UN NETWORKS ಉಳ್ಳಾಲ: ಇತಿಹಾಸ ಪ್ರಸಿದ್ಧ ಅಳೇಕಲ ಹಝ್ರತ್ ಅಸ್ಸಯ್ಯದ್ ಅಚ್ಚಿ ಸಾಹಿಬ್ ವಲಿಯುಲ್ಲಾಹ್ (ಖ.ಸಿ) ಉರೂಸ್ ಸಮಾರಂಭವು ಫೆ. 4ರಿಂದ ನಡೆಯಲಿದೆ. ಅಳೇಕಲ ಮಸೀದಿಯ ಮಾಜಿ ಅಧ್ಯಕ್ಷ ಯು.ಎ. ಇಸ್ಮಾಯಿಲ್ ಕೌನ್ಸಿಲರ್ ಉರೂಸ್ ಸಮಿತಿಗೆ ಮುಖ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್ ಹಾಗೂ ವಾಗ್ಮಿಗಳು ಭಾಗವಹಿಸಲಿದ್ದಾರೆ. ಉಳ್ಳಾಲ ಖಾಝೀ ಅಸ್ಸಯ್ಯದ್ ಫಝಲ್ ಕೊಯಮ್ಮ ಕೂರತ್ ತಂಙಳ್ ದುಆ ಮೂಲಕ ಆಶೀರ್ವದಿಸಲಿದ್ದಾರೆ. ಪೊಸೋಟ್ ಶಹೀರ್ ತಂಙಳ್ ರಾತೀಬ್ ಮಜ್ಲಿಸ್ಗೆ ನೇತೃತ್ವ ವಹಿಸಲಿದ್ದಾರೆ ಎಂದು ಅಳೇಕಲ ಮಸೀದಿಯ ಅಧ್ಯಕ್ಷ ಯು.ಎಸ್. ಹಂಝ ಹಾಜಿ ತಿಳಿಸಿದ್ದಾರೆ.
Author: UllalaVani
UN NETWORKS ಬೋಳಿಯಾರ್ : ಬೋಳಿಯಾರ್ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ಬಾಲಕನೋರ್ವನಿಗೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೃತ ಬಾಲಕನನ್ನು ಬೋಳಿಯಾರ್ ಅಮ್ಮೆಮ್ಮಾರ್ ನಿವಾಸಿ ಶಂಕರ್ ಎಂಬವರ ಪುತ್ರ ಪ್ರತ್ಯುಶ್ (7) ಎಂದು ಗುರುತಿಸಲಾಗಿದೆ. ಕಲ್ಲಡ್ಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತನನ್ನು ಆತನ ತಾಯಿ ಶಾಲಾ ವಾಹನಕ್ಕೆ ಹತ್ತಿಸಲು ರಸ್ತೆ ಬದಿಗೆ ಬಂದಿದ್ದರು. ಈ ಸಂದರ್ಭ ಬಸ್ ಚಾಲಕ ಸಣ್ಣ ವಿದ್ಯಾರ್ಥಿಗಳಿಗೆ ರಜೆ ಎಂದು ತಿಳಿಸಿದ ಕಾರಣ ಬಾಲಕ ರಸ್ತೆ ದಾಟಿ ಬದಿಯಲ್ಲಿ ನಿಂತಿದ್ದಾಗ ಮರಳು ತುಂಬಿದ್ದ ಪಿಕಪ್ ಢಿಕ್ಕಿ ಹೊಡದಿದೆ. ಇದರಿಂದ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟಿದ್ದಾನೆ. ಪಿಕಪ್ ಚಾಲಕನ ವಿರುದ್ಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾರ್ಥಿಯಾಗಿದ್ದ ಯಶುಕುಮಾರ್ ಡಿ ಇವರು ಪ್ರೊ. ಅಭಯ ಕುಮಾರ ಕೆ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ತುಳು ನಾಡಿನ ಅವಳಿವೀರರ ಆರಾಧನೆ” : ಸಾಮಾಜಿಕ ಸಂಬಂಧಗಳು ಮತ್ತು ಚಾರಿತ್ರಿಕತೆ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ. ಇವರು ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ಕೃಷ್ಣಾಪುರ ನಿವಾಸಿ ಹಾಗೂ ಬಿ ಎಸ್ ಎನ್ ಎಲ್ ಉದ್ಯೋಗಿ ದೇವದಾಸ ಮತ್ತು ಸುಂದರಿ ಇವರ ಪುತ್ರ.
UN NETWORKS ಬೆಂಗಳೂರು: ಕರ್ನಾಟಕ ಸಂಗೀತ , ನೃತ್ಯ ಅಕಾಡೆಮಿ ಬೆಂಗಳೂರು ಇದರ ಆಶ್ರಯದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ 2018-19ನೇ ಸಾಲಿನ `ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನಾಟ್ಯನಿಕೇತನ ಕೊಲ್ಯ ಇಲ್ಲಿನ ನೃತ್ಯಗುರು ವಿದುಷಿ ರಾಜಶ್ರೀ ಉಳ್ಳಾಲ್ ಅವರಿಗೆ ಪ್ರದಾನ ಮಾಡಲಾಯಿತು.
UN NETWORKS ಕೊಣಾಜೆ: ಕೊಣಾಜೆ ಗ್ರಾಮದ ಬೆಳ್ಮ ಕೆಳಗಿನ ಮನೆ ಬಳಿಯ ಶ್ರೀ ಬ್ರಹ್ಮ ಸನ್ನಿಧಿ-ನಾಗ ಪರಿವಾರ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ವಿಜ್ಞಾಪಣಾ ಪತ್ರದ ಬಿಡುಗಡೆ ಕಾರ್ಯಕ್ರಮವು ನಡೆಯಿತು. ವಿಜ್ಞಾಪಣಾ ಪತ್ರವನ್ನು ಅರ್ಚಕರಾದ ಜಗದೀಶ್ ಭಟ್ ಅಂಡಾಲ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಘುರಾಮ ಗಟ್ಟಿಯವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೋಳಾರ ಸಾಯಿ ಟ್ರಸ್ಟ್‍ನ ಅಧ್ಯಕ್ಷರಾದ ಸೂರಜ್ ಕುಮಾರ್, ಕೊಣಾಜೆ ಪಂಚಾಯಿತಿ ಸದಸ್ಯೆ ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ಪಯ್ಯಗಟ್ಟಿ ಕುಟುಂಬದ ಹಿರಿಯರಾದ ಗಣೇಶ್ ಗಟ್ಟಿ ತುಂಬೆ, ಉಪನ್ಯಾಸಕರಾದ ಸತೀಶ್ ಗಟ್ಟಿ, ಕೋಟಿಪದವು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಸೀತಾರಾಮ ಬಂಗೇರ, ಯಾದವ ಬಿ.ಬೊಳ್ಳೆಕುಮೇರ್, ಸಪ್ತಸ್ವರ ಕಲಾತಂಡದ ಅಧ್ಯಕ್ಷರಾದ ನರೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾಯದರ್ಶಿ ಅಚ್ಯುತಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
UN NETWORKS ತಲಪಾಡಿ : ಬಡತನದಲ್ಲಿರುವ ಮಹಿಳೆಯೊಬ್ಬರಿಗೆ ಮಾತ್ರ ಹಕ್ಕು ಪತ್ರ ನೀಡಿಲ್ಲ. ಉಳಿದ ಮನೆಗಳಿಗೆ ನೀಡಲಾಗಿದೆ. ನೊಂದ ಮಹಿಳೆ ಆತ್ಮಹತ್ಯೆಗೂ ಮುಂದಾಗಿದ್ದರು ಎಂದು ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಕೇಳಿದ ಪ್ರಶ್ನೆಗೆ ಪಂಚಾಯಿತಿ ಸದಸ್ಯರು ಮಾತ್ರವಲ್ಲದೆ ಗ್ರಾಮಸ್ಥರೂ ಧ್ವನಿಗೂಡಿಸಿದರು. ತಲಪಾಡಿಯಲ್ಲಿ ಎಷ್ಟು ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ, ಹಣ ಕಟ್ಟದೆ ಬಾಕಿಯಿರುವ ಮನೆಗಳೆಷ್ಟು? ಎನ್ನುವ ಮಾಹಿತಿ ಕಂದಾಯ ಇಲಾಖೆ ನೀಡಬೇಕು. ನಾಲ್ಕು ಮನೆಗಳ ಪೈಕಿ ಮೂರು ಮನೆಗಳಿಗೆ ಹಕ್ಕುಪತ್ರ ನೀಡಿದ್ದರೂ ಅರ್ಹ ಫಲಾನುಭವಿ ಸುಮಯ್ಯ ಎಂಬವರ ಮನೆಗೇಕೆ ನೀಡಿಲ್ಲ? ಇದರಿಂದ ಮಹಿಳೆ ಸಾಕಷ್ಟು ನೊಂದಿದ್ದಾರೆ ಎಂದು ಕಂದಾಯ ಇಲಾಖೆ ವಿರುದ್ಧ ಹರಿಹಾಯ್ದರು. ಇದಕ್ಕೆ ಧ್ವನಿಗೂಡಿಸಿದ ಪಂಚಾಯಿತಿ ಸದಸ್ಯ ಇಬ್ರಾಹಿಂ ತಲಪಾಡಿ, ಹಕ್ಕುಪತ್ರ ಎಂದರೆ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವುದಾಗಿದೆ. ಇದಕ್ಕೂ ಮನೆ ನಂಬ್ರ ಬೇಕು ಎಂದರೆ ಅಕ್ರಮ ಮನೆಗಳಿಗೆ ನಂಬ್ರ ಇರ್ತದಾ? ಗ್ರಾಮಕರಣಿಕರು ಇಲಾಖೆಗೆ ಸರಿಯಾದ ಮಾಹಿತಿಯನ್ನೇಕೆ ನೀಡಿಲ್ಲ ಎಂದು ಪ್ರಶ್ನಿಸಿದರು. ದ್ವನಿಗೂಡಿಸಿದ…
UN NETWORKS ಮಂಗಳೂರು: ಬಸ್ ಯಾವ ಮಾರ್ಗದಲ್ಲಿ ಬರುತ್ತಿದೆ, ಎಷ್ಟು ಹೊತ್ತಿಗೆ ಮನೆಯಿಂದ ಹೊರಡಬೇಕು ಎಂಬುದನ್ನು ಮೊಬೈಲ್‌ನಲ್ಲಿ ನೋಡಿದರೆ ಸಾಕು. ಟಿಕೆಟ್ ಪಡೆಯಲು ಚಿಲ್ಲರೆ ಕೊಡುವ ಸಮಸ್ಯೆಯೂ ಇಲ್ಲ. ಮೊದಲೇ ರೀಚಾರ್ಚ್ ಮಾಡಿದ ಸ್ಮಾರ್ಟ್ ಕಾರ್ಡ್ ಸ್ವೈಪ್ ಮಾಡಿದರಾಯಿತು. ಮಂಗಳೂರು ಸಿಟಿ ಬಸ್‌ಗಳಲ್ಲಿ ಓಲಾ ಮಾದರಿಯ ‘ಚಲೋ ಆ್ಯಪ್’ ಬರಲಿದ್ದು, ಡಿಜಿಟಲ್ ಟಿಕೆಟಿಂಗ್ ತಂತ್ರಜ್ಞಾನ ಜಾರಿ ಆಗಲಿದೆ. ಇದೀಗ ಪೂರ್ವಭಾವಿಯಾಗಿ 350 ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸಲು ಆರಂಭವಾಗಿದೆ. ಫೆಬ್ರವರಿಯಲ್ಲಿ ಸ್ಟೇಟ್‌ಬ್ಯಾಂಕ್- ಮಂಗಳಾದೇವಿ ಮಾರ್ಗದ (ರೂಟ್ ಸಂಖ್ಯೆ 27) ಐದು ಬಸ್ ಮತ್ತು ಉಳ್ಳಾಲ ಮಾರ್ಗದ (ರೂಟ್ ಸಂಖ್ಯೆ44) 16 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಚಲೋ ಟಿಕೆಟ್ ಮಷಿನ್ ಬರಲಿದೆ. ಏನಿದು ಚಲೋ ಆ್ಯಪ್? : ಚಲೋ ಆ್ಯಪ್ ಓಲಾ ಕ್ಯಾಬ್‌ನ ಆ್ಯಪ್ ರೀತಿ ಕಾರ್ಯನಿರ್ವಹಿಸುತ್ತದೆ. ಆ್ಯಪ್‌ಗೆ ಎಲ್ಲ ಬಸ್‌ಗಳಲ್ಲಿ ಅಳವಡಿಸಿರುವ ಜಿಪಿಎಸ್ ಸಂಪರ್ಕ ಇರುತ್ತದೆ.ಪ್ರಯಾಣಿಸಬೇಕಾದ ರೂಟ್ ನಂಬರ್ ಅಥವಾ ಬಸ್ ಹೆಸರನ್ನು ಆ್ಯಪ್‌ನಲ್ಲಿ ನಮೂದಿಸಿದಾಗ ಬಸ್ ಸದ್ಯ ಎಲ್ಲಿದೆ, ಎಷ್ಟು ಹೊತ್ತಿಗೆ ತಾನಿರುವ ಸ್ಥಳಕ್ಕೆ…
UN NETWORKS ಉಳ್ಳಾಲ: ತೊಕ್ಕೊಟ್ಟು ಕಾಪಿಕಾಡಿನಲ್ಲಿ ಸಹೋದರಿಯ ಪತಿಯನ್ನು (ಬಾವನನ್ನು)ಹತ್ಯಗೈದು ವಿಚಾರಾಣಾಧೀನ ಕೈದಿಯಾಗಿ ಬೆಂಗಳೂರಿನ ಜೈಲಿನಲ್ಲಿದ್ದ ಆರೋಪಿ ಡೇನಿಸ್ ಡಿ.ಸೋಜ (78) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಡೆನೀಸ್ ಅವರು ಔಷದಿಗೆ ಹಣ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಆ. 12ರಂದು ತನ್ನ ಸಹೋದರಿ ಜಾನೆಟ್ ಮತ್ತು ಆಕೆಯ ಪತಿ ಜೋಸೆಫ್ ಅವರಿಗೆ ಕಬ್ಬಿಣ ರಾಡ್‍ನಿಂದ ಹಲ್ಲೆ ನಡೆಸಿದ್ದರು. ಗಂಬೀರ ಗಾಯಗೊಂಡಿದ್ದ ಜೋಸೆಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ, ಸಹೋದರಿ ಜಾನೆಟ್ ಗುಣಮುಖರಾಗಿದ್ದರು.ರಾಡ್‍ನಿಂದ ಹಲ್ಲೆ ನಡೆಸಿದ ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ ಡೇನಿಸ್ ಅವರನ್ನು ಮಂಗಳೂರಿನ ಕಾರಾಗೃಹದಲ್ಲಿ ಕೆಲ ಕಾಲ ಇದ್ದ ಬಳಿಕ ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಗುತ್ತಿಗೆದಾರರಾಗಿದ್ದ ಡೇನಿಸ್ ಅವರು ಅವಿವಾಹಿತರಾಗಿದ್ದು, ವೃದ್ದಾಪ್ಯದ ಹಿನ್ನಲೆಯಲ್ಲಿ ತನ ಸಹೋದರಿಯ ಕುಟುಂಬಕ್ಕೆ ತನ್ನ ಮನೆ ಬಳಿಯೇ ನಿವೇಶನ ನೀಡಿ ಮನೆ ಕಟ್ಟಲು ಸಹಕರಿಸಿದ್ದರು.
UN NETWORKS ಬೆಂಗಳೂರು : ಮಿಸ್ಬಾಹುಲ್ ಹುದಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಮೀಲಾದ್ ಮೆಹಫಿಲ್ 2019 ಕಾರ್ಯಕ್ರಮ ಎಮ್ ಇ ಸಿ ಟಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಅಬೂಬಕ್ಕರ್ ಉಸ್ತಾದ್ ಎಂಎಫ್ ವಿ ದುಃವಾಶೀರ್ವಚನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದಕ್ಷಿಣ ಕನ್ನಡ ಇದರ ಅಧ್ಯಕ್ಷ ಎನ್.ಪಿ.ಎಮ್ ಝೈನುಲ್ ,ಆಬಿದೀನ್ ತಂಙಳ್ ಉದ್ಘಾಟಿಸಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಿನ್ಸಿಪಾಲ್ ನ್ಯಾಯವಾದಿ ಹನೀಫ್ ಹುದವಿ ಮುಖ್ಯ ಪ್ರಭಾಷಣಗೈದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮುಹಮ್ಮದ್ ಹಾಜಿ ನಿರ್ವಹಿಸಿದರು.ವೇದಿಕೆಯಲ್ಲಿ ಅಬ್ದು ಸಮದ್ ದಾರಾನಿ,ಅಸ್ಲಂ ಫೈಝಿ, ಅಲಿ ದಾರಿಮಿ,ಜುನೈದ್ ಬೆಂಗಳೂರು,ಜಾಬಿರ್ ಹಾಜಿ,ಇಬ್ರಾಹಿಂ ಹಾಜಿ ಕತ್ತರ್, ಮುಷ್ತಾಖ್ ಹುದವಿ,ಶಹಜಲ್ ಹುದವಿ ಸುಲೈಮಾನ್ ಹಾಜಿ,ಮುಹಮ್ಮದ್ ಟಿ ಕೆ ,ಖಾಸಿಂ ಹಾಜಿ, ಅಯ್ಯೂಬ್ ಟಿ ಕೆ,ಸಲಾಂ,ಅಝೀಝ್,ಮೊಯ್ದೀನ್ ಇನ್ನಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂರುಲ್ ಹುದಾ ಮದ್ರಸ ವಿದ್ಯಾರ್ಥಿಗಳಿಂದ ಮದ್ ಹ್ ಗೀತೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಮುಹಮ್ಮದ್ ಅಲಿ…
UN NETWORKS ಉಳ್ಳಾಲ : ಜಿಲ್ಲೆಯಲ್ಲಿ ಇದುವರೆಗೆ ದಾರಿಮೀಸ್ ಅಸೋಸಿಯೇಶನ್ ಉತ್ತಮ ಕಾರ್ಯಕ್ರಮಗಳ ಮೂಲಕ ಮೆಚ್ಚುಗೆ ಪಡೆದಿದೆ. ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ದಾರಿತಪ್ಪುತ್ತಿರುವ ಯುವಕರಿಗೆ ಮಾರ್ಗದರ್ಶನ ನೀಡಿ ಸರಿದಾರಿಗೆ ತರುವ ಪ್ರಯತ್ನ ನಡೆಸಬೇಕು ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ಇದರ 17ನೇ ವಾರ್ಷಿಕೋತ್ಸವ ಪ್ರಯುಕ್ತ ಉಪ್ಪಿನಂಗಡಿಯ ಕರ್ವೇಲ್ ನಲ್ಲಿ ನ.31ರಂದು ನಡೆಯಲಿರುವ ಶೈಖುನಾ ಸಂಶುಲ್ ಉಲಮಾ ಹಾಗೂ ಅಬ್ದುಲ್ ಜಬ್ಬಾರ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮದ ಪ್ರಚಾರಕ್ಕೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.ಇತ್ತೀಚಿಗೆ ನಮ್ಮೆಲ್ಲರನ್ನು ಅಗಲಿರುವ ಶೈಖುನಾ ಜಬ್ಬಾರ್ ಉಸ್ತಾದ್ ಅವರು ಪ್ರವಾದಿ (ಸ) ಅವರ ನಿರ್ದೇಶನದಂತೆ ಜೀವನ ಸಾಗಿಸಿರುವುದರಿಂದ ಅವರ ಹೆಸರು ಜನರ ಮನದಲ್ಲಿ ಶಾಶ್ವತವಾಗಿ ನೆಲೆ ನಿಂತಿದೆ. ಈ ವರ್ಷ ಸಂಶುಲ್ ಉಲಮಾ ಜೊತೆ ಜಬ್ಬಾರ್ ಉಸ್ತಾದ್ ಹೆಸರಲ್ಲೂ ಅನುಸ್ಮರಣೆ ದಾರಿಮೀಸ್ ಅಸೋಸಿಯೇಶನ್ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಜ.ಕಾರ್ಯದರ್ಶಿ…

