UN NETWORKS
ಉಳ್ಳಾಲ: SKSSF ದೇರಳಕಟ್ಟೆ ಕ್ಲಸ್ಟರ್ ಇದರ ವತಿಯಿಂದ ಲಹರಿ ವಿರುದ್ಧ ಜನಜಾಗೃತಿ ಸಭೆ SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಜನಾಬ್ ಸಯ್ಯದ್ ಅಲಿ ಇವರ ಅಧ್ಯಕ್ಷತೆಯಲ್ಲಿ ಉಳ್ಳಾಲದಲ್ಲಿ ನಡೆಯಿತು .ಉಸ್ತಾದ್ ಉಸ್ಮಾನ್ ಫೈಝಿ ತೋಡಾರ್ ದುಃಆಗೈದರು . ವಲಯ ಕೌನ್ಸಿಲರ್ ಫಾರೂಖ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು.
ವಲಯ ಪ್ರಧಾನ ಕಾರ್ಯದರ್ಶಿ ಹಾಫಿಲ್ ಝೈನ್ ಸಖಾಫಿ,ಪ್ರತಿಜ್ಞಾ ಭೋದಿಸಿದರು . ಬಹು ಶರೀಫ್ ಅರ್ಶದಿ ದೇರಳಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಮುಸ್ತಫಾ ಅಬ್ದುಲ್ಲಾ.ನಝೀರ್ ಉಳ್ಳಾಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಯುವ ವಾಗ್ಮಿ, SKSSF ಬೆಳ್ತಂಗಡಿ ವಲಯ ಅಧ್ಯಕ್ಷರಾದ ನಝೀರ್ ಅಝ್ಹರಿ ಪ್ರಮೇಯ ಭಾಷಣಗೈದರು. ಹನೀಫ್ ಉಚ್ಚಿಲ ವೀಕ್ಷಕರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ಕ್ಲಸ್ಟರ್ ಕೋಶಾಧಿಕಾರಿ ಮೊಹಮ್ಮದ್ ಮೋನು ಇನೋಳಿ,ಅಬ್ದುಲ್ ಲತೀಫ್ ದಾರಿಮಿ,ಆಸಿಫ್ ಅಬ್ದುಲ್ಲಾ,ಇಬ್ರಾಹಿಂ ತಂಗಳ್ ಉಳ್ಳಾಲ,ಇಬ್ರಾಹಿಂ ಕೊಣಾಜೆ, ಹರ್ಷಾದ್ ಕುದ್ರೋಳಿ,ಮೊಹಮ್ಮದ್ ನಡುಪದವು, ರಹ್ಮಾನ್ ದಾರಿಮಿ ಪರೇಕ್ಕಳ, ಯು.ಟಿ.ಮೊಹಮ್ಮದ್ ಹಾಜಿ,ಅಬ್ದುಲ್ಲಾ ರೆಂಜಾಡಿ, ಮತ್ತಿತ್ತರರು ಉಪಸ್ಥಿತರಿದ್ದರು.
ಕ್ಲಸ್ಟರ್ ಪ್ರದಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ವಂದಿಸಿದರು .


