಲ್ಯೂಶನ್‍ಸ್ ಸಂಸ್ಥೆ ಟೈಂಮ್ಸ್ ಪವರ್ ಮೆನ್ ಪ್ರಸ್ತುತ ಪಡಿಸಿದ ವಾರ್ಷಿಕ ಪುರಸ್ಕಾರ `ಗ್ರೂಮಿಂಗ್ ಎಕ್ಸ್ ಪರ್ಟ್ ಆಫ್ ದ ಈಯರ್-2018′ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಬುಧವಾರ ಲೊವರ್ ಪರೇಲ್ ಇಲ್ಲಿನ ಹೈ ಸ್ಟ್ರೀಟ್ ಫಿನಿಕ್ಸ್ ಇದರ ಇಂಪಿರಿಯಲ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಶಿವರಾಮ್ ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು.ಸ್ವಸಮುದಾಯದ ಕುಲಕಸಬುವನ್ನೇ ಆರಿಸಿ ತಾನೊಬ್ಬನೇ ಕಾರ್ಮಿಕನೂ ಮಾಲಿಕನೂ ಆಗಿ ಸ್ವಂತ ಉದ್ಯಮವನ್ನಾಗಿಸಿ ಕೇಶವಿನ್ಯಾಸ ವೃತ್ತಿಯಿಂದ ದೈನಂದಿನ 30 ರೂಪಾಯಿ ಆದಾಯ ಗಳಿಕೆಯಿಂದ ಸ್ವಂತ ಅಂಗಡಿ ಆರಂಭಿಸಿ ಸದ್ಯ ಸುಮಾರು 20…
UN NETWORKS ಮಂಗಳೂರು: ಸಿಆರ್‌ಝೆಡ್ ವ್ಯಾಪ್ತಿಯ ಜಪ್ಪಿನಮೊಗರು, ಹರೇಕಳದಲ್ಲಿ ಪರವಾನಿಗೆಯಿಲ್ಲದೆ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ 12ಕ್ಕೂ ಅಧಿಕ ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದ.ಕ. ಜಿಲ್ಲಾ ವ್ಯಾಪ್ತಿಯ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮರಳುಗಾರಿಕೆಗೆ ಅನುಮತಿ ನೀಡಿ 76 ಪರವಾನಿಗೆ ನೀಡಲಾಗಿತ್ತು. ಆದರೆ ಕೆಲವರು ಪರವಾನಿಗೆಯಿಲ್ಲದೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಆಧಾರದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕಾರ್ಯಾಚರಣೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಮರಳು ಕಾರ್ಮಿಕರು ಪರಾರಿ: ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಗಣಿ ಮತ್ತು ಭೂವಿಜ್ಞಾನ, ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ಹರೇಕಳ, ಜಪ್ಪಿನಮೊಗರುವಿನ ಮರಳುಗಾರಿಕೆ ಪ್ರದೇಶಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ 12 ದೋಣಿಗಳನ್ನು ವಶಪಡಿಸಿಕೊಂಡು ಜಪ್ಪಿನಮೊಗರುವಿನಲ್ಲಿರುವ ಜಿಲ್ಲಾಡಳಿತ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳನ್ನು ಕಂಡು ಮರಳು ಕಾರ್ಮಿಕರು ಪರಾರಿಯಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜಿಯೋಲಾಜಿಸ್ಟ್ ಪದ್ಮಶ್ರೀ, ಮೂರ್ತಿ, ಕಂದಾಯ ಇಲಾಖೆಯ ಸಹಾಯಕ ಕಮಿಷನರ್ ರವಿಚಂದ್ರ ನಾಯಕ್,…
UN NETWORKS ಉಳ್ಳಾಲ: ಉಳ್ಳಾಲ ಮುಸ್ಲಿಂ ಜಮಾಅತ್ ಮತ್ತು ಸಯ್ಯದ್ ಮದನಿ ದರ್ಗಾ ಆಡಳಿತ ಸಮಿತಿ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರವರನ್ನು ತುಚ್ಚ ಶಬ್ದದಿಂದ ಮಾತಾಡಿದ ಸುವರ್ಣ ಚಾನೆಲ್ ನ ಮುಖ್ಯ ನಿರೂಪಕ ಅಜಿತ್ ಅವರನ್ನು ಕೂಡಲೇ ಕೆಲಸದಿಂದ ತೆಗೆಯಬೇಕು,ಮತ್ತು ಐ.ಪಿ.ಎಸ್ ಕೋಡ್ ಪ್ರಕಾರ ಕೇಸು ದಾಖಲಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಮುಖೇನ ಮಾನ್ಯ ಮುಖ್ಯಮಂತ್ರಿಯವರಿಗೆ ಖಂಡನಾ ನಿರ್ಣಯವನ್ನು ಅರ್ಪಿಸುತ್ತೇವೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ದರ್ಗಾ ವಠಾರದಲ್ಲಿ ನಡೆದ ಖಂಡನಾ ಸಭೆಯಲ್ಲಿ ಹೇಳಿದರು. ದರ್ಗಾ ಸಮಿತಿ ಸದಸ್ಯರಾದ ಫಾರೂಕ್ ಉಳ್ಳಾಲ್ ಮಾತನಾಡಿ ಸುವರ್ಣ ಚಾನೆಲ್ ನಿರೂಪಕ ಅಜಿತ್ ಅವರು ಇಸ್ಲಾಮ್ ಮತ್ತು ಮುಸ್ಲಿಮರ ಜೀವಕ್ಕಿಂತಲೂ ಹೆಚ್ಚು ಮೌಲ್ಯಯುತವಾದ ಜೀವನವನ್ನು ನಡೆಸಿದಂತಹ ನಮ್ಮೆಲ್ಲರ ಪ್ರವಾದಿವರ್ಯರನ್ನು ಬಹಳ ತುಚ್ಚ ಪದ ಬಳಸಿದಕ್ಕೆ ನಾವು ಅತ್ಯಂತ ಕಟು ಶಬ್ದದಿಂದ ಖಂಡನೆ ಮಾಡುತ್ತಿದ್ದೇವೆ ಎಂದರು. ಮದನಿ ದರ್ಗಾ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ತ್ವಾಹ,…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಲಿಂಗತ್ವ ಸೂಕ್ಷತಾ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಡುಗಳು ಮತ್ತು ಕಿರುಚಿತ್ರಗಳ ಮೂಲಕ ಲಿಂಗತ್ವ ಸೂಕ್ಷ್ಮತಾ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು.
UN NETWORKS ಬೋಳಿಯಾರು: ಗ್ರಾಮದ ಧರ್ಮನಗರ ಬರಡು ಭೂಮಿಯಾಗಿದ್ದು, ಕ್ರೈಸ್ತರು ವಾಸ ಆರಂಭಿಸಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದರಿಂದ ಇಂದು ಕೃಷಿಯ ಕರ್ಮಭೂಮಿ ಎನಿಸಿದೆ ಎಂದು ಬೋಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಆಚಾರ್ಯ ಅಭಿಪ್ರಾಯಪಟ್ಟರು. ಜಿಲ್ಲಾ ಪಂಚಾಯಿತಿ ಮತ್ತು ಮಂಗಳೂರು ಕೃಷಿ ಇಲಾಖೆಯ 2018-19ನೇ ಸಾಲಿನ ಆತ್ಮ ಯೋಜನೆಯಡಿ ಬೋಳಿಯಾರು ಗ್ರಾಮದ ಧರ್ಮನಗರದ ಕೃಷಿಕ ವಿನ್ಸೆಂಟ್ ಡಿಸೋಜ ಅವರ ಮನೆಯಂಗಳದಲ್ಲಿ ಶುಕ್ರವಾರ ನಡೆದ `ಕಿಸಾನ್ ಗೋಷ್ಠಿ’ಯ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿಗೆ ಇರುವ ಅನುದಾನಗಳ ಮಾಹಿತಿ ಸಂಗ್ರಹಿಸಲು ಯಾರಿಗೂ ಸಮಯವಿಲ್ಲದ ಕಾರಣ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕೃಷಿಕರು ಮಾಹಿತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸವಲತ್ತುಗಳನ್ನು ಪಡೆಯಬೇಕಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೃಷಿಗೆ ಸಾಕಷ್ಟು ಅವಕಾಶವಿದ್ದು ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಕೃಷಿ ಇಲಾಖೆಯ ಅಬ್ದುಲ್ ಬಶೀರ್ ಮಾತನಾಡಿ, ಕೃಷಿ ಎಂದರೆ ಲಾಭದಾಯಕವಲ್ಲ ಎನ್ನುವ ಭಾವನೆ ರೈತರಲ್ಲಿದೆ. ಇದೇ ಮನೋಭಾನೆಯಲ್ಲಿ ಪೋಷಕರಿಗೆ ಕೃಷಿ ಕೆಲಸ ಎನ್ನುವುದನ್ನೂ ಹೇಳಲು ಮಕ್ಕಳು ನಾಚಿಕೆ ಪಡುತ್ತಿದ್ದಾರೆ.…

