ಮಂಗಳೂರು: ಕರಾವಳಿ ಉತ್ಸವ-2018 ರ ಅಂಗವಾಗಿ ಕರಾವಳಿ ಯುವ ಉತ್ಸವದ ಪ್ರಯುಕ್ತ ರಥಬೀದಿ ಸರಕಾರಿ ಕಾಲೇಜಿನಲ್ಲಿ ನಡೆದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಮಂಗಳೂರು ಸಂತ ಆನ್ಸ್ ಕಾಲೇಜು ಇದರ ಬಿ.ಎಡ್ ವಿದ್ಯಾರ್ಥಿನಿ ವಿನುತಾ ಕೆ. ಗಟ್ಟಿ ಇವರು ಪ್ರಥಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. `ಕರಾವಳಿಯ ಯುವಜನತೆ ಅಂದು-ಇಂದು-ಮುಂದು’ ಎಂಬ ವಿಚಾರದಲ್ಲಿ ನಡೆಸಿದ ಭಾಷಣಕ್ಕೆ ಪ್ರಥಮ ಪ್ರಶಸ್ತಿ ದೊರೆತಿದೆ. ಕೈರಂಗಳ ನಿವಾಸಿಯಾಗಿರುವ ಇವರು ಅದ್ಭುತ ಯಕ್ಷಗಾನ ಕಲಾವಿದೆಯಾಗಿದ್ದು, ಬಯೋಸಾಯನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ.
Author: UllalaVani
UN NETWORKS ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಭಾರತಿ ರಾಘವ ಗಟ್ಟಿ ಕೋಟೆಕಾರು ಇವರು 11 ಸದಸ್ಯರ ಮತ್ತು ಒಂದು ಸಂಸದರ ಮತ ಸೇರಿ ಒಟ್ಟು 12 ಮತಗಳಿಂದ ಆಯ್ಕೆಯಾಗಿದ್ದಾರೆ. ಎದುರಾಳಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ 5 ಮತಗಳನ್ನು ಪಡೆದುಕೊಂಡಿದ್ದಾರೆ. ಕೋಟೆಕಾರು ಪ.ಪಂ ಎರಡೂವರೆ ವರ್ಷದ ಅಧ್ಯಕ್ಷ-ಉಪಾಧ್ಯಕ್ಷ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕಟಗೊಂಡಿತ್ತು. ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷಕ್ಕೆ ಸಾಮಾನ್ಯ ಮಹಿಳೆ ಆದೇಶ ಬಂದಿತ್ತು. ಆದರೆ ಅಧ್ಯಕ್ಷರ ಹುದ್ದೆಗೆ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳು ಇಲ್ಲದಿರುವುದರಿಂದ ಶನಿವಾರ ಉಪಾಧ್ಯಕ್ಷ ಹುದ್ದೆಗೆ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾರತಿ ರಾಘವ ಗಟ್ಟಿ ಇವರು 9 ಬಿಜೆಪಿ, 2 ಪಕ್ಷೇತರ ಮತ್ತು ಒಂದು ಸಂಸದರು ಸೇರಿದಂತೆ 12 ಮತಗಳನ್ನು ಪಡೆದುಕೊಂಡರು. ಎದುರಾಳಿ ಕಾಂಗ್ರೆಸ್ ಬೆಂಬಲಿತ ಸುಮತಿ 5 ಮತಗಳನ್ನು ಮಾತ್ರ ಪಡೆದುಕೊಂಡರು. ಒಟ್ಟು 17 ಮಂದಿ ಸದಸ್ಯರಿರುವ ಪಟ್ಟಣ ಪಂಚಾಯಿತಿ ಆಡಳಿತದಲ್ಲಿ 9 ಬಿಜೆಪಿ, 2…
UN NETWORKS ಕಣಚೂರು: ದಾದಿಯರು ಎಂದರೆ ಶ್ರೇಷ್ಟ ಜೀವದಾನಿಗಳು, ಸಂಸಾರದೊಂದಿಗೆ ಹೆಚ್ಚುಕಾಲ ಇರಲಾರದೆ ಸಮಾಜದಲ್ಲಿ ಬಾಳುತ್ತಾ ತ್ಯಾಗಮಯಿಗಳಾಗಿದ್ದಾರೆ ಎಂದು ನಾಟೆಕಲ್ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು ಅಭಿಪ್ರಾಯ ಪಟ್ಟರು. ನಾಟೆಕಲ್ ಕಣಚೂರು ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಆಶ್ರಯದಲ್ಲಿ ಬಿ.ಎಸ್ಸಿ ನರ್ಸಿಂಗ್ ನ ಮೂರನೇ ಬ್ಯಾಚ್ ಆಯೋಜಿಸಿದ್ದ ಲ್ಯಾಂಪ್ ಲೈಟಿಂಗ್ ಆಂಡ್ ಓಥ್ ಟೇಕಿಂಗ್ ಸೆರೆಮನಿ ಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.ದಾದಿಯರ ನಡೆಸುವ ಕರ್ತವ್ಯ ಒಂದು ಸೇವೆಯೇ ಆಗಿದೆ. ಆದರೂ ಪದವಿ ಮುಗಿಸಿದ ತಕ್ಷಣ ಪರಿಣತರಾಗಲು ಅಸಾಧ್ಯ. ಕರ್ತವ್ಯದಲ್ಲೇ ಹೆಚ್ಚುಕಾಲ ತೊಡಗುತ್ತಾ ಸೂಕ್ಷ್ಮತೆಗಳನ್ನು ಅರಿಯುವ ಮೂಲಕ ಪರಿಣತರಾಗಬಹುದು. ಕರ್ತವ್ಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದರು. ವಿದ್ಯಾರ್ಥಿಗಳಿಗೆ ಲ್ಯಾಂಪ್ ಲೈಟಿಂಗ್ ನಡೆಸಿಕೊಟ್ಟ ಕುಲಶೇಖರ ಯುನಿಟಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ.ಜಿ ಮಾತನಾಡಿ, ಇನ್ನೊಬ್ಬರನ್ನು ಬೆಳೆಸುವ ಸಾಮಥ್ರ್ಯ ಇರುವವರು ನಾಯಕರಾಗುತ್ತಾರೆ. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ನೀಡುತ್ತಾ ಮುಂದುವರಿಯಬೇಕಿದೆ. ರೋಗಿಗಳಲ್ಲಿ ಆತ್ಮವಿಶ್ವಾಸ, ದಯೆಯ ವರ್ತನೆ ಹಾಗೂ ವಿಶ್ವಾಸವನ್ನು ತುಂಬಿಸುವ ಮೂಲಕ ಗುಣಮುಖರಾಗಿಸುವಲ್ಲಿ ದಾದಿಯರ…
UN NETWORKS ಕಿನ್ಯ: ಧಾರ್ಮಿಕ ವಿಚಾರದಲ್ಲಿ ಭಿನ್ನತೆ ಕಲ್ಪಿಸದೇ ಆಚಾರ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ಫೇಸ್‍ಬುಕ್ ವಾಟ್ಸಾಪ್ ಇಸ್ಲಾಂನ ಮೂಲವಲ್ಲ ಎಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಹೇಳಿದರು. ಅವರು ಬುಖಾರಿ ಜುಮಾ ಮಸಿದಿ ಬದ್ರಿಯಾ ನಗರ ಕಿನ್ಯ ಇದರ ಆಶ್ರಯದಲ್ಲಿ ಗುರುವಾರ ನಡೆದ ದ್ಸಿಕ್ರ್ ಮತ್ತು ಮುಹ್ಯಿದ್ದೀನ್ ರಾತೀಬ್ ಕಾರ್ಯಕ್ರಮದಲ್ಲಿ ಉದ್ಭೋದನೆ ಭಾಷಣ ಮಾಡಿದರು.ಸಯ್ಯಿದ್ ಸೈದಲವಿ ತಂಙಳ್ ಕಿನ್ಯ ದುವಾ ನೆರವೇರಿಸಿದರು. ಬುಖಾರಿ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬುಖಾರಿ ಮಸೀದಿಯ ಖತೀಬ್ ಉಸ್ಮಾನ್ ಸಖಾಫಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಅಬ್ಬಾಸ್ ಹಾಜಿ ನಾಟೆಕಲ್, ಕೆಎಸ್ ಅಹ್ಮದ್ ಕುಂಞ , ಅಶ್ರಫ್ ಹಾಜಿ ಮದೀನ, ಕಿನ್ಯ ಗ್ರಾ.ಪಂ. ಸದಸ್ಯ ಫಾರೂಕ್, ಉಪಾಧ್ಯಕ್ಷ ಸಿರಾಜುದ್ದೀನ್, ಇಸ್ಮಾಯಿಲ್ ಕಿನ್ಯ, ಮೂಸಾ ಕಿನ್ಯ ಉಪಸ್ಥಿತರಿದ್ದರು. ಕೆ.ಎಚ್. ಇಸ್ಮಾಯಿಲ್ ಸಅದಿ ಸ್ವಾಗತಿಸಿದರು. ಅಬ್ಬಾಸ್ ಹಾಜಿ ವಂದಿಸಿದರು.
UN NETWORKS ಮಂಗಳೂರು: ನಗರದ ಹೊರವಲಯ ತೋಟಬೆಂಗ್ರೆ ಬಳಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಮೊಗವೀರಪಟ್ನ ನಿವಾಸಿ ವಿಜಿತ್ ಯಾನೆ ಶಿವರಾಜ್‌ಕುಮಾರ್ (26) ಮತ್ತು ತೋಟಬೆಂಗ್ರೆ ನಿವಾಸಿ ಶ್ರಾವಣ್ ಯಾನೆ ಚಾನು (24) ಬಂಧಿತ ಆರೋಪಿಗಳು.ಡಿ.19ರಂದು ರಾತ್ರಿ 2:30ರ ವೇಳೆಗೆ ಪಣಂಬೂರು ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದು ತೋಟಬೆಂಗ್ರೆಯ ಸರಕಾರಿ ಶಾಲೆಯ ಬಳಿ ತಲುಪಿದಾಗ ಆರೋಪಿಗಳಾದ ವಿಜೀತ್, ರಮೀತ್, ಶ್ರಾವಣ್, ಆಕಾಶ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ, ಸಮವಸ್ತ್ರದಲ್ಲಿದ್ದವರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ.ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಂಗ ಬಂಧನ: ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ವಿಜಿತ್ ಮತ್ತು ಶ್ರಾವಣ್ ಎಂಬ ಆರೋಪಿಗಳನ್ನು ಡಿ.21ರಂದು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.ದಸ್ತಗಿರಿಯಾದ ವಿಜಿತ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿಶೀಟರ್ ತೆರೆಯಲಾಗಿದ್ದು, ಈತನ ವಿರುದ್ಧ…
UN NETWORKS ಉಳ್ಳಾಲ: ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾಲದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಫ್ರೌಢಶಾಲೆಯ ವಾರ್ಷಿಕೋತ್ಸವನ್ನು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‍ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೇಂದ್ರ ಜುಮಾ ಮಸ್ಜಿದ್‍ನ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ ಬಹುಮಾನ ವಿತರಿಸಿದರು. ಉಪಾಧ್ಯಕ್ಷ ಇಸ್ಮಾಯಿಲ್ ಮೋನು ರವಿವರ್ಮ ಚಿತ್ರ ಸಂಸ್ಥೆ ಮತ್ತು ಪ್ರಗತಿ ಪರ ಸೇವಾ ಸಂಸ್ಥೆಯ ಸ್ಪರ್ಧಾ ಬಹುಮಾನಗಳನ್ನು ವಿತರಿಸಿದರು. ಜೀವ ವಿಮಾ ಸಂಸ್ಥೆಯವರು ವಿದ್ಯಾರ್ಥಿಗಳ ಕಲಿಕೆಗಾಗಿ ನೀಡಿದ ಬಹುಮಾನಗಳನ್ನು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ವಿತರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‍ನ ಉಪಾಧ್ಯಕ್ಷ ಮೋನು ಇಸ್ಮಾಯಿಲ್ ರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಶಿಕ್ಷಣಾಧಿಕಾರಿ ಜ್ಞಾನೇಶ್, ಉಳ್ಳಾಲ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷರುಗಳಾದ ಮುಸ್ತಫಾ ಅಬ್ದುಲ್ಲಾ ಮತ್ತು ಯು.…
UN NETWORKS ಕೋಟೆಕಾರು: ಬಸ್- ಬೈಕ್ ಅಪಘಾತದಲ್ಲಿ ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಕೋಟೆಕಾರು ನೂರ್ ಮಹಲ್ ಸಭಾಂಗಣದ ಎದುರುಗಡೆ ಇಂದು ಮಧ್ಯಾಹ್ನ ಸಂಭವಿಸಿದೆ. ಕೋಟೆಕಾರು ನಿವಾಸಿ ಮೋಹನ್ ಗಾಯಗೊಂಡವರು. ತಲಪಾಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸು ಪ್ರಯಾಣಿಕರನ್ನು ಹತ್ತಿಸಲೆಂದು ಹಠಾತ್ ಆಗಿ ನಿಲ್ಲಿಸಿದಾಗ ಹಿಂಬದಿಯಿಂದ ತೊಕ್ಕೊಟ್ಟು ಭಾಗಕ್ಕೆ ತೆರಳುತ್ತಿದ್ದ ಬೈಕ್ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಗಾಯಾಳು ಮೋಹನ್ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
UN NETWORKS ಕೊಂಚಾಡಿ: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಕಲಾಮಂಡಳಿ ಹನುಮಗಿರಿ ಇವರು ಶ್ರೀ ದೇವಿ ಲಲಿತೋಪಾಖ್ಯಾನ ಕಾಲಮಿತಿ ಯಕ್ಷಗಾನ ಬಯಲಾಟ ಡಿ.28 ಶುಕ್ರವಾರ ಸಂಜೆ 6ಗಂಟೆಗೆ ದೇರೆಬೈಲು ಕೊಂಚಾಡಿ ಶ್ರೀ ದುರ್ಗಾ ಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ರಂಗಮಂಟಪದಲ್ಲಿ ನಡೆಯಲಿದೆ.
UN NETWORKS ಅಂಬ್ಲಮೊಗರು:ಇಂದು ಸುಂದರ ಹೆಸರಿಟ್ಟುಕೊಂಡಿರುವವರು ಧರ್ಮಕ್ಕೆ ಸೇವೆ ಸಲ್ಲಿಸುವ ಬದಲು ಕಂಟಕರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಧಾರ್ಮಿಕ ಹೆಸರಿಟ್ಟುಕೊಂಡಿರುವ ಸಂಘಟಕರು ಜನರನ್ನು ಧರ್ಮದ ದಾರಿ ತೋರಿಸುವ ಕಾರ್ಯ ನಿರಂತರ ಹಮ್ಮಿಕೊಳ್ಳಬೇಕಿದೆ ಎಂದು ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ಅಭಿಪ್ರಾಯಪಟ್ಟರು. ಅಂಬ್ಲಮೊಗರು ಗ್ರಾಮದ ಕುಂಡೂರು ಜುಮಾ ಮಸೀದಿಯ ಅಂಗಸಂಸ್ಥೆ ನುಸ್ರತುಲ್ ಇಸ್ಲಾಂ ಸಮಿತಿಯ 40ನೇ ವಾರ್ಷಿಕೋತ್ಸವ ಪ್ರಯುಕ್ತ ಮಸೀದಿಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸ್ಮರಣ ಸಂಚಿಕೆ `ನುಸ್ರತ್’ ಬಿಡುಗಡೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಾತನಾಡಿ, ಮನುಷ್ಯ ಪರಸ್ಪರ ನಿಂದನೆ ಮಾಡಿಕೊಂಡು ಜೀವನ ಸಾಗಿಸಬಹುದು, ಆದರೆ ಇಸ್ಲಾಂ ಧರ್ಮದಲ್ಲಿ ಎಲ್ಲೂ ನಿಂದನೆಗೆ ಅವಕಾಶವಿಲ್ಲ. ಇದನ್ನು ಮನದಲ್ಲಿಟ್ಟುಕೊಂಡು ಸಮಾಜದಲ್ಲಿ ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸಬೇಕಿದೆ. ಕಳೆದ 40 ವರ್ಷಗಳಿಂದ ನುಸ್ರತುಲ್ ಇಸ್ಲಾಂ ಸಮಿತಿ ಗ್ರಾಮದಲ್ಲಿ ಕಟ್ಟಕಡೆಯ ಜನರಿಗೂ ಅನುಕೂಲವಾಗು ವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿರಂತರ ಮುಂದುವರಿಯಲಿ ಎಂದು ಆಶಿಸಿದರು. ಅಬುದಾಭಿ ಬ್ರಿಟಿಷ್ ಅಂತರಾಷ್ಟ್ರೀಯ…
UN NETWORKS ಕೊಣಾಜೆ: ಕೃಷಿ ವೃತ್ತಿ ಅವಗಣನೆಗೆ ಒಳಪಟ್ಟು ಗ್ರಾಮದ ರೈತರ ಕೃಷಿಭೂಮಿಗಳು ಹಡೀಲು ಬಿದ್ದು ನಿಷ್ಪ್ರಯೋಜಕವಾಗುತ್ತಿರುವುದು, ನಮ್ಮ ದೇಶದ ದುರಂತ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ನಡೆ ರೈತರ ಹಡಿಲುಭೂಮಿಯ ಕಡೆ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದೆರಡು ವರ್ಷಗಳಿಂದ ಮಂಗಳೂರು ರಥಬೀದಿಯ ರಾಷ್ಟ್ರೀಯ ಸೇವಾ ಯೋಜನಾ ವಿದ್ಯಾರ್ಥಿಗಳು ಸ್ವ-ಇಚ್ಛೆಯಿಂದ ಕೃಷಿ ಕಾರ್ಯದಲ್ಲಿ ಅರಿವು ಪಡೆದುಕೊಳ್ಳುತ್ತಿರುವುದರೊಂದಿಗೆ ರೈತರ ಹಡಿಲು ಭೂಮಿಯಲ್ಲಿ ಕೃಷಿಯೋಗ್ಯವಾಗಿಸುವ ಮೂಲಕ ಮೂರು ವರ್ಷಗಳ ವರೆಗೆ ದತ್ತು ತೆಗೆದುಕೊಂಡು ಸಾವಯಾವ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದಿರುವುದು ಶ್ಲಾಘನೀಯ ಎಂದು ಶ್ಯಾನುಭೋಗರ ಮನೆ ಕೊಣಾಜೆ ಇಲ್ಲಿನ ಪ್ರಗತಿಪರ ಕೃಷಿಕ ಸುದರ್ಶನ ಭಟ್ ಅಭಿಪ್ರಾಯಪಟ್ಟರು. ಅವರು ತುಳು ಸಾಹಿತ್ಯ ಅಕಾಡೆಮಿ ಮತ್ತು ಡಾ.ಪಿ.ದಯಾನಂದ ಪೈ, ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ನಡೆದ `ತುಳುವ ಬಂಗಾರ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾಟ್ಯನಿಕೇತನ ಉಳ್ಳಾಲ ಇದರ ನಿರ್ದೇಶಕಿ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ರಾಜಶ್ರೀ ಉಳ್ಳಾಲ್…

