Author: UllalaVani

Kannada News From Coastal Karnataka

UN NETWORKS ಕೊಣಾಜೆ: ಕ್ರೀಡೆಗೆ ಇಂದು ಬಹಳಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಕ್ರೀಡಾಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಶಿಸ್ತು ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ ಎಂದು ಅಂತರಾಷ್ಟ್ರೀಯ ವಾಲಿಬಾಲ್ ತರಬೇತುದಾರರಾದ ನಾರಾಯಣ ಆಳ್ವ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮೈದಾನದಲ್ಲಿ ಸೋಮವಾರ ಮಂಗಳೂರು ವಲಯಮಟ್ಟದ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ ಹಾಗೂ ಶ್ರೀ ಪಟೇಲ್ ಸೌಕೂರು ಅನಂತಯ್ಯ ಶೆಟ್ಟಿ ಮೆಮೋರಿಯಲ್ ಟ್ರೋಫಿ(ಅಂತರ್‍ವಲಯ) ವಾಲಿಬಾಲ್ ಪಂದ್ಯಾಟದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯಗಳು ಏರ್ಪಡಿಸುವ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು. ಖಾಸಗಿ ಪಂದ್ಯಾಟಗಳಲ್ಲಿ ಹೆಚ್ಚಿನ ನಗದು ಸಿಗಬಹುದು ಅಷ್ಟೆ. ಆದರೆ ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಗೆದ್ದರೆ ಕೀರ್ತಿಯೊ0ದಿಗೆ ನಮ್ಮ ಹೆಸರನ್ನು ಶಾಶ್ವತವಾಗಿ ನೆನಪಿಸುವಂತಹ ಕಾರ್ಯ ಆಗುತ್ತದೆ ಎಂದರು. ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಈಶ್ವರ ಪಿ. ಅವರು, ಮಂಗಳೂರು ವಿಶ್ವವಿದ್ಯಾಲಯವು ಕಳೆದ ಹಲವಾರು ವರ್ಷಗಳಿಂದ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಪರಿಣಾಮ ಅಥ್ಲೆಟಿಕ್ ಹಾಗೂ ಇನ್ನಿತರ…

Read More

UN NETWORKS ಉಳ್ಳಾಲ: ಮುನ್ನೂರು ಗ್ರಾಮ ವ್ಯಾಪ್ತಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಜನ ತೊಂದರೆಗೊಳಗಾಗುತ್ತಿದ್ದಾರೆ. ಪ್ರಮುಖ ಕುತ್ತಾರು ಜಂಕ್ಷನ್ನಿನಲ್ಲಿ ದಿನನಿತ್ಯ ಮೂಗು ಮುಚ್ಚಿಕೊಂಡು ಹೋಗುವ ವಾತಾವರಣ ನಿರ್ಮಾಣವಾಗಿದೆ. ಹಲವು ಗ್ರಾಮಸಭೆಯಲ್ಲಿ ಚರಂಡಿ ವ್ಯವಸ್ಥೆ ಕುರಿತು ಚರ್ಚಿಸಿದರೂ ಸೂಕ್ತ ಕ್ರಮ ಇನ್ನೂ ಜಾರಿಯಾಗಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂತು. ಸುಭಾಷನಗರದ ಸಮುದಾಯಭವನದಲ್ಲಿ ಶುಕ್ರವಾರ ಜರಗಿದ ಮುನ್ನೂರು ಗ್ರಾಮ ಪಂಚಾಯಿತಿಯ 2018-19 ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ಗ್ರಾಮದ ಸಮಸ್ಯೆಯ ವಿಚಾರಗಳು ಪ್ರಸ್ತಾಪವಾಯಿತು.ಕುತ್ತಾರು ಭಾಗದಲ್ಲಿ ವಸತಿ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿನಿಂತಿವೆ. ಆದರೆ ಕಟ್ಟಡ ಹೊಂದಿರುವವರು ಚರಂಡಿ ಸಂಸ್ಕರಣಾ ಘಟಕವನ್ನು ನಿರ್ಮಿಸದೆ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಡುವಂತಹ ಕೆಲಸಗಳಾಗುತ್ತಿವೆ. ಇದರಿಂದ ಕುತ್ತಾರು ಜಂಕ್ಷನ್ ಇಡೀ ದುರ್ನಾತ ಬೀರುತ್ತಿದೆ. ಸಂತೋಷನಗರ ವ್ಯಾಪ್ತಿಯಲ್ಲಿ ಮನೆಗಳ ಚರಂಡಿ ನೀರು ಹರಿಯಲು ಸರಿಯಾದ ಜಾಗವಿಲ್ಲದೆ, ಸಾರ್ವಜನಿಕ ರಸ್ತೆಯಲ್ಲೇ ಹರಿಯುತ್ತಿದೆ. ಗ್ರಾಮಕ್ಕೆ ಚರಂಡಿ ಅವ್ಯವಸ್ಥೆ ಗಂಭೀರ ಸಮಸ್ಯೆಯಾಗಿದೆ. ಗ್ರಾಮಸಭೆಗಳಲ್ಲಿ ನಿರ್ಣಯ ಕೈಗೊಂಡರೂ ಸೂಕ್ತ ಚರಂಡಿ ವ್ಯವಸ್ಥೆ ಅನುಷ್ಠಾನವಾಗಿಲ್ಲ ಅನ್ನುವ ಗ್ರಾಮಸ್ಥ ಕಿಶೋರ್…

Read More

UN NETWORKS ಮುಡಿಪು: ಮುಡಿಪಿನ ಕುರ್ನಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕ್ರಿಕೆಟ್ ಲೀಗ್ ಪಂದ್ಯ ನಡೆಯಿತು. ದೈಹಿಕ ಶಿಕ್ಷಕ ವಿಠ್ಠಲ್ ನಾಯಕ್ ಮಾತನಾಡಿ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಪಟುಗಳಿಗೆ ನಿರಂತರವಾಗಿ ತಮ್ಮನ್ನು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ಇತರ ಕ್ರೀಡೆಗಳಾದ ಕಬ್ಬಡಿ, ವಾಲಿಬಾಲ್, ತ್ರೋಬಾಲ್ ಲೀಗ್ ಪಂದ್ಯವನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ಮಾತನಾಡಿ ತಮ್ಮ ಕಾಲೇಜಿನ ದಿನಗಳ ಕ್ರೀಡಾಸಕ್ತಿ ಮತ್ತು ಅಂತರಾಷ್ಟ್ರೀಯ ಕ್ರೀಡೆಯಾದ ಕ್ರಿಕೆಟ್‍ನಂತೆ ಇತರೆ ಗೇಮ್ಸ್‍ನ್ನು ಪ್ರೋತ್ಸಾಹಿಸುವಂತೆ ತಿಳಿಸಿದರು. ಕಾರ್ಯಕ್ರಮ ಸಂಯೋಜಕಿ ಶುಭ ಕೆ.ಎಚ್. ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಮಹಮ್ಮದ್ ಮೆರ್‍ಜೂಕ್ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಮನ್ಸೂರ್ ಸ್ವಾಗತಿಸಿದರು. ಮಹಮ್ಮದ್ ತ್ವಾಹಿರ್ ಇಕ್ಬಾಲ್ ವಂದಿಸಿದರು.

Read More

UN NETWORKS ಉಳ್ಳಾಲ: ಕಲೆಗೆ ಮಂತ್ರ ನಾಟ್ಯಕಲಾ ಗುರುಕುಲದ ಕೊಡುಗೆ ಅಪಾರ, ದೇವರ ಅನುಗ್ರಹದಿಂದ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶಾಂತಲಾ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು. ಅವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೋಮವಾರ ನಡೆದ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಇದರ ಆರನೇ ವರ್ಷದ ಗುರುಕುಲ ಉತ್ಸವಕ್ಕೆ ಚಾಲನೆ ಮತ್ತು ಕಥಕ್ ಕಲಾವಿದೆ ಸಂಗೀತ ನಾಟಕ್ ಅಕಾಡೆಮಿ ಪುರಸ್ಕೃತೆ ಉಮಾ ದೋಗ್ರ ಇವರಿಗೆ ನಾಟ್ಯ ಮಾಂತ್ರಿಕ ಬಿರುದು ಪ್ರಧಾನ ಮಾಡಿ ಮಾತನಾಡಿದರು. ನಾಟ್ಯ ಮಾಂತ್ರಿಕ ಬಿರುದು ಪಡೆದ ಕಥಕ್ ಕಲಾವಿದೆ ಉಮಾ ದೋಗ್ರಾ ಮಾತನಾಡಿ ಬಡ ಕುಟುಂಬದಿಂದ ಬಂದಾಕೆ. ಎಂಟು ಮಕ್ಕಳಿದ್ದರೂ ಹೆತ್ತವರು ಕಲೆ ಮತ್ತು ಶಿಕ್ಷಣದ ಕೊರತೆ ಮಾಡದೇ ಇರುವುದರಿಂದ ಇಂದು ರಾಷ್ಟ್ರಪತಿಯಿಂದ ಸನ್ಮಾನ ಸ್ವೀಕರಿಸಿದ್ದೇನೆ ಅನ್ನುವ ಹೆಮ್ಮೆಯಿದೆ. ಶ್ರಮ ವಹಿಸಿದಲ್ಲಿ ಯಶಸ್ಸು ಖಂಡಿತ. ಕನಸುಗಳನ್ನು ಬಿಟ್ಟುಕೊಡದಿರಿ. ಹೃದಯಾಂತರಾಳದ ಪ್ರೀತಿ ಮತ್ತು ಗೌರವವನ್ನು ಮಂತ್ರ ನಾಟ್ಯಕಲಾ ಗುರುಕುಲ ನೀಡಿದೆ ಎಂದರು. ಇದೇ ಸಂದರ್ಭ…

Read More

UN NETWORKS ಕೊಣಾಜೆ: ಪಟ್ಟೋರಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ(ರಿ)ಇದರ ಆಶ್ರಯದಲ್ಲಿ ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದುರ್ಗಾಪೂಜೆ ಮತ್ತು 38ನೇ ವರ್ಷದ ಏಕಹಾ ಭಜನೆಯು ನಡೆಯಿತು. ಶನಿವಾರ ಸೂರ್ಯೋದಯಕ್ಕೆ ನಡೆದ ಏಕಾಹ ಭಜನೆಯ ದೀಪಪ್ರಜ್ವಲನೆಯನ್ನು ಕೊಣಾಜೆ ಬೀಡು ತಿರುಮಲೇಶ್ವರ್ ಭಟ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಘುರಾಮ ಕಾಜವ ಪಟ್ಟೋರಿ, ಭಜನಾ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಕಲಾಯಿ, ಕಾರ್ಯದರ್ಶಿ ಮೋಹನ್ ಕಾಟುಕೋಡಿ ಹಾಗೂ ನಾಗಬ್ರಹ್ಮ ಭಜನಾ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಶುಕ್ರವಾರದಂದು ಸಂಜೆ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದುರ್ಗಾ ಪೂಜೆಯು ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯಿತು.

Read More

UN NETWORKS ದೇರಳಕಟ್ಟೆ: ತಂತುಕೋಶಗಳಲ್ಲಿರುವ ನ್ಯೂನ್ಯತೆಗಳನ್ನು ಪತ್ತೆಹಚ್ಚುವ ಸಲುವಾಗಿ ಹಲವು ರೀತಿಯ ಸಂಶೋಧನೆಗಳು ನಡೆಯುತ್ತಿದೆ. ನೋವು ಕಂಡುಬರುವ ತಂತುಕೋಶವನ್ನು ಪತ್ತೆಹಚ್ಚಲು ಆಧುನಿಕ ತಂತ್ರಜ್ಞಾನಗಳಿಂದ ಸಾಧ್ಯ ಎಂದು ಫಿಲಿಪೇನ್ಸ್ ಮನಿಲಾದ ಸ್ಯಾಂಟೋ ಟೊಮಸ್ ವಿ.ವಿ. ಯ ಡಾ. ವೆಲೆಂಟಿನ್ ಸಿ ಡೋನ್ಸ್111 ಅಭಿಪ್ರಾಯಪಟ್ಟರು. ಇಂಡಿಯನ್ ಎಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ಸ್, ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಜಂಟಿ ಆಶ್ರಯದಲ್ಲಿ ಚಿಂತನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಜನತೆ ತಂತುಕೋಶಗಳ ಕುರಿತು ಹೆಚ್ಚು ಗಮನ ಹರಿಸುತ್ತಿಲ್ಲ. ಬೆನ್ನು, ಕುತ್ತಿಗೆ, ಮಾಂಸ ಖಂಡ ಎಲುಬಿನಲ್ಲಿ ನೋವು ಕಂಡು ಚಿಕಿತ್ಸೆ ಪಡೆಯುತ್ತಾರೆ. ಆದರೆ ವಾಸ್ತವವಾಗಿ ತಂತುಕೋಶಗಳಲ್ಲಿರುವ ದೋಷವನ್ನು ಪರಿಹರಿಸಲು ಚಿಕಿತ್ಸೆ ಪಡೆದುಕೊಂಡರೆ ನೋವು ನಿವಾರಣೆ ಸಾಧ್ಯ. ಕಾಲಿನಡಿಯ ತಂತುಕೋಶದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ತಂತುಕೋಶಗಳಲ್ಲಿನ ದೋಷಗಳನ್ನು ಕಂಡುಹಿಡಿಯಲು ಅಲ್ಟ್ರಾಸೌಂಡ್ ವಿಧಾನಗಳು ಕಾರ್ಯಚರಿಸುತ್ತಿದೆ. ಇನ್ನೂ ಪರಿಣಾಮಕಾರಿಯಾಗಿ ಅರಿಯಲು ಹೆಚ್ಚಿನ ಸಂಶೋಧನೆಗಳು ಮುಂದುವರಿದಿದೆ ಎಂದು ನುಡಿದರು. ಕಾರ್ಯಕ್ರಮಕ್ಕೆ ಚಾಲನೆ…

Read More

UN NETWORKS ತಲಪಾಡಿ: ಶಾರ್ಟ್ ಸರ್ಕ್ಯುಟ್‍ನಿಂದಾಗಿ ಚಲಿಸುತ್ತಿದ್ದ ಗ್ಯಾಸ್ ತುಂಬಿದ ಬುಲೆಟ್ ಟ್ಯಾಂಕರಿನ ಚಾಲನಾ ಕ್ಯಾಬಿನ್‍ನಲ್ಲಿ ಬೆಂಕಿ ಹತ್ತಿಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ರಾ.ಹೆ. 66ರ ತಲಪಾಡಿ ಸಮೀಪದ ಕೆ.ಸಿ. ರೋಡ್ ಜಂಕ್ಷನ್‍ನಲ್ಲಿ ಬುಧವಾರ ಸಂಜೆ ನಡೆದಿದೆ. ಮಂಗಳೂರಿನಿಂದ ಕೇರಳದ ಕೊಯಮತ್ತೂರಿನ ಕಡೆಗೆ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್‍ನ ಮುಂಭಾಗದ ಕ್ಯಾಬಿನ್‍ನಲ್ಲಿ ಶಾರ್ಟ್ ಸರ್ಕ್ಯುಟ್‍ನಿಂದಾಗಿ ಬೆಂಕಿ ಹತ್ತಿಕೊಂಡಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಬೆಂಕಿಯನ್ನು ಕಂಡು ಬೊಬ್ಬೆ ಹೊಡೆದಿದ್ದಾರೆ. ತಕ್ಷಣ ಜಾಗೃತರಾದ ಟ್ಯಾಂಕರ್ ಚಾಲಕ ಕೃಷ್ಣಮೂರ್ತಿ ಅವರು ಚಾಲನೆಯಲ್ಲೇ ಬೆಂಕಿ ನಂದಿಸಿ ಟ್ಯಾಂಕರನ್ನು ಬದಿಗೆ ನಿಲ್ಲಿಸಿ ಕ್ಯಾಬಿನ್ ಒಳಗಿದ್ದ ಅಡುಗೆ ತಯಾರಿಯ ಗ್ಯಾಸ್ ಸಿಲಿಂಡರನ್ನು ಹೊರಗಡೆ ಎಸೆದು ಸಮಯ ಪ್ರಜ್ನೆ ಮೆರೆದಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಲು ಚಾಲಕನಿಗೆ ಸಹಕರಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳದವರು ಬಂದಿದ್ದು ಅದಾಗಲೆ ಬೆಂಕಿಯನ್ನು ನಂದಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಗ್ಯಾಸ್ ಟ್ಯಾಂಕರ್ ಕ್ಯಾಬಿನ್‍ನಲ್ಲಿ ತಾಂತ್ರಿಕ ಕಾರಣದಿಂದ ಬೆಂಕಿ ಹತ್ತಿದನ್ನು ಕಂಡ ಕೆಲವರು…

Read More

UN NETWORKS ಉಳ್ಳಾಲ: ರಾಜ್ಯ ಸರಕಾರ ಹುತಾತ್ಮರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಹೊರಟು 10 ವರ್ಷಗಳು ಕಳೆದಿವೆ. ಈವರೆಗೂ ಯೋಜನೆ ಅನುಷ್ಠಾನವಾಗದಿರುವುದು ದುರಾದೃಷ್ಟ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಖೇದ ವ್ಯಕ್ತಪಡಿಸಿದರು. ಅವರು ನಿಟ್ಟೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಆಯೋಜಿಸಲಾದ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸಂಬಂಧಿಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಮಹಾತ್ಮ ಗಾಂಧಿ ಮಡಿದ ದಿನ, ಹುತಾತ್ಮರ ದಿನ ಆಚರಿಸುವಂತಹ ದಿನವಲ್ಲ. ಹುತಾತ್ಮರ ಸ್ಮರಿಸುವ ಹಾಗೂ ಮನೆಮಂದಿಯನ್ನು ಗೌರವಿಸುವ ದಿನವಾಗಿ ಮುಂದುವರಿಯಬೇಕಿದೆ. ಯುವಸಮುದಾಯ ಜಾಗೃತರಾಗಿ ದೇಶಕ್ಕಾಗಿ ಜೀವ ತ್ಯಾಗ ಮಾಡಿದವರ ಕುರಿತು ಒಂದು ದಿನವಾದರೂ ಸ್ಮರಿಸುವ ಕಾರ್ಯ ಅಗತ್ಯ ಎಂದರು. ಈ ಸಂದರ್ಭ ಭಾರತೀಯ ಸೇನೆಯಲ್ಲಿ ಕರ್ತವ್ಯ ಸಂದರ್ಭ ಹುತಾತ್ಮರಾದ ಬಜಪೆ ನಿವಾಸಿ ಹವಾಲ್ದಾರ್ ಗಿರೀಶ್ ಅವರ ಪತ್ನಿ ರೇಖಾ, ಪುತ್ರ ಗಗನ್ , ಮಡಿಕೇರಿ ಬಲಂಬಿ ನಿವಾಸಿ ಲ್ಯಾನ್ಸ್ ನಾಯ್ಕ್ ಶಿವರಾಂ ಕೆ.ಪಿ ಅವರ ಪತ್ನಿ…

Read More

UN NETWORKS ತೊಕ್ಕೊಟ್ಟು: ಆದಿ ಕ್ರಿಯೇಷನ್ಸ್ ಪ್ರಸ್ತುತಿಯ ಲಿಟ್ಲ್ ಚ್ಯಾಂಪ್ ಕಾರ್ಯಕ್ರಮವನ್ನು ಶ್ರೀ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ್, ಧರ್ಮದರ್ಶಿ ಭಾಸ್ಕರ ಐತಾಳ್, ನಟಿ ಕರೀಷ್ಮಾ ಅಮೀನ್ ಉದ್ಘಾಟಿಸಿದರು. ಉದ್ಯಮಿ ಸೌಂದರ್ಯ ರಮೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಣ ಪ್ರೇಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಉದ್ಯಮಿಗಳಾದ ದುರ್ಗಾದಾಸ್, ಯೋಗೀಶ್ ಸಾಲ್ಯಾನ್ , ಲಿಟ್ಲ್ ಚ್ಯಾಂಪ್ ತೀರ್ಪುಗಾರರಾದ ರಾಜೇಶ್ ಕಣ್ಣೂರು, ಇಸ್ಮಾಯಿಲ್, ರೋಶಲ್ ಸಿಂಫೋನಿ, ಸೂರಜ್ ಶೆಟ್ಟಿ, ಬಾಲ ನಟಿಯರಾದ ಸಪ್ತಾ ಪಾವೂರು, ವಂಶಿ ರತ್ನಕುಮಾರ್, ಆರ್.ಜೆ.ರಶ್ಮಿ ಉಳ್ಳಾಲ್ ಹಾಗೂ ಚಿತ್ರನಟಿ ಶೈಲಶ್ರೀ ಮಧುರಾಜ್ ಭಾಗವಹಿಸಿದ್ದರು.ಹಣಾಹಣಿಯ ರಿಯಾಲಿಟಿ ಶೋ ನಡೆಯಿತು. ಒಟ್ಟು15ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡವು. ನಂತರ ನಡೆದ ಅಬ್ಬಕ್ಕ ಟಿವಿ ವಾರ್ಷಿಕೋತ್ಸವದಲ್ಲಿ ಹೆಸರಾಂತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಸ್ವಾವಲಂಬಿ ಮಹಿಳೆ ಕುಸುಮಾ ಎಚ್. ದೇವಾಡಿಗ, ಪಾರಂಪರಿಕ ವೈದ್ಯ ಬ್ರದರ್ ಎಲ್ಡೋ, ಪ್ರತಿಭಾವಂತ ಕಲಾವಿದೆ ವಸುಂಧರಾ ಹರೀಶ್, ಅಂತರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ, ಮಾಧ್ಯಮ ಕ್ಷೇತ್ರದಲ್ಲಿ ವಸಂತ…

Read More

UN NETWORKS ಮೇರಿಹಿಲ್‍: ಮೇರಿಹಿಲ್‍ನ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನಿಟ್ಟು ದೀಪ ಬೆಳಗಿಸಿ, ಎರಡು ನಿಮಿಷದ ಮೌನಾಚರಣೆ ಮಾಡಲಾಯಿತು. ಬಳಿಕ ಮಾತನಾಡಿದ ಜಿಲ್ಲಾ ಸಮಾದೇಷ್ಠ ಡಾ. ಮುರಲೀ ಮೋಹನ ಚೂಂತಾರು ಗಾಂಧೀಜಿಯವರ ತತ್ವ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿಯೊಬ್ಬರ ಮನದೊಳಗೆ ಗಾಂಧೀಜಿಯವರ ಆದರ್ಶಗಳು ಸುಪ್ತವಾಗಿದೆ. ಈ ಸುಪ್ತವಾಗಿರುವ ಆದರ್ಶಗಳನ್ನು ಎಚ್ಚರಿಸಿ ನಮ್ಮೊಳಗಿನ ಗಾಂಧೀಜಿಯವರನ್ನು ಬಡಿದೆಬ್ಬಿಸುವ ಕಾರ್ಯ ತುರ್ತಾಗಿ ಆಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಅಧೀಕ್ಷಕ ಎ. ರತ್ನಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ. ಎಸ್, ದಲಾಯತ್ ಮೀನಾಕ್ಷಿ ಹಾಗೂ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರ್ ಮತ್ತು ಸನತ್, ಸುನೀಲ್ , ರಮೇಶ್ ಭಂಡಾರಿ. ದಿವಾಕರ, ಮಹೇಶ್ ಹಾಗೂ ಹರಿಪ್ರಸಾದ್ ಉಪಸ್ಥಿತರಿದ್ದರು.

Read More